For Quick Alerts
ALLOW NOTIFICATIONS  
For Daily Alerts

Birth Tourism: ಆಧುನಿಕ ಜಗತ್ತಿನ ಹೊಸ ವ್ಯವಹಾರದ ಬಗ್ಗೆ ನಿಮಗೆಷ್ಟು ಗೊತ್ತು?

|

ಟೂರಿಸಂನಲ್ಲಿ (ಪ್ರವಾಸೋದ್ಯಮ) ನಾನಾ ಬಗೆ ಇದೆ. ಈ ದಿನ ನಿಮಗೆ ಬರ್ತ್ ಟೂರಿಸಂ ಬಗ್ಗೆ ತಿಳಿಸಿಕೊಡುತ್ತೇನೆ. ಈ ಬಗ್ಗೆ ನಿಮ್ಮ ಪೈಕಿ ಕೆಲವರಿಗೆ ಗೊತ್ತಿರಲೂಬಹುದು. ಆದರೂ ಒಂದು ಸಲ ಓದಿಕೊಂಡು ಬಿಡಿ. ಏನು ಈ ಬರ್ತ್ ಟೂರಿಸಂ? ಏಕೆ ಇದು ಬಹಳ ಖ್ಯಾತಿ ಹಾಗೂ ಕುಖ್ಯಾತಿ ಮತ್ತು ಯಾವ ದೇಶಗಳು ಬರ್ತ್ ಟೂರಿಸಂ ಹಾಟ್ ಸ್ಪಾಟ್ ಗಳು ಇತ್ಯಾದಿ ಅಂಶಗಳು ಬಹಳ ಆಸಕ್ತಿಕರವಾಗಿವೆ.

ವಿಶ್ವದ ಕೆಲವು ದೇಶಗಳಲ್ಲಿ ಒಂದು ನಿಯಮ ಇದೆ. ಅಲ್ಲಿ ಹುಟ್ಟಿದ ತಕ್ಷಣ ಆ ದೇಶದ ಪೌರತ್ವ ಸಿಕ್ಕಿಬಿಡುತ್ತದೆ. ಆ ಮಗುವಿನ ತಂದೆ- ತಾಯಿ ಯಾವ ದೇಶದವರು ಎಂಬುದು ಮುಖ್ಯ ಆಗುವುದೇ ಇಲ್ಲ. ಉದಾಹರಣೆಗೆ ಯುಎಸ್ ಎ. ಅಲ್ಲಿ ಹುಟ್ಟಿದ ಮಗುವಿಗೆ ಹುಟ್ಟಿನಿಂದಲೇ ಪೌರತ್ವ ಸಿಗುತ್ತದೆ. ಆಗ ಒಬ್ಬ ಅಮೆರಿಕನ್ ಗೆ ಏನೆಲ್ಲ ಸವಲತ್ತು, ಸೌಕರ್ಯ, ಅನುಕೂಲಗಳು ಸಿಗಬೇಕೋ ಅವೆಲ್ಲವೂ ಆ ಮಗುವಿಗೆ ಸಿಗುತ್ತವೆ.

ಆ ಕಾರಣಕ್ಕೆ ಏನು ಮಾಡುತ್ತಾರೆ ಅಂದರೆ, ಇಂಥ ದೇಶಗಳ ಪೈಕಿ ಯಾವುದರಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಇದೆಯೋ ಅಲ್ಲಿಗೆ ಗರ್ಭಿಣಿಯರು ತೆರಳುತ್ತಾರೆ. ಅಲ್ಲಿ ಮಗುವನ್ನು ಹಡೆಯುತ್ತಾರೆ. ಅಂಥ ಮಕ್ಕಳಿಗೆ ಹುಟ್ಟಿನಿಂದಲೇ ಸುಲಭವಾಗಿ ಪೌರತ್ವ ಸಿಕ್ಕಿಹೋಗುತ್ತದೆ.

