For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಎಂದರೇನು?

ವ್ಯಕ್ತಿಯೊಬ್ಬನು ಮಾಡಿದ ಹೂಡಿಕೆ ಅಥವಾ ವೆಚ್ಚಗಳನ್ನು ಪರಿಗಣಿಸದೆ ಆದಾಯ ತೆರಿಗೆ ಪ್ರಕಾರ ಮಾಡಲಾಗುವ ಕಡಿತವನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನಲಾಗುತ್ತದೆ.

By Siddu
|

ಪ್ರತಿವರ್ಷ ಬಜೆಟ್ ಮಂಡನೆಯಾದಾಗ ಶ್ರೀಸಾಮಾನ್ಯರ ನಿರೀಕ್ಷೆ ಆದಾಯ ತೆರಿಗೆ ಕುರಿತ ಘೋಷಣೆ ಮೇಲೆ ಇರುತ್ತದೆ. ಆದಾಯ ತೆರಿಗೆ ಮಿತಿಯನ್ನು ಹೆಚ್ಚು ಮಾಡಬಹುದೇ ಎಂಬ ನಿರೀಕ್ಷೆ ಸಹಜವಾದದ್ದು. ಆದಾಯ ತೆರಿಗೆ ಪ್ರಮಾಣ ಎಷ್ಟು, ಅದರ ಲೆಕ್ಕಾಚಾರ ಹೇಗೆ? ಯಾವ ಉಳಿತಾಯ/ವೆಚ್ಚಗಳನ್ನು ತೋರಿಸಿ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಪಡೆಯಬಹುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ವಾರ್ಷಿಕ ಆದಾಯದ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಆದಾಯ ತೆರಿಗೆ ರಿಟರ್ನ್ಸ್‌ ಅನ್ನು ಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ. ತಾವು ಪಾವತಿಸಬೇಕಿರುವ ತೆರಿಗೆ ಅಥವಾ ತಮಗೆ ಬರಬೇಕಿರುವ ಪೂರ್ವಪಾವತಿ ತೆರಿಗೆಯನ್ನು ರಿಟರ್ನ್ಸ್‌ನಲ್ಲಿ ನಮೂದಿಸಬೇಕು. ಈ ರೀತಿ ಸಂಗ್ರಹಿಸಿದ ತೆರಿಗೆ ಹಣವನ್ನು ದೇಶದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ.

ಭಾರತದಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಎಂದರೇನು?

ಭಾರತದಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಎಂದರೇನು?

ವ್ಯಕ್ತಿಯೊಬ್ಬನು ಮಾಡಿದ ಹೂಡಿಕೆ ಅಥವಾ ವೆಚ್ಚಗಳನ್ನು ಪರಿಗಣಿಸದೆ ಆದಾಯ ತೆರಿಗೆ ಪ್ರಕಾರ ಮಾಡಲಾಗುವ ಕಡಿತವನ್ನು ಸ್ಟಾಂಡರ್ಡ್ ಡಿಡಕ್ಷನ್ ಎನ್ನಲಾಗುತ್ತದೆ. ಇದಕ್ಕಾಗಿ ಯಾವುದೇ ಹೂಡಿಕೆ ಸಾಕ್ಷ್ಯಗಳು ಅಥವಾ ವೆಚ್ಚದ ರಸೀದಿಗಳನ್ನು ಸಲ್ಲಿಸಬೇಕಿರುವುದಿಲ್ಲ, ನಿಗದಿತ ಕಡಿತವನ್ನು ನಿಗದಿತ ದರದ ಪ್ರಕಾರ ಮಾಡಲಾಗುತ್ತದೆ.

