For Quick Alerts
ALLOW NOTIFICATIONS  
For Daily Alerts

ಐಆರ್‌ಸಿಟಿಸಿ ಇ-ವ್ಯಾಲೆಟ್ ಸೇವೆ ಪಡೆಯುವುದು ಹೇಗೆ?

|

ಇಂದಿನ ಡಿಜಿಟಲ್ ಜಮಾನಾದಲ್ಲಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ವಸ್ತುಗಳ ಖರೀದಿವರೆಗೆ ಎಲ್ಲವೂ ಆನ್ಲೈನ್ ಆಗಿದೆ. ಇದಕ್ಕೆ ಭಾರತೀಯ ರೈಲ್ವೆಯೂ ಹೊರತಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ಭಾರತೀಯ ರೈಲ್ವೆ ತನ್ನ ಟಿಕೆಟ್ ಬುಕಿಂಗ್ ಪೋರ್ಟಲ್ 'ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ' (ಐಆರ್‌ಸಿಟಿಸಿ - IRCTC) ಮುಖಾಂತರ ಟಿಕೆಟ್ ಬುಕಿಂಗ್ ಹಾಗೂ ಇನ್ನಿತರ ಸೇವೆಗಳನ್ನು ನೀಡುತ್ತಿದೆ. ತನ್ನ ಇ-ವ್ಯಾಲೆಟ್ ಮೂಲಕ ಐಆರ್‌ಸಿಟಿಸಿ ಸುರಕ್ಷಿತ ಪೇಮೆಂಟ್ ಗೇಟವೇಯನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಇ-ವ್ಯಾಲೆಟ್‌ಗೆ ರಜಿಸ್ಟರ್ ಮಾಡಿಕೊಳ್ಳುವುದು, ಶುಲ್ಕ, ವೈಶಿಷ್ಟ್ಯಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡಲಾಗಿದ್ದು ನೀವೂ ತಿಳಿದುಕೊಳ್ಳಿ.

ಐಆರ್‌ಸಿಟಿ ಸುರಕ್ಷಿತ ಸೇವೆ
 

ಐಆರ್‌ಸಿಟಿ ಸುರಕ್ಷಿತ ಸೇವೆ

ಸುರಕ್ಷಿತ ಇ-ವ್ಯಾಲೆಟ್ ಪೇಮೆಂಟ್ ವ್ಯವಸ್ಥೆ

ಭಾರತೀಯ ರೈಲ್ವೆಯ ಪ್ರಕಟಣೆಯ ಪ್ರಕಾರ ಯಾವುದೇ ವ್ಯಕ್ತಿ ತನ್ನ ಐಆರ್‌ಸಿಟಿಸಿ ಇ-ವ್ಯಾಲೆಟ್‌ಗೆ ಹಣ ಜಮೆ ಮಾಡಬಹುದು ಹಾಗೂ ನಂತರ ಟಿಕೆಟ್ ಬುಕ್ ಮಾಡಲು ಇದೇ ಮೊತ್ತವನ್ನು ಬಳಸಿ ಪೇಮೆಂಟ್ ಮಾಡಬಹುದು. ಇದು ಅತ್ಯಂತ ಸರಳ ಆನ್ಲೈನ್ ಪೇಮೆಂಟ್ ವ್ಯವಸ್ಥೆಯಾಗಿದ್ದು ವಿಶೇಷವಾಗಿದೆ.

ಐಆರ್‌ಸಿಟಿಯ ಇ-ವ್ಯಾಲೆಟ್ ಮೂಲಕ ಸುರಕ್ಷಿತವಾಗಿ ಬುಕಿಂಗ್ ನಿರ್ವಹಿಸಿ. ಶೀಘ್ರ ರಿಫಂಡ್ ಪಡೆಯಲು ಸುಲಭವಾದ, ಪಾರದರ್ಶಕ ವ್ಯವಸ್ಥೆಯ, ಪೇಮೆಂಟ್ ಹಿಸ್ಟರಿಯನ್ನು ಸುಲಭವಾಗಿ ಚೆಕ್ ಮಾಡಬಹುದಾದ ಹಾಗೂ ಬುಕಿಂಗ್ ಮೇಲೆ ಹಲವಾರು ಆಫರ್‌ಗಳನ್ನು ನೀಡುವ ವ್ಯವಸ್ಥೆ ಇದಾಗಿದೆ ಎಂದು ಐಆರ್‌ಸಿಟಿಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ @IRCTC official ಮೂಲಕ ಟ್ವೀಟ್ ಮಾಡಿದೆ.

