ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

Written By: Siddu
Subscribe to GoodReturns Kannada

ಜಾತಿ, ಆದಾಯ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯುವುದೆಂದರೆ ಬೇಸರದ ಸಂಗತಿ. ಹತ್ತಾರು ಬಾರಿ ಅಲೆದರೂ ಪ್ರಮಾಣ ಪತ್ರಗಳು ಮಾತ್ರ ಸಿಗುವುದಿಲ್ಲ. ಕೆಲವೊಮ್ಮೆ ಅಧಿಕಾರಿಗಳ ಕಿರುಕುಳ, ದರ್ಪ, ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತು ಹೋಗುತ್ತದೆ. ಅಲ್ಲದೆ ಜಾತಿ, ಆದಾಯ ಪ್ರಮಾಣಪತ್ರಗಳನ್ನು ಪಡೆಯಬೇಕೆಂದರೆ ಲಂಚ ಕೊಡಬೇಕಾಗುತ್ತದೆ. ಹೆಸರಿಗೆ ಸಕಾಲ ಅಂತಾ ಇದ್ದರೂ ಅದು ಹೆಸರಿಗೆ ಮಾತ್ರ ಸೀಮಿತ. ಹೀಗಾಗಿ ಸಕಾಲಕ್ಕೆ ಯಾವುದು ಆಗುತ್ತಿಲ್ಲ!

ಆದರೆ ಇದೀಗ ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈಗಾಗಲೇ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ.
ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ನಾಡ ಕಚೇರಿ ವೆಬ್ಸೈಟ್

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಪ್ಷನ್ ಆಯ್ಕೆ ಮಾಡಿ. ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಪ್ರವೇಶಿಸಿ.
http://www.nadakacheri.karnataka.gov.in/ http://164.100.133.30/Online_service/loginpage.aspx

ಮೊದಲ ಹಂತ

ನಾಡ ಕಚೇರಿ ವೆಬ್ಸೈಟ್ ಗೆ ಪ್ರವೇಶಿಸುವ ಮೊದಲ ಹಂತದಲ್ಲಿ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಬೇಕು. ಅಂದರೆ Proceed ಮೇಲೆ ಕ್ಲಿಕ್ ಮಾಡಬೇಕು.

ಎರಡನೇ ಹಂತ

ಮುಂದಿನ ಹಂತದಲ್ಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕು.

ಮೂರನೇ ಹಂತ

ನ್ಯೂ ರಿಕ್ವೆಸ್ಟ್ (New Request) ಮೇಲೆ ಕ್ಲಿಕ್ ಮಾಡಿದ ನಂತರ ಹಲವಾರು ಸೇವೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಆದಾಯ ಪತ್ರ ಬೇಕಿದ್ದರೆ Income Certificate ಮೇಲೆ ಕ್ಲಿಕ್ ಮಾಡಿ.

ನಾಲ್ಕನೇ ಹಂತ

ಆದಾಯ ಪತ್ರಕ್ಕಾಗಿ ಆಪ್ಷನ್ ಆಯ್ಕೆ ಮಾಡಿದ ನಂತರ ಪ್ರಮಾಣಪತ್ರ ಬೇಕಿರುವುದು ಯಾವ ಭಾಷೆಯಲ್ಲಿ (certificate required) ಎಂಬ ಆಪ್ಷನ್ ತೆರೆದುಕೊಳ್ಳುತ್ತದೆ. ನಿಮಗೆ ಕನ್ನಡದಲ್ಲಿ ಬೇಕಿದ್ದರೆ Kannada ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ.

ಐದನೇ ಹಂತ

ಈ ಹಂತದಲ್ಲಿ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಪ್ರೋಸೀಡ್ ಕೊಡಬೇಕು.

ರೂ. 20 ಶುಲ್ಕ ಪಾವತಿಸಿ

ಕೊನೆಯಲ್ಲಿ ಆನ್ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು.

English summary

How to get Caste and Income certificates Online?

How to get Caste and Income certificates Online? here are the steps.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns