For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ ಅನ್‌ಲಿಮಿಟೆಡ್‌ ಬ್ರಾಡ್ ಬ್ಯಾಂಡ್‌ಗೆ 299 ರುಪಾಯಿ

|

ಭಾರತದ ಬಹುದೊಡ್ಡ ಟೆಲಿಕಾಂ ಉದ್ಯಮಗಳಲ್ಲಿ ಒಂದಾದ ಏರ್‌ಟೆಲ್ ಹೊಸ ವರ್ಷದಲ್ಲಿ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಏರ್‌ಟೆಲ್ ಬ್ರಾಂಡ್‌ ಬ್ಯಾಂಡ್ ಗ್ರಾಹಕರು 299 ರುಪಾಯಿ ಟಾಪ್ ಅಪ್ ಖರೀದಿಸಿದರೆ ಅನಿಯಮಿತ(ಅನ್‌ಲಿಮಿಟೆಡ್) ಡೇಟಾ ಸೌಲಭ್ಯ ಪಡೆಯಬಹುದು.

ಏರ್‌ಟೆಲ್ ಇತ್ತೀಚೆಗಷ್ಟೇ ಬ್ರಾಡ್‌ ಬ್ಯಾಂಡ್‌ ಸೇವೆಯನ್ನು ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ ಎಂಬ ಹೆಸರಿನಲ್ಲಿ ಮರು ನಾಮಕರಣ ಮಾಡಿತ್ತು. ಇದೀಗ ಇದರ ಜೊತೆಗೆ ಚಂದಾದಾರರು ತಮ್ಮ ಈಗಿರುವ ಯೋಜನೆಯ ಜೊತೆಗೆ 299 ರುಪಾಯಿಗಳ ಟಾಪ್ ಅಪ್ ಖರೀದಿಸಿದರೆ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಸೌಲಭ್ಯ ಪಡೆಯಬಹುದು.

ದೇಶದ ನೂರು ಪ್ರಮುಖ ನಗರಗಳಲ್ಲಿ ಬ್ರಾಡ್‌ ಬ್ಯಾಂಡ್‌ ಸೇವೆಯನ್ನು ನೀಡುತ್ತಿರುವ ಏರ್‌ಟೆಲ್‌ ಯೋಜನೆಗಳು 799 ರುಪಾಯಿಯಿಂದ 3,999 ರುಪಾಯಿಗಳವರೆಗೆ ಲಭ್ಯವಿದೆ. ಇದರ ಜೊತೆಗೆ ಅನ್‌ಲಿಮಿಟೆಡ್‌ ಸೇವೆ ಪಡೆಯಲು ಈ ಕೆಳಗಿನ ಟಾಪ್‌ ಅಪ್ ರೀಚಾರ್ಜ್ ಮಾಡಿಸಿ

799 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

799 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

ಏರ್‌ಟೆಲ್‌ ಎಕ್ಸ್‌ಟ್ರೀಮ್ ಫೈಬರ್ ಅಡಿಯಲ್ಲಿ 799 ರುಪಾಯಿ ಯೋಜನೆಯಲ್ಲಿ 100 Mbps ಸ್ಪೀಡ್‌ನಲ್ಲಿ 150 ಜಿಬಿ ಇಂಟರ್‌ನೆಟ್‌ ಲಭ್ಯವಿದೆ. ಇದಕ್ಕೆ ಹೆಚ್ಚುವರಿ 299 ಟಾಪ್ ಅಪ್ ಖರೀದಿಸಿದ್ದಲ್ಲಿ 100 Mbps ಸ್ಪೀಡ್‌ನ ಅನ್‌ಲಿಮಿಟೆಡ್ ಇಂಟರ್‌ನೆಟ್ ಸೌಲಭ್ಯ ಪಡೆಯಬಹುದು.

ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್ ಯೋಜನೆ: 148, 298, 598 ರು. ರೀಚಾರ್ಜ್ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್ ಯೋಜನೆ: 148, 298, 598 ರು. ರೀಚಾರ್ಜ್

 

 

999 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

999 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

999 ರುಪಾಯಿ ಏರ್‌ಟೆಲ್‌ ಎಕ್ಸ್‌ಟ್ರೀಮ್ ಫೈಬರ್ ಯೋಜನೆಯಲ್ಲಿ 300 ಜಿಬಿ ಡೇಟಾ ಲಭ್ಯವಿದ್ದು 200 Mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದು. ಇದರ ಜೊತಗೆ ತಿಂಗಳ ಪೂರ್ಣ ಅನ್‌ಲಿಮಿಟೆಡ್‌ ಸೌಲಭ್ಯ ಪಡೆಯಲು 299 ಟಾಪ್ ಅಪ್ ಖರೀದಿಸಿ. ಈ ಮೂಲಕ ಸ್ಪೀಡ್‌ನ ಯಾವುದೇ ವ್ಯತ್ಯಾಸವಿಲ್ಲದೆ 200 Mbps ಸ್ಪೀಡ್‌ನಲ್ಲೇ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಬಳಸಬಹುದು.

 

1 ಕೋಟಿ 4ಜಿ ಬಳಕೆದಾರರು ಏರ್‌ಟೆಲ್ ತೆಕ್ಕೆಗೆ1 ಕೋಟಿ 4ಜಿ ಬಳಕೆದಾರರು ಏರ್‌ಟೆಲ್ ತೆಕ್ಕೆಗೆ

1,499 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

1,499 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

ಏರ್‌ಟೆಲ್‌ ಎಕ್ಸ್‌ಟ್ರೀಮ್ ಫೈಬರ್ ಯೋಜನೆಯು ತಮ್ಮ ಗ್ರಾಹಕರಿಗೆ 300 Mbps ಸ್ಪೀಡ್‌ನಲ್ಲಿ 500 ಜಿಬಿ ಡೇಟಾವನ್ನು ನೀಡುತ್ತದೆ. ಇದಕ್ಕೆ 299ರ ಟಾಪ್ ಅಪ್ ಖರೀದಿಸಿದರೆ 500 ಜಿಬಿ ಇಂಟರ್‌ನೆಟ್ ಮುಗಿದ ಬಳಿಕವೂ 300 Mbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್‌ ಪಡೆಯಬಹುದು.

3,999 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

3,999 ರುಪಾಯಿ ಬ್ರಾಡ್‌ ಬ್ಯಾಂಡ್‌ ಯೋಜನೆ

ಈ ಯೋಜನೆಯು 1 GBPS ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್ ಸೌಲಭ್ಯವನ್ನು ನೀಡುವುದು. ಹೀಗಾಗಿ ಹೆಚ್ಚುವರಿಯಾಗಿ ಯಾವುದೇ ಟಾಪ್‌ ಅಪ್ ಖರೀದಿಯ ಅವಶ್ಯಕತೆ ಇರುವುದಿಲ್ಲ.

ಇನ್ನು 999 ರುಪಾಯಿಯಿಂದ ಆರಂಭವಾಗುವ ಏರ್‌ಟೆಲ್ ಬ್ರಾಡ್ ಪ್ಲಾನ್‌ಗಳ ಖರೀದಿಯ ಜೊತೆಗೆ 3 ತಿಂಗಳು ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್, 12 ತಿಂಗಳು ಅಮೆಜಾನ್ ಪ್ರೈಮ್ ಸದಸ್ಯತ್ವ ಹಾಗೂ ಅನ್‌ಲಿಮಿಟೆಡ್‌ ಏರ್‌ಟೆಲ್ ಎಕ್ಸ್‌ಟ್ರೀಮ್ ಸೌಲಭ್ಯ ಉಚಿತವಾಗಿ ಪಡೆಯಬಹುದು.

 

English summary

Airtel Unlimited broadband Plans, 299 Top- Up

Airtel broadband now giving unlimited data to all subscribers if they buy a top-up 299 Rupees
Story first published: Thursday, January 2, 2020, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X