For Quick Alerts
ALLOW NOTIFICATIONS  
For Daily Alerts

ಮಿಸ್ಡ್ ಕಾಲ್, ಎಸ್ಎಂಎಸ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ದೇಶದ ಹೆಚ್ಚಿನ ಬ್ಯಾಂಕ್ ಗಳು ಮುಂದಾಗಿವೆ.

By Siddu
|

ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ದೇಶದ ಹೆಚ್ಚಿನ ಬ್ಯಾಂಕ್ ಗಳು ಮುಂದಾಗಿವೆ. ಬ್ಯಾಂಕ್ ಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು ಹಲವು ಮಾರ್ಗಗಳಿವೆ. ನಿಮ್ಮ ಮೊಬೈಲ್ ಮೂಲಕ ಒಂದು ಮಿಸ್ಡ್ ಕಾಲ್ ಅಥವಾ ಎಸ್ಎಂಎಸ್ ಮಾಡಿದರೆ ಸಾಕು ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗುತ್ತದೆ.

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಲ್ಲಿ ನೀವು ಖಾತೆ ಹೊಂದಿದ್ದರೆ ನಿವು ಕೂಡ ಇದರ ಪ್ರಯೋಜನ ಪಡೆಯಬಹುದು.

ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್

ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್

ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್? ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ! ಯಾವ ಬ್ಯಾಂಕ್ ಗೆ ಯಾವ ನಂಬರ್?

ನೋಂದಣಿ ಮಾಡಿಕೊಳ್ಳಿ

ನೋಂದಣಿ ಮಾಡಿಕೊಳ್ಳಿ

ಎಸ್ಬಿಐ ಗ್ರಾಹಕರು ಯಾವುದೇ ಶಾಖೆಗೆ ಹೋಗಿ ಮೊಬೈಲ್ ನಂಬರ್ ನೋಂದಣಿ ಮಾಡಬಹುದಾಗಿದೆ. ನೋಂದಾಯಿತ ಗ್ರಾಹಕರಿಗೆ ಎಸ್ಎಂಎಸ್ ಸೌಲಭ್ಯ ಲಭ್ಯವಾಗಲಿದೆ. ನೋಂದಣಿಗೆ ಬ್ಯಾಂಕ್ ಖಾತೆ ಜೊತೆ ನಿಮ್ಮ ಮೊಬೈಲ್ ನಂಬರ್ ನೀಡಬೇಕಾಗುತ್ತದೆ.

ಮಿಸ್ಡ್ ಕಾಲ್ ಸೇವೆ

ಮಿಸ್ಡ್ ಕಾಲ್ ಸೇವೆ

ನಿಮ್ಮ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು 09223766666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ. ಇಲ್ಲವೆ BAL ಎಂದು ಟೈಪ್ ಮಾಡಿ 09223766666 ನಂಬರ್ ಗೆ ಎಸ್ಎಂಎಸ್ ಮಾಡಬಹುದಾಗಿದೆ. ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗಲಿದೆ. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

5 ವಹಿವಾಟುಗಳ ವಿವರ

5 ವಹಿವಾಟುಗಳ ವಿವರ

09223866666 ನಂಬರ್ ಗೆ ಮಿಸ್ಡ್ ಕಾಲ್ ನೀಡಿದರೆ ಅಥವಾ MSTMT ಎಂದು ಟೈಪ್ ಮಾಡಿ 09223866666 ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ಎಟಿಎಂನಲ್ಲಿ ನೀವು ಮಾಡಿರುವ ಐದು ವಹಿವಾಟುಗಳ ವಿವರ ಸಿಗಲಿದೆ.
ಎಟಿಎಂ ಕಾರ್ಡ್ ಲಾಕ್ ಮಾಡಲು BLOCKXXXX' to 567676 ಗೆ ಸಂದೇಶ ಕಳುಹಿಸಬೇಕು. ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?

Read more about: banking money sbi finance news
English summary

How To Check SBI Bank Balance Through Missed Call and SMS?

How To Check Bank Balance Through Missed Call and SMS? Here are the complete details given..
Story first published: Friday, July 27, 2018, 14:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X