ಐಆರ್‌ಸಿಟಿಸಿ ಇ-ವ್ಯಾಲೆಟ್ ವೈಶಿಷ್ಟ್ಯತೆಗಳು

ಐಆರ್‌ಸಿಟಿಸಿ ಇ-ವ್ಯಾಲೆಟ್ ವೈಶಿಷ್ಟ್ಯತೆಗಳು

1. ಪ್ರತಿ ಬಾರಿಯೂ ಟಿಕೆಟ್ ಬುಕ್ ಮಾಡುವಾಗ ಟ್ರಾನ್ಸಾಕ್ಷನ್ ಪಾಸವರ್ಡ್/ಪಿನ್ ಬಳಸುವ ವ್ಯವಸ್ಥೆಯ ಮೂಲಕ ಇ-ವ್ಯಾಲೆಟ್ ವ್ಯವಹಾರವನ್ನು ಸುರಕ್ಷಿತಗೊಳಿಸಲಾಗಿದೆ.

2. ಭಾರತೀಯ ನಾಗರಿಕರು ಮತ್ತು ಭಾರತದ ಮೊಬೈಲ್ ಸಂಖ್ಯೆ ಹೊಂದಿರುವವರು ಮಾತ್ರ ಐಆರ್‌ಸಿಟಿಯ ಇ-ವ್ಯಾಲೆಟ್ ಸರ್ವಿಸ್ ಬಳಸಲು ಅವಕಾಶವಿದೆ.

3. ಪ್ಯಾನ್ ಕಾರ್ಡ್ ಸಂಖ್ಯೆ ಅಥವಾ ಆಧಾರ ಸಂಖ್ಯೆಯನ್ನು ಆಧರಿಸಿ ಇ-ವ್ಯಾಲೆಟ್ ಬಳಕೆದಾರರ ಗುರುತನ್ನು ಖಾತರಿಪಡಿಸಿ ಅವರು ನೋಂದಣಿಯನ್ನು ಅಧಿಕೃತಗೊಳಿಸಲಾಗುತ್ತದೆ.

4. ಒಂದು ಬಾರಿ ಇ-ವ್ಯಾಲೆಟ್ ಖಾತೆಯಲ್ಲಿ ಗರಿಷ್ಠ 10 ಸಾವಿರ ರೂ. ಹಣ ಜಮೆ ಮಾಡಬಹುದು.

5. ಇ-ವ್ಯಾಲೆಟ್ ಸರ್ವಿಸ್‌ಗೆ ರಜಿಸ್ಟರ್ ಮಾಡಿಕೊಳ್ಳಲು ಗ್ರಾಹಕರು 50 ರೂ. (ಹಾಗೂ ಅನ್ವಯಿಸುವ ಸೇವಾ ತೆರಿಗೆ) ಶುಲ್ಕ ಪಾವತಿಸಬೇಕು. ಪ್ರತಿ ಬಾರಿ ಇ-ವ್ಯಾಲೆಟ್ ಮೂಲಕ ವ್ಯವಹಾರ ನಡೆಸಿದಾಗ 10 ರೂ. (ಹಾಗೂ ಸೇವಾ ತೆರಿಗೆ) ಶುಲ್ಕ ವಿಧಿಸಲಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

6. ಟಿಕೆಟ್ ರದ್ದುಗೊಳಿಸಿದ ಸಂದರ್ಭದಲ್ಲಿ ಅದರ ಮರುದಿನವೆ ಇ-ವ್ಯಾಲೆಟ್‌ಗೆ ಮೊತ್ತವನ್ನು ಮರುಪಾವತಿಸಲಾಗುತ್ತದೆ.

7. ಐಆರ್‌ಸಿಟಿಯ ಇ-ವ್ಯಾಲೆಟ್ ಲಿಂಕ್ ಮೂಲಕ ಬಳಕೆದಾರರು ತಮ್ಮ ಹಿಂದಿನ ವ್ಯವಹಾರದ ಹಿಸ್ಟರಿ, ಪೇಮೆಂಟ್ ಹಿಸ್ಟರಿ ನೋಡಬಹುದು ಹಾಗೂ ಅವಶ್ಯಕವಿದ್ದಲ್ಲಿ ಟ್ರಾನ್ಸಾಕ್ಷನ್ ಪಾಸವರ್ಡ್ ಬದಲಾಯಿಸಬಹುದು.

8. ಐಆರ್‌ಸಿಟಿಸಿ ಇ-ವ್ಯಾಲೆಟ್ ಹಣ ಪಾವತಿ ಪ್ರಕ್ರಿಯೆಯಲ್ಲಿನ ವಿಳಂಬವನ್ನು ನಿವಾರಿಸಿ ಬುಕಿಂಗ್ ಅನ್ನು ಶೀಘ್ರಗೊಳಿಸುತ್ತದೆ.

