For Quick Alerts
ALLOW NOTIFICATIONS  
For Daily Alerts

ಇದು ಮ್ಯೂಚ್ಯುಯಲ್ ಫಂಡ್ ಗಳ ಜಗತ್ತು, ಮೈ ಮರೆತಿರೋ ಆಪತ್ತು!

By ಕೆ.ಜಿ.ಕೃಪಾಲ್
|

ಹಣಕ್ಕೆ ಹಣ ದುಡಿಯುವ ಶಕ್ತಿ ಇದೆ. ಆದರೆ ಮೂಲ ಬಂಡವಾಳ ಮಾತ್ರ ನಮ್ಮ ಶ್ರಮವೇ ಎಂಬುದು ಸತ್ಯ. ಈ ದಿನ ಮ್ಯೂಚ್ಯುಯಲ್ ಫಂಡ್ ಗಳ ಬಗ್ಗೆ ಕೆಲವು ಮುಖ್ಯ ವಿಷಯಗಳನ್ನು ತಿಳಿಸಿಕೊಡುತ್ತೇನೆ. ಅಂದಹಾಗೆ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ, ಅದರಲ್ಲೂ ವಿಶೇಷವಾಗಿ ಎಸ್ ಐಪಿ ಮೂಲಕ ಹೂಡಿಕೆ ಲಾಭದಾಯಕ ಆಗಿರುತ್ತದೆ ಎಂಬ ಭಾವನೆ ಇದೆ.

ಆದರೆ, ಅದರೊಳಗೆ ಅಡಕವಾಗಿರುವ ಅಪಾಯಗಳ ಅರಿವನ್ನು ಸಹ ತಿಳಿಸಿದಲ್ಲಿ ಹೂಡಿಕೆದಾರರಿಗೆ ನಿರ್ಧರಿಸಲು ಅನುಕೂಲವಾಗುತ್ತದೆ. ಎಲ್ಲರಿಗೂ ಈಕ್ವಿಟಿ ಷೇರುಗಳ ಯೋಜನೆಗಳು ಒಪ್ಪಿತವಾಗದೆ ಕೆಲವರಿಗೆ ನಿಗದಿತ ಲಾಭ ತಂದುಕೊಡುವ ಯೋಜನೆಗಳಲ್ಲಿ ಆಸಕ್ತಿ ಮೂಡಿರುತ್ತದೆ.

ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

ಮ್ಯೂಚುಯಲ್ ಫಂಡ್ ಗಳು ಈಕ್ವಿಟಿ ಫಂಡ್ ಗಳಲ್ಲದೆ ಡೆಟ್ ಫಂಡ್ ಅಂದರೆ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಯೋಜನೆಗಳು ಸಹ ಇರುತ್ತವೆ. ಕೆಲವು ಹೂಡಿಕೆದಾರರು ನಿಗಧಿತ ಆದಾಯದ ಬಗ್ಗೆ ಒಲವು ತೋರುತ್ತಾರೆ. ಅಂತಹವರಿಗೆ ಎಫ್ ಎಂಪಿ (ಫಿಕ್ಸೆಡ್ ಮೆಚುರಿಟಿ ಪ್ಲಾನ್) ಒಂದು ಉತ್ತಮ ಯೋಜನೆ ಎಂದೆನಿಸುತ್ತದೆ.

ಈ ರೀತಿ ವಿವಿಧ ಯೋಜನೆಗಳಡಿ ಅಂದರೆ ಈಕ್ವಿಟಿ ಫಂಡ್ ಮೂಲಕ ಸಂಗ್ರಹಿಸಿದ್ದ ಹಣ ಈಕ್ವಿಟಿ ಷೇರುಗಳಲ್ಲಿ, ಡೆಟ್ ಫಂಡ್ ಅನ್ನು ವಿವಿಧ ಸಾಲಪತ್ರಗಳಲ್ಲಿ, ಎಫ್ ಎಂಪಿ ಮೂಲಕ ಸಂಗ್ರಹಣೆಯಾದ ಹಣವನ್ನು ಕಾರ್ಪೊರೇಟ್ ಡಿಪಾಜಿಟ್ ಗಳು, ಕಮರ್ಷಿಯಲ್ ಪೇಪರ್ ಮುಂತಾದ ಮನಿ ಮಾರ್ಕೆಟ್ ಇನ್ಸ್ ಟ್ರುಮೆಂಟ್ಸ್ ಗಳಲ್ಲಿ ಪಕ್ವತೆಯ ಆಧಾರದ ಮೇಲೆ ಹೂಡಿಕೆಯನ್ನು ನಿರ್ಧರಿಸುತ್ತದೆ.

