For Quick Alerts
ALLOW NOTIFICATIONS  
For Daily Alerts

ಗ್ರಾಚ್ಯುಟಿ ಪಡೆಯುವುದು ಹಾಗು ಲೆಕ್ಕಾಚಾರ ಮಾಡುವುದು ಹೇಗೆ?

ದೇಶದಲ್ಲಿ ಸುಮಾರು 49 ಲಕ್ಷ ಕೇಂದ್ರ ಸರಕಾರಿ ನೌಕರರಿದ್ದಾರೆ. ಇವರೆಲ್ಲರಿಗೂ ಪಿಂಚಣಿ ಹಾಗೂ ಗ್ರಾಚ್ಯುಟಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಸರಕಾರ ನೀಡುತ್ತದೆ.

|

ದೇಶದಲ್ಲಿ ಸುಮಾರು 49 ಲಕ್ಷ ಕೇಂದ್ರ ಸರಕಾರಿ ನೌಕರರಿದ್ದಾರೆ. ಇವರೆಲ್ಲರಿಗೂ ಪಿಂಚಣಿ ಹಾಗೂ ಗ್ರಾಚ್ಯುಟಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಸರಕಾರ ನೀಡುತ್ತದೆ. ಗ್ರಾಚ್ಯುಟಿ ಲೆಕ್ಕ ಹಾಕುವುದು ಹಾಗೂ ಅದನ್ನು ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಏನಿದು ಗ್ರಾಚ್ಯುಟಿ?

ಏನಿದು ಗ್ರಾಚ್ಯುಟಿ?

ನಿವೃತ್ತಿಯಾಗುವ ಕೇಂದ್ರ ಸರಕಾರಿ ನೌಕರರಿಗೆ ಒಂದು ಬಾರಿ ನೀಡಲಾಗುವ ಮೊತ್ತವನ್ನು ಗ್ರಾಚ್ಯುಟಿ ಎಂದು ಕರೆಯಲಾಗುತ್ತದೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವುದು ಹಾಗೂ ನಿವೃತ್ತಿ ನಂತರ ಪಿಂಚಣಿ, ಗ್ರಾಚ್ಯುಟಿ ಪಡೆಯಲು ಅರ್ಹತೆ ಹೊಂದಿದವರು ಈ ಸೌಲಭ್ಯ ಪಡೆದುಕೊಳ್ಳಬಹುದು. ಉದ್ಯೋಗದಾತ ಸಂಸ್ಥೆಗಳು ತನ್ನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕೊಡುವ ಗೌರವ ಧನವೇ ಗ್ರಾಚ್ಯುಟಿ. ಉದ್ಯೋಗದಾತ ಕಂಪನಿಗಳಿ0ದ ಉದ್ಯೋಗಿಗಳಿಗೆ ಸಿಗುವ ಕೊಡುಗೆ. 5 ಅಥವಾ ಅದಕ್ಕಿಂತ ಹೆಚ್ಚು ವರ್ಷ ಒಂದು ಕಂಪನಿಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಈ ಗೌರವ ಧನ ನೀಡಲಾಗುತ್ತದೆ.

ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?

ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?

ಮಾಸಿಕ ಸಂಬಳದ ಒಂದು ನಾಲ್ಕನೇ ಭಾಗದಷ್ಟು ಮೂಲ ಸಂಬಳ ಹಾಗೂ ನಿವೃತ್ತಿಯಾಗುವ ದಿನದ ಹಿಂದಿನ ಆರು ತಿಂಗಳು ಪಡೆದ ತುಟ್ಟಿ ಭತ್ಯೆ ಪ್ರಮಾಣವನ್ನು ಆಧರಿಸಿ ಗ್ರಾಚ್ಯುಟಿ ಲೆಕ್ಕ ಮಾಡಲಾಗುತ್ತದೆ ಎಂದು ಪಿಂಚಣಿ ಖಾತೆಯ ವೆಬ್ಸೈಟಿನಲ್ಲಿ ತಿಳಿಸಲಾಗಿದೆ. ಗ್ರಾಚ್ಯುಟಿಗೆ ಯಾವುದೇ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. 33 ವರ್ಷ ಅಥವಾ ಅದಕ್ಕೂ ಹೆಚ್ಚು ಅವಧಿಗೆ ಅರ್ಹ ಸೇವೆ ಸಲ್ಲಿಸಿರುವ ಕೇಂದ್ರ ಸರಕಾರಿ ನೌಕರರು ಮೂಲಸಂಬಳ ಹಾಗೂ ತುಟ್ಟಿ ಭತ್ಯೆ ಸೇರಿಸಿ ಸಿಗುವ ಮೊತ್ತದ 16 ಪಟ್ಟು ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಗ್ರಾಚ್ಯುಟಿ ಮಿತಿ 20 ಲಕ್ಷ ರೂಪಾಯಿ ಮೀರುವಂತಿಲ್ಲ. ಗ್ರಾಚ್ಯುಟಿ ಏನಿದು? ಗ್ರಾಚ್ಯುಟಿ ಲೆಕ್ಕಚಾರ ಮಾಡುವುದು ಹೇಗೆ?

'ನೋ ಡಿಮ್ಯಾಂಡ್ ಸರ್ಟಿಫಿಕೇಟ್' ಕಡ್ಡಾಯ

'ನೋ ಡಿಮ್ಯಾಂಡ್ ಸರ್ಟಿಫಿಕೇಟ್' ಕಡ್ಡಾಯ

ಗ್ರಾಚ್ಯುಟಿ ಪಡೆಯಲು ನೀವು ಸೇವೆ ಸಲ್ಲಿಸುತ್ತಿರುವ ಇಲಾಖೆಗೆ 'ನೋ ಡಿಮ್ಯಾಂಡ್ ಸರ್ಟಿಫಿಕೇಟ್' ನೀಡಬೇಕಾಗುತ್ತದೆ. ಅಂದರೆ ಯಾವುದೇ ಸರಕಾರಿ ನೌಕರ ನಿವೃತ್ತಿಯ ಸಂದರ್ಭದಲ್ಲಿ ಸರಕಾರಕ್ಕೆ ಸಲ್ಲಿಸಬೇಕಾದ ಮನೆ ವಾಸದ ಶುಲ್ಕ, ಮುಂಗಡ, ಹೆಚ್ಚುವರಿ ಭತ್ಯೆಗಳು ಅಥವಾ ಇನ್ನಾವುದೇ ರೀತಿಯ ಶುಲ್ಕಗಳನ್ನು ಬಾಕಿ ಉಳಿಸಿಕೊಂಡಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ನೀಡಬೇಕು.
ಇಂಥ ಎಲ್ಲ ಬಾಕಿಗಳನ್ನು ನೌಕರನ ನಿವೃತ್ತಿಗೆ ಎರಡು ತಿಂಗಳು ಮುಂಚೆಯೇ ಇಲಾಖಾ ಮುಖ್ಯಸ್ಥರು ಲೆಕ್ಕ ಹಾಕಿ ಅಕೌಂಟ್ಸ್ ಆಫೀಸಿಗೆ ಕಳುಹಿಸಿ ಕೊಡುತ್ತಾರೆ. ಆಕಸ್ಮಾತ್ ನೌಕರನು ಸರಕಾರಕ್ಕೆ ಏನಾದರೂ ಬಾಕಿ ಪಾವತಿಸಬೇಕಿದ್ದಲ್ಲಿ ಅದನ್ನು ಗ್ರಾಚ್ಯುಯಿಟಿ ಮೊತ್ತದಲ್ಲಿ ಹಿಡಿದುಕೊಳ್ಳಲಾಗುತ್ತದೆ.
ಅವಧಿ ಮೀರಿದ ಲೈಸೆನ್ಸ್ ಫೀ ವಸೂಲಿ ಮಾಡುವುದು ಡೈರೆಕ್ಟೊರೇಟ್ ಆಫ್ ಎಸ್ಟೇಟ್ ಖಾತೆಯ ಜವಾಬ್ದಾರಿಯಾಗಿದೆ. ಯಾವುದೇ ಕಾರಣದಿಂದ ಅಂತಿಮ ಬಾಕಿ ಲೆಕ್ಕಾಚಾರ ಮಾಡುವುದು ತಡವಾದಲ್ಲಿ ಗ್ರಾಚ್ಯುಯಿಟಿಯ ಶೇ. 10 ರಷ್ಟನ್ನು ತಡೆ ಹಿಡಿಯಲಾಗುವುದು ಎಂದು ಸರಕಾರದ pensionersportal.gov.in ಪೋರ್ಟಲ್ ನಲ್ಲಿ ತಿಳಿಸಲಾಗಿದೆ.

