ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಕ್ಷಣದಲ್ಲಿ ಪರಿಶೀಲಿಸಲು ಅನೇಕ ಉಪಕ್ರಮಗಳನ್ನು ಪರಿಚಯಿಸಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಕ್ಷಣದಲ್ಲಿ ಪರಿಶೀಲಿಸಲು ಅನೇಕ ಉಪಕ್ರಮಗಳನ್ನು ಪರಿಚಯಿಸಿದೆ. ಮೊಬೈಲ್ ಎಸ್ಎಂಎಸ್, ಮಿಸ್ಡ್ ಕಾಲ್, ಆನ್ಲೈನ್ ಮೂಲಕ, ಇಪಿಎಫ್ಒ ಇ-ಸೇವಾ ಆಪ್ ಮೂಲಕ ಚೆಕ್ ಮಾಡಬಹುದು.
ಪಿಎಫ್ ಖಾತೆಯ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್) ನಿಮ್ಮ ಬಳಿಯಿದ್ದರೆ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಹಣವನ್ನು ಪರಿಶೀಲಿಸಬಹುದು. ಇದಕ್ಕೆ ನಿಮ್ಮ ಯುಎನ್ಎ ಕ್ರಿಯಾಶೀಲವಾಗಿರಬೇಕಾದದ್ದು ಬಹಳ ಮುಖ್ಯ.
ಮಿಸ್ಡ್ ಕಾಲ್ ಮೂಲಕ
ನೀವು ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಕ್ಕೆ ಮಿಸ್ಡ್ ಕಾಲ್ ಮಾಡಬೇಕು.
ಮಿಸ್ಡ್ ಕಾಲ್ ನೀಡಿದ ಕೆಲವೇ ನಿಮಿಷದಲ್ಲಿ ಒಂದು ಎಸ್ಎಂಎಸ್ ನಿಮಗೆ ಬರಲಿದೆ. ಅದರಲ್ಲಿ ಪಿಎಫ್ ಖಾತೆಯ ಎಲ್ಲ ಮಾಹಿತಿ ಸಿಗಲಿದೆ. ಇಪಿಎಫ್ಒ ಸದಸ್ಯರಿಗೆ ಈ ಸೇವೆ ಉಚಿತವಾಗಿ ಸಿಗಲಿದೆ.
ಯುಎಎನ್ ಲಿಂಕ್
ಇಪಿಎಫ್ಒ ಚಂದಾದಾರರ ಯುಎಎನ್ ನಂಬರ್, ಆಧಾರ್ ಬ್ಯಾಂಕ್ ಖಾತೆ ಲಿಂಕ್ ಆಗಿರಬೆಕು. ಇಪಿಎಫ್ ಖಾತೆಗೆ ಕೊನೆಯದಾಗಿ ಬಂದ ಹಣ ಹಾಗೂ ಬ್ಯಾಲೆನ್ಸ್ ನ ಸಂಪೂರ್ಣ ಮಾಹಿತಿ ಸಿಗಲಿದೆ. ಈ ಸೌಲಭ್ಯಕ್ಕಾಗಿ ನೋಂದಾಯಿತ ಮೊಬೈಲ್ ನಂಬರ್ ನಿಂದ 7738299899 ನಂಬರ್ ಗೆ ಎಸ್ಎಂಎಸ್ ಮಾಡಬೇಕು.
ಮೊದಲು EPFOHO ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಯುಎಎನ್ ನಂಬರ್ ಹಾಕಿ 7738299899 ಸಂಖ್ಯೆಗೆ ಕಳುಹಿಸಬೇಕು.
10 ಭಾಷೆಗಳು
ಪಿಎಫ್ ಬ್ಯಾಲೆನ್ಸ್ ವಿವರವನ್ನು ಅನೇಕ ಭಾಷೆಗಳಲ್ಲಿ ಪಡೆಯಬಹುದಾಗಿದೆ. ಪ್ರಸ್ತುತ ಎಸ್ಎಂಎಸ್ ಮೂಲಕ ಹತ್ತು ಭಾಷೆಗಳಲ್ಲಿ ಪಿಎಫ್ ಬ್ಯಾಲೆನ್ಸ್ ಸೌಲಭ್ಯ ಕಲ್ಪಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ. English: ENG
Hindi: HIN
Malayalam: MAL
Telugu: TEL
Panjabi: PUN
Gujarati: GUJ
Marathi: MAR
Kannada: KAN
Tamil: TAM
Bengali: BEN
ಹೆಚ್ಚಿನ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.


Click it and Unblock the Notifications