ಟಾಪ್ ರೇಟಿಂಗ್ ಹೊಂದಿರುವ 15 ಮ್ಯೂಚುವಲ್ ಫಂಡ್ಟಾಪ್ ರೇಟಿಂಗ್ ಹೊಂದಿರುವ 15 ಮ್ಯೂಚುವಲ್ ಫಂಡ್

ಎಫ್ ಎಂಪಿ ಹೂಡಿಕೆಯು ಸುರಕ್ಷಿತವೆನಿಸಿದರೂ ನೀಡಬಹುದಾದ ಬಡ್ಡಿ ಹಣ ಮಾತ್ರ ಅಪಾಯದಿಂದ ಹೊರತಾಗಿರಲ್ಲ. ಇತ್ತೀಚೆಗೆ ಕಾರ್ಪೊರೇಟ್ ವಲಯ ಅತಿಯಾದ ಸೂಕ್ಷ್ಮತೆಯಿಂದ ಕೂಡಿದೆ. ಕಂಪೆನಿಗಳು ಆರ್ಥಿಕ ತೊಂದರೆಗೆ ಒಳಪಡುವ ಒಳ ಸೆಳೆತಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣಗಳು ಕೆಲವು ಅಂತರಿಕವಾದರೆ ಹಲವು ಭಾಹ್ಯವಾಗಿವೆ.

ಮೀಸಲು ನಿಧಿಯನ್ನು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ

ಮೀಸಲು ನಿಧಿಯನ್ನು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ

ಕೆಲವು ಕಂಪೆನಿಗಳು ತಮ್ಮ ಆರ್ಥಿಕ ಶಿಸ್ತಿನ ಅಭಾವದ ಕಾರಣಕ್ಕೆ ಆಪತ್ತಿಗೊಳಗಾಗಬಹುದು. ತಮ್ಮ ಉತ್ಪಾದನೆಗೆ ಬೇಡಿಕೆಯ ಕೊರತೆಯು ಆಪತ್ತಿಗೆ ಕಾರಣವಿರಬಹುದು. ಇವು ಆಂತರಿಕ ಕಾರಣಗಳಾದರೆ, ಬಾಹ್ಯ ಕಾರಣಗಳು ಅನೇಕ. ಒಂದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿ, ಹೆಚ್ಚಿನ ಮೀಸಲು (ರಿಸರ್ವ್) ಹಣವನ್ನು ಹೊಂದಿರುವ ಕಂಪೆನಿಯು ತನ್ನ ಮೀಸಲು ನಿಧಿಯನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದು ಸಹ ಮುಖ್ಯವಾಗಿರುತ್ತದೆ. ಒಂದು ಸಂಪದ್ಭರಿತವಾದ ಕಂಪೆನಿಯು ತನ್ನ ಮೀಸಲು ಹಣವನ್ನು ತನ್ನ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಿಕೊಳ್ಳಬಹುದು. ಕಂಪೆನಿಯ ಚಟುವಟಿಕೆ ವಿಸ್ತರಿಸಿಕೊಳ್ಳುವತ್ತಲಾದರೂ ಬಳಸಿಕೊಳ್ಳಬಹುದು. ಇಂತಹ ಯೋಜನೆಗಳಿಲ್ಲದಿದ್ದರೆ ಆ ನಿಧಿಯನ್ನು ಬೇರೆ ಕಂಪೆನಿಗಳಿಗೆ ಕಾರ್ಪೊರೇಟ್ ಡಿಪಾಜಿಟ್ ಆಗಿ ನೀಡಬಹುದು ಅಥವಾ ಆ ನಿಧಿಯನ್ನು ಮ್ಯೂಚುಯಲ್ ಫಂಡ್ ಗಳಿಗೆ ನಿಯಮಿತ ಅವಧಿಯ ಎಫ್ ಎಂಪಿ ಠೇವಣಿಯಾಗಿ ಕೊಡಬಹುದು.