ಸ್ಟಾಂಡರ್ಡ್ ಡಿಡಕ್ಷನ್ ಅರ್ಥ

ಸ್ಟಾಂಡರ್ಡ್ ಡಿಡಕ್ಷನ್ ಅರ್ಥ

ಸಂಸ್ಥೆಯಲ್ಲಿ ಹೊಂದಿರುವ ಹುದ್ದೆಯನ್ನು ಪರಿಗಣಿಸದೆ ವೇತನದಿಂದ ನಿಗದಿತ ಕಡಿತದಡಿ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ವಾರ್ಷಿಕ ಸಂಬಳದಿಂದ ನಿರ್ದಿಷ್ಟ ಮೊತ್ತ ಕಡಿತವಾಗುವುದರಿಂದ ಇದು ತೆರಿಗೆ ವ್ಯಾಪ್ತಿಗೆ ಬರುವ ಆದಾಯದ ಪ್ರಮಾಣವನ್ನು ತಗ್ಗಿಸುತ್ತದೆ. ಹಾಗಾಗಿ ಪಾವತಿಸುವ ತೆರಿಗೆಯ ಪ್ರಮಾಣವೂ ಕಡಿಮೆಯಾಗುತ್ತದೆ. ವೇತನ ಪಡೆಯುತ್ತಿರುವ ಉದ್ಯೋಗಿ ಅಥವಾ ಪಿಂಚಣಿ ಪಡೆಯುತ್ತಿರುವವರು ನಿಗದಿತ ಕಡಿತವನ್ನು ಕ್ಲೇಮ್‌ ಮಾಡಬಹುದು. ಇದಕ್ಕಾಗಿ ವೇತನ, ವಾರ್ಷಿಕ ಭತ್ಯೆ, ರಜೆಯ ಭತ್ಯೆ, ಪಿಂಚಣಿ, ಶುಲ್ಕಗಳು, ಕಮೀಷನ್ ಮುಂಚಿತವಾಗಿ ಪಡೆದ ಸಂಬಳವನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ಆದಾಯ ತೆರಿಗೆ ಕಾಯಿದೆಯ ನಿಯಮ 10ರಡಿ ಸಿಗುವ ವಿನಾಯಿತಿಗಳಾದ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆಗಳನ್ನು ಹೊರತುಪಡಿಸಲಾಗಿರುತ್ತದೆ.

ಬಾಡಿಗೆ ಆದಾಯದಿಂದ ಸ್ಟಾಂಡರ್ಡ್ ಡಿಡಕ್ಷನ್
 

ಬಾಡಿಗೆ ಆದಾಯದಿಂದ ಸ್ಟಾಂಡರ್ಡ್ ಡಿಡಕ್ಷನ್

ಮನೆ ಬಾಡಿಗೆಯಿಂದ ಬರುವ ಆದಾಯದಲ್ಲಿ ಶೇ. 30ರಷ್ಟು ನಿಗದಿತ ಕಡಿತಕ್ಕೆ ಭಾರತದಲ್ಲಿ ಅವಕಾಶವಿದೆ. ಮನೆ ಸ್ವತ್ತಿನ ನಿಗದಿತ ಕಡಿತದಡಿ ಇದನ್ನು ಪರಿಗಣಿಸಲಾಗುತ್ತದೆ. ಮನೆ ಮಾಲೀಕ ಪಾವತಿಸಿರುವ ನಗರ ಪಾಲಿಕೆ ತೆರಿಗೆ ಮತ್ತು ಇತರ ತೆರಿಗೆಗಳನ್ನು ಕಳೆದ ಬಳಿಕ ಉಳಿಯುವ ಮೊತ್ತವನ್ನು ಒಟ್ಟು ಬಾಡಿಗೆ ಆದಾಯ ಎಂದು ಪರಿಗಣಿಸಿ ಅದರ ಮೇಲೆ ಶೇ. 30 ಸ್ಟಾಂಡರ್ಡ್ ಡಿಡಕ್ಷನ್ ವಿಧಿಸಲಾಗುತ್ತದೆ.

