For Quick Alerts
ALLOW NOTIFICATIONS  
For Daily Alerts

ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು

|

ನೀವು ಷೇರು ಖರೀದಿ ಮತ್ತು ಒಡೆಯರಾಗಬೇಕಾದರೆ ಡಿಮಾಟ್ ಖಾತೆಯನ್ನು ಹೊಂದಿರಲೇ ಬೇಕಾಗುತ್ತದೆ. ಷೇರು ಖರೀದಿ, ಮಾರಾಟ ಎಲ್ಲವನ್ನು ಇಲ್ಲಿ ಮಾಡಬಹುದು. ಅಲ್ಲದೇ ಐಪಿಒ(ಇನಿಶಿಯಲ್ ಪಬ್ಲಿಕ್ ಆಫರಿಂಗ) ಮೂಲಕ ಷೇರು ಖರೀದಿಗೆ ಅರ್ಜಿ ಸಲ್ಲಿಸಲು ಡಿಮಾಟ್ ಖಾತೆ ಅಗತ್ಯವಾಗಿರುತ್ತದೆ.

ಸೆಬಿ(ಷೇರು ಪೇಟೆ ನಿಯಂತ್ರಣ ಸಂಸ್ಥೆ) ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕಾಗಿದ್ದು ಕಾನೂನಿನ ಅನ್ವಯ ಅನುಮತಿ ಪಡೆದ ಖಾತೆಗಳ ಮೂಲಕವೇ ವ್ಯವಹಾರ ನಡೆಸಬೇಕಾಗುತ್ತದೆ.[ಭಾರತದಲ್ಲಿ ಡಿಮಾಟ್ ಖಾತೆ ತೆರೆಯುವುದು ಕಡ್ಡಾಯವೇ?]

ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು

ಡಿಮಾಟ್ ಖಾತೆ ತೆರೆಯುವ ಮುನ್ನ ಈ ಆರು ಅಂಶಗಳನ್ನು ತಿಳಿದುಕೊಂಡಿರಬೇಕು

* ಡಿಪಾಸಿಟರಿ
ಭಾರತದಲ್ಲಿ ಎರಡು ಬಗೆಯ ಡಿಪಾಸಿಟರಿಗಳು ಚಾಲ್ತಿಯಲ್ಲಿವೆ. ನ್ಯಾಶನಲ್ ಸೆಕ್ಯೂರೀಟಿಸ್ ಡಿಪಾಸಿಟರಿ ಲಿಮಿಟೆಡ್(ಎನ್ ಎಸ್ ಡಿಎಲ್) ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸ್ ಲಿಮಿಟೆಡ್ (ಸಿಡಿಎಸ್ ಎಲ್) ಮೂಲಕವೇ ಖಾತೆ ನಿರ್ವಹಣೆ ಮಾಡಲಾಗುತ್ತದೆ.

ಡಿಪಾಸಿಟರಿಗಳು ಅಂದರೆ ಇವು ಷೇರುಗಳು, ಡಿಬೆಂಚರ್ ಗಳು, ಬಾಂಡ್ಸ್, ಸರ್ಕಾರದ ಸುರಕ್ಷಾ ಪತ್ರಗಳು, ಮ್ಯೂಚುವಲ್ ಫಂಡ್ಸ್ ಎಲ್ಲವನ್ನು ಒಳಗೊಂಡಿರುತ್ತವೆ.
ಭಾರತದ ಮಾರುಕಟ್ಟೆಯಲ್ಲಿ ಡಿಪಾಸಟರಿಗಳ ಪಾತ್ರ

* ಡಿಪಾಸಿಟರಿಯಲ್ಲಿ ಭಾಗವಹಿಸುವಿಕೆ
ಡಿಪಾಸಿಟರಿ ಪಾರ್ಟಿಸಿಪೆಂಟ್ಸ್ ಗಳ ಕಾರ್ಯನಿರ್ವಹಣೆ ಸಹ ಷೇರು ಮಾರುಕಟ್ಟೆಯ ಪ್ರಮುಖ ಅಂಶ. ಹೂಡಿಕೆದಾರ ಮತ್ತು ಡಿಪಾಸಿಟರಿಸ್ ಗಳ ನಡುವಿನ ಕೊಂಡಿಯಾಗಿ ಈ ಪಾರ್ಟಿಸಿಪೆಂಟ್ಸ್ ಕೆಲಸ ಮಾಡುತ್ತಾನೆ. ಪ್ರತಿಯೊಬ್ಬ ಹೂಡಿಕೆದಾರರನಿಗೂ ಇಂಥ ಒಂದು ಪಾರ್ಟಿಸಿಪೆಂಟ್ ಅಗತ್ಯ ಇರುತ್ತದೆ.[ಹೊಸ ಹೂಡಿಕೆದಾರ ಅರಿತಿರಬೇಕಾದ ಸಪ್ತ ಸೂತ್ರ]