ಸಿಕ್ಕಾಪಟ್ಟೆ ಹೆಚ್ಚಾಯಿತು ಅಮೆರಿಕ ಪೌರತ್ವ ಬಿಟ್ಟುಕೊಡುವವರ ಸಂಖ್ಯೆಸಿಕ್ಕಾಪಟ್ಟೆ ಹೆಚ್ಚಾಯಿತು ಅಮೆರಿಕ ಪೌರತ್ವ ಬಿಟ್ಟುಕೊಡುವವರ ಸಂಖ್ಯೆ

ಇನ್ನು ಈ ಪೈಕಿ ಕೆಲವು ದೇಶಗಳ ಪಾಸ್ ಪೋರ್ಟ್ ಹೊಂದಿರುವುದು ಬಹಳ ಅನುಕೂಲ. ಉದಾಹರಣೆಗೆ ಚಿಲಿ. ಆ ದೇಶದ ಪಾಸ್ ಪೋರ್ಟ್ ಹೊಂದಿದ ವ್ಯಕ್ತಿಗೆ ನೂರಾ ಐವತ್ತಕ್ಕೂ ಹೆಚ್ಚು ದೇಶಗಳಿಗೆ ತೆರಳುವುದಕ್ಕೆ ವೀಸಾ ಕಡ್ಡಾಯ ಅಲ್ಲ. ವೀಸಾ ಆನ್ ಅರೈವಲ್ ಅನುಕೂಲ ಸಿಗುತ್ತದೆ. ಮುಂದೆ ಆ ಮಗು ಬೆಳೆದ ಮೇಲೆ, ಹದಿನೆಂಟು ವರ್ಷ ತುಂಬಿದ ನಂತರದಲ್ಲಿ ತನ್ನ ಪೋಷಕರಿಗೂ ಆ ದೇಶದ ಪೌರತ್ವ ಸಿಗುವಂತೆ ಮಾಡುವ ಅವಕಾಶ ಇರುತ್ತದೆ.

ಹುಟ್ಟಿನಿಂದ ಪೌರತ್ವ ದೊರಕುವ ದೇಶಗಳಿವು

ಹುಟ್ಟಿನಿಂದ ಪೌರತ್ವ ದೊರಕುವ ದೇಶಗಳಿವು

ಅಂಟಿಗುವಾ ಮತ್ತು ಬರ್ಬುಡಾ, ಅರ್ಜೆಂಟೀನಾ, ಬಾರ್ಬಡೋಸ್, ಬೆಲಿಜಿ, ಬೊಲಿವಿಯಾ, ಬ್ರೆಜಿಲ್, ಕೆನಡಾ, ಚಿಲಿ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕಾ, ಈಕ್ವೆಡಾರ್, ಎಲ್ ಸಲ್ವಡಾರ್, ಫಿಜಿ, ಗ್ರೆನಡಾ, ಗ್ವಾಟೆಮಾಲಾ, ಗಯಾನ, ಹೊಂಡರಾಸ್, ಜಮೈಕಾ, ಲೆಸೊಥೊ, ಮೆಕ್ಸಿಕೋ, ನಿಕರುಗುವಾ, ಪರುಗ್ವೆ, ಪಾಕಿಸ್ತಾನ, ಪನಾಮ, ಪೆರು, ಸೇಂಟ್ ಕೀಟ್ಸ್ ಮತ್ತು ನೆವೀಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್, ತಾಂಜೇನಿಯಾ, ಟ್ರಿನಿಡಾಡ್ ಅಂಡ್ ಟೊಬ್ಯಾಗೋ, ಟುವಲು, ಯುನೈಟೆಡ್ ಸ್ಟೇಟ್ಸ್, ಉರುಗ್ವೆ, ವೆನಿಜುವೆಲಾ- ಈ ದೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ಆಗಲೇ ಪೌರತ್ವ ದೊರೆಯುತ್ತದೆ. ಕೆಲವು ದೇಶಗಳಲ್ಲಿ ರಾಜತಾಂತ್ರಿಕರ ಮಕ್ಕಳಿಗೆ ಆ ಅನುಕೂಲ ಇಲ್ಲ.

ಪೌರತ್ವ ಸಿಗುವುದರಿಂದ ಏನು ಲಾಭ?

ಪೌರತ್ವ ಸಿಗುವುದರಿಂದ ಏನು ಲಾಭ?

