For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ಆನ್ಲೈನ್ ಮೂಲಕ ಇ-ಆಧಾರ್ ಕಾರ್ಡ್ ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದ್ದು, ಅದಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ಈ ಹಿಂದೆ ಆಧಾರ್ ಕಾರ್ಡ್ ಗಾಗಿ ಅರ್ಜಿ ಹಾಕಿದ ನಂತರ ಕಾರ್ಡ್ ಕೈ ಸೇರುವವರೆಗೂ ಕಾಯಬೇಕಾಗಿತ್ತು.

|

ಆನ್ಲೈನ್ ಮೂಲಕ ಇ-ಆಧಾರ್ ಕಾರ್ಡ್ ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದ್ದು, ಅದಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ಈ ಹಿಂದೆ ಆಧಾರ್ ಕಾರ್ಡ್ ಗಾಗಿ ಅರ್ಜಿ ಹಾಕಿದ ನಂತರ ಕಾರ್ಡ್ ಕೈ ಸೇರುವವರೆಗೂ ಕಾಯಬೇಕಾಗಿತ್ತು. ಆದರೆ ನಿಮ್ಮ ದಾಖಲಾತಿಗಳೆಲ್ಲ ಸರಿ ಇದ್ದರೆ ಅಧಿಕೃತ ವೆಬ್ಸೈಟ್ ಮೂಲಕ ಶೀಘ್ರದಲ್ಲಿ ಇ-ಆಧಾರ್ ಡೌನ್ಲೋಡ್ ಮಾಡಬಹುದು. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಆನ್ಲೈನ್ ಮೂಲಕ ಇ-ಆಧಾರ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅನುಸರಿಸಬೇಕಾದ ಕ್ರಮ

ಅನುಸರಿಸಬೇಕಾದ ಕ್ರಮ

1. ನೋಂದಣಿ ಸಂಖ್ಯೆ/ಆಧಾರ್ ಸಂಖ್ಯೆ[ನೋಂದಣಿ ಸಂಖ್ಯೆ ಎಂದರೆ ನೀವು ಆಧಾರ್ ಕಾರ್ಡಿಗೆ ಅರ್ಜಿ ಹಾಕಿದ ಮೇಲೆ ಸಿಗುವ ಸ್ವೀಕೃತಿ ಪತ್ರದಲ್ಲಿರುವ ಸಂಖ್ಯೆ]
2. ಪೂರ್ತಿ ಹೆಸರು(ಸ್ವೀಕೃತ ಪತ್ರದಲ್ಲಿ ಇರುವಂತೆ)
3. ಪಿನ್ ಕೋಡ್
4. ನೋಂದಾಯಿತ ಮೊಬೈಲ್ ನಂಬರ್

ಇ-ಆಧಾರ್ ಡೌನ್ಲೋಡ್ ಹೇಗೆ?

ಇ-ಆಧಾರ್ ಡೌನ್ಲೋಡ್ ಹೇಗೆ?

ಹಂತ 1
14 ಅಂಕೆಗಳ ಆಧಾರ್ ಕಾರ್ಡ್ ನೋಂದಣಿ ಸಂಖ್ಯೆ ಹಾಗೂ ಸ್ವೀಕೃತಿ ಪತ್ರದ ಮೇಲಿರುವ 14 ಅಂಕೆಗಳ ದಿನಾಂಕ ಹಾಗೂ ಸಮಯ ಸಮೇತ ಸಂಖ್ಯೆಯನ್ನು ನಮೂದಿಸಿ.
ನಂತರ ನಿಮ್ಮ ಪೂರ್ತಿ ಹೆಸರನ್ನು ದಾಖಲಿಸಿ, ಪಿನ್ ಕೋಡ್ ಹಾಕಿ. ಬಾಕ್ಸಿನಲ್ಲಿರುವ Captcha code ಸಂಖ್ಯೆಗಳನ್ನು ನಮೂದಿಸಿ.

ಹಂತ 2
ಸರಿಯಾದ ಮಾಹಿತಿ ನಮೂದಿಸಿದ ನಂತರ ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು(one time password) ಕಳುಹಿಸಿಕೊಡಲಾಗುವುದು.

ಹಂತ 3
ಒಟಿಪಿ ಸಂಖ್ಯೆಯನ್ನು ನಮೂದಿಸಿದ ನಂತರ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ. ಪಿಡಿಎಫ್ ಮಾದರಿಯಲ್ಲಿ ಸಿಗುವ ಆಧಾರ್ ಕಾರ್ಡ್ ಓಪನ್ ಮಾಡಲು ಮತ್ತೊಮ್ಮೆ ಪಿನ್ ಕೋಡ್ ದಾಖಲಿಸಿ.

ಕೊನೆ ಮಾತು

ಕೊನೆ ಮಾತು

ಹೀಗೆ ಲಭ್ಯವಾಗುವ ಇ-ಆಧಾರ್ ಕಾರ್ಡನ್ನು ಪ್ರಿಂಟ್ ಔಟ್ ತೆಗೆದುಕೊಂಡು ಗುರುತು ಚೀಟಿಯಾಗಿ ಬಳಸಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ಇದ್ದರೆ ಆರಂಭದಲ್ಲೇ ನನ್ನ ಬಳಿ ಆಧಾರ್ ಕಾರ್ಡ್ ಇದೆ ಎಂದು ಆಯ್ಕೆ ಮಾಡಿಕೊಂಡು 12 ಅಂಕೆಗಳನ್ನು ನಮೂದಿಸಿ ಇನ್ನೂ ಸುಲಭವಾಗಿ ಇ-ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು.

Read more about: aadhar upi online ಆಧಾರ್
English summary

How to Download Your e-Aadhaar Card Online?

Now, you can easily download Aadhaar Card online and no need to wait till it is delivered at your door step. However, to download e Aadhaar card you must have your AADHAAR Card application approved.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X