For Quick Alerts
ALLOW NOTIFICATIONS  
For Daily Alerts

5G ಪರಿಣಾಮ: 12 ತಿಂಗಳಲ್ಲೇ ಟೆಲಿಕಾಂ ಉದ್ಯೋಗ ಶೇ.33.7 ಏರಿಕೆ

|

ದೇಶದಲ್ಲಿ ಈಗ 5ಜಿ ಯುಗ ಆರಂಭವಾಗಿದೆ. ಈಗಾಗಲೇ 5ಜಿ ಸೇವೆ ಆರಂಭವಾಗಿದೆ. ವಿವಿಧ ಟೆಲಿಕಾಂ ಸಂಸ್ಥೆಗಳ ನಡುವೆ ಸ್ಪರ್ಧೆಯಂತಾಗಿದೆ ಈ 5ಜಿ. ಈ ನಡುವೆ ಕಳೆದ 12 ತಿಂಗಳಿನಲ್ಲಿ ದೇಶದಲ್ಲಿ ಟೆಲಿಕಾಂ ಉದ್ಯೋಗವು ಶೇಕಡ 33.7ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದಕ್ಕೆ ಮುಖ್ಯ ಕಾರಣ ಟೆಲಿಕಾಂ ದುನಿಯಾಕ್ಕೆ 5ಜಿ ಎಂಟ್ರಿ.

ಸೆಪ್ಟೆಂಬರ್ 2021ರಿಂದ ಸೆಪ್ಟೆಂಬರ್ 2022ರ ನಡುವೆ 5ಜಿಗಾಗಿ ಹಾಗೂ ಟೆಲಿಕಮ್ಯೂನಿಕೇಷನ್ ಕೆಲಸಕ್ಕಾಗಿ ನೇಮಕಾತಿಯು ಶೇಕಡ 33.7ರಷ್ಟು ಏರಿಕೆಯಾಗಿದೆ. ಹಲವಾರು ಪ್ರಮುಖ ಸಂಸ್ಥೆಗಳು 5ಜಿ ಸೇವೆ, ತಾಂತ್ರಿಕ ಕಾರ್ಯಕ್ಕಾಗಿ ಉದ್ಯೋಗಿಗಳ ನೇಮಕಾತಿ ನಡೆಸುತ್ತಿದ್ದಾರೆ.

25 ಸಾವಿರ ಟೆಲಿಕಾಂ ಟವರ್ ಸ್ಥಾಪನೆ ಸರ್ಕಾರ ಎಷ್ಟು ಖರ್ಚು ಮಾಡುತ್ತಿದೆ?25 ಸಾವಿರ ಟೆಲಿಕಾಂ ಟವರ್ ಸ್ಥಾಪನೆ ಸರ್ಕಾರ ಎಷ್ಟು ಖರ್ಚು ಮಾಡುತ್ತಿದೆ?

ಈ ಬಗ್ಗೆ ಮಾಹಿತಿ ನೀಡಿದ ಇಂಡಿಯಾ ಕೆರಿಯರ್ ಎಕ್ಸ್‌ಪರ್ಟ್ ಆದ ಸುಮಿತ್ರಾ ಚಂದ್, "5ಜಿ ಅಳವಡಿಕೆಗಾಗಿ ಕಾರ್ಯಗಳು ನಡೆಯುತ್ತಿದೆ. ಒಂದು ನಿಗದಿತ ಸಮಯದಲ್ಲಿ ದೇಶದಾದ್ಯಂತ 5ಜಿ ಸೇವೆ ಆರಂಭಕ್ಕಾಗಿ ಕೆಲಸಗಳು ನಡೆಯುತ್ತಿದೆ. ಆದ್ದರಿಂದಾಗಿ ಮುಂದಿನ ಕೆಲವು ತ್ರೈಮಾಸಿಕಗಳವರೆಗೆ ಟೆಲಿಕಾಂ ಕ್ಷೇತ್ರದಲ್ಲಿ ನೇಮಕಾತಿ ಹೆಚ್ಚಾಗುತ್ತ ಹೋಗುವ ನಿರೀಕ್ಷೆ ಇದೆ," ಎಂದು ತಿಳಿಸಿದ್ದಾರೆ.

5G ಪರಿಣಾಮ: 12 ತಿಂಗಳಲ್ಲೇ ಟೆಲಿಕಾಂ ಉದ್ಯೋಗ ಶೇ.33.7 ಏರಿಕೆ

ಇನ್ನು ನುರಿತ ತಂತ್ರಜ್ಞರಿಗಾಗಿ ಹುಡುಕಾಟ ಹೆಚ್ಚಾಗಬಹುದು. ಹೊಸ ತಂತ್ರಜ್ಞಾನದ ಅಳವಡಿಕೆಗೆ ತಜ್ಞರ ಸಹಾಯ ಎಲ್ಲ ಸಂಸ್ಥೆಗಳಿಗೆ ಅಗತ್ಯವಾಗಿದೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಹೊಸ ತಂತ್ರಜ್ಞಾನದಲ್ಲಿ ಸುರಕ್ಷಿತ ಬಳಕೆಯ ಬಗ್ಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಕೂಡಾ ತಜ್ಞರು ವಿವರಿಸಿದ್ದಾರೆ.

5G in India : 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ, ಇಲ್ಲಿದೆ ಪ್ರಮುಖ ಮಾಹಿತಿ5G in India : 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ, ಇಲ್ಲಿದೆ ಪ್ರಮುಖ ಮಾಹಿತಿ

ದೊಡ್ಡ ಹುದ್ದೆಗಳ ವೇತನ ನೋಡಿ!

ಇನ್ನು ಗ್ರಾಹಕ ಸೇವಾ ಪ್ರತಿನಿಧಿಗಳು ಹಾಗೂ ಆಪರೇಷನ್ ಅಸೋಸಿಯೇಟ್‌ಗಳ ಉದ್ಯೋಗದಲ್ಲಿ ಕಳೆದ ಒಂದು ತಿಂಗಳಿನಲ್ಲಿಯೇ ಕ್ರಮವಾಗಿ ಶೇಕಡ 13.91 ಹಾಗೂ ಶೇಕಡ 8.22ರಷ್ಟು ಬೇಡಿಕೆ ಹೆಚ್ಚಾಗಿದೆ. ಇನ್ನು ದೊಡ್ಡ ಹುದ್ದೆಗಳಾದ ಟೆಕ್ನಿಕಲ್ ಸಪೋರ್ಟ್, ಬಿಪಿಒ ಎಕ್ಸಿಕ್ಯೂಟಿವ್, ಕಸ್ಟಮರ್ ಸರ್ವಿಸ್ ಕಾರ್ಯಕ್ಕೆ ಕ್ರಮವಾಗಿ 3,53,298 ರೂಪಾಯಿ, 3,29,520 ರೂಪಾಯಿ ಹಾಗೂ 3,06,680 ರೂಪಾಯಿ ವೇತನ ಲಭ್ಯವಾಗಲಿದೆ. ಈ ವರದಿಯು ಕಳೆದ ಸೆಪ್ಟೆಂಬರ್‌ನಿಂದ ಈ ಸೆಪ್ಟೆಂಬರ್‌ವರೆಗಿನ ಅಂಕಿ ಅಂಶಗಳನ್ನು ಆಧಾರಿಸಿದೆ.

ಸೈಬರ್ ಸೆಕ್ಯುರಿಟಿ ಉದ್ಯೋಗ ಹೆಚ್ಚಳ

ಇನ್ನು ಹೆಚ್ಚಾಗಿ ಆನ್‌ಲೈನ್ ವಹಿವಾಟುಗಳು ನಡೆಯುತ್ತಿದೆ. ಡಿಜಿಟಲ್ ಪಾವತಿಗಳು ಹೆಚ್ಚುತ್ತಿವೆ. ಈ ನಡುವೆ ಭದ್ರತಾ ಸಮಸ್ಯೆಯೂ ಸಾರ್ವಕಾಲಿಕವಾಗಿ ಹೆಚ್ಚಾಗಿದೆ. ಇದಕ್ಕೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆಗಿರುವ ಆನ್‌ಲೈನ್ ವಂಚನೆಗಳೇ ಸಾಕ್ಷಿಯಾಗಿದೆ. ಆಗಸ್ಟ್ 2019 ರಿಂದ ಆಗಸ್ಟ್ 2022 ರ ನಡುವೆ "ಸೈಬರ್ ಸೆಕ್ಯುರಿಟಿ" ಗಾಗಿ ಉದ್ಯೋಗ ಪೋಸ್ಟಿಂಗ್‌ಗಳು ಶೇಕಡಾ 81 ರಷ್ಟು ಬೆಳೆದಿದೆ.

ಆಗಸ್ಟ್ 2019 ರಿಂದ ಆಗಸ್ಟ್ 2022 ರ ನಡುವೆ ಭದ್ರತೆಯಲ್ಲಿ ಈಗಾಗಲೇ ಶೇಕಡಾ 25.5 ರಷ್ಟು ವ್ಯತ್ಯಾಸವಿದೆ. ಇದಕ್ಕೆ ಮುಖ್ಯ ಕಾರಣ 5ಜಿ ಸೇವೆಯಾಗಿದೆ. 5ಜಿಯಿಂದಾಗಿ ಟೆಲಿಕಾಂ ಉದ್ಯೋಗ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.

English summary

5G Effect: Telecom Jobs Rises 33.7 Percent in India in Last 12 Months

Job postings for 5G and telecommunications have witnessed significant uptick in the last 12 months, as enterprises are looking at 5G adoption at an accelerated pace, says a report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X