Englishहिन्दी മലയാളം தமிழ் తెలుగు

ರುಪೇ ಕಾರ್ಡ್ ಇದ್ದರೆ ಈ ಪ್ರಯೋಜನ ಪಡೆಯಬಹುದು

Written By: Siddu
Subscribe to GoodReturns Kannada

ರುಪೇ ಕಾರ್ಡ್ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ನಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಮೂಲಕ ನಿಯಂತ್ರಿಸಲ್ಪಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ವೀಸಾ ಮತ್ತು ಮಾಸ್ಟರ್ ಡೆಬಿಟ್/ಕ್ರೆಡಿಟ್ ಕಾರ್ಡುಗಳು ಲಭ್ಯ ಇವೆ. ಇವುಗಳಿಗೆ ಹೋಲಿಸಿದರೆ ರುಪೇ ಕಾರ್ಡ್ ತುಂಬಾ ಸುರಕ್ಷಿತವಾಗಿದೆ.

ಕೇವಲ ವೀಸಾ ಮತ್ತು ಮಾಸ್ಟರ್ ಕಾರ್ಡ್ ಗೆ ಸೀಮಿತವಾಗಿದ್ದ ಇ-ಕಾಮರ್ಸ್ ವ್ಯವಹಾರಗಳನ್ನು ರುಪೇ ಕಾರ್ಡ್ ಮೂಲಕವೂ ನಡೆಸಬಹುದಾಗಿದೆ.
ರುಪೇ ಕಾರ್ಡ್ ಮೂಲಕ ಬ್ಯಾಂಕು, ವ್ಯಾಪಾರ ಮತ್ತು ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ. ರುಪೇ(RuPay) ಡೆಬಿಟ್ ಕಾರ್ಡ್ ಆಫರ್ ಗಳೇನು?

ಇದರ ಹೆಚ್ಚಿನ ಪ್ರಯೋಜನಗಳ ವಿವರ ಇಲ್ಲಿ ನೀಡಲಾಗಿದೆ.

1. ಕಡಿಮೆ ವೆಚ್ಚ ಮತ್ತು ನಿರ್ವಹಣಾ ಸಾಮರ್ಥ್ಯ

ವ್ಯವಹಾರ ಪ್ರಕ್ರಿಯೆ ದೇಶಿಯವಾಗಿ ನಡೆಯುವುದರಿಂದ ಕಡಿಮೆ ವೆಚ್ಚದಲ್ಲಿ ವಹಿವಾಟು ನಡೆಸಬಹುದು. ರುಪೇ ಕಾರ್ಡ್ ಬಳಕೆಯಿಂದ ವ್ಯವಹಾರ ಕೈಗೆಟಕುವ ವೆಚ್ಚದಲ್ಲಿ ನಡೆಸಬಹುದಾಗಿದ್ದು, ಉದ್ಯಮದಲ್ಲಿ ಕಾರ್ಡ್ ಬಳಕೆ ಹೆಚ್ಚಿಸಬಹುದು.

2. ಕಸ್ಟಮೈಸ್ಡ್ ಉತ್ಪನ್ನಗಳು

ಈ ದೇಶಿಯ ಯೋಜನೆ ಕಸ್ಟಮೈಸ್ಡ್ ಉತ್ಪನ್ನಗಳ ಅಭಿವೃದ್ಧಿಗೆ ಬದ್ದವಾಗಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ಒದಗಿಸುತ್ತದೆ.

3. ಭಾರತೀಯ ಗ್ರಾಹಕರಿಗೆ ಸಂಬಂಧಿತ ಮಾಹಿತಿ ರಕ್ಷಣೆ

ರುಪೇ ಕಾರ್ಡ್ ವ್ಯವಹಾರ ದೇಶೀಯವಾಗಿ ನಡೆಯುವುದರಿಂದ ವ್ಯವಹಾರ ಮತ್ತು ಗ್ರಾಹಕರ ಡೇಟಾ ಸಂಬಂಧಿತ ಮಾಹಿತಿ ದೇಶೀಯವಾಗಿಯೇ ಉಳಿಯುತ್ತದೆ. ಗ್ರಾಹಕರ ಮಾಹಿತಿ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ.

