For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್: ಚಿನ್ನದ ಶುದ್ಧತೆ ಹೀಗೆ ಚೆಕ್ ಮಾಡಿ

|

ಭಾರತದಲ್ಲಿ ಹಬ್ಬದ ಸೀಸನ್ ಈಗಾಗಲೇ ಆರಂಭವಾಗಿದೆ. ನವರಾತ್ರಿ ಕಳೆದಿದ್ದು, ಜನರು ಈ ಹಬ್ಬದ ಸಂದರ್ಭದಲ್ಲಿ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ್ದಾರೆ. ಸಾಮಾನ್ಯವಾಗಿ ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಯು ಸಂಪತ್ತನ್ನು ಹೆಚ್ಚಿಸುತ್ತದೆ ಹಾಗೂ ಶುಭ ಎಂಬುವುದು ಜನರ ನಂಬಿಕೆಯಾಗಿದೆ. ಈ ನಿಟ್ಟಿನಲ್ಲಿ ಹಬ್ಬ ಹರಿದಿನಗಳಲ್ಲಿ ಬಂಗಾರ ಖರೀದಿ ಭರದಿಂದ ಸಾಗುತ್ತದೆ.

 

ಭಾರತದಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಮೇಲೆ ಅತೀವವಾದ ಒಲವು ಇದೆ. ಅಕ್ಷಯ ತೃತೀಯ, ಯುಗಾದಿ, ದೀಪಾವಳಿ, ನವರಾತ್ರಿ ಸಂದರ್ಭದಲ್ಲಿ ಚಿನ್ನದ ಮಳಿಗೆಯು ಗ್ರಾಹಕರಿಂದ ತುಂಬಿರುತ್ತದೆ. ಈ ಹಣದುಬ್ಬರ ಸಂದರ್ಭದಲ್ಲಿ ಚಿನ್ನವು ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಲವಾರು ತಲೆಮಾರುಗಳಿಂದ ಚಿನ್ನವನ್ನು ಕಷ್ಟಕ್ಕೆ ಒದಗುವ ಸೊತ್ತು ಎಂದು ನಂಬಲಾಗಿದೆ.

ಸಾಲಕ್ಕೆ ಸುಲಭ ಮಾರ್ಗ: ಯಾವೆಲ್ಲ ಸಂದರ್ಭಗಳಲ್ಲಿ ಚಿನ್ನದ ಸಾಲ ಬೆಸ್ಟ್?ಸಾಲಕ್ಕೆ ಸುಲಭ ಮಾರ್ಗ: ಯಾವೆಲ್ಲ ಸಂದರ್ಭಗಳಲ್ಲಿ ಚಿನ್ನದ ಸಾಲ ಬೆಸ್ಟ್?

ದೀಪಾವಳಿ ಹಬ್ಬ ಇನ್ನು ಕೆಲವೇ ವಾರಗಳಲ್ಲಿ ಬರಲಿದೆ. ಈ ನಡುವೆ ಚಿನ್ನದ ಬೆಲೆಯೂ ಸತತ ಮೂರು ದಿನಗಳಿಂದ ಕುಗ್ಗುತ್ತಿದೆ. ಗೋಲ್ಡ್ ರೇಟ್ ಕಡಿಮೆಯಾಗಿರುವಾಗಲೇ ಚಿನ್ನವನ್ನು ಖರೀದಿ ಮಾಡಿದರೆ, ನಿಮಗೆ ಲಾಭ ಖಂಡಿತ. ಆದರೆ ಯಾವುದೇ ಸಂದರ್ಭದಲ್ಲಿಯಾದರೂ ಚಿನ್ನದ ಶುದ್ಧತೆಯನ್ನು ಚೆಕ್ ಮಾಡಿಕೊಳ್ಳಿ. ನೀವು ಯಾವೆಲ್ಲ ವಿಧಾನಗಳಲ್ಲಿ ಚಿನ್ನದ ಶುದ್ಧತೆಯನ್ನು ಪರಿಶೀಲನೆ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಸ್ಟ್ಯಾಪ್ ಟೆಸ್ಟ್ ಹೀಗೆ ಮಾಡಿ

ಸ್ಟ್ಯಾಪ್ ಟೆಸ್ಟ್ ಹೀಗೆ ಮಾಡಿ

ನೀವು ಚಿನ್ನವನ್ನು ಖರೀದಿ ಮಾಡುವಾಗ ಮುಖ್ಯವಾಗಿ ಅದರ ಹಾಲ್‌ಮಾರ್ಕ್ ಅನ್ನು ಪರಿಶೀಲನೆ ಮಾಡಬೇಕಾಗುತ್ತದೆ. ನೀವು ಈ ಹಾಲ್‌ಮಾರ್ಕ್ ಅನ್ನು ನಿಮ್ಮ ಚಿನ್ನದ ಒಳಭಾಗದಲ್ಲಿ ಕಾಣಬಹುದು. ಅಂದರೆ ನಿಮ್ಮ ರಿಂಗ್‌ನ ಒಳಭಾಗದಲ್ಲಿ ಈ ಹಾಲ್‌ಮಾರ್ಕ್ ಇರುತ್ತದೆ. ನೀವು ಈ ಹಾಲ್‌ಮಾರ್ಕ್ ಅನ್ನು ಮೊದಲು ಪರಿಶೀಲನೆ ಮಾಡಬೇಕಾಗುತ್ತದೆ. ಹಾಲ್‌ಮಾರ್ಕ್ 10k, 14k, 18k, 22k 24k ಮೊದಲಾದವುಗಳನ್ನು ಸೂಚಿಸುತ್ತದೆ. ಅಂದರೆ 333, 375, 417, 583, 585, 625, 750, 833, 875, 916, 958 ಹಾಗೂ 990 ಹಾಲ್‌ಮಾರ್ಕ್ ಕಾಣುತ್ತದೆ. ಈ ಸಂಖ್ಯೆಗಳನ್ನು ಹೊರತುಪಡಿಸಿ ಬೇರೆ ಸಂಖ್ಯೆ ನಿಮ್ಮ ಬಂಗಾರದ ಜ್ಯುವೆಲ್ಲರಿಯಲ್ಲಿದ್ದರೆ ನೀವು ನಕಲಿ ಬಂಗಾರ ಹೊಂದಿದ್ದೀರಿ ಎಂದು ಅರ್ಥವಾಗಿದೆ. ಇನ್ನು ನೀವು ನಿಮ್ಮ ಜ್ಯುವೆಲ್ಲರಿಯಲ್ಲಿ 800, 950, ಅಥವಾ 925 ಎಂಬ ಅಂಕಿಯನ್ನು ಕಂಡರೆ ಅದು ಬಂಗಾರವಲ್ಲ ಬೆಳ್ಳಿ ಎಂದು ಅರ್ಥ. ಬೆಳ್ಳಿಯ ಶುದ್ಧತೆಯನ್ನು ಈ ಅಂಕಿಗಳ ಮೂಲಕ ಅಲೆಯಲಾಗುತ್ತದೆ.

ಹಬ್ಬದ ಋತುವಿನಲ್ಲಿ ಚಿನ್ನದ ಆಭರಣ ಮಾರಾಟ ಶೇ30 ರಷ್ಟು ಏರಿಕೆಹಬ್ಬದ ಋತುವಿನಲ್ಲಿ ಚಿನ್ನದ ಆಭರಣ ಮಾರಾಟ ಶೇ30 ರಷ್ಟು ಏರಿಕೆ

 ಚರ್ಮ ಪರೀಕ್ಷೆ ಇನ್ನೊಂದು ವಿಧಾನ
 

ಚರ್ಮ ಪರೀಕ್ಷೆ ಇನ್ನೊಂದು ವಿಧಾನ

ನೀವು ಚಿನ್ನದ ಶುದ್ಧತೆಯನ್ನು ಚೆಕ್ ಮಾಡಲು ಇನ್ನೊಂದು ವಿಧಾನ ಇದಾಗಿದೆ. ನೀವು ನಿಮ್ಮ ಚಿನ್ನದ ಜ್ಯುವೆಲ್ಲರಿಯನ್ನು ನಿಮ್ಮ ಎರಡು ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಿ. 5 ನಿಮಿಷ ನಿಮ್ಮ ಕೈಮುಷ್ಟಿಯಲ್ಲಿ ಹಿಡಿದುಕೊಳ್ಳಿ. ನಿಮ್ಮ ಕೈಯ ಬೆವರು ಆ ಲೋಹದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅದರ ಬಣ್ಣ ಬದಲಾಗಬಹುದು. ನಿಮ್ಮ ಕೈಯಲ್ಲಿರುವ ಚಿನ್ನ ಶುದ್ಧವಾಗಿದ್ದರೆ ಅದರ ಬಣ್ಣದಲ್ಲಿ ಬದಲಾವಣೆಯಾಗಲಾರದು. ಬದಲಾಗಿ ನಿಮ್ಮ ಚರ್ಮವು ಹಸಿರು, ನೀಲಿ ಅಥವಾ ಕಪ್ಪು ಆಗಲಿದೆ.

 ಆಸಿಡ್ ಟೆಸ್ಟ್ ಗೊತ್ತಿದ್ದೆಯೇ?

ಆಸಿಡ್ ಟೆಸ್ಟ್ ಗೊತ್ತಿದ್ದೆಯೇ?

ನಿಮ್ಮ ಚಿನ್ನದ ಶುದ್ಧತೆಯನ್ನು ನೀವು ಪರೀಕ್ಷೆ ಮಾಡಲು ಇನ್ನು ಒಂದು ವಿಧಾನವಿದೆ. ಆದರೆ ಇದಕ್ಕೆ ವಿನೇಗರ್ ಅಗತ್ಯವಾಗಿದೆ. ನಿಮ್ಮ ಚಿನ್ನದ ಸಣ್ಣ ತುಂಡಿನ ಮೇಲೆ ವಿನೇಗರ್‌ನ ಕೆಲವು ಹನಿಗಳನ್ನು ಹಾಕಿ. ಅದು ನಿಜವಾದ ಚಿನ್ನದ ಜ್ಯುವೆಲ್ಲರಿಯಾಗಿದ್ದರೆ, ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ಅದು ನಕಲಿಯಾದರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

 ಸೆರಾಮಿಕ್ ಸ್ಕ್ರಾಚ್ ಟೆಸ್ಟ್ ಮಾಡಿಕೊಳ್ಳಿ

ಸೆರಾಮಿಕ್ ಸ್ಕ್ರಾಚ್ ಟೆಸ್ಟ್ ಮಾಡಿಕೊಳ್ಳಿ

ಈ ವಿಧಾನದಲ್ಲಿ ನಿಮ್ಮಲ್ಲಿ ಸೆರಾಮಿಕ್ ಅಥವಾ ಟೈಲ್ಸ್ ಇರಬೇಕಾಗುತ್ತದೆ. ಸೆರಾಮಿಕ್ ಮೇಲೆ ನಿಮ್ಮ ಚಿನ್ನವನ್ನು ತಿಕ್ಕಿ. ನಿಮ್ಮ ಕೈಯಲ್ಲಿರುವ ಚಿನ್ನವು ನಿಜವಾದ ಚಿನ್ನವಾಗಿದ್ದರೆ ಅದು ಹೊಳೆಯುತ್ತದೆ ಹಾಗೂ ಬಣ್ಣ ಬದಾಲವಣೆ ಆಗುವುದಿಲ್ಲ. ನಕಲಿ ಚಿನ್ನವಾದರೆ ಜ್ಯುವೆಲ್ಲರಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

 ನೀರಿನಲ್ಲಿಯೂ ಚಿನ್ನದ ಶುದ್ಧತೆ ಪರೀಕ್ಷೆ

ನೀರಿನಲ್ಲಿಯೂ ಚಿನ್ನದ ಶುದ್ಧತೆ ಪರೀಕ್ಷೆ

ನೀವು ಚಿನ್ನದ ಶುದ್ಧತೆಯನ್ನು ಪರಿಶೀಲನೆ ಮಾಡಲು ಈ ಪರೀಕ್ಷೆಯನ್ನು ಕೂಡಾ ಮಾಡಬಹುದು. ನೀರು ಇರುವ ಕಂಟೆನರ್‌ ಒಳಗೆ ನಿಮ್ಮ ಚಿನ್ನವನ್ನು ಹಾಕಿ. ಜ್ಯುವೆಲ್ಲರಿಯು ನೀರಿನ ತಳಭಾಗದಲ್ಲಿ ತೇಲಾಡದಿದ್ದರೆ ಅದು ನಿಜವಾದ ಶುದ್ಧವಾದ ಚಿನ್ನ ಎಂದಾಗಿದೆ.

 ಅಯಸ್ಕಾಂತ ಪರೀಕ್ಷೆ ಮಾಡಿ ನೋಡಿ

ಅಯಸ್ಕಾಂತ ಪರೀಕ್ಷೆ ಮಾಡಿ ನೋಡಿ

ಇದು ಚಿನ್ನದ ಶುದ್ಧತೆಯನ್ನು ಕಂಡು ಹಿಡಿಯುವ ಅತೀ ಪ್ರಖ್ಯಾತ ವಿಧಾನವಾಗಿದೆ. ಚಿನ್ನ ಅಯಸ್ಕಾಂತದ ಬಲವನ್ನು ಹೊಂದಿಲ್ಲ. ಆದ್ದರಿಂದಾಗಿ ಇದು ಅಯಸ್ಕಾಂತಕ್ಕೆ ಆಕರ್ಷಿತವಾಗಬಾರದು. ನಿಮ್ಮ ಜ್ಯುವೆಲ್ಲರಿಯು ಅಯಸ್ಕಾಂತಕ್ಕೆ ಆಕರ್ಷಿತವಾದರೆ ನಿಮ್ಮ ಬಳಿ ಇರುವ ಚಿನ್ನವು ನಕಲಿ ಎಂದಾಗಿದೆ. ಆದರೆ ಈ ವಿಧಾನವು ಎಲ್ಲ ಸಂದರ್ಭದಲ್ಲಿ ನಡೆಸಲಾಗದು. ನಿಮ್ಮ ಚಿನ್ನದೊಂದಿಗೆ ಬೇರೆ ಲೋಹಗಳು ಕೂಡಾ ಮಿಶ್ರವಾಗಿರಬಹುದು. ಹಾಗಾದಾಗ ಸಂಪೂರ್ಣ ಜ್ಯುವೆಲ್ಲರಿಯಲ್ಲೇ ಚಿನ್ನವಿಲ್ಲ ಎಂದು ಹೇಳಲಾಗದು.

English summary

Amid Festive Do Check Gold Purity, Here's Some Tips in Kannada

In india people have special attachment to gold, in festive season they buy gold, Amid Festive Do Check Gold Purity, Here's Some Tips in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X