ನಿಧಿ ಪಡೆದ ಕಂಪೆನಿಯನ್ನೂ ಅಪಾಯಕ್ಕೆ ದೂಡುತ್ತದೆ

ನಿಧಿ ಪಡೆದ ಕಂಪೆನಿಯನ್ನೂ ಅಪಾಯಕ್ಕೆ ದೂಡುತ್ತದೆ

ಈ ರೀತಿಯ ಕಾರ್ಪೊರೇಟ್ ಡಿಪಾಜಿಟ್ ಗಳಲ್ಲಿ ಅಡಕವಾಗಿರುವ ಅಪಾಯವೆಂದರೆ, ಕಾರ್ಪೊರೇಟ್ ಡಿಪಾಜಿಟ್ ಪಡೆದುಕೊಂಡ ಕಂಪೆನಿ ಯಾವುದೇ ತೊಂದರೆ ಇಲ್ಲದೆ ಆ ನಿಧಿಯನ್ನು ಸರಿಯಾದ ರೀತಿಯಲ್ಲಿ ಬಳಕೆಯಾದರೆ ಉತ್ತಮ ಫಲ ಪಡೆಯಬಹುದು. ಆದರೆ ಆ ಕಂಪೆನಿಯು ತಪ್ಪು ದಾರಿಯಲ್ಲಿ ನಡೆದರೆ ತಾನು ತೊಂದರೆಗೊಳಗಾಗುವುದಲ್ಲದೆ, ತಾನು ನಿಧಿ ಪಡೆದುಕೊಂಡ ಕಂಪೆನಿಯನ್ನೂ ಆಪತ್ತಿಗೆ ದೂಡುತ್ತದೆ ಎಂಬುದಕ್ಕೆ ಇತ್ತೀಚಿನ ಐ ಎಲ್ & ಎಫ್ ಎಸ್ ಕಂಪನಿಯ ಹಗರಣವು ಸೂಕ್ತ ಉದಾಹರಣೆ. ಈ ಕಂಪೆನಿಗೆ ತಮ್ಮ ಹಣ ನೀಡಿದ ಕಂಪೆನಿಗಳು ಅಪಾಯದಲ್ಲಿವೆ.

ಮ್ಯೂಚುವಲ್ ಫಂಡ್ ಆನ್ಲೈನ್ ಮೂಲಕ ಖರೀದಿಸುವುದು ಹೇಗೆ?ಮ್ಯೂಚುವಲ್ ಫಂಡ್ ಆನ್ಲೈನ್ ಮೂಲಕ ಖರೀದಿಸುವುದು ಹೇಗೆ?