4. ವಿದ್ಯುನ್ಮಾನ ಉತ್ಪನ್ನ ಆಯ್ಕೆಗೆ ಅವಕಾಶ

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಅವಕಾಶವಿರುವುದಿಲ್ಲ. ಆದರಿಂದ ರುಪೇ ಉತ್ಪನ್ನಗಳ ಮೂಲಕ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಆರ್ಥಿಕವಾಗಿ ಅನುಕೂಲವಾಗುವಂತೆ ಆಫರ್ ನೀಡಲಿವೆ. ಜತೆಗೆ ಸಂಬಂಧಿತ ಉತ್ಪನ್ನ ರೂಪಾಂತರಗಳ ಬಗ್ಗೆ ನಿರ್ದೇಶಿಸಬಹುದು.

5. ಪಾವತಿ ವಾಹಿನಿ ಮತ್ತು ಉತ್ಪನ್ನಗಳ ಮಧ್ಯೆ ಚಲನಶೀಲತೆ

ರುಪೇ ಕಾರ್ಡ್ ವಿವಿಧ ಪಾವತಿ ವಾಹಿನಿ ಮತ್ತು ಉತ್ಪನ್ನಗಳ ಮಧ್ಯೆ ಉತ್ತಮ ಚಲನಶೀಲತೆಯನ್ನು ಹೊಂದಲು ಸಹಕಾರಿಯಾಗಬಲ್ಲದು. ಪ್ರಸ್ತುತ NPCI ಎಟಿಎಂ, ಮೊಬೈಲ್ ತಂತ್ರಜ್ಞಾನ, ಚೆಕ್ ಸೇರಿದಂತೆ ಇತ್ಯಾದಿ ವೇದಿಕೆಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

6. ರುಪೇ ಡೆಬಿಟ್ ಕಾರ್ಡ್ ಆಫರ್ಸ್

1. ಸಹಾಯ ಸೇವೆಗಳು
* ಗಿಪ್ಟ್ ಡೆಲಿವರಿ ನೆರವು, ಕೊರಿಯರ್ ಸೇವೆಗಳ ಸಹಾಯ,  ಕಾರು ಬಾಡಿಗೆ, ಗಾಲ್ಫ್ ಮೀಸಲಾತಿ,  ಚಲನಚಿತ್ರ ಟಿಕೆಟ್ ಗಳ ಸೋರ್ಸಿಂಗ್ ನೆರವು,  ಐಟಿ ರಿಟರ್ನ್ಸ್ ಮತ್ತು ಫೈಲಿಂಗ್ ನೆರವು,  ಹೂಡಿಕೆ ಕನ್ಸಲ್ಟೆನ್ಸಿ- ರಿಯಲ್ ಎಸ್ಟೇಟ್, ಮ್ಯೂಚುಯಲ್ ಫಂಡ್, ಈಕ್ವಿಟಿ, ಡೆಬಿಟ್ಸ್

2. ಇಂಧನ ಮೇಲ್ತೆರಿಗೆ ಮನ್ನಾ
* ತಿಂಗಳ ಕೊನೆಯಲ್ಲಿ ಕ್ಯಾಶ್ ಬ್ಯಾಕ್ ಲೆಕ್ಕಾಚಾರ, ಇಂಧನ ಮೇಲ್ತೆರಿಗೆ ಮಿತಿ ತಿಂಗಳಿಗೆ ರೂ. 75, ಪ್ಲಾಟಿನಂ ಡೆಬಿಟ್ ಕಾರ್ಡ್ ಬಳಸಿ ಪಾವತಿಸಿ

3. IRCTC ಕ್ಯಾಶ್ ಬ್ಯಾಕ್ ಆಫರ್
4. ಯುಟಿಲಿಟಿ ಬಿಲ್ ಪಾವತಿ ಕ್ಯಾಶ್ ಬ್ಯಾಕ್
5. ದೇಶೀಯವಾಗಿ ಪ್ರವೇಶ

English summary

What is Rupay card and benefits of Rupay card

The IndiaPay scheme was conceived by the National Payments Corporation of India as an alternative to the MasterCard and Visa card schemes,[2][5] and to consolidate and integrate various payment systems in India.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns