For Quick Alerts
ALLOW NOTIFICATIONS  
For Daily Alerts

5G in India : 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ, ಇಲ್ಲಿದೆ ಪ್ರಮುಖ ಮಾಹಿತಿ

|

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳ ನಡುವೆ ಪ್ರಸ್ತುತ 5ಜಿ ಸೇವೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಂತಾಗಿದೆ. ತನ್ನ 5ಜಿ ಸೇವೆಯನ್ನು ದೇಶದಲ್ಲಿ ಪ್ರಚಾರ ಮಾಡುವ ವಿಚಾರದಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋಗಿಂತ ಮುಂದೆ ಸಾಗಿದೆ. ಶನಿವಾರವಷ್ಟೇ ದೇಶದಲ್ಲಿ 5ಜಿ ಸೇವೆ ಆರಂಭವಾಗಿದ್ದು ಈಗ ಪ್ರಮುಖ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಅಕ್ಟೋಬರ್ 1ರ ಶನಿವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಭಾರತದಲ್ಲಿ 5ಜಿ ಸೇವೆಯನ್ನು ಆರಂಭ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರ್ತಿ ಏರ್‌ಟೆಲ್‌ನ ಚೇರ್‌ಮನ್ ಸುನಿಲ್ ಭಾರ್ತಿ ಮಿತ್ತಲ್ ಕೂಡಾ ಹಾಜರಿದ್ದರು. ನಾವು ಪ್ರಮುಖವಾಗಿ ಎಂಟು ನಗರಗಳಲ್ಲಿ 5ಜಿ ಸೇವೆಯನ್ನು ಆರಂಭ ಮಾಡುತ್ತೇವೆ ಎಂದು ಆ ಕಾರ್ಯಕ್ರಮದಲ್ಲಿ ಸುನಿಲ್ ಮಿತ್ತಲ್ ಹೇಳಿದ್ದಾರೆ. ಇನ್ನು ಏರ್‌ಟೆಲ್ 5ಜಿ ಸೇವೆಯು ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 2023ರ ಒಳಗೆ ಆರಂಭವಾಗಲಿದೆ. ಮಾರ್ಚ್ 2024ರ ಒಳಗೆ ದೇಶದಾದ್ಯಂತ 5ಜಿ ಸೇವೆ ಆರಂಭ ಮಾಡುತ್ತೇವೆ ಎಂದು ಕೂಡಾ ಸುನಿಲ್ ಮಿತ್ತಲ್ ತಿಳಿಸಿದ್ದಾರೆ.

5ಜಿಗೆ ಪ್ರಧಾನಿ ಚಾಲನೆ: ಎಲ್ಲ ಸ್ಮಾರ್ಟ್‌ಫೋನ್‌ನಲ್ಲಿ ಸೇವೆ ಲಭ್ಯವೇ?5ಜಿಗೆ ಪ್ರಧಾನಿ ಚಾಲನೆ: ಎಲ್ಲ ಸ್ಮಾರ್ಟ್‌ಫೋನ್‌ನಲ್ಲಿ ಸೇವೆ ಲಭ್ಯವೇ?

ಇನ್ನು ದೀಪಾವಳಿಗೂ ಮುನ್ನವೇ ರಿಲಯನ್ಸ್ ಜಿಯೋ ಅತೀ ವೇಗದ ನೆಟ್‌ವರ್ಕ್ ಆದ 5ಜಿಯನ್ನು ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ ಆರಂಭ ಮಾಡಲು ಮುಂದಾಗಿದೆ. ಹಾಗೆಯೇ ದೇಶದಾದ್ಯಂತ 2023ರ ಮಾರ್ಚ್ ಒಳಗೆ ಆರಂಭ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಹಾಗೆಯೇ ಅಗ್ಗದ ದರದಲ್ಲಿ 5ಜಿ ಸೇವೆ ನೀಡಲಾಗುವುದು ಎಂದು ಕೂಡಾ ಹೇಳಿದ್ದಾರೆ. ಹಾಗಾದರೆ ಏರ್‌ಟೆಲ್ 5 ಸೇವೆ ಯಾವೆಲ್ಲ ನಗರದಲ್ಲಿ ಆರಂಭ, ಈ ನೆಟ್‌ವರ್ಕ್ ಹೇಗೆ ಇರಲಿದೆ, 5 ಜಿ ಸೇವೆಯನ್ನು ನಾವು ಪಡೆಯಲು ಹೇಗೆ ಸಾಧ್ಯ, ಎಷ್ಟು ರಿಚಾರ್ಜ್ ಮೊತ್ತ ಇರಲಿದೆ ಎಂಬ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ ಮುಂದೆ ಓದಿ....

 ಯಾವೆಲ್ಲ ನಗರದಲ್ಲಿ 5ಜಿ ಸೇವೆ ಆರಂಭ?

ಯಾವೆಲ್ಲ ನಗರದಲ್ಲಿ 5ಜಿ ಸೇವೆ ಆರಂಭ?

ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು ಸೇರಿ 8 ನಗರಗಳಲ್ಲಿ ಏರ್‌ಟೆಲ್‌ನ 5ಜಿ ಸೇವೆಯನ್ನು ಆರಂಭ ಮಾಡಬಹುದಾಗಿದೆ. ಇನ್ನು ಮುಂಬೈ, ದೆಹಲಿ ಸೇರಿ ಚೆನ್ನೈ, ಹೈದಾರಾಬಾದ್, ನಾಗ್ಪುರ, ಸಿಲಿಗುರಿಯಲ್ಲಿ ಏರ್‌ಟೆಲ್ 5ಜಿ ಸೇವೆಯನ್ನು ಆರಂಭ ಮಾಡಲಾಗುತ್ತದೆ. ಆರಂಭಿಕವಾಗಿ ಬೆಂಗಳೂರು, ದೆಹಲಿ, ಮುಂಬೈ, ವಾರಣಾಸಿ ಪ್ರಮುಖ ನಗರಗಳಾಗಿದೆ.

2023ರ ಅಂತ್ಯಕ್ಕೆ ಪ್ರಮುಖ ನಗರ ಪ್ರದೇಶಗಳಲ್ಲಿ ಏರ್‌ಟೆಲ್ 5G2023ರ ಅಂತ್ಯಕ್ಕೆ ಪ್ರಮುಖ ನಗರ ಪ್ರದೇಶಗಳಲ್ಲಿ ಏರ್‌ಟೆಲ್ 5G

 ಏರ್‌ಟೆಲ್ 5ಜಿ ಸೇವೆಗೆ ಎಷ್ಟು ಮೊತ್ತ?

ಏರ್‌ಟೆಲ್ 5ಜಿ ಸೇವೆಗೆ ಎಷ್ಟು ಮೊತ್ತ?

ಮಾಹಿತಿಯ ಪ್ರಕಾರ ಏರ್‌ಟೆಲ್‌ನ 5ಜಿ ಸೇವೆಯ ಮೊತ್ತವು ಸದ್ಯಕ್ಕೆ 4ಜಿ ಸೇವೆಗೆ ಎಷ್ಟು ಇದೆಯೋ ಅಷ್ಟೇ ಇರಲಿದೆ. ಈ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹೊಸ ದರವನ್ನು ನಿಗದಿ ಮಾಡಿ ಘೋಷಣೆ ಮಾಡುವವರೆಗೂ ಸದ್ಯದ ರಿಚಾರ್ಜ್ ಮೊತ್ತವೇ ಜಾರಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ. ಇನ್ನು ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಜಿಯೋ ನೆಟ್ ರಿಚಾರ್ಜ್ ಮೊತ್ತ ಅಗ್ಗವಾಗಿರುತ್ತದೆ ಎಂದು ಹೇಳಿದ್ದಾರೆ, ಹಾಗಿರುವಾಗ ಸ್ಪರ್ಧಾತ್ಪಕವಾಗಿ ಏರ್‌ಟೆಲ್ ದರವು ಕೂಡಾ ದುಬಾರಿ ಆಗಿರಲಾರದು.

 5ಜಿ ಸೇವೆ ಪಡೆಯುವುದು ಹೇಗೆ?

5ಜಿ ಸೇವೆ ಪಡೆಯುವುದು ಹೇಗೆ?

ಭಾರ್ತಿ ಏರ್‌ಟೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸಿಂಗ್ ಸೆಖೋನ್ ಮಾತನಾಡಿ ನಾವು ಏರ್‌ಟೆಲ್‌ನ 5ಜಿ ಸೇವೆಯನ್ನು ಪಡೆಯಬೇಕಾದರೆ ನಮ್ಮಲ್ಲಿ 5ಜಿ ಫೋನ್‌ಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಪ್‌ಡೇಟ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇದ್ದರೆ ಮಾತ್ರ ನಮಗೆ 5ಜಿ ಸೇವೆ ಬಳಕೆ ಮಾಡಲು ಸಾಧ್ಯವಾಗಲಿದೆ. ಆಪಲ್, ಸ್ಯಾಮ್‌ಸಂಗ್, ಓಪೊ, ವಿವೋ, ರಿಯಲ್‌ಮಿ ಸೇರಿದಂತೆ ಎಲ್ಲ ಸ್ಮಾರ್ಟ್‌ಫೋನ್‌ ಸಂಸ್ಥೆಗಳು 5ಜಿ ಸೆಟ್ ಅನ್ನು ಮಾರಾಟ ಮಾಡುತ್ತಿದೆ. ಈಗಾಗಲೇ ಹಲವಾರು ಮಂದಿ ಈ ಅಪ್‌ಡೇಟೆಡ್ ವರ್ಜನ್‌ ಅನ್ನೇ ಬಳಕೆ ಮಾಡುತ್ತಿದ್ದಾರೆ.

 ಇತರೆ ಪ್ರಮುಖ ಮಾಹಿತಿಗಳು

ಇತರೆ ಪ್ರಮುಖ ಮಾಹಿತಿಗಳು

ಹರಾಜು ಮುಗಿದ ಸ್ವಲ್ಪ ಸಮಯದ ನಂತರ, ಭಾರ್ತಿ ಏರ್‌ಟೆಲ್ ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್‌ನೊಂದಿಗೆ 5ಜಿ ಇಕ್ವಿಮೆಂಟ್‌ಗಾಗಿ ಆರ್ಡರ್ ಮಾಡಿದೆ. ವರದಿ ಪ್ರಕಾರ ಏರ್‌ಟೆಲ್ 900 MHz, 1800 MHz, 2100 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ 19,867.8 MHZ ಸ್ಪೆಕ್ಟ್ರಮ್ ಅನ್ನು ಖರೀದಿಸಿದೆ. ಇತ್ತೀಚಿಗೆ ಮುಗಿದ ಹರಾಜಿನಲ್ಲಿ, ಏರ್‌ಟೆಲ್ ಯಶಸ್ವಿಯಾಗಿ ಬಿಡ್ ಮಾಡಿ ಒಟ್ಟು ರೂ. 43,084 ಕೋಟಿ ಸ್ಪೆಕ್ಟ್ರಮ್ ಖರೀದಿಸಿದೆ.

English summary

Airtel Launches 5G Service In Eight Cities, Here's A Details

Bharti Airtel has beaten Reliance Jio to market with its 5G services in India. Airtel Launches 5G Service In Eight Cities, Here's A Details, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X