* ಡಿಮ್ಯಾಟರಲೈಜ್
ನಿಮ್ಮ ಒಡೆತನದಲ್ಲಿದ್ದ ಭೌತಿಕ ಷೇರುಗಳು ಇಲ್ಲಿ ಎಲೆಕ್ಟ್ರಾನಿಕ್ ರೂಪವನ್ನು ಪಡೆದುಕೊಳ್ಳುತ್ತವೆ.
ನಿಮ್ಮ ಷೇರನ್ನು ಡಿಮ್ಯಾಟರಲೈಜ್ ಮಾಡುವುದು ಹೇಗೆ?

* ಡಿಮಾಟ್ ಖಾತೆ ಸೇವೆಗಳು
ವ್ಯಕ್ತಿ ಡಿಮಾಟ್ ಖಾತೆಯನ್ನು ತೆರೆಯಬೇಕಾಗುತ್ತದೆ. ಅಥವಾ ಮೂಲ ಖಾತೆ ಹೊಂದಿದ್ದರೆ ಅದರ ಹೆಸರಿನಲ್ಲಿ ವ್ಯವಹಾರ ನಡೆಸಬೇಕಾಗುತ್ತದೆ.
ನಿಮ್ಮ ಡಿಮಾಟ್ ಖಾತೆಯಲ್ಲಿ ಷೇರುಗಳು, ಡಿಬೆಂಚರ್ ಗಳು, ಬಾಂಡ್ಸ್, ಸರ್ಕಾರದ ಸುರಕ್ಷಾ ಪತ್ರಗಳು, ಮ್ಯೂಚುವಲ್ ಫಂಡ್ಸ್ ಇರುತ್ತದೆ. ಇವುಗಳ ಮೊತ್ತ 2 ಲಕ್ಷ ರು. ಗಿಂತ ಕಡಿಮೆ ಇದ್ದರೆ ಹಳೆ ಖಾತೆಯ ವ್ಯವಹಾರಗಳನ್ನು ಹೊಸ ಖಾತೆಗೆ ಸುಲಭವಾಗಿ ವರ್ಗಾಯಿಸಬಹುದು.

50 ಸಾವಿರ ರು. ಬದಲಾವಣೆ ವ್ಯವಹಾರಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ 50,001 ರಿಂದ 2 ಲಕ್ಷದವರೆಗೆ ಇದ್ದರೆ 100 ರು. ಶುಲ್ಕ ನೀಡಬೇಕಾಗುತ್ತದೆ.

ಶುಲ್ಕ ನೀತಿ
ನೀವು ಖಾತೆ ಹೊಂದಿರುವ ಸಂಸ್ಥೆ, ನಿಮ್ಮ ಬಂಡವಾಳ ಎಲ್ಲವನ್ನು ಆಧರಿಸಿ ಶುಲ್ಕಗಳನ್ನು ನಿರ್ಧಾರ ಮಾಡಲಾಗುತ್ತದೆ. ಖಾತೆ ತೆರೆಯುವ ಶುಲ್ಕ, ನಿರ್ವಹಣಾ ಶುಲ್ಕ, ಟ್ಯಾನ್ಸಾಕ್ಷನ್ ಫೀ, ಬ್ರೋಕರೇಜ್ ಗಳು ಶುಲ್ಕಕ್ಕೆ ಸೇರ್ಪಡೆಯಾಗುತ್ತದೆ.

ಡಿಮಾಟ್ ಖಾತೆ ತೆರೆಯುವ ಲಾಭ
ಸ್ಟಾಂಪ್ ಡ್ಯುಟಿಯ ಅಗತ್ಯವಿಲ್ಲ. ಸುಲಭವಾಗಿ ಷೇರುಗಳನ್ನು ಖರೀದಿ ಮತ್ತು ಮಾರಾಟ ಮಾಡಬಹುದು. ಷೇರಿನ ಸ್ಥಿತಿ ಬದಲಾವಣೆ ವೇಳೆ ಯಾವುದೇ ಗೊಂದಲ ಏರ್ಪಡಲು ಸಾಧ್ಯವಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

Demat Account: 6 Must-Know Points Before Opening An Account

An account where one can hold shares and securities in electronic form can be called as Demat Account. It is mandatory to have a demat account if you want to buy and sell shares in India through the stock exchanges. Also, if you want to apply for shares in an Initial Public Offering (IPO) you may have to apply in the demat form only. As per SEBI guidelines shares cannot be bought and sold in any form except in dematerialized form.
Story first published: Monday, October 5, 2015, 14:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X