9. ಟಿಕೆಟ್ ಬುಕ್ ಮಾಡಲು ನಿರ್ದಿಷ್ಟ ಬ್ಯಾಂಕ್ ಪೋರ್ಟಲ್ ಮೇಲೆ ಅವಲಂಬಿತರಾಗುವುದು ಇನ್ನು ಅವಶ್ಯಕವಿಲ್ಲ. ಒಂದೊಮ್ಮೆ ಬ್ಯಾಂಕ್ ಪೋರ್ಟಲ್ ಕೆಲಸ ಮಾಡದಿದ್ದರೂ ಇ-ವ್ಯಾಲೆಟ್ ಬ್ಯಾಲೆನ್ಸ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು.

10. ಪ್ರತಿ ಟಿಕೆಟ್‌ಗೆ ವಿಧಿಸಲಾಗುತ್ತಿದ್ದ ಪೇಮೆಂಟ್ ಗೇಟವೇ ಶುಲ್ಕವನ್ನು ಸಹ ಉಳಿತಾಯ ಮಾಡಲಾಗುತ್ತಿದೆ ಎಂದು ಐಆರ್‌ಸಿಟಿಸಿ ಹೇಳಿಕೊಂಡಿದೆ.

ಐಆರ್‌ಸಿಟಿಸಿ ಇ-ವ್ಯಾಲೆಟ್‌ಗೆ ನೋಂದಣಿ ಹೇಗೆ?
 

ಐಆರ್‌ಸಿಟಿಸಿ ಇ-ವ್ಯಾಲೆಟ್‌ಗೆ ನೋಂದಣಿ ಹೇಗೆ?

1. ಚಾಲ್ತಿಯಲ್ಲಿರುವ ನಿಮ್ಮ ಐಆರ್‌ಸಿಟಿಸಿ ಯೂಸರ್ ಐಡಿ ಮತ್ತು ಪಾಸವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಿ.

2. 'ಪ್ಲ್ಯಾನ್ ಮೈ ಟ್ರಾವೆಲ್' ಪೇಜ್‌ನಲ್ಲಿರುವ ಐಆರ್‌ಸಿಟಿಸಿ ಇ-ವ್ಯಾಲೆಟ್ ಸೆಕ್ಷನ್‌ನಲ್ಲಿನ 'ಐಆರ್‌ಸಿಟಿಸಿ ಇ-ವ್ಯಾಲೆಟ್ ರಜಿಸ್ಟ್ರೇಶನ್' ಲಿಂಕ್ ಕ್ಲಿಕ್ ಮಾಡಿ.

3. ಪ್ಯಾನ್ ಅಥವಾ ಆಧಾರ ದಾಖಲೆಯ ಮಾಹಿತಿಗಳನ್ನು ತುಂಬಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿ.

4. ಯಾವುದಾದರೂ ಪೇಮೆಂಟ್ ವ್ಯವಸ್ಥೆಯ ಮೂಲಕ ಒಂದು ಬಾರಿಯ 50 ರೂ. (ಸೇವಾ ತೆರಿಗೆ ಹೊರತುಪಡಿಸಿ) ನೋಂದಣಿ ಶುಲ್ಕ ಪಾವತಿಸಿ. ಸದಸ್ಯತಾ ಶುಲ್ಕ ಹಾಗೂ ಹಣ ಹಿಂಪಡೆಯುವಿಕೆಯು ಐಆರ್‌ಸಿಟಿಯ ಬದಲಾಗಬಹುದಾದ ನಿಯಮಗಳನ್ನು ಆಧರಿಸಿರುತ್ತದೆ.

5. ನಂತರ ಕನಿಷ್ಠ 100 ರೂ. ಮೊತ್ತವನ್ನು ಇ-ವ್ಯಾಲೆಟ್‌ಗೆ ಆರಂಭಿಕ ಡೆಪಾಸಿಟ್ ಮಾಡಬಹುದು ಹಾಗೂ ತದನಂತರ ಅವಶ್ಯಕವಿರುವಷ್ಟು ಮೊತ್ತವನ್ನು ಸೇರಿಸಬಹುದು.

IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?

Read more about: irctc money online
English summary

IRCTC E-Wallet Service: How To Register, Features, Other Details

Indian Railway Catering and Tourism (IRCTC), the e-ticketing arm of Indian Railways, offers secure online payment via it's e-wallet service.
Story first published: Tuesday, November 27, 2018, 10:48 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more