ನಿಯಮ 24ರಡಿ ವಿನಾಯಿತಿ

ನಿಯಮ 24ರಡಿ ವಿನಾಯಿತಿ

ಈ ಹಿಂದೆ ವೇತನ ಪಡೆಯುವ ಉದ್ಯೋಗಿಗಳು ನಿಗದಿತ ಕಡಿತಕ್ಕೆ ಅರ್ಹರಾಗಿದ್ದರು. ಆದರೆ ಪ್ರಸ್ತುತ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಇರುವ ನಿಯಮ ಮತ್ತು ಕಾಯ್ದೆಗಳ ಪ್ರಕಾರ, ವೇತನ ಪಡೆಯುವ ಉದ್ಯೋಗಿಗಳಿಗೆ ಇತರ ತೆರಿಗೆ ವಿನಾಯಿತಿಗಳನ್ನು ಒದಗಿಸಲಾಗಿದೆ. ಮನರಂಜನಾ ಭತ್ಯೆ ಮತ್ತು ವೃತ್ತಿಪರ ತೆರಿಗೆಗಳನ್ನು ನಿಗದಿತ ಕಡಿತದಡಿ ಪಡೆದುಕೊಳ್ಳಬಹುದು. ಇದಲ್ಲದೆ ಈ ಕೆಳಗಿನ ವಿಭಾಗಗಳಿಗೂ ವಿನಾಯಿತಿಗಳು ಸಿಗುತ್ತವೆ.
ಪಿಪಿಎಫ್‌ನಲ್ಲಿ ಮಾಡಿದ ಹೂಡಿಕೆ
ಇಕ್ವಿಟಿಯಲ್ಲಿ ಮಾಡಿದ ಹೂಡಿಕೆ
ಮ್ಯೂಚುವಲ್‌ ಫಂಡ್‌ಗಳು
5 ವರ್ಷದ ತೆರಿಗೆ ರಹಿತ ಉಳಿತಾಯ
ನಿರ್ದಿಷ್ಟ ಅವಧಿಯ ಠೇವಣಿಗಳು
ಪಿಂಚಣಿ ಯೋಜನೆಗಳು
ಭವಿಷ್ಯನಿಧಿಗೆ ನೀಡುವ ದೇಣಿಗೆ
ಜೀವ ವಿಮಾ ಪಾಲಿಸಿ
ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)
ಶೈಕ್ಷಣಿಕ ಸಾಲದ ಮರುಪಾವತಿ
ಆರೋಗ್ಯ ವಿಮೆ ಪ್ರೀಮಿಯಂ ಪಾವತಿ

ಆದಾಯ ತೆರಿಗೆ ಅಡಿಯಲ್ಲಿ ವಿನಾಯಿತಿ

ಆದಾಯ ತೆರಿಗೆ ಅಡಿಯಲ್ಲಿ ವಿನಾಯಿತಿ

ನಾಗರಿಕರು ಹಣ ಉಳಿತಾಯ ಮಾಡುವಂತೆ ಪ್ರೇರೇಪಿಸಲು ಸರ್ಕಾರವು ಆದಾಯ ತೆರಿಗೆ ಕಾಯ್ದೆಯ ಅನೇಕ ನಿಯಮಗಳಡಿ ವಿನಾಯಿತಿಗಳನ್ನು ಒದಗಿಸುತ್ತದೆ. 80ಸಿ, 80ಸಿಸಿಸಿ, 80ಸಿಸಿಡಿ ಇತ್ಯಾದಿ ನಿಯಮಗಳಡಿ ಮಾಡಿದ ಉಳಿತಾಯಗಳ ರಸೀದಿಗಳನ್ನು ನೀಡಿ ಆ ಉಳಿತಾಯದ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ. ಹೂಡಿಕೆ ಮತ್ತು ಉಳಿತಾಯ ಯೋಜನೆಗಳಡಿ ಸಿಗುವ ಒಟ್ಟು ವಿನಾಯಿತಿಯ ಮೊತ್ತ ವಾರ್ಷಿಕ ರೂ. 1,50,000 ಆಗಿರುತ್ತವೆ. ಇದರ ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ನಲ್ಲಿ ಮಾಡುವ ಉಳಿತಾಯಕ್ಕೆ ವಾರ್ಷಿಕ ರೂ. 50,000 ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. 2015ರ ಹಣಕಾಸು ಕಾಯ್ದೆಯಡಿ ಈ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗಿದೆ.

English summary

What is Standard Deduction in India?

The Standard Deduction is a deduction allowed as per the Income Tax irrespective of the expenses met or the investment made by the individual. An individual need not disclose any investment proofs or expense bills for this purpose, the Standard Deduction is allowed at a standard rate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X