For Quick Alerts
ALLOW NOTIFICATIONS  
For Daily Alerts

Budget 2023: ಕೇಂದ್ರ ಬಜೆಟ್‌ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ

|

2023-24ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡನೆ ಮಾಡಲಿದ್ದಾರೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಇದಾಗಿದೆ. ಹಾಗೆಯೇ ನರೇಂದ್ರ ಮೋದಿ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ.

ಈ ನಡುವೆ ಕೇಂದ್ರ ಬಜೆಟ್‌ ಮೇಲೆ ಹಲವಾರು ನಿರೀಕ್ಷೆಗಳು ಸಾಮಾನ್ಯವಾಗಿಯೇ ಇದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಆಗಿರುವ ಕಾರಣ ಕೇಂದ್ರ ಸರ್ಕಾರವು ಬಜೆಟ್‌ಗೆ ಅಧಿಕ ಒತ್ತು ನೀಡುವ ಸಾಧ್ಯತೆಯಿದೆ. ಮೂಲಸೌಕರ್ಯ ಹೆಚ್ಚಳ, ಉದ್ಯೋಗ ಸೃಷ್ಟಿ, ಮಧ್ಯಮ ವರ್ಗಕ್ಕೆ ಸಹಾಯಕವಾಗುವ ಕ್ರಮ, ಗ್ರಾಮೀಣ ಅಭಿವೃದ್ಧಿಗೆ ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ.

Budget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರBudget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರ

ಆದರೆ ಹಲವಾರು ಮಂದಿಗೆ ಕೇಂದ್ರ ಬಜೆಟ್‌ ಬಗ್ಗೆ ಪ್ರಮುಖವಾದ ವಿಚಾರಗಳೇ ತಿಳಿದಿಲ್ಲ. ಈ ಬಗ್ಗೆ ವಿವರವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಕೇಂದ್ರ ಬಜೆಟ್‌ನ ಇತಿಹಾಸ, ಮೊದಲು ಆರಂಭವಾಗಿದ್ದು ಯಾವಾಗ, ಅತೀ ದೊಡ್ಡ ಬಜೆಟ್‌ ಯಾವುದು, ಅತೀ ಸಣ್ಣ ಬಜೆಟ್‌ ಯಾವುದು, ಕೇಂದ್ರ ಬಜೆಟ್‌ ಮಂಡನೆ ಮಾಡಿದ ಮೊದಲ ಮಹಿಳೆ ಯಾರು, ಕಪ್ಪು ಬಜೆಟ್ ಎಂದರೇನು ಎಂಬ ಹಲವಾರು ಮಾಹಿತಿ ಈ ಲೇಖನದಲ್ಲಿದೆ ಮುಂದೆ ಓದಿ...

ದೇಶದ ಮೊದಲ ಬಜೆಟ್‌

ದೇಶದ ಮೊದಲ ಬಜೆಟ್‌

ಬಜೆಟ್ ಮುದ್ರಣ ಎಲ್ಲಿ ನಡೆಯುತ್ತದೆ?: ಮೊದಲು ಬಜೆಟ್‌ ಅನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಣ ಮಾಡಲಾಗುತ್ತಿತ್ತು. ಆದರೆ 1950ರಲ್ಲಿ ಬಜೆಟ್ ಸೋರಿಕೆ ಆಯಿತು. ಈ ಹಿನ್ನೆಲೆಯಿಂದಾಗಿ ಬಳಿಕ ನವದೆಹಲಿಯ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್‌ ಪ್ರತಿ ಮುದ್ರಣ ಆರಂಭ ಮಾಡಲಾಯಿತು. 1980 ರಲ್ಲಿ, ಹಣಕಾಸು ಸಚಿವಾಲಯದ ಕೇಂದ್ರವಾದ ನಾರ್ತ್ ಬ್ಲಾಕ್‌ನಲ್ಲಿ ಸರ್ಕಾರಿ ಮುದ್ರಣಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ಈಗ ಅಲ್ಲಿಯೇ ಮುದ್ರಣ ಮಾಡಲಾಗುತ್ತದೆ.

ದೇಶದ ಮೊದಲ ಬಜೆಟ್‌: ಭಾರತದ ಮೊದಲ ಬಜೆಟ್‌ ಅನ್ನು ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಜೇಮ್ಸ್ ವಿಲ್ಸನ್ ಏಪ್ರಿಲ್ 7, 1860 ರಂದು ಮಂಡಿಸಿದ್ದಾರೆ. ನವೆಂಬರ್ 28, 1859 ರಂದು ಭಾರತಕ್ಕೆ ಬಂದ ಜೇಮ್ಸ್ ವಿಲ್ಸನ್ ಬ್ರಿಟಿಷ್ ಸರ್ಕಾರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡ ಸಂದರ್ಭದಲ್ಲಿ ಮೊದಲ ಬಾರಿಗೆ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ನವೆಂಬರ್ 26, 1947 ರಂದು ಆಗಿನ ಹಣಕಾಸು ಸಚಿವ ಆರ್ ಕೆ ಷಣ್ಮುಖಂ ಚೆಟ್ಟಿ ಬಜೆಟ್‌ ಮಂಡಿಸಿದ್ದಾರೆ.

ಬಜೆಟ್‌ ಮಂಡಿಸಿದ ದೇಶದ ಮೊದಲ ಮಹಿಳೆ: ಇಂದಿರಾ ಗಾಂಧಿ ಭಾರತದಲ್ಲಿ ಬಜೆಟ್‌ ಮಂಡನೆ ಮಾಡಿದ ಮೊದಲ ಮಹಿಳೆ ಆಗಿದ್ದಾರೆ. 1970-71 ರ ಆರ್ಥಿಕ ವರ್ಷದಲ್ಲಿ ಅವರು ಬಜೆಟ್‌ ಮಂಡನೆ ಮಾಡಿದ್ದಾರೆ. ಆ ಬಳಿಕ 2019 ರಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು ದೇಶದಲ್ಲಿ ಬಜೆಟ್ ಮಂಡನೆ ಮಾಡಿದ ಎರಡನೇ ಮಹಿಳೆ ಆಗಿದ್ದಾರೆ.

ದೇಶದ ಕಪ್ಪು ಬಜೆಟ್: 1973-74ರಲ್ಲಿ ಮಂಡನೆ ಮಾಡಿದ ಬಜೆಟ್‌ ಅನ್ನು ದೇಶದ ಕಪ್ಪು ಬಜೆಟ್ ಎಂದು ಹೇಳಲಾಗುತ್ತದೆ. ಆ ವರ್ಷವು ಭಾರತ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದ ಸಂದರ್ಭವಾಗಿತ್ತು. ಇಂದಿರಾ ಗಾಂಧಿ ಸರ್ಕಾರದ ಹಣಕಾಸು ಸಚಿವ ಯಶವಂತರಾವ್ ಬಿ ಚವಾಣ್ 1973-74ರಲ್ಲಿ ಮಂಡನೆ ಮಾಡಿದ ಬಜೆಟ್‌ನಲ್ಲಿ ಸುಮಾರು 550 ಕೋಟಿ ರೂಪಾಯಿ ವಿತ್ತೀಯ ಕೊರತೆ ಇತ್ತು. ಈ ಹಿನ್ನೆಲೆ ಈ ಬಜೆಟ್‌ ಅನ್ನು ಕಪ್ಪು ಬಜೆಟ್ ಎಂದು ಕರೆಯಲಾಗುತ್ತದೆ.

