For Quick Alerts
ALLOW NOTIFICATIONS  
For Daily Alerts

ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ನೌಕರರ ಭವಿಷ್ಯ ನಿಧಿ (ಇಪಿಎಫ್) ನಿವೃತ್ತಿ ನಂತರದ ಜೀವನದ ಭವಿಷ್ಯವಾಗಿದೆ. ನಿಮ್ಮ ಇಪಿಎಫ್ ಖಾತೆಯಲ್ಲಿರುವ ಹಣವನ್ನು ತಿಳಿದುಕೊಳ್ಳಲು ಹಲವಾರು ವಿಧಾನಗಳಿದ್ದು, ಬ್ಯಾಲೆನ್ಸ್ ತಿಳಿಯುವುದು ತುಂಬಾ ಸುಲಭ.

|

ನೌಕರರ ಭವಿಷ್ಯ ನಿಧಿ (ಇಪಿಎಫ್) ನಿವೃತ್ತಿ ನಂತರದ ಜೀವನದ ಭವಿಷ್ಯವಾಗಿದೆ. ನಿಮ್ಮ ಇಪಿಎಫ್ ಖಾತೆಯಲ್ಲಿರುವ ಹಣವನ್ನು ತಿಳಿದುಕೊಳ್ಳಲು ಹಲವಾರು ವಿಧಾನಗಳಿದ್ದು, ಬ್ಯಾಲೆನ್ಸ್ ತಿಳಿಯುವುದು ತುಂಬಾ ಸುಲಭ. ಹಿಂದೆ ಆನ್ಲೈನ್ ಹಾಗೂ ಪಾಸ್ಬುಕ್ ಡೌನ್ಲೋಡ್ ಮಾಡಿ ಬ್ಯಾಲೆನ್ಸ್ ಚೆಕ್ ಮಾಡಬೇಕಿತ್ತು. ಈಗ ಒಂದು ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.
ಇಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಲು ಉದ್ಯೋಗಿಗಳಿಗೆ ಯುಎಎನ್ ನಂಬರ್ ಗೊತ್ತಿರಬೇಕು. ಜೊತೆಗೆ ನಿಮ್ಮ ನೋಂದಣಿಯಾದ ಮೊಬೈಲ್ ನಂಬರ್ ನಲ್ಲಿಯೇ ಎಸ್ಎಂಎಸ್ ಕಳುಹಿಸಬೇಕು. ಯುಎಎನ್ ನಂಬರ್ ಇಪಿಎಫ್ಒ ದಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶವಿದೆ.

ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
EPFOHO UAN ENG ಎಂದು ಟೈಪ್ ಮಾಡಿಕೊಂಡು 7738299899 ಸಂಖ್ಯೆಗೆ ಕಳುಹಿಸಬೇಕು. ಹಿಂದಿಯಲ್ಲಿ ಕಳುಹಿಸುವವರು EPFOHO UAN HIN ಎಂದು ಟೈಪ್ ಮಾಡಬೇಕು. ಈ ಸೌಲಭ್ಯ ಇಂಗ್ಲೀಷ್, ಪಂಜಾಬಿ, ಮರಾಠಿ, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿಹೀಗೆ ಎಲ್ಲಾ ಭಾಷೆಗಳಲ್ಲೂ ಲಭ್ಯವಿದೆ.
ಯುಎಎನ್ ಸಕ್ರಿಯಗೊಳಿಸಿರುವ ಉದ್ಯೋಗಿಗಳು ಮಾತ್ರ ಈ ಸೇವೆಯನ್ನು ಪಡೆಯಬಹುದಾಗಿದೆ. EPFOHO UAN ಎಂಬುದಾಗಿ ಸಂದೇಶವನ್ನು ಕಳುಹಿಸಬೆಕು. ಚಂದಾದಾರರು ಸಂದೇಶವನ್ನು ಇಂಗ್ಲಿಷ್ ನಲ್ಲಿ ಪಡೆಯಲು ಇಚ್ಚಿಸಿದಲ್ಲಿ EPFOHO UAN ENG ಎಂಬುದಾಗಿ ಟೈಪ್ ಮಾಡಿ 07738299899 ನಂಬರಿಗೆ ಕಳುಹಿಸಬೆಕು.
ಯುಎಎನ್ ಮತ್ತು ಬ್ಯಾಂಕ್ ಖಾತೆಯನ್ನು ಪಾನ್ ಹಾಗೂ ಆಧಾರ್ ಜೊತೆ ಲಿಂಕ್ ಆಗಿರಬೇಕು. ಲಿಂಕ್ ಆಗದಿದ್ದರೆ ಮೊದಲು ಲಿಂಕ್ ಮಾಡಿಕೊಂಡು ಬ್ಯಾಲೆನ್ಸ್ ಚೆಕ್ ಮಾಡಲು ಮುಂದುವರೆಯಿರಿ.
ಇಪಿಎಫ್ ವೆಬ್ಸೈಟ್ ಮೂಲಕ, ಇಪಿಎಫ್ಒ ಆಪ್ ಮೂಲಕ, ಮಿಸ್ಡ್ ಕಾಲ್ ( 011-22901406) ಮೂಲಕ ನಿಮ್ಮ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ತಿಳಿಯಬಹುದು. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

Read more about: epf money pf ಇಪಿಎಫ್
English summary

How to check EPF balance through SMS?

you don't need to login to the EPFO portal and provide details. SMS based UAN activation facility is useful for those who know how to use the smartphone and M-epf app.
Story first published: Wednesday, May 8, 2019, 14:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X