For Quick Alerts
ALLOW NOTIFICATIONS  
For Daily Alerts

ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?

|

ಸೈಬರ್ ಅಪರಾಧ ಪ್ರಕರಣಗಳು ಆಧುನಿಕ ಜಗತ್ತಿನೊಂದಿಗೆ ಬೆಸೆದುಕೊಂಡು ಬಿಟ್ಟಿವೆ. ನಿಮ್ಮ ಬ್ಯಾಂಕ್ ಖಾತೆ ಮಾಹಿತಿಗಳು, ಪಾಸ್ ವರ್ಡ್‌, ಕ್ರೆಡಿಡ್ ಕಾರ್ಡ್ ಮಾಹಿತಿ ಕೇಳಿ ನಿಮಗೆ ಇ ಮೇಲ್ ಸಹ ಬರಬಹುದು.

ದೂರವಾಣಿ ಕರೆ ಮಾಡಿ ಎಲ್ಲ ಮಾಹಿತಿ ಪಡೆದುಕೊಂಡು ಹಣ ಲಪಟಾಯಿಸುವವರು ಇದ್ದಾರೆ. ಎಷ್ಟೇ ಜಾಣ್ಮೆಯಿಂದ ಇದ್ದರೂ ಹಣ ನಿಮ್ಮ ಸ್ನೇಹಿತರಲ್ಲೇ ಹಣ ಕಳೆದುಕೊಂಡ ಉದಾಹರಣೆಯೂ ಇರಬಹುದು. ಹ್ಯಾಕರ್ ಗಳ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಯಾವ ಬಗೆಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣ.[ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸಗಳೇನು?]

ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?

ಫಿಶಿಂಗ್ ನ ಲಕ್ಷಣಗಳೇನು?
* ನೀವು ಖಾತೆ ಹೊಂದಿರುವ ಬ್ಯಾಂಕ್ ನಿಂದಲೇ ಇ ಮೇಲ್ ಒಂದು ಬಂದಿರುತ್ತದೆ. ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಅದರಲ್ಲಿ ಕೇಳುತ್ತಾರೆ. ಆದರೆ ಗಮನಿಸಿ ಇದು ನಕಲಿ ಇಮೇಲ್ ! ಯಾವ ಕಾರಣಕ್ಕೂ ಮಾಹಿತಿ ನೀಡಲು ಹೋಗಬಾರದು.

* ಒಂದು ವೇಳೆ ಅಪ್ಪಿ ತಪ್ಪಿ ಇ ಮೇಲ್ ಕ್ಲಿಕ್ ಮಾಡಿದರೆ ಅದು ನಕಲಿ ವೆಬ್ ತಾಣಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ನಿಮ್ಮ ಇ ಮೇಲ್ ಪಾಸ್ ವರ್ಡ್ ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.[ಸೇವಾ ತೆರಿಗೆ ಮತ್ತು ಸೇವಾ ಶುಲ್ಕದ ನಡುವಿನ ವ್ಯತ್ಯಾಸಗಳು]

* ಇಲ್ಲಿ ನಿಮಗೆ ರಿವಾರ್ಡ್ ಪಾಯಿಂಟ್ಸ್ ಗಳ ಆಸೆಯನ್ನು ಹುಟ್ಟಿಸಬಹುದು.

* ಕೆಲವೊಂದು ಮಾಹಿತಿಯನ್ನು ಅಪ್ ಡೇಟ್ ಮಾಡುವಂತೆಯೂ ಕೇಳಬಹುದು. ಮಾಹಿತಿ ದಾಖಲು ಮಾಡಿ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿದರೆ ಎರರ್ ಬರುತ್ತದೆ. ಆದರೆ ನೀವು ದಾಖಲು ಮಾಡಿದ ಸಂಗತಿಗಳು ಹ್ಯಾಕರ್ ಗಳ ಪಾಲಾಗಿರುತ್ತದೆ.

* ನಿಮ್ಮ ಸ್ವಂತ ಲ್ಯಾಪ್ ಟಾಪ್ ಇಲ್ಲವೇ ಕಂಪ್ಯೂಟರ್ ಬಿಟ್ಟು ಬೇರೆಡೆ ವೈಯಕ್ತಿಕ ಮಾಹಿತಿ ದಾಖಲು ಮಾಡುವಾಗ ಸದಾ ಎಚ್ಚರಿಕೆಯಿಂದಿರಿ. ನಂಬಿಕೆ ಅರ್ಹ ಎಂದೆನಿಸಿದರೆ ಮಾತ್ರ ದಾಖಲು ಮಾಡಲು ಮುಂದಾಗಿ.

ಯಾವ ರೀತಿ ಎಚ್ಚರಿಕೆ ವಹಿಸಬೇಕು?

* ಈ ಬಗೆಯ ಇಮೇಲ್ ಮತ್ತು ಫೋನ್ ಕರೆಗಳಿಗೆ ಯಾವ ಕಾರಣಕ್ಕೂ ಉತ್ತರ ನೀಡುವ ಸಾಹಸಕ್ಕೆ ಹೋಗಬೇಡಿ.

* ಸ್ಪಾಮ್ ಇಮೇಲ್ ಗಳನ್ನು ತೆಗೆದುಕೊಂಡು ಅವರು ಸೂಚಿಸಿದಂತೆ ಮಾಹಿತಿ ನೀಡುತ್ತಾ ಹೋದರೆ ನೀವಾಗಿಯೇ ಹಳ್ಳಕ್ಕೆ ಬಿದ್ದಂತೆ.

* ವೈರಸ್ ವಿರುದ್ಧ ಸದಾ ಹೋರಾಡುವ ಸಾಫ್ಟ್ ವೇರ್ ಗಳನ್ನು ಅಳವಡಿಸಿಕೊಳ್ಳುವುದು ಉತ್ತಮ

ಕೊನೆ ಮಾತು
ನಿಮ್ಮ ಖಾತೆಯ ಮಾಹಿತಿ ನೀಡಿ ಎಂದು ಬ್ಯಾಂಕ್ ನವರು ಮೇಲ್ ಕಳಿಸಲು ಅಥವಾ ಕರೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮ ಎಲ್ಲ ವಿವರಗಳನ್ನು ತೆಗೆದುಕೊಂಡೆ ಖಾತೆ ಮಾಡಿಕೊಟ್ಟಿರುತ್ತಾರೆ. ಈ ಸಂಗತಿ ನಿಮ್ಮ ತಲೆಯಲ್ಲಿದ್ದರೆ ಹ್ಯಾಕರ್ ಗಳ ಕೈಗೆ ನೀವು ಸಿಕ್ಕಿಬೀಳಲು ಸಾಧ್ಯವಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

Phishing Attack: 5 Smart Things To Know While Banking

Phishing is when someone tries to acquire sensitive banking information such as usernames, passwords or credit card details with an aim to misuse the information. This can be done by Phishing email messages, websites, and phone calls to steal money from customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X