ಈ 3 ಸಂದರ್ಭಗಳಲ್ಲಿ ಗ್ರಾಚ್ಯುಟಿ ನೀಡಲಾಗುತ್ತದೆ:

1. ಡೆತ್ ಗ್ರಾಚ್ಯುಟಿ

1. ಡೆತ್ ಗ್ರಾಚ್ಯುಟಿ

ಕೇಂದ್ರ ಸರಕಾರಿ ನೌಕರ ಸೇವೆಯಲ್ಲಿರುವಾಗ ಆಕಸ್ಮಾತ್ ಮರಣ ಹೊಂದಿದರೆ ಆತನ ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಒಂದು ಬಾರಿ ಮಾತ್ರ ನೀಡಲಾಗುವ ಮೊತ್ತವೇ ಡೆಥ್ ಗ್ರಾಚ್ಯುಯಿಟಿ ಆಗಿದೆ. ಸಾವಿನ ನಂತರ ಗ್ರಾಚ್ಯುಟಿ ನೀಡಲು ಯಾವುದೇ ಕನಿಷ್ಠ ಸೇವಾ ಅವಧಿಯು ಕಡ್ಡಾಯವಾಗಿರುವುದಿಲ್ಲ. ಡೆತ್ ಗ್ರ್ಯಾಚುಟಿಯ ಅರ್ಹತೆಯನ್ನು ಮೇಲಿನ ಕೋಷ್ಟಕದಲ್ಲಿ ಲೆಕ್ಕ ಮಾಡಲಾಗಿದೆ. 1.1.2016ರಂತೆ ಗರಿಷ್ಠ ಮೊತ್ತದ ಡೆತ್ ಗ್ರ್ಯಾಚುಟಿಯು ರೂ. 20 ಲಕ್ಷ.

2. ಸರ್ವಿಸ್ ಗ್ರಾಚ್ಯುಟಿ

2. ಸರ್ವಿಸ್ ಗ್ರಾಚ್ಯುಟಿ

ಕೊನೆಯ ಆರು ತಿಂಗಳು ಅರ್ಹ ಸೇವಾ ಅವಧಿಗೆ ಕೊನೆಯ ಬಾರಿ ಪಡೆದ ವೇತನ ಹಾಗೂ ತುಟ್ಟಿ ಭತ್ಯೆ ಸೇರಿಸಿ ಸಿಗುವ ಮೊತ್ತದ ಅರ್ಧದಷ್ಟು ಸರ್ವಿಸ್ ಗ್ರಾಚ್ಯುಯಿಟಿ ನೀಡಲಾಗುತ್ತದೆ. ಇದು ನಿವೃತ್ತಿ ನಂತರ ನೀಡಲಾಗುವ ಗ್ರಾಚ್ಯುಯಿಟಿಯಿಂದ ಹೊರತಾಗಿದ್ದು, ಇದನ್ನು ನಿವೃತ್ತಿ ನಂತರದ ಗ್ರಾಚ್ಯುಯಿಟಿ ಮೇಲೆ ಒಂದು ಬಾರಿ ನೀಡಲಾಗುವುದು.

