For Quick Alerts
ALLOW NOTIFICATIONS  
For Daily Alerts

Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶಿಕ್ಷಣ, ರಾಜಕೀಯ ಜೀವನದ ಬಗ್ಗೆ ತಿಳಿಯಿರಿ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಐದನೇ ಬಾರಿಗೆ ಮಂಡನೆ ಮಾಡಿರುವ ಬಜೆಟ್ ಇದಾಗಿದೆ.

2024 ಲೋಕಸಭೆ ಚುನಾವಣೆಗೂ ಮುನ್ನ ಮಂಡನೆಯಾದ ಪೂರ್ಣ ಪ್ರಮಾಣದ ಬಜೆಟ್ ಇದಾದ ಕಾರಣ, ಬಜೆಟ್ ಮೇಲಿನ ನಿರೀಕ್ಷೆಗಳು ಅಧಿಕವಾಗಿದೆ. ಎಲ್ಲ ವಲಯವು ಸರ್ಕಾರವು ಚುನಾವಣೆ ಮೇಲೆ ಕಣ್ಣಿಟ್ಟು ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಬಹುದು ಎಂಬ ಭರವಸೆಯನ್ನು ಹೊಂದಿದೆ. ತೆರಿಗೆದಾರರಿಗೆ ಸರ್ಕಾರ ಕೊಂಚ ರಿಲೀಫ್ ನೀಡಿದೆ.

Budget 2023: Budget 2023: "ಅಮೃತ ಕಾಲದ ಬಜೆಟ್", ಆಯವ್ಯಯ ಪಟ್ಟಿ ಮಂಡನೆ ಆರಂಭಿಸಿದ ವಿತ್ತ ಸಚಿವೆ

ಈ ನಡುವೆ ಕೇಂದ್ರ ವಿತ್ತ ಸಚಿವೆ ಬಗ್ಗೆ ಕೆಲವು ಮಾಹಿತಿಯನ್ನು ನಾವು ತಿಳಿಯೋಣ. ಕಳೆದ ಐದು ವರ್ಷದಿಂದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ 2019ರಿಂದ ಹಣಕಾಸು ಸಚಿವೆಯಾಗಿದ್ದಾರೆ. 2014ರಲ್ಲಿ ನಿರ್ಮಲಾ ಸೀತಾರಾಮನ್ ರಾಜ್ಯಸಭೆ ಎಂಪಿ ಆಗಿದ್ದಾರೆ. ಪ್ರಸ್ತುತ ಸಂಸತ್ತಿನ ಮೇಲ್ಮನೆಯಲ್ಲಿ ಎಂಪಿ ಆಗಿದ್ದಾರೆ. ನಿರ್ಮಲಾ ಸೀತಾರಾಮನ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ.

 ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶಿಕ್ಷಣ, ರಾಜಕೀಯ ಜೀವನ

ನಿರ್ಮಲಾ ಸೀತಾರಾಮನ್ ಶೈಕ್ಷಣಿಕ ಜೀವನ

ನಿರ್ಮಲಾ ಸೀತಾರಾಮನ್ ತಮಿಳುನಾಡಿನಲ್ಲಿ ಜನಿಸಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸೀತಾರಾಮನ್ ಮದ್ರಾಸ್ ಮತ್ತು ತಿರುಚಿರಪಳ್ಳಿಯಲ್ಲಿ ಪೂರ್ಣಗೊಳಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ (economics) ಪದವಿಯನ್ನು (ಬಿಎ) ನಿರ್ಮಲಾ ಸೀತಾರಾಮನ್ ತಿರುಚಿರಪಳ್ಳಿಯ ಸೀತಾಲಕ್ಷ್ಮೀ ರಾಮಸ್ವಾಮಿ ಕಾಲೇಜಿನಲ್ಲಿ ಪಡೆದಿದ್ದಾರೆ. ಬಳಿಕ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂಎ) ಮತ್ತು ಎಂಫಿಲ್‌ ಅನ್ನು 1984ರಲ್ಲಿ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ರಾಜಕೀಯ ಜೀವನ

ನಿರ್ಮಲಾ ಸೀತಾರಾಮನ್ ದೇಶದ ರಕ್ಷಣಾ ಸಚಿವೆಯಾಗಿಯೂ ಕಾರ್ಯ ನಿರ್ಹಹಣೆ ಮಾಡಿದ್ದಾರೆ. ಇಂದಿರಾ ಗಾಂಧಿಯ ಬಳಿಕ ನಿರ್ಮಲಾ ಸೀತಾರಾಮನ್ ಎರಡನೇ ಮಹಿಳಾ ಆರ್ಥಿಕ ಸಚಿವೆಯಾಗಿದ್ದಾರೆ. ಈ ಹಿಂದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರರು ಕೂಡಾ ಆಗಿದ್ದರು.

ನಾನು ಕೂಡಾ ಮಧ್ಯಮ ವರ್ಗದಿಂದ ಬಂದವಳು: ನಿರ್ಮಲಾ ಸೀತಾರಾಮನ್ನಾನು ಕೂಡಾ ಮಧ್ಯಮ ವರ್ಗದಿಂದ ಬಂದವಳು: ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ 2006ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2010ರಲ್ಲಿ ಬಿಜೆಪಿ ವಕ್ತಾರರಾಗಿದ್ದಾರೆ. ಆಂಧ್ರ ಪ್ರದೇಶದ ರಾಜ್ಯ ಸಭಾ ಸದಸ್ಯೆಯಾಗಿ 2014ರಲ್ಲಿ ನಿರ್ಮಲಾ ಸೀತಾರಾಮನ್ ಆಯ್ಕೆಯಾಗಿದ್ದಾರೆ. ಫೋರ್ಬ್ಸ್‌ನ ವಿಶ್ವದ 100 ಅತೀ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 36ನೇ ಸ್ಥಾನದಲ್ಲಿದ್ದಾರೆ. ಫಾರ್ಚ್ಯೂನ್ ಕೂಡಾ ನಿರ್ಮಲಾ ಸೀತಾರಾಮನ್‌ರನ್ನು ಅತೀ ಪ್ರಬಲ ಭಾರತೀಯ ಮಹಿಳೆ ಎಂದು ಗುರುತಿಸಿದೆ.

English summary

Budget 2023: Here's Details about FM Nirmala Sitharaman Education Qualification, Political Career

Union Budget 2023: Finance Minister Nirmala Sitharaman Begins Presentation of Union budget 2023-24. Here's Details about Finance Minister Nirmala Sitharaman Education Qualification, Political Career.
Story first published: Wednesday, February 1, 2023, 13:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X