For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸ್ಯಾಲರಿ ಸ್ಲಿಪ್ ಅನ್ನು ತಿಳಿದುಕೊಳ್ಳುವುದು ಹೇಗೆ?

ಸಂಬಳ ಬರುವ ದಿನ ಎಲ್ಲರಿಗೂ ಬಹುನಿರೀಕ್ಷಿತ ಹಾಗು ಸಂತಸದ ದಿನವಾಗಿರುತ್ತದೆ! ಸಂಬಳ ಪಾವತಿಯ ವಿವರಗಳನ್ನು ಒಳಗೊಂಡಿರುವ ಸ್ಯಾಲರಿ ಸ್ಲಿಪ್ ಅನ್ನು ಎಚ್ಆರ್ ಡಿಪಾರ್ಟ್ಮೆಂಟ್ ನವರು ನಿಮಗೆ ಕಳುಹಿಸುತ್ತಾರೆ.

|

ಸಂಬಳ ಬರುವ ದಿನ ಎಲ್ಲರಿಗೂ ಬಹುನಿರೀಕ್ಷಿತ ಹಾಗು ಸಂತಸದ ದಿನವಾಗಿರುತ್ತದೆ! ಸಂಬಳ ಪಾವತಿಯ ವಿವರಗಳನ್ನು ಒಳಗೊಂಡಿರುವ ಸ್ಯಾಲರಿ ಸ್ಲಿಪ್ ಅನ್ನು ಎಚ್ಆರ್ ಡಿಪಾರ್ಟ್ಮೆಂಟ್ ನವರು ನಿಮಗೆ ಕಳುಹಿಸುತ್ತಾರೆ. ಸ್ಯಾಲರಿ ಸ್ಲಿಪ್ ನಲ್ಲಿನ ಕೆಲ ಸಂಗತಿಗಳು ಹಲವರಲ್ಲಿ ಗೊಂದಲವನ್ನುಂಟು ಮಾಡಿದರೆ ಆಶ್ಚರ್ಯಪಡಬೇಕಿಲ್ಲ. ಸ್ಯಾಲರಿ ಸ್ಲಿಪ್ ನಲ್ಲಿ (ಸಂಬಳ ಪಾವತಿ) ಇರುವ ಮೂಲ ವೇತನ, ಪ್ರಯೋಜನ, ಭತ್ಯೆ, ತೆರಿಗೆ ಕಡಿತ, ಪಿಎಫ್ ಹೀಗೆ ಎಲ್ಲಾ ವಿವರಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಿಟಿಸಿ ಮತ್ತು ಟೇಕ್ ಹೋಮ್ ಸ್ಯಾಲರಿ ನಡುವಿನ ವ್ಯತ್ಯಾಸವೇನು?

ಸ್ಯಾಲರಿ ಸ್ಲಿಪ್ ಮಾದರಿ ಮುಖ್ಯವಾಗಿ ಗಳಿಕೆ ಮತ್ತು ಕಡಿತ ವಿಭಾಗಗಳನ್ನು ಒಳಗೊಂಡಿರುತ್ತದೆ.

ಮೂಲ ವೇತನ

ಮೂಲ ವೇತನ

ಸಂಬಳ ಪಾವತಿಯಲ್ಲಿನ ಎಲ್ಲಾ ಇತರ ವಿವರಗಳಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ನಿಮ್ಮ ನಿವೃತ್ತಿ ನಿಧಿಗಾಗಿ ಮಾಡಲಾದ ಇಪಿಎಫ್ (ಎಂಪ್ಲಾಯೀ ಪ್ರಾವಿಡೆಂಟ್ ಫಂಡ್) ನಿಮ್ಮ ಹೆಚ್ಚಿನ ವೇತನದ ಇತರ ವಿಷಯಗಳನ್ನು ಇದು ನಿರ್ಧರಿಸುತ್ತದೆ. ಮೂಲ ವೇತನದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳು ಗಮನಿಸಬೇಕಾಗುತ್ತದೆ.

ಡಿಎ

ಡಿಎ

ಹೆಚ್ಚಾಗಿ ಸರ್ಕಾರಿ ಉದ್ಯೋಗಿಗಳಿಂದ ಪಡೆಯಲಾಗುತ್ತದೆ. ನೀವು ಡಿಎ ಸ್ವೀಕರಿಸಿದರೆ, ಮೂಲ ವೇತನ ಮತ್ತು ಡಿಎ ಒಳಗೊಂಡಂತೆ ನಿಮ್ಮ ಪಿಎಫ್ ಅನ್ನು ಶೇಕಡಾವಾರು (ಅಂದರೆ 12 ಪ್ರತಿಶತ) ಎಂದು ಲೆಕ್ಕಹಾಕಲಾಗುತ್ತದೆ.

ಗೃಹ ಬಾಡಿಗೆ ಭತ್ಯೆ (HRA)

ಗೃಹ ಬಾಡಿಗೆ ಭತ್ಯೆ (HRA)

ಗೃಹ ಬಾಡಿಗೆ ಭತ್ಯೆ ಎನ್ನುವುದು ಮನೆ ಬಾಡಿಗೆಯನ್ನು ಕಟ್ಟಲು ನೀಡಿದ ಪ್ರಯೋಜನವಾಗಿದೆ. ನಗರಗಳಿಗೆ ಅನುಗುಣವಾಗಿ ಶೇಕಡಾವಾರು ಗೃಹ ಬಾಡಿಗೆ ಭತ್ಯೆ(HRA) ಅವಲಂಬಿತವಾಗಿರುತ್ತದೆ. ಮೇಟ್ರೋ ನಲ್ಲಿ ವಾಸಿಸುವವರಾದರೆ ವೇತನದಲ್ಲಿ ಶೇ. 50ರಷ್ಟು ಅಥವಾ ಶೇ. 40ರಷ್ಟು ಸಂಬಳ ಅರ್ಹವಾಗಿರುತ್ತದೆ. ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ಇವು ಮೇಟ್ರೋ ನಗರಗಳಾಗಿವೆ. ಸಂಬಳದ ಭಾಗವಾಗಿ HRA ಭತ್ಯೆ ಪಡೆಯುವ ವ್ಯಕ್ತಿಗಳು ತೆರಿಗೆ ವಿನಾಯಿತಿ ಪಡೆಯುತ್ತಾರೆ.

ರಜೆ ಪ್ರಯಾಣ ಭತ್ಯೆ

ರಜೆ ಪ್ರಯಾಣ ಭತ್ಯೆ

ರಜೆ ಪ್ರಯಾಣ ಭತ್ಯೆ ಎನ್ನುವುದು ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ಒಂದು ವಿಧದ ಸಂಭಾವನೆಯಾಗಿದೆ. ತೆರಿಗೆ ಇಲಾಖೆಯ ಸೆಕ್ಷನ್ 10 (5)ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ. ಇದು ರಜೆಯ ಸಮಯದಲ್ಲಿ ಉದ್ಯೋಗಿ ಮತ್ತು ಅವರ ಕುಟುಂಬದ ಪ್ರಯಾಣದ ವೆಚ್ಚಗಳನ್ನು ಒಳಗೊಳ್ಳುತ್ತದೆ. (leave from work). ಇದು ಭಾರತದೊಳಗಿನ ವಿಮಾನ ಮತ್ತು ರೈಲು ಪ್ರಯಾಣಗಳನ್ನು ಒಳಗೊಂಡಿರುತ್ತದೆ.

ವೈದ್ಯಕೀಯ ಭತ್ಯೆ

ವೈದ್ಯಕೀಯ ಭತ್ಯೆ

ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ನೀಡುವ ನಿರ್ಧಿಷ್ಟ ಪ್ರಮಾಣದ ಮೊತ್ತವೇ ವೈದ್ಯಕೀಯ ಭತ್ಯೆ ಆಗಿದೆ. ವೈದ್ಯಕೀಯ ಭತ್ಯೆ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾಲ ಕಾಲಕ್ಕೆ ವೈದ್ಯಕೀಯ ಬಿಲ್ ಗಳನ್ನು ಸಂಸ್ಥೆಗೆ ಸಲ್ಲಿಸಿದರೆ ರೂ. 15,000 ವರೆಗಿನ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ.

ವಾಹನ ಭತ್ಯೆ

ವಾಹನ ಭತ್ಯೆ

ಭತ್ಯೆಗಳು ನಿಶ್ಚಿತ ಅವಧಿಯ ಮೊತ್ತವಾಗಿದ್ದು, ಸಂಸ್ಥೆಗೆ ಸಂಬಂಧಿಸಿದ ಕೆಲ ಸಭೆ, ವಿಚಾರ ಸಂಕಿರಣಗಳಿಗಾಗಿ ಉದ್ಯೋಗಿ ಹೋದಾಗ ಅವರಿಗೆ ವಾಹನ ಭತ್ಯೆ, ಉಪಾಹಾರ ಭತ್ಯೆ, ಸಮವಸ್ತ್ರ ಭತ್ಯೆ ರೂಪದಲ್ಲಿ ನೀಡಲಾಗುತ್ತದೆ. ಇದು ಸಂಬಳವನ್ನು ಹೊರತುಪಡಿಸಿದ ಮೊತ್ತವಾಗಿರುತ್ತದೆ. ತಿಂಗಳಿಗೆ ರೂ. 1,600 ಹಾಗೂ ವಾರ್ಷಿಕವಾಗಿ 19,200 ಸಾರಿಗೆ ಭತ್ಯೆ ಆದಾಯ ತೆರಿಗೆ ಅಡಿಯಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ಪಿಎಫ್

ಪಿಎಫ್

ಸಂಬಳದ ಕಡಿತಗಳಲ್ಲಿ ಪಿಎಫ್ ಮುಖ್ಯವಾಗಿದ್ದು, ಮಾಸಿಕ ಆಧಾರದಲ್ಲಿ ನಿಮ್ಮ ಮೂಲ ವೇತನದಿಂದ ಶೇ. 12ರಷ್ಟು ಪ್ರಾವಿಡೆಂಟ್ ಫಂಡ್ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇದೇ ಪ್ರಮಾಣದ ಮೊತ್ತ ನಿಮ್ಮ ಉದ್ಯೋಗದಾತರಿಂದ ನಿಮ್ಮ ಖಾತೆಗೆ ಬರುತ್ತದೆ. ಇದು ಸಿಟಿಸಿ ಭಾಗವಾಗಿರುತ್ತದೆ.

ವೃತ್ತಿಪರ ತೆರಿಗೆ

ವೃತ್ತಿಪರ ತೆರಿಗೆ

ವೃತ್ತಿಪರ ತೆರಿಗೆ ಎನ್ನುವುದು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಒಂದು ವಿಧದ ತೆರಿಗೆ. ರಾಜ್ಯದ ಉದ್ಯೋಗದಾತ ಸಂಸ್ಥೆ ಸಂಬಳದಿಂದ ವೃತ್ತಿಪರ ತೆರಿಗೆ ಕಡಿತಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ವೃತ್ತಿಪರ ತೆರಿಗೆ ವ್ಯಕ್ತಿಗಳ ಆದಾಯ ಅವಲಂಬಿಸಿ ಬದಲಾಗುತ್ತದೆ.
ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರಾ ಅಥವಾ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನೀವು ಕೆಲಸ ಮಾಡುತ್ತಿದ್ದರೆ, ನಿಮ್ಮ ಸಂಬಳದ ಒಂದು ಭಾಗ ವೃತ್ತಿಪರ ತೆರಿಗೆಯಾಗಿ ಪಾವತಿಸಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ವೃತ್ತಿಪರ ತೆರಿಗೆ ಬದಲಾಗುತ್ತದೆ. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಟಿಡಿಎಸ್

ಟಿಡಿಎಸ್

ನಿಮ್ಮ ಆದಾಯಕ್ಕೆ ಅನುಗುಣವಾಗಿ ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ನಿರ್ಧಿಷ್ಟ ಮೊತ್ತವನ್ನು ಸಂಸ್ಥೆ ಕಡಿತಗೊಳಿಸುತ್ತದೆ. ಕಡಿತಗೊಳಿಸಿದ ಈ ಮೊತ್ತವನ್ನು ತೆರಿಗೆ ಇಲಾಖೆಗೆ ಪಾವತಿಸಲಾಗುತ್ತದೆ.

English summary

How to Understand Salary Slip Format in India?

The main components of a salary slip include earnings and a deductions section.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X