3. ನಿವೃತ್ತಿ ಗ್ರಾಚ್ಯುಟಿ

3. ನಿವೃತ್ತಿ ಗ್ರಾಚ್ಯುಟಿ

5 ವರ್ಷಗಳ ಕಾಲ ಅರ್ಹ ಸೇವಾ ಅವಧಿ ಪೂರೈಸಿರುವ ಹಾಗೂ ಸರ್ವಿಸ್ ಅಥವಾ ಇನ್ವಾಲಿಡ್ ಗ್ರಾಚ್ಯುಟಿ ಅಥವಾ ಪಿಂಚಣಿಗೆ ಅರ್ಹರಾಗಿದ್ದಲ್ಲಿ ಅಂಥವರಿಗೆ ಸಂಬಳ ಹಾಗೂ ಡಿಪಿಯ ಒಂದು ನಾಲ್ಕನೇ ಭಾಗದಷ್ಟು ಲೆಕ್ಕ ಹಾಕಿ ಇದರ 16 ಪಟ್ಟಿನಷ್ಟು ಗ್ರಾಚ್ಯುಟಿ ನೀಡಲಾಗುತ್ತದೆ. ಆದರೆ ಹೀಗೆ ನೀಡಲಾಗುವ ಗ್ರಾಚ್ಯುಟಿ ಮೊತ್ತವು 20 ಲಕ್ಷ ರೂಪಾಯಿ ಮೀರುವಂತಿಲ್ಲ.

ತಡೆಹಿಡಿಯಲಾದ ಗ್ರಾಚ್ಯುಟಿ ಕತೆ ಏನು?

ತಡೆಹಿಡಿಯಲಾದ ಗ್ರಾಚ್ಯುಟಿ ಕತೆ ಏನು?

ನಿವೃತ್ತಿಯ ಸಮಯದಲ್ಲಿ ತಡೆಹಿಡಿಯಲಾದ ಗ್ರಾಚ್ಯುಟಿ ಮೊತ್ತವನ್ನು ಯಾವಾಗ ಪಾವತಿಸಲಾಗುವುದು ಎಂಬ ಬಗ್ಗೆ ತಿಳಿಯಲು ನಿಮ್ಮಲ್ಲಿ ಕುತೂಹಲವಿರಬಹುದು. ಸಿಸಿಎಸ್ (ಪೆನ್ಷನ್) ನಿಯಮ, 1972 ರ ಉಪ ನಿಯಮ (5) ಪ್ರಕಾರ ನಿವೃತ್ತ ನೌಕರನು ತನಗೆ ನೀಡಲಾದ ಸರಕಾರಿ ವಾಸದ ಕಟ್ಟಡವನ್ನು ಖಾಲಿ ಮಾಡಿದ ನಂತರ ಡೈರೆಕ್ಟೊರೇಟ್ ಆಫ್ ಎಸ್ಟೇಟ್ಸ್ ಇಲಾಖೆಯಿಂದ ‘ನೋ ಡಿಮ್ಯಾಂಡ್ ಸರ್ಟಿಫಿಕೇಟ್' ಸಲ್ಲಿಸಿದ ಕೂಡಲೇ ತಡೆಹಿಡಿಯಲಾದ ಗ್ರಾಚ್ಯುಟಿಯನ್ನು ಪಾವತಿ ಮಾಡಲಾಗುತ್ತದೆ.

Read more about: gratuity money salary savings
English summary

Know how to get your Gratuity and how it is calculated?

There are around 49 lakh central government employees. All of them are entitled to several benefits, including pension and gratuity.
Story first published: Thursday, May 2, 2019, 10:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X