For Quick Alerts
ALLOW NOTIFICATIONS  
For Daily Alerts

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿದರೆ ಸಿಗುವ ಪ್ರಯೋಜನಗಳೇನು ಗೊತ್ತೆ?

ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೂಡ ನಮ್ಮಲ್ಲಿ ಹೆಚ್ಚಿನ ಜನ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲ.

|
ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿದರೆ ಸಿಗುವ ಪ್ರಯೋಜನಗಳು

ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೂಡ ನಮ್ಮಲ್ಲಿ ಹೆಚ್ಚಿನ ಜನ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲ.
ಆದರೆ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಿದರೆ ಆಗುವ ಪ್ರಯೋಜನೆಗಳೇನು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆದಾಯ ತೆರಿಗೆ ಪಾವತಿಸಲು ಆಧಾರ್ ಕಾರ್ಡ್ ಬೇಕು.

 

ಆಧಾರ್ ಪ್ರಯೋಜನ
- ಕಾರ್ಮಿಕರ ಭವಿಷ್ಯ ನಿಧಿ ಮೂಲಕ ಪಿಂಚಣಿ ಹಣ ಪಡೆಯಲು ಆಧಾರ್ ಅವಶ್ಯಕ.
- ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಅಗತ್ಯ.
- ಪಾಸ್ಪೋರ್ಟ್ ಗೆ ಕೂಡ ಆಧಾರ್ ಕಾರ್ಡ್ ಅಗತ್ಯ.
- ಅಲ್ಲದೇ ಕೆಲವೊಂದು ಅರ್ಜಿ ಸಲ್ಲಿಸಲು ಕೂಡ ಆಧಾರ್ ಬಳಸಬಹುದು.

 

ಪ್ಯಾನ್ ಕಾರ್ಡ್
ಇನ್ನು ಪ್ಯಾನ್ ಕಾರ್ಡ್ ಅನೇಕ ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ನೀವು ಬ್ಯಾಂಕ್ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಇದ್ದರೆ ಒಳ್ಳೆಯದು.
- ರೂ. 5 ಲಕ್ಷಕ್ಕಿಂತ ಅಧಿಕ ಮೌಲ್ಯದ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ, ವಾಹನಗಳ ಮಾರಾಟ ಅಥವಾ ಖರೀದಿ ಸೇರಿದಂತೆ ಹಲವು ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ ಬೇಕಾಗುತ್ತದೆ.
- ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದರಿಂದ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದುವುದನ್ನು ತಡೆಯಬಹುದು.
- ತೆರಿಗೆ ವಂಚಕರನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆಗೆ ಪ್ಯಾನ್ ಕಾರ್ಡ್ ಸಹಾಯಕ. ಆದಾಯ ತೆರಿಗೆ ಪಾವತಿ ವಿಧಾನವನ್ನು ಇದು ಸರಳಗೊಳಿಸುತ್ತದೆ.
- ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಮೂಲಕ ನಿಮ್ಮ ಪಾನ್ ಕಾರ್ಡ್ ರದ್ದಾಗದಂತೆ ತಡೆಯಬಹುದು.
- ನೀವು ಪಾವತಿಸಿರುವ ತೆರಿಗೆಯ ಸಂಪೂರ್ಣ ವಿವರಗಳು ಸುಲಭವಾಗಿ ಲಭ್ಯವಾಗುತ್ತವೆ.

English summary

Aadhaar Pan card link: What are the benefits..?

Linking Aadhaar-PAN is mandatory for tax filers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X