For Quick Alerts
ALLOW NOTIFICATIONS  
For Daily Alerts

ನವಜಾತ ಶಿಶುಗಳಿಗೆ ಶೀಘ್ರವೇ ಜನನ ಪ್ರಮಾಣಪತ್ರದ ಜೊತೆ ಆಧಾರ್!

|

ಜನನ ಪ್ರಮಾಣಪತ್ರಗಳ ಜೊತೆಗೆ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಪ್ರಸ್ತುತ ಈ ಸೌಲಭ್ಯವು 16 ರಾಜ್ಯಗಳಲ್ಲಿ ಇದೆ. ಆದರೆ ಭಾರತದ ಎಲ್ಲ ರಾಜ್ಯಗಳಿಗೆ ಶೀಘ್ರ ವಿಸ್ತರಣೆ ಮಾಡಲಾಗುತ್ತದೆ ಎಂದು ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

ಪ್ರಸ್ತುತ, 16 ರಾಜ್ಯಗಳು ಆಧಾರ್ ಲಿಂಕ್ಡ್ ಜನನ ನೋಂದಣಿಯನ್ನು ಮಾಡುತ್ತದೆ. ಈ ಪ್ರಕ್ರಿಯೆಯು ಒಂದು ವರ್ಷದ ಹಿಂದೆ ಪ್ರಾರಂಭವಾಗಿದ್ದು, ವಿವಿಧ ರಾಜ್ಯಗಳಲ್ಲಿ ಆರಂಭ ಮಾಡಲಾಗಿದೆ. ಇನ್ನು ಉಳಿದ ರಾಜ್ಯಗಳಲ್ಲಿಯೂ ಈ ಪ್ರಕ್ರಿಯೆ ಆರಂಭ ಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.

ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?

ಆಧಾರ್ ಸಂಖ್ಯೆಗಳನ್ನು ನೀಡುವ ಸರ್ಕಾರಿ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಈ ಸೌಲಭ್ಯ ಆರಂಭಿಸುವ ನಿರೀಕ್ಷೆಯನ್ನು ಹೊಂದಿದೆ. ಮುಖ್ಯವಾಗಿ ಪೋಷಕರ ಅನುಕೂಲಕ್ಕಾಗಿ ನವಜಾತ ಶಿಶುಗಳಿಗೆ ಜನನ ಪ್ರಮಾಣಪತ್ರದ ಜೊತೆ ಆಧಾರ್ ನೋಂದಣಿ ಮಾಡಲು ನಿರ್ಧಾರ ಮಾಡಲಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಮಗುವಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ಅಪ್‌ಡೇಟ್

ಮಗುವಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ಅಪ್‌ಡೇಟ್

5 ವರ್ಷಗಳವರೆಗಿನ ಮಕ್ಕಳಿಗೆ, ಯಾವುದೇ ಬಯೋಮೆಟ್ರಿಕ್ಸ್ ಪ್ರಕ್ರಿಯೆ ಮಾಡಲು ಸಾಧ್ಯವಾಗುವುದಿಲ್ಲ. ಮಗುವಿನ ಯುಐಡಿಯನ್ನು ಜನಸಂಖ್ಯಾ ಮಾಹಿತಿ ಮತ್ತು ಅವರ ಪೋಷಕರ ಯುಐಡಿಯೊಂದಿಗೆ ಲಿಂಕ್ ಮಾಡಲಾದ ಮುಖದ ಛಾಯಾಚಿತ್ರದ ಆಧಾರದ ಮೇಲೆ ಪ್ರಕ್ರಿಯೆಗೊಳಿಸಲಾಗುತ್ತದೆ. ಆದ್ದರಿಂದ, ಮಗುವಿಗೆ 5 ಮತ್ತು 15 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಅಪ್‌ಡೇಟ್ ಅಗತ್ಯವಿದೆ. (ಹತ್ತು ಬೆರಳುಗಳು, ಐರಿಸ್ ಮತ್ತು ಮುಖದ ಛಾಯಾಚಿತ್ರ).

 ಸರ್ಕಾರಿ ಯೋಜನೆಗೆ ಆಧಾರ್ ಕಡ್ಡಾಯ

ಸರ್ಕಾರಿ ಯೋಜನೆಗೆ ಆಧಾರ್ ಕಡ್ಡಾಯ

ಸುಮಾರು ಒಂದು ಸಾವಿರಕ್ಕೂ ಅಧಿಕ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವವನ್ನು ನಾವು ಪಡೆಯಬೇಕಾದರೆ ಆಧಾರ್ ನಮಗೆ ತೀರಾ ಅಗತ್ಯವಾಗಿದೆ. ಯೋಜನಗಳ ವರ್ಗಾವಣೆ ಮತ್ತು ಡಿ-ಡಪ್ಲಿಕೇಶನ್ ಅನ್ನು ಖಚಿತಪಡಿಸಿಕೊಳ್ಳಲು ಆಧಾರ್ ಅನ್ನು ಬಳಸಿಕೊಳ್ಳಲಾಗುತ್ತದೆ. ಇವುಗಳಲ್ಲಿ, ಸುಮಾರು 650 ಯೋಜನೆಗಳು ರಾಜ್ಯ ಸರ್ಕಾರಗಳು ಮತ್ತು 315 ಕೇಂದ್ರ ಸರ್ಕಾರ ನಡೆಸುವ ಯೋಜನೆಗಳು ಆಗಿದೆ. ಇವೆಲ್ಲವೂ ಆಧಾರ್ ಮತ್ತು ದರ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸುತ್ತವೆ.

ಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿಏನಿದು ಉದ್ಯೋಗ ಆಧಾರ್, ಪಡೆಯುವುದು ಹೇಗೆ?, ಇಲ್ಲಿದೆ ಪ್ರಮುಖ ಮಾಹಿತಿ

 134 ಕೋಟಿ ಆಧಾರ್‌ ನೀಡಲಾಗಿದೆ!

134 ಕೋಟಿ ಆಧಾರ್‌ ನೀಡಲಾಗಿದೆ!

ಇಲ್ಲಿಯವರೆಗೆ 134 ಕೋಟಿ ಆಧಾರ್‌ಗಳನ್ನು ನೀಡಲಾಗಿದೆ. ಕಳೆದ ವರ್ಷ, ಈ 12-ಅಂಕಿಯ ಬಯೋಮೆಟ್ರಿಕ್ ವ್ಯವಸ್ಥೆಗೆ ಸುಮಾರು 20 ಕೋಟಿ ಕಾರ್ಡ್‌ ಸೇರ್ಪಡೆಯಾಗಿದೆ. ಅದರೆ ಅಷ್ಟು ಜನರು ಹೊಸ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 4 ಕೋಟಿ ಹೊಸ ದಾಖಲಾತಿಗಳಾಗಿದ್ದು, ಇದರಲ್ಲಿ ನವಜಾತ ಶಿಶುಗಳು ಮತ್ತು 18 ವರ್ಷದೊಳಗಿನ ಮಕ್ಕಳು ಸೇರಿದ್ದಾರೆ. ಕೇವಲ 30 ಲಕ್ಷ ಹೊಸ ವಯಸ್ಕ ದಾಖಲಾತಿಯಾಗಿದೆ.

 ಜನನ ಪ್ರಮಾಣಪತ್ರದ ಕಂಪ್ಯೂಟರೀಕರಣ

ಜನನ ಪ್ರಮಾಣಪತ್ರದ ಕಂಪ್ಯೂಟರೀಕರಣ

ಜನನದ ಸಮಯದಲ್ಲಿ ಜನನ ಪ್ರಮಾಣಪತ್ರದೊಂದಿಗೆ ಆಧಾರ್ ನೀಡಲು ಸಾಧ್ಯವೇ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಪ್ರಸ್ತುತ ಗುರಿಯಾಗಿದೆ ಎಂದು ಮೂಲಗಳು ತಿಳಿಸಿದೆ. ಯುಐಡಿಎಐ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಜೊತೆಗೆ ಈ ಸಂಬಂಧ ಮಾತುಕತೆಯಲ್ಲಿದೆ. ಈ ಪ್ರಕ್ರಿಯೆ ನಡೆಸಬೇಕಾದರೆ ಜನನ ನೋಂದಣಿಯು ಕೂಡಾ ಕಂಪ್ಯೂಟರೀಕರಣ ಆಗಬೇಕಾಗುವ ಅಗತ್ಯವಿದೆ. ಸಂಪೂರ್ಣ ಜನನ ನೋಂದಣಿಯು ಕಂಪ್ಯೂಟರೀಕರಣ ಮಾಡಿಕೊಂಡಿರುವ ದೇಶಗಳು ಪ್ರಸ್ತುತ ಈ ಪ್ರಕ್ರಿಯೆ ನಡೆಸುತ್ತಿದೆ. ಆಧಾರ್ ಲಿಂಕ್ಡ್ ಜನನ ನೋಂದಣಿ ಹೊಂದಿರುವ ರಾಜ್ಯಗಳ ಸಂಪೂರ್ಣ ಪಟ್ಟಿ ತಕ್ಷಣವೇ ಲಭ್ಯವಿಲ್ಲ.

16 ರಾಜ್ಯಗಳಲ್ಲಿ ಜನನ ಪ್ರಮಾಣಪತ್ರವನ್ನು ನೀಡಿದಾಗಲೆಲ್ಲಾ ಯುಐಡಿಎಐ ಆಧಾರ್‌ಗಾಗಿ ನೋಂದಣಿ ಮಾಡಲಾಗುತ್ತಿದೆ. ಅದರ ನಂತರ ದಾಖಲಾತಿ ಐಡಿಯನ್ನು ಕೂಡಾ ನೀಡಲಾಗುತ್ತಿದೆ. ಸಿಸ್ಟಂನಲ್ಲಿ ಮಗುವಿನ ಫೋಟೋ ಮತ್ತು ವಿಳಾಸದಂತಹ ವಿವರಗಳನ್ನು ಸೆರೆಹಿಡಿದ ತಕ್ಷಣ ಆಧಾರ್ ಅನ್ನು ನೀಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನನ ನೋಂದಣಿ ಮಾಡುವವರು ಆಧಾರ್ ನೋಂದಣಿ ಏಜೆಂಟ್‌ಗಳು ಕೂಡಾ ಆಗಿರುತ್ತಾರೆ. ಅವರೇ ಎರಡು ಪ್ರಕ್ರಿಯೆಯನ್ನು ಮಾಡುತ್ತಾರೆ.

English summary

Aadhaar For Newborns Along With Birth Certificates In All States Soon, Details Here

Aadhaar enrollment for newborns along with birth certificates is expected to be available in all states in the next few months, expanding beyond 16 states currently offering the facility, government sources told Press Trust of India.
Story first published: Saturday, October 15, 2022, 17:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X