For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯ ಏರಿಕೆಯಲ್ಲಿ ಪಾಠಗಳು ಬೇಕಾದಷ್ಟಿವೆ; ಕಲಿಯಲು ಉತ್ಸಾಹ ಇರಬೇಕಷ್ಟೇ!

By ಕೆ.ಜಿ.ಕೃಪಾಲ್
|

ಷೇರು ಪೇಟೆಯ ಏರಿಕೆ ಓಹ್, ಅಮೋಘವಾಗಿತ್ತು. ಈಗ ಹೇಳುತ್ತಿರುವುದು ಸೋಮವಾರದಂದು ಸೆನ್ಸೆಕ್ಸ್ ಪ್ರದರ್ಶಿಸಿದ ಏರಿಕೆಯನ್ನು. ಅದ್ಭುತವಾದ 1421 ಪಾಯಿಂಟ್ ಗಳ ಏರಿಕೆಯು ಚುನಾವಣಾ ನಂತರದ ಸಮೀಕ್ಷೆಯಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ಕಾರಣದಿಂದ ಈ ಏರಿಕೆ ಆಗಿದೆ.

ಸೆನ್ಸೆಕ್ಸ್ ಏಪ್ರಿಲ್ 18ರಂದು 39,487.45 ಪಾಯಿಂಟುಗಳ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡ ನಂತರ ಅಲ್ಪಮಟ್ಟಿನ ಏರಿಳಿತಗಳೊಂದಿಗೆ ಮೇ 3ರಂದು 38,963ರಲ್ಲಿತ್ತು. ಅಲ್ಲಿಂದ ವಿದೇಶಿ ವಿತ್ತೀಯ ಸಂಸ್ಥೆಗಳ ಸತತವಾದ ಮಾರಾಟದ ಕಾರಣ 17ನೇ ಮೇ ಅಂತ್ಯದ ವಾರದಲ್ಲಿ 37,930 ಪಾಯಿಂಟ್ ಗಳಿಗೆ ಕುಸಿಯಿತು.

ಅಂದರೆ ಎರಡು ವಾರಗಳಲ್ಲಿ ಒಂದು ಸಾವಿರ ಪಾಯಿಂಟ್ ಗಳಷ್ಟು ಇಳಿಕೆ ಕಂಡಿದೆ. ಅಂತೆಯೇ ಬಂಡವಾಳ ಮೌಲ್ಯವು ರು. 151.62 ಲಕ್ಷ ಕೋಟಿಯಿಂದ ರು. 146.58 ಲಕ್ಷ ಕೋಟಿಗೆ ಕರಗಿತ್ತು. ಈ ಎರಡು ವಾರಗಳಲ್ಲಿ ಕರಗಿ ಹೋದ ಬಂಡವಾಳವನ್ನು ಸೋಮವಾರದ ಈ ಭಾರಿ ಏರಿಕೆಯು ಒಂದೇ ದಿನದಲ್ಲಿ ರು.151.82 ಲಕ್ಷ ಕೋಟಿಗೆ ಮರಳಿಸಿದೆ.

ಪುಟಿದೇಳುವುದಕ್ಕೆ ವಿತ್ತೀಯ ವಲಯದ ಕೊಡುಗೆ
 

ಪುಟಿದೇಳುವುದಕ್ಕೆ ವಿತ್ತೀಯ ವಲಯದ ಕೊಡುಗೆ

ಕೇವಲ ಒಂದು ಬೆಳವಣಿಗೆಯು ಷೇರುಪೇಟೆ ಮೇಲೆ ಇಂತಹ ಪರಿಣಾಮ ಬೀರಬಹುದು ಎಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯ ವಿಸ್ಮಯಕಾರಿ ಏರಿಕೆ ಇದಾಗಿದೆ. ಮತ್ತೊಂದು ವಿಸ್ಮಯಕಾರಿ ಅಂಶವೆಂದರೆ ಈ ಎರಡು ವಾರಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ರು. 10,400 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಸೋಮವಾರದಂದು ಅವುಗಳ ಖರೀದಿ ಗಾತ್ರವು ರು.1,734 ಕೋಟಿ ಮಾತ್ರವಾದರೂ ಹತ್ತು ಸಾವಿರ ಕೋಟಿ ರುಪಾಯಿಗಳ ಮಾರಾಟದಿಂದ ಆದ ಹಾನಿಯನ್ನು ತುಂಬಿಸಿಕೊಟ್ಟಿದೆ. ಈ ರೀತಿಯ ಪುಟಿದೇಳುವಿಕೆಗೆ ಹೆಚ್ಚಿನ ಕೊಡುಗೆ ಕೊಟ್ಟಿದ್ದು ವಿತ್ತೀಯ ವಲಯ.

ಆ ಒಂಬತ್ತು ಕಂಪೆನಿಗಳು

ಆ ಒಂಬತ್ತು ಕಂಪೆನಿಗಳು

ಸೆನ್ಸೆಕ್ಸ್ ನ 30 ಕಂಪೆನಿಗಳಲ್ಲಿ ಒಂಬತ್ತು ಕಂಪೆನಿಗಳು ವಿತ್ತೀಯ ವಲಯದ್ದಾಗಿವೆ. ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು, ಗೃಹ ಸಾಲದ ಕಂಪೆನಿ ಮತ್ತು ಎನ್ ಬಿಎಫ್ ಸಿ ಸಹ ಈ ಸಮೂಹದಲ್ಲಿ ಇವೆ. ಸೋಮವಾರದಂದು ಗೃಹಸಾಲದ ಕಂಪೆನಿ ಹೌಸಿಂಗ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಷೇರು ರು.123ರಷ್ಟು ಏರಿಕೆಯಿಂದ ಸುಮಾರು 208 ಪಾಯಿಂಟುಗಳ ಏರಿಕೆಯನ್ನು ತಂದುಕೊಟ್ಟಿದೆ. ಎಚ್ ಡಿಎಫ್ ಸಿ ಬ್ಯಾಂಕ್ ರು.71 ರಷ್ಟು ಏರಿಕೆಯಿಂದ ಸುಮಾರು 150 ಪಾಯಿಂಟುಗಳ ಏರಿಕೆಗೆ ಕಾರಣವಾಗಿದೆ. ಐಸಿಐಸಿಐ ಬ್ಯಾಂಕ್ ರು.17 ರಷ್ಟು ಏರಿಕೆಯಿಂದ 110 ಪಾಯಿಂಟುಗಳ ಏರಿಕೆ ತಂದಿದೆ.

ಉಳಿದ ಕಂಪೆನಿಗಳಿಂದಲೂ ಸೂಚ್ಯಂಕ ಏರಿಕೆಗೆ ಕೊಡುಗೆ

ಉಳಿದ ಕಂಪೆನಿಗಳಿಂದಲೂ ಸೂಚ್ಯಂಕ ಏರಿಕೆಗೆ ಕೊಡುಗೆ

ಭಾರತೀಯ ಸ್ಟೇಟ್ ಬ್ಯಾಂಕ್ 25 ರುಪಾಯಿಗಳಷ್ಟು ಏರಿಕೆಯಿಂದ ಸೆನ್ಸೆಕ್ಸ್ ಗೆ 94 ಪಾಯಿಂಟುಗಳ ಏರಿಕೆಯನ್ನು ತಂದುಕೊಟ್ಟಿದೆ. ಆಕ್ಸಿಸ್ ಬ್ಯಾಂಕ್ 60 ಪಾಯಿಂಟು, ಇಂಡಸ್ ಇಂಡ್ ಬ್ಯಾಂಕ್ 58 ಪಾಯಿಂಟು, ಕೋಟಕ್ ಬ್ಯಾಂಕ್ 47 ಪಾಯಿಂಟ್, ಬಜಾಜ್ ಫೈನಾನ್ಸ್ 24 ಪಾಯಿಂಟ್, ಯೆಸ್ ಬ್ಯಾಂಕ್ 16 ಪಾಯಿಂಟ್ ಏರಿಕೆಯನ್ನು ಸೆನ್ಸೆಕ್ಸ್ ಗೆ ತಂದುಕೊಟ್ಟಿದೆ. ಅಂದರೆ ಸುಮಾರು ಅರ್ಧದಷ್ಟು ಏರಿಕೆಗೆ ಈ ಒಂಬತ್ತು ವಿತ್ತೀಯ ಕಂಪೆನಿಗಳು ಕಾರಣವಾಗಿವೆ. ಉಳಿದಂತೆ ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸನ್ ಅಂಡ್ ಟೊಬ್ರೋ, ಮಾರುತಿ, ಐಟಿಸಿ ಮುಂತಾದವುಗಳು ಸೂಚ್ಯಂಕದ ಏರಿಕೆಗೆ ತಮ್ಮ ಕೊಡುಗೆ ಕೊಟ್ಟಿವೆ.

ಸ್ವದೇಶಿ ವಿತ್ತೀಯ ಸಂಸ್ಥೆಗಳಿಂದ 542 ಕೋಟಿ ಮೌಲ್ಯದ ಷೇರು ಮಾರಾಟ
 

ಸ್ವದೇಶಿ ವಿತ್ತೀಯ ಸಂಸ್ಥೆಗಳಿಂದ 542 ಕೋಟಿ ಮೌಲ್ಯದ ಷೇರು ಮಾರಾಟ

ಅಂದರೆ ಕೇವಲ ರು.1,734 ಕೋಟಿ ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆಯು ಸೆನ್ಸೆಕ್ಸ್ ಅನ್ನು ಪುಟಿದೇಳುವಂತೆ ಮಾಡಿದೆ. ಅದರಲ್ಲೂ ಸ್ವದೇಶಿ ವಿತ್ತೀಯ ಸಂಸ್ಥೆಗಳು ರು.542 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವಾಗಲೂ ಇದು ಸಾಧ್ಯವೆಂದರೆ ವಿಸ್ಮಯವೇ ಅಲ್ಲವೇ! ಅಂದರೆ ಪೇಟೆಯು ಟೊಳ್ಳಾಗಿದ್ದು, ಒಂದು ಸಣ್ಣ ಪ್ರಮಾಣದ ಕೊಳ್ಳುವಿಕೆಯಾಗಲಿ ಅಥವಾ ಮಾರಾಟ ಮಾಡುವುದಾಗಲಿ ನಡೆದಾಗ ಭಾರಿ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ. ಈ ಸೂಕ್ಷ್ಮತೆಯನ್ನು ಚಟುವಟಿಕೆ ನಡೆಸುವಾಗ ಗಮನದಲ್ಲಿ ಇರಿಸಬೇಕಾದುದು ಅತ್ಯವಶ್ಯಕ.

English summary

How Indian stock market reacted to Lok Sabha elections 2019 exit poll results?

How Indian stock market reacted to Lok Sabha elections 2019 exit poll results? Here is an analysis by financial analyst and Oneindia columnist K.G.Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more