ಉಮಂಗ್ ಆಪ್‌ ಮೂಲಕ ಇಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಸಾರ್ವಜನಿಕ ಸೇವೆಗಳಿಗಾಗಿ ಸರ್ಕಾರಗಳು ಹಲವಾರು ಸುವಿಧಾನಗಳನ್ನು ಪರಿಚಯಿಸುತ್ತವೆ. ಜನರು ಅಲೆಯುವ ಬದಲು ಕೂತಲ್ಲೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಕೇಂದ್ರ ಸರ್ಕಾರ 'ಉಮಂಗ್' ಎಂಬ ಮೊಬೈಲ್ ಆಪ್‌ ಪರಿಚಯಿಸಿದ್ದು, ಇದರ ಸಹಾಯದಿಂದ ಹಲವು ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ಸರಕಾರವೇ ಅಧಿಕೃತವಾಗಿ ಬಿಡುಗಡೆ ಮಾಡಿರುವ
  ಉಮಂಗ್ ಆಪ್‌ ಮೂಲಕ, ನಿಮ್ಮ ಪಿ.ಎಫ್ ಖಾತೆಗೆ ಆಧಾರ್ ಲಿಂಕ್ ಮಾಡಬಹುದು.

  ಇಪಿಎಫ್ಒ ಸಂಸ್ಥೆ ತನ್ನ ಇಪಿಎಫ್ ಚಂದಾದಾರರಿಗೆ ಅನುಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಿದೆ. ಉಮಂಗ್ ಆಪ್‌ ಮೂಲಕ ನಿಮ್ಮ ಪಿಎಫ್ ಖಾತೆಗೆ ಆಧಾರ್ ಜೋಡಣೆ ಹೇಗೆ ಮಾಡಬಹುದು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಈ ಕೆಳಗಿನ ಸುಲಭ ಐದು ಹಂತಗಳನ್ನು ಪಾಲಿಸಿ, ಸರಳವಾಗಿ ಆಧಾರ್ ಲಿಂಕ್ ಮಾಡಿಕೊಳ್ಳಿ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

  ಹಂತ 1

  ಉಮಂಗ್ ಆಪ್‌ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲೂ ಪ್ರಚಲಿತಗೊಂಡಿದೆ. ನಿಮ್ಮ ಫೋನಿನಲ್ಲಿ ಉಮಂಗ್ ಆಪ್‌ ಇಲ್ಲದಿದ್ದರೆ ಆಪ್ ಸ್ಟೋರ್ ಮೂಲಕ ಇನ್ಸ್ಟಾಲ್ ಮಾಡಿಕೊಳ್ಳಿ. ಮೊದಲು ಪರದೆಯ ಮೇಲೆ, ನಿಮ್ಮ ನೋಂದಣಿಯ ಮಾಹಿತಿಯನ್ನು ಸರಿಯಾಗಿ ತುಂಬಿ ಲಾಗಿನ್ ಮಾಡಿಕೊಳ್ಳಬೇಕು. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

  ಹಂತ 2

  ಲಾಗಿನ್ ಮಾಡಿಕೊಂಡ ನಂತರ ಉಮಂಗ್ ಆಪ್‌ ನೀಡುವ ಹಲವು ಆನ್ಲೈನ್ ಸೇವೆ ಮತ್ತು ಸೌಲಭ್ಯಗಳ ವಿವರಗಳು ನಿಮ್ಮ ಪರದೆಯಲ್ಲಿ ಬಂದಿರುತ್ತದೆ. ಅದರಲ್ಲಿ ಪಿಎಫ್ ಬಗೆಗಿನ ಮಾಹಿತಿ ಮತ್ತು ವಿವರಗಳಿಗಾಗಿ ಇಪಿಎಫ್ಒ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

