For Quick Alerts
ALLOW NOTIFICATIONS  
For Daily Alerts

ಆಧಾರ್-ಪ್ಯಾನ್ ಹೊಸ ನಿಯಮ: ಬದಲಾದ 10 ಪ್ರಮುಖ ಅಂಶಗಳ ವಿವರ ಇಲ್ಲಿದೆ..

ಕೇಂದ್ರ ಬಜೆಟ್ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಹಾಗು ಆಧಾರ್ ಕಾರ್ಡ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದಾರೆ ಎಂಬ ಸುದ್ದಿಯನ್ನು ಕೇಳಿರುತ್ತಿರಿ ಅಲ್ಲವೆ?

|

ಕೇಂದ್ರ ಬಜೆಟ್ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಹಾಗು ಆಧಾರ್ ಕಾರ್ಡ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದಾರೆ ಎಂಬ ಸುದ್ದಿಯನ್ನು ಕೇಳಿರುತ್ತಿರಿ ಅಲ್ಲವೆ? ಆದರೆ ಆಗಿರುವ ಪ್ರಮುಖ ಬದಲಾವಣೆಗಳ ಬಗ್ಗೆ ಹೆಚ್ಚಿನ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.
ಇದರಲ್ಲಿ ಮುಖ್ಯವಾಗಿ ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಒದಗಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕ್ಕೆಗೆ ಅವಕಾಶ ಕಲ್ಪಿಸಿರುವುದು ಗಮನಿಸಬೇಕು. ಆಧಾರ್ ಮತ್ತು ಪ್ಯಾನ್‌ ಕಾರ್ಡ್ ಗೆ ಸಂಬಂಧಿಸಿದ ಇತ್ತೀಚಿನ ಕೆಲವು ಬದಲಾವಣೆಗಳನ್ನು 2019 ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಪ್ರಸ್ತುತ ಆಧಾರ್ ಮತ್ತು ಪ್ಯಾನ್ ನಿಯಮಗಳಲ್ಲಿ ಆಗಿರುವ ಕೆಲವು ಗಮನಾರ್ಹ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ...
ಹೊಸ ಆಧಾರ್, ಪ್ಯಾನ್ ಕಾರ್ಡ್ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು ಇಲ್ಲಿವೆ:

ಐಟಿಆರ್ ಸಲ್ಲಿಕೆ ಸುಲಭ

ಐಟಿಆರ್ ಸಲ್ಲಿಕೆ ಸುಲಭ

1. ಬಜೆಟ್ ಘೋಷಿಸಿದಂತೆ ಪ್ಯಾನ್ ಕಾರ್ಡ್ ಹೊಂದಿರದ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್ ಅನ್ನು ಪ್ಯಾನ್ ಕಾರ್ಡ್ ಬದಲಿಗೆ ಬಳಸಲು ಅವಕಾಶವಿದೆ.
2. ಆದಾಯ ತೆರಿಗೆ ಕಾಯ್ದೆಯಡಿ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಪರ್ಯಾಯವಾಗಿ ವಿನಿಮಯ ಮಾಡಿಕೊಳ್ಳಬಹುದು.
3. ಇದು ಟ್ಯಾಕ್ಸ್ ಬೇಸ್ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕ್ ವಹಿವಾಟು

ಬ್ಯಾಂಕ್ ವಹಿವಾಟು

4. ಪ್ಯಾನ್ ಬದಲಿಗೆ ಆಧಾರ್ ಬಳಕೆಗೆ ಅವಕಾಶವಿರುವುದರ ಅರ್ಥ ಆಧಾರ್ ಕಾರ್ಡ್ ನ್ನು ರೂ. 50,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರಕ್ಕಾಗಿ ಬಳಸಬಹುದು. ಈ ಹಿಂದೆ ಪ್ಯಾನ್ ಕಾರ್ಡ್ ನ್ನು ಕಡ್ಡಾಯವಾಗಿ ಬಳಸಬೇಕಾಗಿತ್ತು.
5. ಅಂತೆಯೇ, ನಿಮ್ಮ ಬ್ಯಾಂಕ್ ಖಾತೆಯಿಂದ ರೂ. 50 ಸಾವಿರ ನಗದು ಮೊತ್ತ ವಿತ್ ಡ್ರಾವಲ್ ಮಾಡುವಾಗ ಇಲ್ಲವೇ ಠೇವಣಿ ಇಡುವಾಗ ಪ್ಯಾನ್ ಬದಲಿಗೆ ಆಧಾರ್ ಕಾರ್ಡ್ ಬಳಸಬಹುದು.

ಪ್ಯಾನ್ ಕಡ್ಡಾಯ

ಪ್ಯಾನ್ ಕಡ್ಡಾಯ

6. ಪ್ರಸ್ತುತ, ಹೋಟೆಲ್ ಅಥವಾ ವಿದೇಶಿ ಪ್ರಯಾಣದ ರೂ. 50,000ಕ್ಕಿಂತ ಹೆಚ್ಚಿನ ಬಿಲ್‌ಗಳ ನಗದು ವಹಿವಾಟಿಗೆ ಪ್ಯಾನ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ.
7. 10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಸ್ಥಿರ ಆಸ್ತಿಯನ್ನು ಖರೀದಿಸಲು ಪ್ಯಾನ್ ಕಡ್ಡಾಯವಾಗಿದೆ.

ಪ್ಯಾನ್-ಆಧಾರ್ ಅಸ್ತಿತ್ವ

ಪ್ಯಾನ್-ಆಧಾರ್ ಅಸ್ತಿತ್ವ

8. ಪ್ಯಾನ್ ಮತ್ತು ಆಧಾರ್ ಕಾರ್ಡ್ ಎರಡೂ ಅಸ್ತಿತ್ವದಲ್ಲಿರುತ್ತವೆ. ಏಕೆಂದರೆ ಕೆಲವರು ಆಧಾರ್ ಬಳಸಲು ಬಯಸಿದ್ದರೆ, ಇನ್ನೂ ಕೆಲವರು ಪ್ಯಾನ್ ಬಳಸಲು ಬಯಸುತ್ತಾರೆ. ಹೀಗಾಗಿ ಪ್ರತಿ ಪ್ಯಾನ್‌ ಕಾರ್ಡ್ ಆಧಾರ್ ಆಗಿರಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅಭಿಪ್ರಾಯಿಸಿದ್ದಾರೆ.
9. ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರವು ಮೊದಲ ಬಜೆಟ್‌ನಲ್ಲಿ, ಕಡ್ಡಾಯವಾಗಿ 180 ದಿನಗಳವರೆಗೆ ಕಾಯದೆ ದೇಶಕ್ಕೆ ಆಗಮಿಸಿದಾಗ ಭಾರತೀಯ ಪಾಸ್‌ಪೋರ್ಟ್‌ಗಳೊಂದಿಗೆ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ನೀಡುವ ಬಗ್ಗೆಯೂ ಪರಿಗಣಿಸಲು ಸರ್ಕಾರ ಪ್ರಸ್ತಾಪಿಸಿದೆ.
10. ವಿತರಿಸಲಾದ 41 ಕೋಟಿ ಪ್ಯಾನ್‌ಗಳಲ್ಲಿ 22 ಕೋಟಿ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಜೋಡಿಸಲಾಗಿದೆ.

Read more: ಆಧಾರ್-ಪ್ಯಾನ್ ಹೆಚ್ಚಿನ ಮಾಹಿತಿಆಧಾರ್ ನಂಬರ್ ಲಾಕ್, ಅನ್‌ಲಾಕ್‌ ಮಾಡುವುದು ಹೇಗೆ?

ಆಧಾರ್ ನಂಬರ್ ಲಾಕ್, ಅನ್‌ಲಾಕ್‌ ಮಾಡುವುದು ಹೇಗೆ? ಆಧಾರ್ ನಂಬರ್ ಲಾಕ್, ಅನ್‌ಲಾಕ್‌ ಮಾಡುವುದು ಹೇಗೆ?

English summary

10 Key Things To Know About Changes In PAN, Aadhaar Rules

The government has announced a slew of changes in rules relating to Permanent Account Number (PAN) and Aadhaar.
Story first published: Wednesday, July 17, 2019, 9:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X