For Quick Alerts
ALLOW NOTIFICATIONS  
For Daily Alerts

ಪಿಎಂ ಕಿಸಾನ್ ಪಿಂಚಣಿ ಯೋಜನೆ ನೋಂದಣಿ ಆರಂಭ, ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರ ರೈತ ಪಿಂಚಣಿ ಯೋಜನೆ (ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ) ನೋಂದಣಿಯನ್ನು ಪ್ರಾರಂಭಿಸಿದೆ. ಕೃಷಿ ಸಚಿವಾಲಯ, ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯಡಿ ಆಗಸ್ಟ್ 9 ರಿಂದ ರೈತರ ನೋಂದಣಿ ಪ್ರಾರಂಭಿಸಿದೆ.

|

ರೈತರ ಕಲ್ಯಾಣಕ್ಕಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಪರಿಚಯಿಸಿವೆ. ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಪಿಂಚಣಿ ಯೋಜನೆ (ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ) ನೋಂದಣಿಯನ್ನು ಪ್ರಾರಂಭಿಸಿದೆ. ಕೃಷಿ ಸಚಿವಾಲಯ, ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯಡಿ ಆಗಸ್ಟ್ 9 ರಿಂದ ರೈತರ ನೋಂದಣಿ ಪ್ರಾರಂಭಿಸಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸ ರಾಜ್ಯ ಸರ್ಕಾರದೊಂದಿಗೆ ನಡೆಯುತ್ತಿದೆ.

ನೋಂದಣಿ ಆರಂಭ

ನೋಂದಣಿ ಆರಂಭ

ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ (ಪಿಎಂಕೆಪಿವೈ) ಅಡಿಯಲ್ಲಿ 5 ಕೋಟಿ ರೈತರಿಗೆ 60 ವರ್ಷ ದಾಟಿದ ನಂತರ ರೂ. 3000 ಪಿಂಚಣಿ ಸಿಗಲಿದೆ. ಒಂದು ವೇಳೆ ಫಲಾನುಭವ ಪಡೆಯಬೇಕಿದ್ದ ರೈತ ಸಾವನ್ನಪ್ಪಿದ್ದರೆ ಅವರ ಪತ್ನಿಗೆ ಶೇ. 50ರಷ್ಟು ಪ್ರಯೋಜನ ಸಿಗಲಿದೆ. ಭಾರತಿಯ ವಿಮಾ ನಿಗಮ (ಎಲ್ಐಸಿ) ಇದರ ನಿರ್ವಹಣೆಯ ಜವಾಬ್ಧಾರಿ ಹೊರಲಿದೆ. ಈಗಾಗಲೇ ರೈತರು ತಮ್ಮ ಹೆಸರನ್ನು ನೋಂದಾಯಿಸಲು ಪ್ರಾರಂಭಿಸಿದ್ದಾರೆ.

ಸರ್ಕಾರದಿಂದ ಅರ್ಧ ಹಣ

ಸರ್ಕಾರದಿಂದ ಅರ್ಧ ಹಣ

ಮಾಸಿಕವಾಗಿ ರೈತರು ಪಾವತಿಸುವ ಮೊತ್ತದಷ್ಟೇ ಸರ್ಕಾರವು ಹಣವನ್ನು ಪಾವತಿ ಮಾಡಲಿದೆ. ಅಂದರೆ ರೈತರು ಠೇವಣಿ ಇರಿಸುವ ಕಂತಿಗೆ ಸಮನಾದ ಕಂತು ಮೊತ್ತ ಸರ್ಕಾರ ಜಮಾ ಮಾಡುತ್ತದೆ. ರೈತರಿಗೆ 60 ವರ್ಷದ ನಂತರ ಪಾವತಿಸಿದ ಹಣ ಹಾಗೂ ಅದರ ಬಡ್ಡಿ ಸಿಗಲಿದೆ. ಯಾರಾದರೂ ಮಧ್ಯದಲ್ಲಿಯೇ ಯೋಜನೆಯಿಂದ ಹೊರ ಬರಲು ಬಯಸಿದರೆ ಠೇವಣಿ ಮೊತ್ತ ಮತ್ತು ಬಡ್ಡಿದರ ಪಡೆಯುತ್ತಾರೆ.

ರೈತ ಸಾವನ್ನಪ್ಪಿದರೆ?

ರೈತ ಸಾವನ್ನಪ್ಪಿದರೆ?

ಒಂದು ವೇಳೆ 60 ವರ್ಷಗಳ ಒಳಗಾಗಿ ರೈತ ಸಾವನ್ನಪ್ಪಿದರೆ ಪತ್ನಿಗೆ ಪ್ರತಿ ತಿಂಗಳು ರೂ. 1500 ಪಿಂಚಣಿ ಸಿಗಲಿದೆ.
60 ವರ್ಷಗಳ ನಂತರ ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 3 ಸಾವಿರ ರೂಪಾಯಿ ಸಿಗಲಿದೆ.

ಪಿಎಂ ಕಿಸಾನ್ ಪಿಂಚಣಿ ನೋಂದಣಿ ಹೇಗೆ?

ಪಿಎಂ ಕಿಸಾನ್ ಪಿಂಚಣಿ ನೋಂದಣಿ ಹೇಗೆ?

ರೈತರು ಕಿಸಾನ್ ಕಾಲ್ ಸೆಂಟರ್ ನಂಬರ್ 1800-180-1551 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇದಲ್ಲದೆ, ನಿಮ್ಮ ಭಾಗದ ಸಾಮಾನ್ಯ ಸೇವಾ ಕೇಂದ್ರ (CSC) ಮತ್ತು ರಾಜ್ಯ ನೋಡಲ್ ಅಧಿಕಾರಿ (ಪಿಎಂ-ಕಿಸಾನ್) ಬಳಿ ನಿಮ್ಮ ಹೆಸರನ್ನು ನೋಂದಾಯಿಸಬಹುದು.

ನಿಯಮ-ಅರ್ಹತೆಗಳೇನು?

ನಿಯಮ-ಅರ್ಹತೆಗಳೇನು?

- ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದ್ದು, ಇದರಲ್ಲಿ 18 ರಿಂದ 40 ವರ್ಷ ವಯಸ್ಸಿನವರು ಇರುತ್ತಾರೆ.
- ಸಣ್ಣ ಮತ್ತು ಅತಿಸಣ್ಣ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ.
- ಈ ಯೋಜನೆ ಮೊದಲ ಮೂರು ವರ್ಷಗಳಲ್ಲಿ 5 ಕೋಟಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ತಲುಪುವ ಗುರಿ ಹೊಂದಿದೆ.
- ಈ ಯೋಜನೆಯನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ನಿರ್ವಹಿಸಲಿದೆ.
- ಈ ಯೋಜನೆಗಾಗಿ ಕೇಂದ್ರ ಸರ್ಕಾರ ಮೂರು ವರ್ಷಗಳ ಕಾಲಾವಧಿಗೆ ರೂ. 10774.50 ಕೋಟಿ ಮೀಸಲಿಟ್ಟಿದೆ.
- ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು ಈ ಯೋಜನೆಗೆ ನೇರವಾಗಿ ಸೇರಬಹುದು.
- ಫಲಾನುಭವಿಗೆ ತಿಂಗಳಿಗೆ ರೂ. 3 ಸಾವಿರ ಪಿಂಚಣಿ ಸಿಗುತ್ತದೆ.
- ಈ ಯೋಜನೆಯಡಿ, ತಿಂಗಳಿಗೆ ರೂ. 55 ರಿಂದ 100 ನಾಮಮಾತ್ರ ಕಂತು ಠೇವಣಿ ಇಡಬೇಕಾಗುತ್ತದೆ.
- ರೈತರು ಠೇವಣಿ ಇರಿಸುವ ಕಂತಿಗೆ ಸಮನಾದ ಕಂತು ಮೊತ್ತ ಸರ್ಕಾರ ಜಮಾ ಮಾಡುತ್ತದೆ.
- ಪಿಂಚಣಿದಾರರ ಮರಣದ ನಂತರ, ಅವರ ಸಂಗಾತಿಯು ಪಿಂಚಣಿಯ ಶೇ. 50 ರಷ್ಟು ಮೊತ್ತ ಪಡೆಯಬಹುದು.
- ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಈ ಯೋಜನೆಗೆ ಸೇರುವ ಮೂಲಕ ನೇರವಾಗಿ ವಿಮಾ ಕಂತು ಪಾವತಿಸಬಹುದು.

ದಾಖಲಾತಿಗಳೇನು?

ದಾಖಲಾತಿಗಳೇನು?

- ಆಧಾರ್ ಕಾರ್ಡ್ - ಅರ್ಜಿ ಸಲ್ಲಿಸುವ ರೈತರಿಗೆ ಆಧಾರ್ ಕಾರ್ಡ್ ಇರುವುದು ಅವಶ್ಯಕ.
- ಆದಾಯ ದಾಖಲಾತಿಯನ್ನು ರೈತರು ಒದಗಿಸಬೇಕಾಗುತ್ತದೆ. ಕೃಷಿ ಭೂಮಿ ವಿವರ ನೀಡಬೇಕು.
- ಉಳಿತಾಯ ಖಾತೆ/ಜನ ಧನ್ ಖಾತೆ- ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು.
- ರೈತರು ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು.
- ರೇಷನ್ ಕಾರ್ಡ್, ಎರಡು ಪೋಟೋಗಳು

ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ? ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

English summary

PM Kisan Pension Registration, How to Apply?

PM kisan pension scheme registartion starts from agust 9th. given here the details about how to apply for pradhan mantri kisan pension yojana.
Story first published: Monday, August 12, 2019, 10:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X