  ಹಂತ 3

  ಇಪಿಎಫ್ಒ ನೀಡುವ ಹಲವು ಪ್ರಮುಖ ಸೇವೆಗಳು ಕಾಣಲು ಸಿಗುತ್ತವೆ. ಅವುಗಳಲ್ಲಿ ಉಪ ವಿಭಾಗಗಳಾದ 'ಸಾಮಾನ್ಯ ಸೇವೆಗಳು, ನೌಕರರ ಸೆಂಟ್ರಿಕ್ ಸೇವೆಗಳು ಮತ್ತು eKYC ಸೇವೆಗಳು ಎಂಬ ಆಯ್ಕೆಯನ್ನು ಗಮನಿಸಿ. ಅವುಗಳಲ್ಲಿ ನಿಮ್ಮ ಆಧಾರ್ ಲಿಂಕ್ ಮಾಡಲು eKYC ಸೇವೆಗಳು ಎಂಬ ಆಯ್ಕೆಯನ್ನು ಆರಿಸಿ. ಇದು ಆಧಾರ್ ಬಗೆಗಿನ ಮಾಹಿತಿಯನ್ನು ನಮೂದಿಸುವ ಪುಟಕ್ಕೆ ಕರೆದುಕೊಂಡು ಹೋಗುತ್ತದೆ.

  ಹಂತ 4

  ಪಿಎಫ್ ಖಾತೆದಾರು ಚಾಲ್ತಿಯಲ್ಲಿರುವ ನಿಮ್ಮ ಪಿಎಫ್ ಖಾತೆಯ ಯುಎಎನ್ ಸಂಖ್ಯೆಯನ್ನು ಸಿದ್ಧಪಡಿಸಿಕೊಂಡಿರಬೇಕು. ಪರದೆಯಲ್ಲಿ ಕಾಣುವ, ಆಧಾರ್ ಸೀಡಿಂಗ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ಯುಎಎನ್ ಸಂಖ್ಯೆಯನ್ನು ನಮೂದಿಸುವ ಪುಟವನ್ನು ತೆರೆಯುತ್ತದೆ.

  ಹಂತ 5

  ನಂತರದ ಕೆಲವು ಸೆಕೆಂಡುಗಳಲ್ಲಿ ಬರುವ ಪರದೆಯ ಮೇಲೆ, ನಿಮ್ಮ ಯುಎಎನ್ ನಂಬರನ್ನು ನಮೂದಿಸಿ. ಆಗ ನಿಮ್ಮ ಖಾತೆಗೆ ನೋಂದಣಿಯಾದ ಮೊಬೈಲ್ ಸಂಖ್ಯೆಗೆ OTP ಕಳಿಸಲಾಗುತ್ತದೆ. ಈ ಪರಿಶೀಲನೆ ಮುಗಿದ ನಂತರ, ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ನೀಡಬೇಕು.

  ಕೊನೆಮಾತು

  ಕೊನೆಯಲ್ಲಿ ಪುನಃ ಪರಿಶೀಲನೆಗಾಗಿ OTP ಕಳಿಸಲಾಗುತ್ತದೆ. ಇದಿಷ್ಟು ಯಶಸ್ವಿಯಾಗಿ ಮುಗಿದರೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಯುಎಎನ್ ಸಂಖ್ಯೆ ಲಿಂಕ್ ಆಗುತ್ತದೆ. ಈ ಐದು ಹಂತಗಳು ಉಮಂಗ್ ಆಪ್‌ ಮೂಲಕ ನಿಮ್ಮ ಪಿಎಫ್ ಖಾತೆಗೆ ಆಧಾರ್ ಜೋಡಣೆಯನ್ನು ಇನ್ನೂ ಸುಲಭಗೊಳಿಸುತ್ತದೆ.

  English summary

  How to link Aadhaar to your EPF account through UMANG Mobile App

  The Employees’ Provident Fund Organisation (EPFO) has now introduced UAN-Aadhaar linking facility for members through the UMANG Mobile App. Here are five simple steps to link your Aadhaar to EPF account through UMANG Mobile Ap.
  Story first published: Friday, March 9, 2018, 10:48 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more