For Quick Alerts
ALLOW NOTIFICATIONS  
For Daily Alerts

ಸಂಬಳದಾರರ ಗಮನಕ್ಕೆ, ಸ್ಯಾಲರಿ ವ್ಯತ್ಯಾಸ ತಿಳಿದುಕೊಳ್ಳಿ!

By Mahesh
|

ಯಾವುದೇ ಕಂಪನಿಯಲ್ಲಿ ಉದ್ಯೋಗದ ಆಫರ್ ಸಿಕ್ಕ ಮೇಲೆ ಸಿಟಿಸಿ ಮತ್ತು ನೆಟ್ ಸ್ಯಾಲರಿ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಗ್ರಾಸ್ ಆದಾಯ ಹಾಗೂ ನೆಟ್ ಆದಾಯ ಬಗ್ಗೆ ಗೊಂದಲ ಪರಿಹರಿಸಿಕೊಂಡರೆ ತೆರಿಗೆ ಪಾವತಿಗೂ ಅನುಕೂಲ.

ಒಟ್ಟು ಆದಾಯ (Gross Income)
ಒಬ್ಬ ಉದ್ಯೋಗಿಯೂ ನಿಗದಿತ ಅವಧಿಗೆ ಪಡೆಯುವ ಸಂಪೂರ್ಣ ವೇತನ ಅಥವಾ ಆದಾಯ ಇದಾಗಿದೆ. ಇದರಲ್ಲಿ ಯಾವುದೇ ರೀತಿಯ ಕಡಿತ ಇರುವುದಿಲ್ಲ. ಉದಾಹರಣೆ ರಮೇಶ ಎಂಬ ವ್ಯಕ್ತಿಯೂ ತಿಂಗಳಿಗೆ 50,000 ರು ಒಟ್ಟು ಆದಾಯ ಗಳಿಸುತ್ತಿದ್ದಾರೆ ಎಂದುಕೊಳ್ಳೋಣ. ಅದು ಆತನ ಸಂಪೂರ್ಣ ವೇತನವಾಗಿರುತ್ತದೆ. [ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]

ನಿವ್ವಳ ಆದಾಯ (Net Income)
ತೆರಿಗೆ ಹಾಗೂ ಇನ್ನಿತರ ಕಡಿತದ ನಂತರ ಕೈಗೆ ಸಿಗುವ ಆದಾಯವೇ ನಿವ್ವಳ ಆದಾಯ. ನಿವ್ವಳ ಆದಾಯ ಯಾವಾಗಲೂ ಒಟ್ಟು ಆದಾಯಕ್ಕಿಂತ ಶೇ 18-20ರಷ್ಟು ಕಡಿಮೆ ಇರುತ್ತದೆ.

ಸಂಬಳದಾರರ ಗಮನಕ್ಕೆ, ಸ್ಯಾಲರಿ ವ್ಯತ್ಯಾಸ ತಿಳಿದುಕೊಳ್ಳಿ!

ಸಂಬಳದಾರರ ಮಾಸಿಕ ವೇತನದಿಂದ ತೆರಿಗೆ ಕಡಿತ ಮಾಡುವುದು ಎಲ್ಲರಿಗೂ ಗೊತ್ತೇ ಇರುತ್ತದೆ. ಈಗ ರಮೇಶ್ ಅವರ ಒಟ್ಟು ಆದಾಯವನ್ನು ನಿವ್ವಳ ಆದಾಯವಾಗಿ ಪರಿವರ್ತಿಸಿದರೆ ಸಿಗುವ ಮೊತ್ತದ ಬಗ್ಗೆ ಇಲ್ಲಿ ಗಮನ ಹರಿಸಿ.. [ಹೆಚ್ಚು ರಿಟರ್ನ್ಸ್ ನೀಡುವ 7 ಹೂಡಿಕೆ ಟಿಪ್ಸ್]

ರಮೇಶ ಅವರಿಗೆ 50,000 ರು ಒಟ್ಟು ಆದಾಯ ಇದೆ ಎಂದರೆ ಶೇ 20ರಷ್ಟು ತೆರಿಗೆ ಕಡಿತ ಚೌಕಟ್ಟಿಗೆ ಒಳಪಡುತ್ತದೆ.
ಶೇ 20ರಷ್ಟು ತೆರಿಗೆ ಕಡಿತ ಎಂದರೆ 0.20
50,000 X 0.20= 10,000
50,000-10,000= 40,000ರು

ಹೀಗಾಗಿ ರಮೇಶ ಅವರ ನಿವ್ವಳ ಆದಾಯ 40,000 ರು ಆಗಲಿದೆ.

ಒಂದು ವೇಳೆ ರಮೇಶ ಅವರು ಸ್ವಯಂ ಉದ್ಯೋಗಿಯಾಗಿದ್ದರೆ, ಅವರ ಒಟ್ಟು ಆದಾಯದಿಂದ ಖರ್ಚು ವೆಚ್ಚ, ತೆರಿಗೆ ಇನ್ನಿತರ ಕಡಿತಗಳನ್ನು ಅಳಿಸಿ ವೇತನ ಲೆಕ್ಕ ಹಾಕಲಾಗುತ್ತದೆ. [ಸಿಟಿಸಿ ಮತ್ತು ನೆಟ್ ಸ್ಯಾಲರಿ ನಡುವಿನ ವ್ಯತ್ಯಾಸವೇನು?]

ಭಾರತೀಯ ತೆರಿಗೆದಾರರ ಕಾನೂನಿಯ ಅನ್ವಯ ಸಂಬಳದಾರರ ತಿಂಗಳ ವೇತನದ ಒಟ್ಟು ಆದಾಯದ ಮೇಲೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ತೆರಿಗೆ ಕಡಿತಗೊಳಿಸಲಾಗುತ್ತದೆ. ಸ್ವಯಂ ಉದ್ಯೋಗಿಗಳು, ಉದ್ಯಮಿಗಳ ವಿಷಯದಲ್ಲಿ ನಿವ್ವಳ ಆದಾಯದ ಮೇಲೆ ತೆರಿಗೆ ಕಡಿತಗೊಳಿಸಲಾಗುತ್ತದೆ. (ಗುಡ್ ರಿಟರ್ನ್ಸ್ .ಇನ್)

English summary

What Is The Difference Between Gross Income And Net Income?

Before you handle finances, one has to know the basic difference between gross income and net income which will be helpful while filing your taxes. These both matter for a salaried as well as a business person.
Story first published: Thursday, October 29, 2015, 15:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X