Englishहिन्दी മലയാളം தமிழ் తెలుగు

ವಾಟ್ಸ್ ಆಪ್ ಪೇಮೆಂಟ್ ಸೇವೆ ಬಳಕೆ ಹೇಗೆ?

Written By: Siddu
Subscribe to GoodReturns Kannada

ವಾಟ್ಸ್ ಆಪ್ ಬಳಕೆದಾರರಿಗೆ ಒಂದು ಸಿಹಿಸುದ್ದಿ ಇದೆ! ಇಲ್ಲಿಯವರೆಗೆ ವಾಟ್ಸ್ ಆಪ್ ಮೆಸೆಂಜರ್ ಸ್ಮಾರ್ಟ್ ಫೋನ್ಗಳ ಮೂಲಕ ತ್ವರಿತ ಸಂದೇಶ, ಚಿತ್ರ, ಧ್ವನಿ ಸಂಭಾಷಣೆ, ವಿಡಿಯೋ ಹಾಗು ದಾಖಲೆಗಳನ್ನು ಇಂಟರ್ನೆಟ್ ಮುಖಾಂತರ ಕಳುಹಿಸಲು ಬಳಸಲಾಗುತ್ತಿದೆ. ಆದರೆ ಇನ್ನುಮುಂದೆ ವಾಟ್ಸ್ ಆಪ್ ಪೇಮೆಂಟ್ ಸೌಲಭ್ಯ ಕೂಡ ಪಡೆಯಬಹುದು.

ವಾಟ್ಸ್ ಆಪ್ ಪೇಮೆಂಟ್ ಸೇವೆ ಬಳಕೆ ಹೇಗೆ?

ವಾಟ್ಸ್ ಆಪ್ ಪಾವತಿ (WhatsApp Payment) ವಿಧಾನ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ಯಿಂದ ಪರಿಚಯಿಸಲ್ಪಟ್ಟಿದ್ದು, ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಡಿಜಿಟಲ್ ವಾಲೆಟ್ ನಲ್ಲಿ ಹಣವನ್ನು ಇರಿಸಲು ಅಗತ್ಯವಿಲ್ಲ ಅಥವಾ ಡೆಬಿಟ್ ಕಾರ್ಡ್ ಬಳಸುವ ಅಗತ್ಯವಿಲ್ಲ. ಪೇಟಿಎಂ ಮೂಲಕ ಶೀಘ್ರದಲ್ಲಿ ಹಣ ವರ್ಗಾವಣೆ ಹೇಗೆ?

ಶೀಘ್ರದಲ್ಲೇ ಎಲ್ಲಾ Android ಮತ್ತು iOS ಫೋನ್ ಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. ನಿಮ್ಮ ಸ್ನೇಹಿತರಿಗೆ WhatsApp ಮೂಲಕ ಪಾವತಿಸುವ ಮುನ್ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಲು ಮರೆಯದಿರಿ. 

ವಾಟ್ಸ್ ಆಪ್ ಪೇಮೆಂಟ್ ಸೇವೆ ಬಳಕೆ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ..

1. ವಾಟ್ಸ್ ಆಪ್ ನಲ್ಲಿ ಪೇಮೆಂಟ್ ಆಯ್ಕೆ ಸಕ್ರಿಯಗೊಳಿಸಿ

ವಾಟ್ಸ್ ಆಪ್ ತೆರೆದು, ನೀವು Android ಫೋನ್ ಬಳಸುತ್ತಿದ್ದರೆ, ಅಪ್ಲಿಕೇಶನ್ ಪರದೆಯ ಮೇಲಿನ ಬಲದಲ್ಲಿರುವ ಮೂರು ಡಾಟ್ಗಳನ್ನು ಕ್ಲಿಕ್ ಮಾಡಿ. ನಂತರ ತೆರೆಯುವ ಆಯ್ಕೆಗಳ ಪೈಕಿ ಪಾವತಿ(Payments ) ಮೇಲೆ ಕ್ಲಿಕ್ ಮಾಡಿ.

2. ನಿಯಮ ಮತ್ತು ಷರತ್ತುಗಳನ್ನು ಸಮ್ಮತಿಸಿ

ಯುಪಿಐನ ನಿಯಮಗಳು ಮತ್ತು ಷರತ್ತುಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿನ ಹಸಿರು ಐಕಾನ್ ಆಯ್ಕೆ ಮಾಡಿ ಸ್ವೀಕರಿಸಿ ಮತ್ತು ಮುಂದುವರಿಸಿ.

3. ಬ್ಯಾಂಕ್ ಖಾತೆಯೊಂದಿಗೆ ಫೋನ್ ಸಂಖ್ಯೆ ಪರಿಶೀಲಿಸಿ

ನಿಮ್ಮ WhatsApp ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಆಯ್ಕೆ ಮಾಡುವಾಗ ಎಸ್ಎಂಎಸ್ ಪರಿಶೀಲಿಸಿ. ನಿಮ್ಮ ಬ್ಯಾಂಕ್ ಸಂಖ್ಯೆಯೊಂದಿಗೆ ನಿಮ್ಮ ಫೋನ್ ಸಂಖ್ಯೆಯಿದ್ದರೆ WhatsApp ಅದನ್ನು ಪರಿಶೀಲಿಸುತ್ತದೆ.

4. ಬ್ಯಾಂಕ್ ಆಯ್ಕೆ ಮಾಡಿ

ಯುಪಿಐ ಸೌಲಭ್ಯವನ್ನು ಒದಗಿಸುವ ಬ್ಯಾಂಕುಗಳ ಪಟ್ಟಿಯನ್ನು WhatsApp ಪ್ರದರ್ಶಿಸುತ್ತದೆ. ನಿಮ್ಮ ಬ್ಯಾಂಕ್ ಅನ್ನು ಖಚಿತಪಡಿಸಿಕೊಂಡು, ನಿಮ್ಮ WhatsApp ಸಂಖ್ಯೆಗೆ ಲಿಂಕ್ ಮಾಡಲಾದ ನಿಮ್ಮ ಸಕ್ರಿಯ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

5. ಬ್ಯಾಂಕ್ ಖಾತೆ ಸಂಖ್ಯೆ ಆಯ್ಕೆಮಾಡಿ

ಬ್ಯಾಂಕ್ ಆಯ್ಕೆ ಮಾಡಿದ ನಂತರ, ಲಿಂಕ್ ಮಾಡಲು ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ. ಸಂದೇಶದ ಮೂಲಕ ಪರಿಶೀಲನಾ ಪ್ರಕ್ರಿಯೆ ನಡೆಯುತ್ತದೆ. ನಿಮ್ಮ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ಕಾಣುತ್ತದೆ. ನೀವು ಬಹು ಖಾತೆಗಳನ್ನು ಹೊಂದಿದಲ್ಲಿ, ಎಲ್ಲವೂ ನೋಡಬಹುದು.

6. ಚಾಟ್ ಮೂಲಕ ಹಣ ಕಳುಹಿಸಿ

ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಲು, ಅವನು/ಅವಳು WhatsApp ನಲ್ಲಿ ಪೇಮೆಂಟ್ ಆಯ್ಕೆಯನ್ನು ಸಕ್ರಿಯಗೊಳಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ಅವರ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಅದೇ ಸಂಖ್ಯೆಗೆ ಕಳುಹಿಸುತ್ತೀರಿ. ನಿಮ್ಮ ಸಂದೇಶವನ್ನು ನಮೂದಿಸಲು ರೂಪಾಯಿ ಚಿಹ್ನೆಯ U- PIN (UPI-PIN) ಆಯ್ಕೆಮಾಡಿ.

ವಾಟ್ಸ್ ಆಪ್ ಅನುಕೂಲಗಳು

ವಾಟ್ಸ್ ಆಪ್ ಮೊಬೈಲ್ ಮೂಲಕ ಸಂದೇಶಗಳನ್ನು ಕಳುಹಿಸುವ ಪರ್ಯಾಯ ಕೇ೦ದ್ರ. ವಿಶ್ವದ ಯಾವುದೆ ಮೂಲೆಯಿ೦ದ ಎಲ್ಲಿಗಾದರು ಸ೦ಭಾಷಣೆ, ಚಿತ್ರಗಳು, ವಿಡಿಯೋಗಳು, ಧ್ವನಿ ಸ೦ಭಾಷಣೆಗಳು, ಧ್ವನಿ ಕರೆಗಳು, ಇನ್ನೊಬ್ಬರ ಸ೦ಪರ್ಕಗಳನ್ನು, ಸ್ಥಳದ ವಿಳಾಸವನ್ನು ಕಳುಹಿಸಬಹುದು.
ವಾಟ್ಸ್ ಆಪ್ ಮೋಹಕ್ಕೆ ಮಕ್ಕಳು, ಯುವಕರು, ಯುವತಿಯರು ಅದರಲ್ಲೆ ಮಾರು ಹೋಗಿದ್ದಾರೆ. ಇ೦ಟರ್ ನೆಟ್ ಬಳಕೆ ಮಾತ್ರ ಬೇಕಾಗಿರಿವುದರಿ೦ದ ಈ ಸೇವೆ ಕೂಡ ಬಹಳ ಸುಲಭ. ಇತ್ತೀಚಿನ ಬೆಳೆವಣಿಗೆಗಳಲ್ಲಿ ವಾಟ್ಸ್ ಆಪ್ ತನ್ನ ಅಪ್ಲಿಕೇಶನ್ ಭಾಷೆಯನ್ನು ಬದಲಾಯಿಸುವ ಆಯ್ಕೆಯನ್ನು ಕೊಟ್ಟಿದ್ದು, ಆ೦ಗ್ಲ ಭಾಷೆ ಗೊತ್ತಿಲ್ಲದವರಿಗೆ ಬಹಳ ಸುಲಭವಾಗಿ ಉಪಯೋಗಿಸಲು ಅವಕಾಶ ನೀಡಿದೆ. ದೂರವಾಣಿ ನಿರ್ವಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.ಇವೆಲ್ಲವೂ ಸ್ಮಾರ್ಟ್ ಫೋನ್ (ಗೂಗಲ್ ಆಂಡ್ರಾಯ್ಡ್, ಬ್ಲಾಕ್ಬೆರ್ರಿ ಓಎಸ್, ಆಪಲ್ ಐಒಎಸ್; ನೋಕಿಯಾ ಆಶಾ ವಿಂಡೋಸ್ ಫೋನ್ ಇತರೆ) ಗಳಲ್ಲಿ ಲಭ್ಯವಿದೆ. 

ಇದು ವಿಶ್ವದಲ್ಲೇ ಅತೀ ದೊಡ್ಡ ಜನಪ್ರಿಯವಾದ ಸ೦ದೇಶವಾಹಕ ಅಪ್ಲಿಕೇಶನ್ ಆಗಿ ಬೆಳೆದಿದೆ. ವಾಟ್ಸ್ಯಾಪ್ ಇ೦ಕ್ ಸಂಸ್ಥೆಯನ್ನು ಫೇಸ್ ಬುಕ್ ಕ೦ಪನಿಯು ಬರೋಬ್ಬರಿ 19.3 ಬಿಲಿಯನ್ ಯು.ಎಸ್ ಡಾಲರ್ ಕೊಟ್ಟು ಸ್ವಾಧೀನಪಡಿಸಿಕೊ೦ಡಿದೆ.

English summary

How to use WhatsApp Payments?

The WhatsApp Payments feature works on UPI (Unified Payments Interface). Introduced by National Payments Corporation of India (NPCI)UPI allows you to send money directly to the recipient's bank account.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns