For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮೂಲಕ ಶೀಘ್ರದಲ್ಲಿ ಹಣ ವರ್ಗಾವಣೆ ಹೇಗೆ?

ಪೇಟಿಎಂ ಬಿಲ್ ಪಾವತಿ, ಹಣ ರವಾನೆ ,ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಬಿಲ್ ಪಾವತಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ.

By Siddu
|

ಪೇಟಿಎಂ (Paytm) ಇ-ಕಾಮರ್ಸ್ ದೈತ್ಯ ಕಂಪನಿ ಆಗಿದ್ದು, ಡಿಜಿಟಲ್ ವಾಲೆಟ್ ಸೌಲಭ್ಯ ಒದಗಿಸುತ್ತಿದೆ. ಪೇಟಿಎಂ ಇಂದು ಮೊಬೈಲ್ ಆಪ್, ಇ-ವಾಲೆಟ್ ಮೂಲಕ ಎಲ್ಲ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ. ಅಂತರ್ಜಾಲ ಸಂಪರ್ಕ ಇಲ್ಲದೆಯೂ ವ್ಯವಹಾರ ನಡೆಸುವ ಸೌಲಭ್ಯ ಕಲ್ಪಿಸಿದೆ. ಪೇಟಿಎಂ ಬಳಸಿ ರೇಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?

 

ಪೇಟಿಎಂ ಬಿಲ್ ಪಾವತಿ, ಹಣ ರವಾನೆ ,ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಬಿಲ್ ಪಾವತಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ನೋಟುಗಳ ನಿಷೇಧದ ನಂತರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಪೇಟಿಎಂ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುತ್ತಿದೆ. ಗ್ರಾಹಕರು ಬಸ್, ರೇಲ್ವೆ, ವಿಮಾನ, ಮೂವಿ, ಹೋಟೆಲ್ ಇತ್ಯಾದಿ ಟಿಕೇಟ್ ಗಳನ್ನು ಬುಕ್ ಮಾಡಬಹುದು.

ಪೇಟಿಎಂ ನಿಂದ ಹಣ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ...

ಹಣ ವರ್ಗಾವಣೆ

ಹಣ ವರ್ಗಾವಣೆ

1. ಪೇಟಿಎಂ ಆಪ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಆಗಿ.
2. ಪೇ ಅಥವಾ ಸೆಂಡ್ ಮೇಲೆ ಟ್ಯಾಪ್ ಮಾಡಿ.
3. ಮೊಬೈಲ್ ನಂಬರ್ ಟ್ಯಾಪ್ ಮಾಡಿ.
4. ಫೋನ್ ನಂಬರ್, ಮೊತ್ತ ಮತ್ತು ಅಗತ್ಯವಿದ್ದರೆ ಕಮೆಂಟ್ ವಿವರ ನಮೂದಿಸಿ.
5. ಸೆಂಡ್ ಮನಿ ಮೇಲೆ ಟ್ಯಾಪ್ ಮಾಡಿ.
6. ವ್ಯವಹಾರ ಪೂರ್ಣಗೊಂಡ ನಂತರ 'Success' ಸಂದೇಶ ಬರುತ್ತದೆ.
7. ಹಣ ವರ್ಗಾವಣೆ ಯಶಸ್ವಿಯಾದ ನಂತರ ಫಲಾನುಭವಿ ತನ್ನ ಮೊಬೈಲ್ ನಂಬರಿಗೆ ಸಂದೇಶ ಪಡೆಯುತ್ತಾನೆ.

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?
 

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

 1. ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ.
2. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿ
3. ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ.
4. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ.
5. ಬಿಲ್ ವಿವರವನ್ನು ಪರಿಶೀಲಿಸಿ.
6. ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ.
7. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ.
8. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ.
9. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ.
10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ

ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ

ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡುವ ಸೌಲಭ್ಯವನ್ನು ಪೇಟಿಎಂ ಕಲ್ಪಿಸಿದೆ.

ಈ ಸೌಲಭ್ಯ ಪಡೆಯುವುದು ಹೇಗೆ?

* ಪೇಟಿಎಂನೊಂದಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಮೊಬೈಲ್ ನಂಬರ್ ನೋಂದಣಿ ಮಾಡಿಸಬೇಕು.
* ನಾಲ್ಕು ಅಂಕೆಗಳ ಪೇಟಿಎಂ ಪಿನ್ ಸೆಟ್ ಮಾಡಿ
* ಒಂದು ಪೇಟಿಎಂ ವಾಲೆಟ್ ನಿಂದ ಇನ್ನೊಂದು ವಾಲೆಟ್ ಗೆ ಹಣ ವರ್ಗಾವಣೆ ಮಾಡಲು ಸ್ವೀಕರಿಸುವವರ ಮೊಬೈಲ್ ನಂಬರ್, ಮೊತ್ತ ಮತ್ತು ಪೇಟಿಎಂ ಪಿನ್ ನಮೂದಿಸಬೇಕು.
ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲ ಇಲ್ಲದೇ ಕೇವಲ ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವುದರ ಮೂಲಕ ಪ್ರತಿಯೊಬ್ಬರೂ ಈ ಸೌಲಭ್ಯ ಪಡೆಯಬಹುದಾಗಿದೆ.

Read more about: paytm ಪೇಟಿಎಂ ಹಣ
English summary

How To Send Money Through Paytm Instantly?

Paytm wallet is a digital wallet where users can transfer money from their debit card, net banking or credit card that can be used for offline and online payment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X