ಕೆಲವು ಮುಂದುವರಿದ ದೇಶಗಳಲ್ಲಿ ಉಚಿತ ಶಿಕ್ಷಣ, ಆರೋಗ್ಯ ಇತ್ಯಾದಿ ಅನುಕೂಲಗಳಿವೆ. ಇದರ ಜತೆಗೆ ಅಲ್ಲಿನ ಸಾಮಾಜಿಕ ಭದ್ರತೆಯೂ ಗಣನೆಗೆ ಬರುತ್ತದೆ. ಇನ್ನು ಕೆಲವು ದೇಶಗಳ ಪಾಸ್ ಪೋರ್ಟ್ ಇದ್ದಲ್ಲಿ ವೀಸಾ ನಿಯಮಗಳು ಸಲೀಸು. ಉನ್ನತ ವ್ಯಾಸಂಗ, ಉದ್ಯೋಗಕ್ಕಾಗಿ ವೀಸಾ ಪಡೆಯುವುದಕ್ಕೆ ಹೆಚ್ಚು ಶ್ರಮ ಪಡುವ ಅಗತ್ಯ ಇಲ್ಲ. ಕೆನಡಾ, ಯುಎಸ್ ಎ, ಚಿಲಿ, ಅರ್ಜೆಂಟೀನಾದಂಥ ದೇಶಗಳಲ್ಲಿ ಬರ್ತ್ ಟೂರಿಸಂಗೆ ಬೇಡಿಕೆ. ಆ ಕಾರಣದಿಂದಲೇ ಈ ವರ್ಷದ ಜನವರಿಯಲ್ಲಿ ಯುಎಸ್ ಎ ಅಧ್ಯಕ್ಷ ಬರ್ತ್ ಟೂರಿಸಂ ಮೇಲೆ ನಿರ್ಬಂಧ ಹೇರಿದರು. ಯುಎಸ್ ಎನಲ್ಲಿ ಕಾನೂನು ಬಾಹಿರವಾಗಿ ನಡೆಯುವ ಈ ವ್ಯವಹಾರದಲ್ಲಿ ಬಿಲಿಯನ್ ಡಾಲರ್ ಗಳು ಕೈ ಬದಲಾಗುತ್ತವೆ. ಅದರಲ್ಲೂ ಏಷ್ಯನ್ ರಾಷ್ಟ್ರಗಳ ನಾಗರಿಕರು ಯುಎಸ್ ಎಗೆ ತೆರಳುವ ಪ್ರಮಾಣ ವಿಪರೀತ ಹೆಚ್ಚು.

ಕೆಲವು ದೇಶಗಳಲ್ಲಿ ಕಾನೂನುಬದ್ಧ

ಕೆಲವು ದೇಶಗಳಲ್ಲಿ ಕಾನೂನುಬದ್ಧ

ಸದ್ಯಕ್ಕೆ ಕೆನಡಾ ದೇಶದಲ್ಲಿ ಬರ್ತ್ ಟೂರಿಸಂ ಕಾನೂನು ಬದ್ಧವಾಗಿದೆ. ಆ ದೇಶದ ಪೌರತ್ವ ಹುಟ್ಟಿದ ಮಗುವಿಗೆ ದೊರೆಯಲಿ ಎಂಬ ಕಾರಣಕ್ಕೆ ಅಲ್ಲಿಗೆ ತೆರಳುತ್ತಿರುವುದಾಗಿ ಘೋಷಣೆ ಮಾಡಿಯೇ ಹೋಗಬಹುದು. ಪ್ರವಾಸಿಗರ ವೀಸಾ ಪಡೆದು, ಅಲ್ಲಿಗೆ ತೆರಳಿ ಮಗುವನ್ನು ಹಡೆಯಬಹುದು. ಆ ನಂತರ ಅಲ್ಲಿ ಮಗುವಿನ ಹೆಸರನ್ನು ನೋಂದಣಿ ಮಾಡಿಸಿ ಮತ್ತು ಪಾಸ್ ಪೋರ್ಟ್ ಪಡೆದು ಹಿಂತಿರುಗಬಹುದು. ಯುಎಸ್ ಎನಲ್ಲಿ ಇದಕ್ಕೆ ಕಠಿಣ ಕಾನೂನು ಹಾಗೂ ದುಬಾರಿ ಬೆಲೆ ಇದೆ. ಆದರೆ ಕೆನಡಾ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ನಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. ಆ ದೇಶದ ಪಾಸ್ ಪೋರ್ಟ್ ಹಾಗೂ ಪೌರತ್ವ ದೊರೆತಲ್ಲಿ ಭವಿಷ್ಯದಲ್ಲಿ ಶಿಕ್ಷಣ, ಉದ್ಯೋಗ ಮತ್ತಿತರ ಕಾರಣಗಳಿಗೆ ಸಹಾಯ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪೋಷಕರು ಇಂಥ ನಿರ್ಧಾರ ಮಾಡುತ್ತಾರೆ.

ಒಳ್ಳೆ ಹಾಗೂ ಕೆಟ್ಟ ಅನುಭವಗಳು

ಒಳ್ಳೆ ಹಾಗೂ ಕೆಟ್ಟ ಅನುಭವಗಳು

ಮುಂದುವರಿದ ದೇಶಗಳೇನೋ ಸರಿ. ಇಂಥ ಹಲವು ದೇಶಗಳಲ್ಲಿ ಹೆರಿಗೆಗೆ ಸಿಕ್ಕಾಪಟ್ಟೆ ವೆಚ್ಚವಾಗುತ್ತದೆ. ಕೆಲವು ಕಂಪೆನಿಗಳು ಇಂಥ ಟೂರಿಸಂ ಅನ್ನು ಆಯೋಜಿಸುತ್ತವೆ. ಮೊದಲೇ ಹೇಳಿದಂತೆ ಯುಎಸ್ ಎ ಇದನ್ನು ಕಾನೂನುಬಾಹಿರ ಎಂದು ಪರಿಗಣಿಸುವುದರಿಂದ ಕೆಲವು ಕೆಟ್ಟ ಅನುಭವಗಳಾದ ಉದಾಹರಣೆಗಳಿವೆ. ಅದೇ ರೀತಿ ತಾಯಿಗೆ ಹೊಸ ವಾತಾವರಣದಲ್ಲಿ ಹೊಂದಿಕೊಳ್ಳುವುದು, ಅಲ್ಲಿನ ಆಹಾರ ಕ್ರಮ ಹೊಂದಿಕೆ ಆಗದಿರುವುದು, ಒತ್ತಡ ಇತ್ಯಾದಿ ಕಾರಣಗಳಿಗೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇರುತ್ತದೆ. ಇನ್ನು ಅದೇ ವೇಳೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಇರುವ, ಅನುಕೂಲ ವಾತಾವರಣ ಇರುವ ಹಾಗೂ ಬರ್ತ್ ಟೂರಿಸಂ ಪ್ರೋತ್ಸಾಹಿಸುವಂಥ ದೇಶಗಳೂ ಇವೆ. ಯಾವುದೇ ದೇಶದ ಪೌರತ್ವ ಪಡೆಯುವುದು ಸಲೀಸಲ್ಲ. ಕೆಲವರಿಗೆ ಕೆಲ ದೇಶಗಳ ಪೌರತ್ವ ಪಡೆಯುವುದು ಕನಸಾಗಿರುತ್ತದೆ. ಅಂಥವರು ತಮ್ಮ ಮಕ್ಕಳ ಮೂಲಕ ಈಡೇರಿಸಿಕೊಳ್ಳುತ್ತಾರೆ. ಆದ್ದರಿಂದ ಬರ್ತ್ ಟೂರಿಸಂ ಎಂಬುದು ಜನಪ್ರಿಯ ಹಾಗೂ ಅದೇ ವೇಳೆ ದಂಧೆಯೂ ಆಗಿದೆ.

English summary

Birth Tourism: Must Know Facts, Benefits And Other Details

Birth tourism very famous and the same time legal in many countries. Which country giving citizenship by birth, facts, benefits and other details here.
Story first published: Sunday, September 6, 2020, 11:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X