Englishहिन्दी മലയാളം தமிழ் తెలుగు

ಪ್ಯಾನ್ ಕಾರ್ಡ್ ಸರಿ ಇಲ್ಲವೆ? ದೂರು ದಾಖಲಿಸಿ ಸರಿಪಡಿಸುವುದು ಹೇಗೆ?

Written By: Siddu
Subscribe to GoodReturns Kannada

ಭಾರತದ ಪ್ರತಿಯೊಬ್ಬ ನಾಗರಿಕನೂ ಆದಾಯ ತೆರಿಗೆ ಕಟ್ಟುವ ಸಂದರ್ಭದಲ್ಲಿ ಹಾಗೂ ಹಣಕಾಸು ವ್ಯವಹಾರ ನಿರ್ವಹಿಸುವಾಗ ಪ್ಯಾನ್ ಕಾರ್ಡ್ ಅತ್ಯಗತ್ಯ. ಕೇವಲ ಆದಾಯ ತೆರಿಗೆ ಪಾವತಿ ಅಷ್ಟೇ ಅಲ್ಲದೇ ಇಂದು ಅನೇಕ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ಪ್ಯಾನ್ ಕಾರ್ಡ್(ಪರ್ಮನೆಂಟ್ ಅಕೌಂಟ್ ನಂಬರ್) ಅನ್ನು ಹಣಕಾಸು ವ್ಯವಹಾರಗಳಿಗೆ ಕಡ್ಡಾಯವಾಗಿ ಬಳಕೆ ಮಾಡಲಾಗುತ್ತಿದೆ.

ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದುವುದು ಅಪರಾಧ ಎಂದು ಕಾನೂನು ಹೇಳುತ್ತದೆ. ಪ್ಯಾನ್ ಹಲವು ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಪ್ಯಾನ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಅಥವಾ ಸರಿ ಇಲ್ಲದಿದ್ದರೆ ಏನು ಮಾಡಬೇಕು ಎನ್ನುವುದು ಹಲವರ ಪ್ರಶ್ನೆಯಾಗಿರುತ್ತದೆ.

ತಪ್ಪುಗಳಾಗುವ ಸಾಧ್ಯತೆ

ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿ ಕೆಲ ದಿಗಳಾದರೂ ನಿಮ್ಮ ಕೈಸೇರುವುದು ವಿಳಂಬವಾಗಬಹುದು. ಅಲ್ಲದೇ ನಿಮ್ಮ ತಪ್ಪಿಲ್ಲದೆಯೂ ಪಾನ್ ಕಾರ್ಡ್ನಲ್ಲಿ ತಪ್ಪುಗಳಾಗುವ ಇಲ್ಲವೇ ಗೊಂದಲ ಏರ್ಪಡುವ ಸಾಧ್ಯತೆ ಇರುತ್ತದೆ.

ಪ್ಯಾನ್ ಕಾರ್ಡ್ ನಲ್ಲಾಗುವ ತಪ್ಪುಗಳೇನು?

- ಪಾನ್ ಕಾರ್ಡ್ ಅಥವಾ ಪಾನ್ ನಂಬರ್ ನಿಮ್ಮ ಕೈಗೆ ಸಿಗದೇ ಇದ್ದರೆ
- ಹೆಸರು ತಪ್ಪು, ಜನ್ಮ ದಿನಾಂಕ
- ವಿಳಾಸ ತಪ್ಪಾಗಿ ನಮೂದಾಗಿರುವುದು
- ಫೋಟೋ ತಪ್ಪು
- ತಂದೆ ಹೆಸರು ತಪ್ಪು
- ಪಾನ್ ಕಾರ್ಡ್ ಸಿಗದೇ ಇದ್ದರೆ
- ವಿಳಾಸಕ್ಕೆ ಡಿಲೆವರಿ ಆಗದಿದ್ದರೆ

ದೂರು ದಾಖಲು ಮಾಡುವುದು ಹೇಗೆ?

ಮೊದಲಿಗೆ ಆದಾಯ ತೆರಿಗೆ ಇಲಾಖೆ ವೆಬ್ ತಾಣಕ್ಕೆ ಭೇಟಿ ನೀಡಿ
- ಯಾವ ಬಗೆಯ ದೂರು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
- ಕೂಪನ್ ಅಥವಾ ಮರುಪಾವತಿ ಅಂಕೆಯನ್ನು ಪಡೆದುಕೊಳ್ಳಿ
- ನಿಮ್ಮ ಏಜೆನ್ಸಿ ಅದು ಎನ್ ಎಸ್ ಡಿಎಲ್ ಅಥವಾ ಯುಟಿಐಐಎಸ್ ಎಲ್ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
- ಉಳಿದ ಮೂಲ ಮಾಹಿತಿಗಳನ್ನು ಭರ್ತಿ ಮಾಡಿ
- ಇದೆಲ್ಲ ಮುಗಿದ ಮೇಲೆ ಸಬ್ ಮಿಟ್ ಮಾಡಿ

ದೂರು ಪತ್ತೆ

ಒಮ್ಮೆ ನೀವು ದೂರನ್ನು ದಾಖಲಿಸಿದ(submit) ನಂತರ ಕೂಪನ್ ಸಂಖ್ಯೆಯೊಂದು ಸಿಗುತ್ತದೆ. ಅದನ್ನು ಬಳಕೆ ಮಾಡಿಕೊಂಡು ನಿಮ್ಮ ದೂರು ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆ ಮಾಡಬಹುದು. ಇಲ್ಲವೇ ಸಂಬಂಧಪಟ್ಟ ಇಲಾಖೆಗೆ ಹೋಗಿ ಪರಿಶೀಲನೆ ಮಾಡಬಹುದು.

ಪ್ಯಾನ್ ಕಾರ್ಡ್ ಮಹತ್ವ

ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ಆದಾಯ ತೆರಿಗೆ ಇಲಾಖೆ ಕೊಡುತ್ತದೆ. ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.(kannadagoodreturns.in)

Read more: 

English summary

How To Register PAN Card Related Complain Online And Track Status?

Permanent Account Number (PAN) Card is necessary for most financial transactions. Pan Card is mandatory for transactions such as filing income tax returns, depositing large amounts of cash, buying property etc.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns