For Quick Alerts
ALLOW NOTIFICATIONS  
For Daily Alerts

5ಜಿ ಸ್ಪೆಕ್ಟ್ರಮ್ ಹರಾಜಿಗೆ ಅದಾನಿ ಸೇರಿ 4 ಅರ್ಜಿ: ಅಧಿಕೃತ ಪಟ್ಟಿ ಬಿಡುಗಡೆ

|

5ಜಿ ಹರಾಜಿಗೆ ಸಂಬಂಧಿತ ಅಧಿಕೃತ ಮಾಹಿತಿಯನ್ನು ಟೆಲಿಕಾಂ ಇಲಾಖೆಯು ನೀಡಿದೆ. ಈವರೆಗೆ ಅದಾನಿ ಡೇಟಾ ನೆಟ್‌ವರ್ಕ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಮ್, ವೊಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಅರ್ಜಿ ಸಲ್ಲಿಕೆ ಮಾಡಿದೆ.

 

ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜಾಗಿದೆ. ಈ ವರ್ಷ ಬೆಂಗಳೂರು ಸೇರಿ ಪ್ರಮುಖ 13 ನಗರಗಳಲ್ಲಿ 5ಜಿ ಸ್ಪೆಕ್ಟ್ರಮ್ ಆರಂಭದ ಬಗ್ಗೆ ಈ ಹಿಂದೆಯೇ ವರದಿ ಆಗಿದ್ದವು. ಪ್ರಮುಖವಾಗಿ 5ಜಿ ನೆಟ್‌ವರ್ಕ್‌ ನಮ್ಮ ನೆಟ್‌ವರ್ಕ್ ಅನ್ನು ಇನ್ನಷ್ಟು ವೇಗಗೊಳಿಸಲಿದೆ. ಇದು ಮೂರು ಬಾಂಡ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ.

ಕಡಿಮೆ, ಮಧ್ಯಮ ಹಾಗೂ ಹೆಚ್ಚು ಫ್ರಿಕ್ವನ್ಸಿಯಲ್ಲಿ ಇದು ಕಾರ್ಯನಿರ್ವಹಣೆ ಮಾಡಲಿದೆ. ಕಡಿಮೆ ಫ್ರಿಕ್ವನ್ಸಿಯಲ್ಲಿ 100 Mbps ನೆಟ್‌ವರ್ಕ್ ಸ್ಪೀಡ್‌ ಲಿಮಿಟ್‌ ಇರಲಿದೆ. ಇನ್ನು ಹೆಚ್ಚು ಫ್ರಿಕ್ವನ್ಸಿಯಲ್ಲಿ 20 Gbps ಗೂ ವರೆಗೆ ನೆಟ್‌ವರ್ಕ್ ಸ್ಪೀಡ್‌ ಇರಲಿದೆ. ನೀವು ಈ ಬಗ್ಗೆ ತಿಳಿಯಬೇಕಾದ ಪ್ರಮುಖ ಹತ್ತು ಮಾಹಿತಿ ಇಲ್ಲಿದೆ ಮುಂದೆ ಓದಿ...

 ಹರಾಜು ಯಾವಾಗ?

ಹರಾಜು ಯಾವಾಗ?

1. ಈ ಪಟ್ಟಿಯನ್ನು ಬರೀ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ಈ ಅರ್ಜಿಯನ್ನು ಪ್ರಕ್ರಿಯೆ ಮಾಡಲಾಗಿದೆ ಅಥವಾ ಇದು ಪೂರ್ವ ಅರ್ಹತೆ ಪಡೆದಿದೆ ಎಂಬ ಸೂಚನೆಯಲ್ಲ.
2. ಜುಲೈ 26ರಂದು 5ಜಿ ಸ್ಪೆಕ್ಟ್ರಮ್ ಹರಾಜು ನಡೆಯಲಿದೆ
3. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ.

 

 ಟ್ರಾಯ್ ಶಿಫಾರಸು ಮಾಡಿದ ಬೆಲೆ

ಟ್ರಾಯ್ ಶಿಫಾರಸು ಮಾಡಿದ ಬೆಲೆ

4. ಹರಾಜು ಸುಮಾರು 4.3 ಲಕ್ಷ ಕೋಟಿ ಮೌಲ್ಯದ 72,097.85 MHz ಸ್ಪೆಕ್ಟ್ರಮ್‌ನದ್ದು ಆಗಿದೆ.
5. ಸಂಸತ್ತು ಕಳೆದ ತಿಂಗಳು 5ಜಿ ಸ್ಪೆಕ್ಟ್ರಮ್ ಹರಾಜಿಗೆ ಅನುಮೋದನೆ ನೀಡಿದೆ. ಸೆಕ್ಟರ್ ರೆಗ್ಯುಲೇಟರ್ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಶಿಫಾರಸು ಮಾಡಿದ ಮೀಸಲು ಬೆಲೆಯಲ್ಲಿ ಹರಾಜಿಗೆ ಅನುಮೋದನೆ ನೀಡಿದೆ.

 

 ಪಾವತಿ ವಿಧಾನ ಹೇಗೆ?
 

ಪಾವತಿ ವಿಧಾನ ಹೇಗೆ?

6. ಬಿಡ್ಡರ್‌ಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾವತಿ ನಿಯಮವನ್ನು ಸರಳೀಕರಣ ಮಾಡಲಾಗಿದೆ.
7. ಬಿಡ್ ಗೆದ್ದ ಸಂಸ್ಥೆಯು ಮುಂಗಡ ಪಾವತಿ ಮಾಡಬೇಕೆಂಬ ನಿಯಮವನ್ನು ಕೂಡಾ ಸರಳ ಮಾಡಲಾಗಿದೆ
8. 20 ಕಂತಿನ ಮೂಲಕ ಬಿಡ್ ಗೆದ್ದವರು ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ.

 ಅದಾನಿ ಸಂಸ್ಥೆ ಬಿಡ್ ಗೆಲುತ್ತಾ?

ಅದಾನಿ ಸಂಸ್ಥೆ ಬಿಡ್ ಗೆಲುತ್ತಾ?

9. ಅದಾನಿ ಸಂಸ್ಥೆಯು ಈ ಬಿಡ್‌ನಲ್ಲಿ ಭಾಗಿಯಾಗಿರುವ ಕಾರಣದಿಂದಾಗಿ ಭಾರೀ ಸ್ಪರ್ಧೆ ಇರುವ ಸಾಧ್ಯತೆ ಇದೆ.
10. ಅದಾನಿ ಸಂಸ್ಥೆಯೇ ಈ ಬಿಡ್‌ ಅನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary

5G spectrum auction Official list released: 4 applicants, including Adani in List

The Department of Telecom has said that applications have been received Adani Data Networks Ltd, Reliance Jio Infocomm, Vodafone Idea Ltd and Bharti Airtel Ltd for participation in upcoming 5G auction.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X