Englishहिन्दी മലയാളം தமிழ் తెలుగు

ರುಪೇ(RuPay) ಡೆಬಿಟ್ ಕಾರ್ಡ್ ಆಫರ್ ಗಳೇನು?

Written By: Siddu
Subscribe to GoodReturns Kannada

ರುಪೇ ಕಾರ್ಡ್ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ನಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಮೂಲಕ ನಿಯಂತ್ರಿಸಲ್ಪಟ್ಟಿದೆ. ವೀಸಾ ಮತ್ತು ಮಾಸ್ಟರ್ ಡೆಬಿಟ್/ಕ್ರೆಡಿಟ್ ಕಾರ್ಡುಗಳು ಹೋಲಿಸಿದರೆ ರುಪೇ ಕಾರ್ಡ್ ತುಂಬಾ ಸುರಕ್ಷಿತವಾಗಿದೆ. ರುಪೇ ಕಾರ್ಡ್ ವ್ಯವಹಾರ ದೇಶೀಯವಾಗಿ ನಡೆಯುವುದರಿಂದ ವ್ಯವಹಾರ ಮತ್ತು ಗ್ರಾಹಕರ ಡೇಟಾ ಸಂಬಂಧಿತ ಮಾಹಿತಿ ದೇಶೀಯವಾಗಿಯೇ ಉಳಿಯುತ್ತದೆ. ಗ್ರಾಹಕರ ಮಾಹಿತಿ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ. ರುಪೇ ಕಾರ್ಡ್ ಇದ್ದರೆ ಈ ಪ್ರಯೋಜನ ಪಡೆಯಬಹುದು

ರುಪೇ(RuPay) ಡೆಬಿಟ್ ಕಾರ್ಡ್ ಆಫರ್ ಗಳೇನು?

ರುಪೇ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಹಲವು ಆಫರ್ ಗಳನ್ನು ಪಡೆಯಬಹುದಾಗಿದ್ದು, ಅವುಗಳ ವಿವರ ಇಲ್ಲಿದೆ.

1. ಸಹಾಯ ಸೇವೆಗಳು
* ಗಿಪ್ಟ್ ಡೆಲಿವರಿ ನೆರವು, ಹೂ ಡೆಲಿವರಿ ನೆರವು
* ಉಪಾಹಾರಗೃಹಗಳ ರೇಫರೆನ್ಸ್ ಮತ್ತು ಅರೇಂಜ್ಮೆಂಟ್
* ಕೊರಿಯರ್ ಸೇವೆಗಳ ಸಹಾಯ
* ಕಾರು ಬಾಡಿಗೆ, ಗಾಲ್ಫ್ ಮೀಸಲಾತಿ
* ಚಲನಚಿತ್ರ ಟಿಕೆಟ್ ಗಳ ಸೋರ್ಸಿಂಗ್ ನೆರವು
* ಐಟಿ ರಿಟರ್ನ್ಸ್ ಮತ್ತು ಫೈಲಿಂಗ್ ನೆರವು
* ಹೂಡಿಕೆ ಕನ್ಸಲ್ಟೆನ್ಸಿ- ರಿಯಲ್ ಎಸ್ಟೇಟ್, ಮ್ಯೂಚುಯಲ್ ಫಂಡ್, ಈಕ್ವಿಟಿ, ಡೆಬಿಟ್ಸ್
* ವಿಮೆ ಕನ್ಸಲ್ಟೆನ್ಸಿ - ಜೀವ ವಿಮೆ, ಸಾಮಾನ್ಯ ವಿಮೆ ಮತ್ತು ಆರೋಗ್ಯ ವಿಮೆ ಇತ್ಯಾದಿ ಸಹಾಯ ಸೇವೆಗಳು ಲಭ್ಯವಿವೆ.

2. ಇಂಧನ ಮೇಲ್ತೆರಿಗೆ ಮನ್ನಾ
* ತಿಂಗಳ ಕೊನೆಯಲ್ಲಿ ಕ್ಯಾಶ್ ಬ್ಯಾಕ್ ಲೆಕ್ಕಾಚಾರ
* ಇಂಧನ ಮೇಲ್ತೆರಿಗೆ ಮಿತಿ ತಿಂಗಳಿಗೆ ರೂ. 75
* ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಪಾವತಿಸಿ

3. IRCTC ಕ್ಯಾಶ್ ಬ್ಯಾಕ್ ಆಫರ್
* www.irctc.co.in ಲಾಗಿನ್ ಆಗಿ. ರೈಲ್ವೆ ಟಿಕೆಟ್ ಬುಕ್ ಮಾಡಿ
* ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿ
* ತಿಂಗಳ ಕೊನೆಯಲ್ಲಿ ಕ್ಯಾಶ್ ಬ್ಯಾಕ್ ಲೆಕ್ಕಾಚಾರ
* ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಪಾವತಿಸಿ

4. ಯುಟಿಲಿಟಿ ಬಿಲ್ ಪಾವತಿ ಕ್ಯಾಶ್ ಬ್ಯಾಕ್
* ತಿಂಗಳ ಕೊನೆಯಲ್ಲಿ ಕ್ಯಾಶ್ ಬ್ಯಾಕ್ ಲೆಕ್ಕಾಚಾರ ಮಾಡಲಾಗುತ್ತದೆ.
* ಶೇ. 5 ಅಥವಾ ರೂ. 50 ಕ್ಯಾಶ್ ಬ್ಯಾಕ್ ರೂಪದಲ್ಲಿ ಪಡೆಯಬಹುದು.
* ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಪಾವತಿಸಿ

5. ದೇಶೀಯವಾಗಿ ಪ್ರವೇಶ
* ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ದೇಶದಾದ್ಯಂತ ಕೆಲ ಏರ್ಪೋರ್ಟ್ ಗಳಲ್ಲಿ ಲೌಂಜೆಸ್(ಕಾಯುವ ಸಭಾಂಗಣ) ಸೌಲಭ್ಯ ಪಡೆಯಬಹುದು.
* ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಶುಲ್ಕಗಳನ್ನು ಪಾವತಿಸಬಹುದು.

ರುಪೇ(RuPay) ಡೆಬಿಟ್ ಕಾರ್ಡ್ ಆಫರ್ ಗಳೇನು?

English summary

What are the Rupay Debit Card Offers?

The Indian market offers huge potential for cards penetration despite the challenges. RuPay Cards will address the needs of Indian consumers, merchants and banks.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC