For Quick Alerts
ALLOW NOTIFICATIONS  
For Daily Alerts

FD Benefits : ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ (ಒಡಿ) ಮೂಲಕ ಪಡೆಯುವುದು ಹೇಗೆ?

By ಶಾರ್ವರಿ
|

ಜೀವನಕ್ಕೆ ಆರ್ಥಿಕ ಭದ್ರತೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯಿಂದ ನಿರಂತರವಾಗಿ ಆದಾಯ ಬರಬೇಕು ಎಂದು ಶ್ರೀಸಾಮಾನ್ಯರು ನಿರೀಕ್ಷಿಸುತ್ತಾರೆ. ಅದಕ್ಕಾಗಿಯೇ ಕೆಲವರು ನಿವೃತ್ತಿಯ ‌ನಂತರ, ಇನ್ನೂ‌ ಕೆಲವರು ವಯಸ್ಸಿಗೆ ಬರುವ ಮುನ್ನವೇ ‌ಮಕ್ಕಳ ಹೆಸರಿನಲ್ಲಿ ಎಫ್‌ಡಿ (ಫಿಕ್ಸೆಡ್ ಡೆಪಾಸಿಟ್- ನಿಗದಿತ ಹೂಡಿಕೆ) ಮಾಡುತ್ತಾರೆ.

 

ಆದರೆ,‌ ಈ ಹಣವನ್ನು ಅವಧಿಗೂ ಮುನ್ನವೇ ಬ್ಯಾಂಕಿನಿಂದ ಪಡೆಯಲು ಸುಲಭವಾದ ವಿಧಾನವನ್ನು ಪರಿಚಯಿಸಲಾಗಿದೆ. ಅದು, ಎಫ್‌ಡಿ ವಿರುದ್ಧ ಸಾಲ ಅಥವಾ ಓವರ್‌ಡ್ರಾಫ್ಟ್ (ಒಡಿ) ತೆಗೆದುಕೊಳ್ಳಬಹುದು. ಏಕೆಂದರೆ, ಬ್ಯಾಂಕಿನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ನಿಮ್ಮ ಹೂಡಿಕೆಯ ಹಣವನ್ನು ಅನ್ನು ಓವರ್ ಡ್ರಾಫ್ಟ್ (ಒಡಿ) ಸೌಲಭ್ಯದ ಅಡಿಯಲ್ಲಿ ಮೇಲಾಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ನೀವು ನಿಮ್ಮ ಹೂಡಿಕೆ ಹಾಗೇ ಉಳಿದಿದ್ದರೂ ಕಡಿಮೆ ಆದಾಯಕ್ಕೆ ಅವಧಿಗೂ ಮುನ್ನವೇ ಹಣ ಪಡೆಯಬೇಕಾದ್ದಿಲ್ಲ. ಬದಲಾಗಿ ಅಗತ್ಯವಿರುವ ಸಾಲದ ಮೊತ್ತವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ನೀವು ನಿಮ್ಮ ಆನ್‌ಲೈನ್ ಖಾತೆಗಳನ್ನು ಬಳಸಿಕೊಂಡು ಒಡಿಗೆ ಸರಳವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ನೇರವಾಗಿ ಬ್ಯಾಂಕ್ ನಲ್ಲಿಯೇ ತೆರಳಿ ಅರ್ಜಿಯನ್ನು ಸಲ್ಲಿಸಬಹುದು.

 

ನಿಗದಿತ ಹೂಡಿಕೆಯ ಒಡಿ ಹಣವು ಬ್ಯಾಂಕ್‌ಗಳು ಪ್ರಸ್ತುತ ಎಫ್‌ಡಿ ಮೌಲ್ಯದ ಶೇ.90 ವರೆಗಿನ ಓವರ್‌ಡ್ರಾಫ್ಟ್‌ಗಳನ್ನು ಅನುಮತಿಸುತ್ತವೆ. ಹಾಗಾಗಿ, ಓವರ್‌ಡ್ರಾಫ್ಟ್ ಸೌಲಭ್ಯದ ಮೇಲಿನ ಬಡ್ಡಿಯು ಆಧಾರವಾಗಿರುವ ಎಫ್‌ಡಿ ದರಕ್ಕಿಂತ ಶೇ.1, 2 ಪ್ರತಿಶತ ಹೆಚ್ಚಾಗಿರುತ್ತದೆ. ಎಫ್‌ಡಿಯನ್ನು ಒಡಿಯಲ್ಲಿ ಹಿಂಪಡೆಯುವುದರಿಂದ ಒಡಿ ಮೊತ್ತಕ್ಕೆ ಮಾತ್ರ ಬಡ್ಡಿದರವನ್ನು ಪಾವತಿಸಬಹುದು. ಜೊತೆಗೆ ಅಲ್ಪಾವಧಿಯ ನಗದು ಬೇಡಿಕೆಯನ್ನು ಸರಿದೂಗಿಸಲು ಈ ವಿಧಾನವನ್ನು ಬಳಸಿಕೊಳ್ಳಬಹುದು.

ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ ಬಳಕೆ ಲಾಭಗಳೇನು?

ಒಡಿಯ ಮುಖ್ಯವಾದ ಪ್ರಯೋಜನವೆಂದರೆ ಇದರಿಂದ ಮಾಸಿಕ ಇಎಂಐ ಪಾವತಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಅನುಕೂಲ ಆದಾಗಲೆಲ್ಲ ಬಾಕಿ ಉಳಿದಿರುವ ಠೇವಣಿ ಹಣವನ್ನು ಪಾವತಿಸುವ ಆಯ್ಕೆಯನ್ನು ಪಡೆಯಬಹುದು. ಆದಾಗ್ಯೂ ಮಾಸಿಕ‌ ಒಡಿ‌ ಆಧಾರದ ಮೇಲೆ‌ ಬಡ್ಡಿ ದರವನ್ನು ಪಾವತಿಸುವುದು ಉತ್ತಮ. ಏಕೆಂದರೆ ಇದರ ಅವಧಿಯನ್ನೂ ಸಹ ನಿಮ್ಮ ಸಾಲದ ಮೇಲೆ‌ ನಿರ್ಧರಿಸಲಾಗುತ್ತದೆ.

ನೀವು ನಿಮ್ಮ ಎಫ್‌ಡಿಯನ್ನು ನವೀಕರಿಸಿದಾಗ, ಹೆಚ್ಚಿನ ಬ್ಯಾಂಕ್‌ಗಳು ನಿಮ್ಮ ಓಡಿ ಅನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ ಮತ್ತು ನವೀಕರಿಸಿದ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಹೊಂದಿಸಲು ಬಡ್ಡಿ ದರವನ್ನು ಮಾರ್ಪಡಿಸಲಾಗುತ್ತದೆ. ನೀವು ಕ್ರೀಯಾಶೀಲರಾಗಿದ್ದರೆ, ವೇತನ‌ ಪಾವತಿ ಅಥವಾ ಇತರ ಕಾರಣಗಳ ವಿಳಂಬದಿಂದಾಗಿ ಎಫ್‌ಡಿ ಗೆ ವಿರುದ್ಧವಾಗಿ ಒಡಿ ಯನ್ನು ಪಡೆದುಕೊಳ್ಳಬಹುದು.

ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ ಬಳಕೆ ಲಾಭಗಳೇನು?

ಓವರ್‌ಡ್ರಾಫ್ಟ್ ಸೌಲಭ್ಯದಿಂದ ಅನುಕೂಲಗಳೇನು?:

ಕಳಪೆ ಸಿಐಬಿಐಎಲ್ ಫಲಿತಾಂಶದ ಮತ್ತು ಕಡಿಮೆ ಆದಾಯದ ಕಾರಣ, ಅನೇಕ ಜನರು ಸಾಲದ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಯಾವುದೇ ಹೂಡಿಕೆ ಸಾಮರ್ಥ್ಯದ ಫಲಿತಾಂಶ (ಅಂಕಗಳು) ಅಗತ್ಯವಿಲ್ಲ. ಎಫ್‌ಡಿ ಓವರ್‌ಡ್ರಾಫ್ಟ್ ಸಂದರ್ಭದಲ್ಲಿ, ನೀವು ಈ ಯಾವುದೇ ಅವಶ್ಯಕತೆಗಳನ್ನು ಪೂರೈಸಬೇಕಾಗಿಲ್ಲ. ಸಾಲಕ್ಕೆ ಅರ್ಹತೆ ಪಡೆಯಲು ನೀವು ಬ್ಯಾಂಕ್‌ನಲ್ಲಿ ನಿಗದಿತ ಹೂಡಿಕೆಯನ್ನು ಮಾತ್ರ ಹಿಡಿದಿಟ್ಟುಕೊಳ್ಳಬೇಕು. ಬಹುತೇಕರು‌‌ ಇದೇ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಲ್ಲದೇ ಎಫ್‌ಡಿ ಯಲ್ಲಿ‌ ಸಾಲ ತೆಗೆದುಕೊಳ್ಳುವುದರಿಂದ ಹಲವು‌ ಪ್ರಯೋಜನಗಳಿವೆ. ಅದನ್ನಿಲ್ಲಿ ಕಾಣಬಹುದು.

ದಾಖಲೆಗಳ ತ್ವರಿತ ವಿತರಣೆ ಅವಶ್ಯವಿಲ್ಲ:

ಹೂಡಿಕೆ ಮೇಲಿನ ಸಾಲ ತೆಗೆದುಕೊಳ್ಳಲು ಬೇಕಾದ ಸಾಲ ಅಥವಾ ಓಡಿ ಮೊತ್ತವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ, ನೀವು ಯಾವುದೇ ಹೆಚ್ಚಿನ ದಾಖಲೆಗಳನ್ನು ಒದಗಿಸುವ ಅಗತ್ಯವೂ ಇರುವುದಿಲ್ಲ. ಏಕೆಂದರೆ ಸಾಲ ನೀಡುವ ಸಂಸ್ಥೆಗಳು ನಿಮ್ಮ ಎಲ್ಲ ಕೆವೈಸಿ ಮಾಹಿತಿಯನ್ನು ಹೊಂದಿರುತ್ತಾರೆ. ದೃಢೀಕೃತ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, 24 ಗಂಟೆಗಳ ಒಳಗೆ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.

ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ ಬಳಕೆ ಲಾಭಗಳೇನು?

ಸಂಸ್ಕರಣಾ ಶುಲ್ಕ ಮತ್ತು ಇತರ ಶುಲ್ಕಗಳು:

ಓಡಿ ಸಾಲದ ಮೊತ್ತವನ್ನು ಪಡೆಯಲು ನೀವು ಸಾಲದ ಪ್ರಕ್ರಿಯೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಸ್ವತ್ತು, ಮರು ಸ್ವಾಧೀನ, ಪೂರ್ವ ಪಾವತಿ ಶುಲ್ಕ ಇತರ ಯಾವುದೇ ಹೆಚ್ಚುವರಿ ಶುಲ್ಕದ ಹೊರೆ ಇರುವುದಿಲ್ಲ. ಹಾಗಾಗಿ ಇದು ನಿಮ್ಮ ಸಾಲದ ಮೇಲಿನ ವೆಚ್ಚವನ್ನು ತಗ್ಗಿ ಸುತ್ತದೆ ಎನ್ನಬಹುದು. ಜೊತೆಗೆ ನಿಮ್ಮ ಸಾಲದ ಅವಧಿಯ ಯಾವುದಾದರೂ ಸಮಯದಲ್ಲಿ ಸಾಲ ಮರುಪಾವತಿ ಮಾಡಬಹುದಾಗಿರುತ್ತದೆ.

ಕಡಿಮೆ ಬಡ್ಡಿ ದರಗಳು:

ಬಹುತೇಕರು ಎಫ್‌ಡಿ ಮೇಲಿನ ಸಾಲವನ್ನು ಆಯ್ಕೆ ಮಾಡಿಕೊಳ್ಳಲು ಕಡಿಮೆ ಬಡ್ಡಿದರದ ಪ್ರಯೋಜನಗಳು ಒಂದಾಗಿದೆ. ಇದು ಸುರಕ್ಷಿತ ಸಾಲವಾಗಿರುವುದರಿಂದ ನಿಮ್ಮ ನಿಗದಿತ ಹೂಡಿಕೆಯು ಸಾಲಕ್ಕೆ ಭದ್ರತೆಯ ಆಧಾತವಾಗಿರುತ್ತವೆ. ಜೊತೆಗೆ ಇತರ ಅಸುರಕ್ಷಿತ ಸಾಲಗಲಗಳಿಗೆ ಹೋಲಿಸಿದರೆ, ಇದರಲ್ಲಿ ಬಡ್ಡಿದರವೂ ಕಡಿಮೆಯಿರುತ್ತದೆ. ನಿಮ್ಮ ಎಫ್‌ಡಿ ಪ್ಲಾನ್‌ನಲ್ಲಿ ಲಭ್ಯವಿರುವ ಬಡ್ಡಿದರಕ್ಕಿಂತ ಶೇ. 1 ರಿಂದ 2 ರಷ್ಟು ಹೆಚ್ಚಿನ ಬಡ್ಡಿದರವನ್ನು ಸಾಲ ನೀಡುವ ಸಂಸ್ಥೆಗಳು ಒದಗಿಸುತ್ತವೆ. ಸಾಲದಾತರು ಸಾಮಾನ್ಯವಾಗಿ ಎಫ್‌ಡಿಯಲ್ಲಿ ಕೊಡಲಾಗುವ ಬಡ್ಡಿದರವನ್ನು ಅವಲಂಬಿಸಿ ಸಾಲ ನೀಡುತ್ತಾರೆ. ಇದು ಮುಂದಿನವರಿಗೆ ಬದಲಾಗಬಹುದು.

ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ ಬಳಕೆ ಲಾಭಗಳೇನು?

ಹೂಡಿಕೆ‌ ಹೆಚ್ಚಿದಷ್ಟು ಸಾಲದ ಮೊತ್ತವೂ ಹೆಚ್ಚು:

ಸಾಲದ ಮೊತ್ತವು ಒಟ್ಟಾರೆ ಎಫ್‌‌ಡಿ (ನಿಗದಿತ ಹೂಡಿಕೆ) ಮೌಲ್ಯದ ಶೇ.80 ರಿಂದ 90 ಪ್ರತಿಶತದವರೆಗೆ ಇರಬಹುದು. ಹಾಗಾಗಿ, ನಿಮ್ಮ ಸಾಲದ ಗಾತ್ರವನ್ನೂ ನಿಮ್ಮ ಎಫ್‌ಡಿ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ನಿಮ್ಮ ಎಫ್‌ಡಿ ಮೊತ್ತ ಹೆಚ್ಚಾದಷ್ಟೂ ನಿಮ್ಮ ಸಾಲದ ಮೊತ್ತವೂ ಹೆಚ್ಚುತ್ತದೆ. ಇದು ಎಫ್‌ಡಿ ಮೌಲ್ಯವನ್ನು ಹೊರತುಪಡಿಸಿ, ನಿಮ್ಮ ಸಾಲದಾತರೊಂದಿಗೆ ನಿಮ್ಮ ಸಂಪರ್ಕದ ಪ್ರಕಾರವನ್ನೂ ಅವಲಂಬಿಸಿರುತ್ತದೆ.

ಬಿಡುವಿನ ವೇಳೆಯಲ್ಲೂ ಪಾವತಿಸಿ:

ನಿಮ್ಮ ಎಫ್‌ಡಿ ಅವಧಿ ಪೂರ್ಣಗೊಳ್ಳುವವರೆಗೂ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ, ಇದು ನಿಮ್ಮ ಎಫ್‌ಡಿ ಅವಧಿಗಿಂತ ಹೆಚ್ಚು ಇರುವಂತಿಲ್ಲ. ವಿಸ್ತೃತ ಮರುಪಾವತಿ ಅವಧಿಯೊಂದಿಗೆ, ನೀವು ಸರಳ ಇಎಂಐ ಅಥವಾ ನಿಮ್ಮ ಬಿಡುವಿನ ವೇಳೆಯಲ್ಲಿ ಬಡ್ಡಿ ಮಾತ್ರ ಪಾವತಿಸುವ ವ್ಯವಸ್ಥೆಯನ್ನು ಬಳಸಿಕೊಂಡು ಸಾಲದ ಮೊತ್ತವನ್ನು ಹಿಂತಿರುಗಿಸಬಹುದು.

ಎಫ್‌ಡಿ ಪ್ರಯೋಜನಗಳೇನು? ಓವರ್‌ಡ್ರಾಫ್ಟ್ ಬಳಕೆ ಲಾಭಗಳೇನು?

ಎಫ್‌ಡಿ ಮೇಲಿನ ಸಾಲದ ನೆರವಿನಿಂದ ನೀವು ಇತರ ಹಣಕಾಸು ಸಮಸ್ಯೆಗಳಿಂದ ಹೊರಬರಬಹುದು. ಅಲ್ಲದೇ, ಕಡಿಮೆ ಬಡ್ಡಿದರದೊಂದಿಗೆ ತ್ವರಿತವಾಗಿ ನಿಮಗೆ ಸಾಲದ ಮೊತ್ತವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಮುಖ್ಯವಾಗಿ ನೀವು ಆಯ್ಕೆ ಮಾಡುವ ಓಡಿ ವಿಧಾನವು ಅಗತ್ಯ ಸಮಯಕ್ಕೆ ಹಣ ಪೂರೈಕೆಯಾಗುವಂತೆ ಮಾಡುತ್ತದೆ.

English summary

Benefits Of FD: FDs Comes With Overdraft Facility, Here Are The Advantages Of Overdraft

One of the easiest methods to borrow money from the bank is to take out a loan or an overdraft (OD) against an FD. According to the bank's rules and conditions, your FD is utilised as collateral under the OD facility.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X