ಸಕಾಲದಲ್ಲಿ ಹಿಂತಿರುಗಿಸಲು ಆಗುತ್ತಿಲ್ಲ

ಸಕಾಲದಲ್ಲಿ ಹಿಂತಿರುಗಿಸಲು ಆಗುತ್ತಿಲ್ಲ

ಇನ್ನು ಮ್ಯೂಚುಯಲ್ ಫಂಡ್ ಗೆ ಎಫ್ ಎಂಪಿ ಠೇವಣಿ ಸುರಕ್ಷಿತ ಎಂಬ ಭಾವನೆಯಲ್ಲಿರುವಾಗ ಹಿಂದಿನ ವಾರ ಕೋಟಕ್ ಮ್ಯೂಚುಯಲ್ ಫಂಡ್, ಎಚ್ ಡಿಎಫ್ ಸಿ ಮ್ಯುಚುಯಲ್ ಫಂಡ್ ಗಳು ತಮ್ಮ ಎಫ್ ಎಂಪಿ ಪಕ್ವತೆಯ ಹಣವನ್ನು ಸಕಾಲದಲ್ಲಿ ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ಅದರ ಪಕ್ವತೆಯನ್ನು (ಮೆಚ್ಯೂರಿಟಿ) ಮುಂದೂಡಬೇಕೆಂಬ ಪ್ರಸ್ತಾವ ಮುಂದಿಟ್ಟಿವೆ. ಈ ಕಾರಣ ಅಂದು ಷೇರುಪೇಟೆ ಸುಮಾರು 350 ಪಾಯಿಂಟುಗಳಷ್ಟು ಕುಸಿತಕ್ಕೊಳಗಾಯಿತು. ಝೀ ಎಂಟರ್ ಪ್ರೈಸಸ್ ಮತ್ತು ಡಿಶ್ ಟಿವಿ ಕಂಪೆನಿಗಳ ಒಡೆಯರಾದ ಎಸ್ಸೆಲ್ ಸಮೂಹವು ಕೋಟಕ್ ಮತ್ತು ಎಚ್ ಡಿಎಫ್ ಸಿ ಮ್ಯೂಚುಯಲ್ ಫಂಡ್ ಗಳ ಎಫ್ ಎಂಪಿ ಮೂಲಕ ಪಡೆದುಕೊಂಡಿರುವ ಹಣವನ್ನು ಹಿಂದಿರುಗಿಸಲು ವಿಳಂಬವಾಗಿದ್ದು, ಅದಕ್ಕಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಸಮಯಾವಕಾಶ ಕೋರಿರುವುದರಿಂದ ಪಕ್ವವಾಗುವ ಎಫ್ ಎಂಪಿ ಹಣವನ್ನು ಹಿಂದಿರುಗಿಸಲು ಸಹ ಈ ಮ್ಯೂಚುಯಲ್ ಫಂಡ್ ಗಳು ಸಮಯಾವಕಾಶವನ್ನು ಕೋರಿವೆ.

ಹೂಡಿಕೆ ಸುರಕ್ಷತೆಗಾಗಿ ನಿಗಾ ಇರಿಸುವುದು ಅಗತ್ಯ

ಹೂಡಿಕೆ ಸುರಕ್ಷತೆಗಾಗಿ ನಿಗಾ ಇರಿಸುವುದು ಅಗತ್ಯ

ಹೂಡಿಕೆಯನ್ನು ಹಿಂಪಡೆಯಲು ಇಚ್ಛಿಸುವವರಿಗೆ ಪೂರ್ಣವಾಗಿ ನೀಡುತ್ತಾರೋ ಅಥವಾ ಹೇರ್ ಕಟ್ ವಿಧದಲ್ಲಿ ನೀಡುವರೋ ಎಂಬುದು ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಮ್ಯೂಚ್ಯುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಸಂಪೂರ್ಣ ಸುರಕ್ಷಿತ ಎಂಬ ಭಾವನೆ ಸರಿಯಲ್ಲ. ಪೇಟೆಯಲ್ಲಿ ಆಗುವ ಬದಲಾವಣೆಗಳು, ವ್ಯಾವಹಾರಿಕ ಚಟುವಟಿಕೆಗಳಲ್ಲಿ ಆಗುವ ಬದಲಾವಣೆಗಳು ಷೇರುಪೇಟೆ ಮತ್ತು ಮ್ಯೂಚುಯಲ್ ಫಂಡ್ ಗಳ ಹಣೆಬರಹವನ್ನು ನಿರ್ಧರಿಸುತ್ತವೆ. ಹೂಡಿಕೆದಾರರು, ವಿಶೇಷವಾಗಿ ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆಯ ಸುರಕ್ಷತೆಗಾಗಿ ಈ ಬದಲಾವಣೆಗಳ ಮೇಲೆ ಸದಾ ನಿಗಾ ಇರಿಸುವುದು ಅನಿವಾರ್ಯ.

ಇಂದಿನಿಂದ ಈ ಪ್ರಮುಖ ಬದಲಾವಣೆಗಳು ನಿಮಗೆ ಅನ್ವಯವಾಗಲಿವೆ..ಇಂದಿನಿಂದ ಈ ಪ್ರಮುಖ ಬದಲಾವಣೆಗಳು ನಿಮಗೆ ಅನ್ವಯವಾಗಲಿವೆ..

English summary

How safe your Mutual fund SIP investment? These details you must know

Are you investing or planning to invest in Mutual fund SIP? Here is an you must know details before investing. Informative article about SIP mutual fund in Kannada by well known financial columnist and expert K.G.Krupal.
Story first published: Tuesday, April 16, 2019, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X