For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಹಣಕಾಸು ವ್ಯವಹಾರ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ..

ಪ್ರಸ್ತುತ ದಿನಗಳಲ್ಲಿ ಆನ್ಲೈನ್ ವ್ಯವಹಾರವು ಸರ್ವೇಸಾಮಾನ್ಯವಾಗಿದೆ. ಡೇಟಾ ಹ್ಯಾಕ್ ಅಥವಾ ವಂಚನೆಗಳು ತೆರಿಗೆ ಮತ್ತು ಸಾವುಗಳಂತೆ ಜೀವನದ ಭಾಗವಾಗಿ ಹಿಂಬಾಲಿಸುತ್ತಿವೆ! 2014-15ರಲ್ಲಿ NEFT RTGS ಸೈಬರ್ ವಂಚನೆ ಸುಮಾರು ರೂ. 80 ಕೋಟಿಗೆ ಕಾರಣ.

|

ಪ್ರಸ್ತುತ ದಿನಗಳಲ್ಲಿ ಆನ್ಲೈನ್ ವ್ಯವಹಾರವು ಸರ್ವೇಸಾಮಾನ್ಯವಾಗಿದೆ. ಹೆಚ್ಚಿನ ಜನರು ನಗದು ರಹಿತ ವ್ಯವಹಾರ, ಡಿಜಿಟಲ್ ಪೇಮೆಂಟ್ಸ್ ಕಡೆಗೆ ಆಕರ್ಷಿತರಾಗುತ್ತಿದ್ದು, ಆನ್ಲೈನ್ ವ್ಯವಹಾರಗಳ (ಮೊಬೈಲ್, ನೆಟ್ ಬ್ಯಾಂಕಿಂಗ್, ಇ-ವಾಲೆಟ್, ಕ್ರೆಡಿಟ್/ಡೆಬಿಟ್ ಕಾರ್ಡ್) ಮೂಲಕ ಬಿಲ್ ಪಾವತಿ ಹೆಚ್ಚಾಗಿದೆ. ಡೇಟಾ ಹ್ಯಾಕ್ ಅಥವಾ ವಂಚನೆಗಳು ತೆರಿಗೆ ಮತ್ತು ಸಾವುಗಳಂತೆ ಜೀವನದ ಭಾಗವಾಗಿ ಹಿಂಬಾಲಿಸುತ್ತಿವೆ! 2014-15ರಲ್ಲಿ NEFT RTGS ಸೈಬರ್ ವಂಚನೆ ಸುಮಾರು ರೂ. 80 ಕೋಟಿಗೆ ಕಾರಣವಾಗಿತ್ತು.
ಗುರುತು ಕಳ್ಳತನ, ಡೇಟಾ ಉಲ್ಲಂಘನೆ, ಇಮೇಲ್ ಸ್ಕ್ಯಾಮ್ಸ್, ವೈರಸ್, ಮಾಲ್ವೇರ್ ಇಂತಹ ವಂಚನೆಗಳು 24 ಗಂಟೆಗಳ ಕಾಲ ನಡೆಯುತ್ತಿರುತ್ತದೆ. ಇಷ್ಟೆಲ್ಲ ಮೋಸ, ವಂಚನೆ ಇದ್ದರೆ ಇದರಿಂದ ರಕ್ಷಣೆ ಹೇಗೆ? ಸುರಕ್ಷತಾ ಕ್ರಮಗಳೇನು? ಎನ್ನುವ ಗೊಂದಲಗಳು ನಮ್ಮಲ್ಲಿ ಇದ್ದೆ ಇರುತ್ತವೆ. ಆನ್ಲೈನ್ ಹಣಕಾಸು ಖಾತೆಯ ಸುರಕ್ಷತೆಗಾಗಿ 10 ಮಾರ್ಗಗಳನ್ನು ಅನುಸರಿಸಿ.

1. ಪಾಸ್ವರ್ಡ್ ಪ್ರಬಲವಾಗಿರಲಿ

1. ಪಾಸ್ವರ್ಡ್ ಪ್ರಬಲವಾಗಿರಲಿ

ಆನ್ಲೈನ್ ವ್ಯವಹಾರ ಕೈಗೊಳ್ಳುವಾಗ ನಿಮ್ಮ ಸುರಕ್ಷತೆ ಬಗ್ಗೆ ಎಚ್ಚರವಹಿಸಬೇಕು. ಇದಕ್ಕಾಗಿ ಪಾಸ್ವರ್ಡ್ ರಚನೆ ಪ್ರಮುಖ ರಕ್ಷಣೆ. ಇದು ವೈಯಕ್ತಿಕ ಮಾಹಿತಿಗೆ ಅನುಗುಣವಾಗಿ ಅಂದರೆ ನಿಮ್ಮ ಜನ್ಮ ದಿನಾಂಕ ಇಲ್ಲವೆ ಸಂಗಾತಿಯ ಜನ್ಮ ದಿನಕ್ಕೆ ತಕ್ಕಂತೆ ರಚಿಸಿಬೇಡಿ. ಚಿಹ್ನೆಗಳು, ಸಂಖ್ಯೆಗಳು, ಅಪ್ಪರ್ ಮತ್ತು ಲೋವರ್ ಕೇಸ್ ಸಂಖ್ಯೆಗಳನ್ನು ಬಳಸಿ ಕಡಿಮೆ ಪಾರದರ್ಶಕವಾಗಿರುವಂತೆ ನೋಡಬೇಕು. ಇದು ತುಂಬಾ ಕಷ್ಟಕರ ಎಂದೆನಿಸಿದಲ್ಲಿ ಯಾದೃಚ್ಛಿಕ ಥೀಮ್, ಪ್ರಾಣಿಗಳ ಹೆಸರು, ಹೆಸರು/ಚಿಹ್ನೆಗಳನ್ನು ಉಚ್ಚರಿಸಿ ಪಾಸ್ವರ್ಡ್ ಆಯ್ಕೆ ಮಾಡಿ.

2. ಬಿಲ್ ಪಾವತಿ ಮೇಲೆ ಮಿತಿ ಇರಲಿ

2. ಬಿಲ್ ಪಾವತಿ ಮೇಲೆ ಮಿತಿ ಇರಲಿ

ಮಾಸಿಕ ಬಿಲ್ಲು, SIPs, EMI ನಂತಹ ಅಣ್ಣ ವ್ಯವಹಾರಗಳ ಮೇಲೆ ನೀಗಾ ವಹಿಸಲು ಸಾಧ್ಯವಿರುವುದಿಲ್ಲ. ಇಂತಹ ಬಿಲ್ಲುಗಳಲ್ಲಿ ಏರುಪೇರು ಆಗುತ್ತಿರುತ್ತದೆ. ಹೀಗಾಗಿ ಸತತವಾಗಿ ಪಾವತಿ ಮಾಡಬೇಕಾದ ಬಿಲ್ ಗಳ ಮೇಲೆ ಮಿತಿ ಇರಲಿ. ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತವನ್ನು ನಿಗದಿಪಡಿಸಿ.

ವೈಫೈ ಸುರಕ್ಷಿತವಾಗಿ ಬಳಸಿ

ವೈಫೈ ಸುರಕ್ಷಿತವಾಗಿ ಬಳಸಿ

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಸಾರ್ವಜನಿಕ ವೈಫೈ ಕೇಂದ್ರಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಹೆಚ್ಚಿನ ಹ್ಯಾಕರ್ಸ್ ಗಳು ಇಂತಹ ಪಬ್ಲಿಕ್ ವೈಫೈ ಕೇಂದ್ರಗಳನ್ನು ಅವಲಂಬಿಸಿರುತ್ತಾರೆ. ನಿಮ್ಮ ಬಳಿ ಕಂಪನಿ ನೀಡಿದ ವರ್ಚುವಲ್ ಪ್ರೈವೆಟ್ ನೆಟ್ವರ್ಕ್ (VPN) ಇಲ್ಲದಿದ್ದರೆ ಬೇರೆ ಕಡೆ VPN ಸೌಲಭ್ಯ ಬಳಸುವಾಗ ಜಾಗೂರಕವಾಗಿರಬೇಕು. ಅಲ್ಲದೆ ಮನೆಯಲ್ಲಿರುವ ವೈಫೈ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ.

ಬಿಲ್ ಪಾವತಿ ಮೇಲೆ ಮಿತಿ ಇರಲಿ

ಬಿಲ್ ಪಾವತಿ ಮೇಲೆ ಮಿತಿ ಇರಲಿ

ಮಾಸಿಕ ಬಿಲ್ಲು, SIPs, EMI ನಂತಹ ಅಣ್ಣ ವ್ಯವಹಾರಗಳ ಮೇಲೆ ನೀಗಾ ವಹಿಸಲು ಸಾಧ್ಯವಿರುವುದಿಲ್ಲ. ಇಂತಹ ಬಿಲ್ಲುಗಳಲ್ಲಿ ಏರುಪೇರು ಆಗುತ್ತಿರುತ್ತದೆ. ಹೀಗಾಗಿ ಸತತವಾಗಿ ಪಾವತಿ ಮಾಡಬೇಕಾದ ಬಿಲ್ ಗಳ ಮೇಲೆ ಮಿತಿ ಇರಲಿ. ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತವನ್ನು ನಿಗದಿಪಡಿಸಿ.

5. ಪಾಸ್ವರ್ಡ್ ರಕ್ಷಣೆ

5. ಪಾಸ್ವರ್ಡ್ ರಕ್ಷಣೆ

ಸೂಕ್ಷ್ಮವಾಗಿರುವ ಪಿಡಿಎಫ್ ಅಥವಾ ವರ್ಡ್ ಡಾಕ್ಯುಮೆಂಟ್ ಗಳನ್ನು ಇಮೇಲ್ ಮೂಲಕ ಕಳುಹಿಸುವಾಗ ಪಾಸ್ವರ್ಡ್ ರಕ್ಷಣಾತ್ಮಕವಾಗಿದೆಯೇ ಎಂದು ತಿಳಿದುಕೊಳ್ಳಿ. ಇಂತಹ ಪಾಸ್ವರ್ಡ್ ಸೆಟ್ಟಿಂಗ್ ಸುಲಭವಾಗಿ ಬದಲಾಯಿಸಬಹುದು.

6. ನಿಯಮಿತವಾಗಿ ನವೀಕರಿಸಿ

6. ನಿಯಮಿತವಾಗಿ ನವೀಕರಿಸಿ

ನಿಯಮಿತ ತಂತ್ರಜ್ಞಾನ ವ್ಯವಸ್ಥೆ ಆಧಾರದ ಮೇಲೆ ಭದ್ರತಾ ಕ್ರಮಗಳನ್ನು ಮುರಿಯಲು ಸಾಧ್ಯವಾಗಿರುತ್ತದೆ. ಹೀಗಾಗಿ ನಿಯಮಿತವಾಗಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪಾಸ್ವರ್ಡ್ ಗಳನ್ನು ನವೀಕರಿಸುತ್ತಿರಬೇಕು. ಇದರಿಂದ ನಿಮ್ಮ ಕಂಪ್ಯೂಟರ್ ನ್ನು ಅಪ್ಡೇಟ್ ಮಾಡುತ್ತಿರುವುದರಿಂದ ವೈರಸ್ ಮತ್ತು ಭದ್ರತಾ ಬೆದರಿಕೆಗಳಿಂದ ಸುರಕ್ಷಿತವಾಗಿಡಬಹುದು.

7. ಸ್ಮಾರ್ಟ್ ಫೋನ್ ಮತ್ತು ಟಾಬ್ಲೆಟ್ ಗಳನ್ನು ಸಂರಕ್ಷಿಸಿ

7. ಸ್ಮಾರ್ಟ್ ಫೋನ್ ಮತ್ತು ಟಾಬ್ಲೆಟ್ ಗಳನ್ನು ಸಂರಕ್ಷಿಸಿ

ಸ್ಮಾರ್ಟ್ ಫೋನ್ ಮತ್ತು ಟಾಬ್ಲೆಟ್ ಎಲ್ಲರ ಮೂಲ ಅಗತ್ಯತೆಗಳಾಗಿದ್ದು, ಇತ್ತಿಚಿನ ದಿನಗಳಲ್ಲಿ ಎಲ್ಲವೂ ನಮ್ಮ ಕೈ ಬೆರಳ ತುದಿಯಲ್ಲಿದೆ. ನಿಮ್ಮ ಬ್ಯಾಂಕಿಂಗ್ ಆಪ್, ಡಿಮಾಟ್ ಖಾತೆ, ಇಮೇಲೆ ಸಂಪರ್ಕ ಎಲ್ಲವೂ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವುದರಿಂದ ಅದರ ಸಂರಕ್ಷಣೆ ತುಂಬಾ ಮುಖ್ಯ. ಫೈರ್ ವಾಲ್ಸ್ ಮತ್ತು ಆಂಟಿ ವೈರಸ್ ಪಡೆಯಲು ಮರೆಯಬೇಡಿ.

8. ಡಿವೈಸ್ ಸ್ವಚ್ಛವಾಗಿಡಿ

8. ಡಿವೈಸ್ ಸ್ವಚ್ಛವಾಗಿಡಿ

ಹಳೆ ಸಾಧನಗಳನ್ನು ಮಾರಾಟ ಮಾಡುವಾಗ ಅಥವಾ ಹೊರ ಹಾಕಲು ಬಯಸಿದಾಗ ನಿಮ್ಮ ವೈಯಕ್ತಿ ಡೇಟಾಗಳನ್ನು ಅಳಸಿ ಹಾಕಿ. ಕೆಲ ಸಾಧನಗಳು ಪ್ರಿ-ಇನ್ ಸ್ಟಾಲ್ಡ್ ಅಪ್ಲಿಕೇಶನ್ ಹೊಂದಿರುವುದರಿಂದ ಡೇಟಾ ನಾಶಪಡಿಸಿ ಇಲ್ಲವೆ ಲಾಕ್ ಮಾಡಿ.

9. OTP ಆಯ್ಕೆ ಮಾಡಿ

9. OTP ಆಯ್ಕೆ ಮಾಡಿ

ಒಟಿಪಿ (One Time Password) ಪಾಸ್ವರ್ಡ್ ರಕ್ಷಣೆಗೆ ಉತ್ತಮವಾದದ್ದು. ಆನ್ಲೈನ್ ಬ್ಯಾಂಕಿಂಗ್ ಖಾತೆ ಪಾಸ್ವರ್ಡ್ ಸಂದರ್ಭದಲ್ಲಿ ಇದು ತುಂಬಾ ಉಪಯುಕ್ತ. ಹೀಗಾಗಿ OTP ಆಯ್ಕೆ ಮಾಡಲು ಮರೆಯಬೇಡಿ. ಪೋಟೋ ಕೃಪೆ: ದಿ ಎಕನಾಮಿಕ್ ಟೈಮ್ಸ್

10. ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಿರಲಿ

10. ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಿರಲಿ

ಗೂಗಲ್, ಪೇಸ್ಬುಕ್ ನಂತಹ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದ ವಂಚಕರಿಗೆ ಸಹಾಯವಾಗುತ್ತದೆ. ಆ ಮೂಲಕ ನಿಮ್ಮ ಖಾಯೆಗಳಿಗೆ ಕನ್ನ ಹಾಕಬಹುದು. ನಿಮ್ಮ ಖಾಸಗಿ ಸಂಗತಿಗಳ ಬಗ್ಗೆ ಜಾಗೂರಕರಾಗಿರಿ. ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ ನೀಡದಿರಿ.

Read more about: online banking money frauds
English summary

how make your online financial accounts secure

Here is a list of 10 commandments to better online protection. Follow them diligently and you'll be e-safe.
Story first published: Monday, July 15, 2019, 10:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X