ಸುದೀರ್ಘ ಬಜೆಟ್ ಭಾಷಣ

ಸುದೀರ್ಘ ಬಜೆಟ್ ಭಾಷಣ

ಹೆಚ್ಚಿನ ಪದಗಳ ಬಜೆಟ್ ಭಾಷಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವರು 1991 ರಲ್ಲಿ ಮಾಡಿದ ಬಜೆಟ್‌ ಭಾಷಣವು ಹೆಚ್ಚಿನ ಪದಗಳ ಬಜೆಟ್ ಭಾಷಣವಾಗಿದೆ. 18,650 ಪದಗಳನ್ನು ಒಳಗೊಂಡಿರುವ ಸುದೀರ್ಘ ಬಜೆಟ್ ಭಾಷಣ ಇದಾಗಿದೆ. 2018 ರಲ್ಲಿ, ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ 18,604 ಪದಗಳ ಭಾಷಣವನ್ನು ಮಾಡಿದ್ದು, ಎರಡನೇ ಅತಿ ದೊಡ್ಡ ಬಜೆಟ್‌ ಆಗಿದೆ.

ಸುದೀರ್ಘ ಬಜೆಟ್ ಭಾಷಣ: ದೇಶದಲ್ಲಿ ಬಜೆಟ್ ಮಂಡನೆ ಮಾಡಿದ ಎರಡನೇ ಮಹಿಳೆ ಎಂಬ ಖ್ಯಾತಿ ಪಡೆದಿರುವ ನಿರ್ಮಲಾ ಸೀತಾರಾಮನ್‌ ದೇಶದಲ್ಲಿ ಅತೀ ಹೆಚ್ಚು ಸಮಯ, ದೀರ್ಘವಾದ ಬಜೆಟ್‌ ಭಾಷಣವನ್ನು ಮಾಡಿದವರು ಆಗಿದ್ದಾರೆ. ಫೆಬ್ರವರಿ 1, 2020 ರಂದು ಕೇಂದ್ರ ಬಜೆಟ್ 2020-21 ಅನ್ನು ಮಂಡಿಸುವಾಗ 2 ಗಂಟೆ 42 ನಿಮಿಷಗಳ ಕಾಲ ಅವರು ಮಾತನಾಡಿದ್ದಾರೆ. ಇನ್ನೂ ಎರಡು ಪುಟಗಳು ಉಳಿದಿರುವ ಸಂದರ್ಭದಲ್ಲಿ ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು. ಬಜೆಟ್‌ ಭಾಷಣ ಮಾಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್‌ ಅಸ್ವಸ್ಥರಾಗಿದ್ದರು. ನಂತರ ಉಳಿದ ಭಾಷಣವನ್ನು ಸ್ಪೀಕರ್ ಮಾಡಿದರು. ಜುಲೈ 2019 ರಲ್ಲಿ ನಿರ್ಮಲಾ ಅವರು 2 ಗಂಟೆ 17 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದರು.

ಚಿಕ್ಕ ಬಜೆಟ್ ಭಾಷಣ: 1977 ರಲ್ಲಿ ಕೇವಲ 800 ಪದಗಳಲ್ಲಿ ಬಜೆಟ್‌ ಬಾಷಣ ಮಾಡಿದವರು ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್. ಈ ಭಾಷಣವನ್ನು ಇಲ್ಲಿಯವರೆಗಿನ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದು ಪರಿಗಣಿಸಲಾಗಿದೆ.

Once-in-a-Century Budget: ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1, 2021 ರಂದು ಮಂಡನೆ ಮಾಡಿದ ಬಜೆಟ್‌ ಅನ್ನು Once-in-a-Century Budget ಅಥವಾ ಶತಮಾನದಲ್ಲಿ ಒಮ್ಮೆ ಕಂಡ ಬಜೆಟ್‌ ಎಂದು ಹೇಳಿಕೊಂಡಿದ್ದಾರೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತದ ಆರ್ಥಿಕತೆಯನ್ನು ಈ ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮೂಲಕ ಪುನರುಜ್ಜೀವನಗೊಳಿಸಲು ಮುಂದಾಗಿದ್ದೇವೆ. ಆದ್ದರಿಂದ ಇದು Once-in-a-Century Budget ಎಂದು ಕರೆದಿದ್ದಾರೆ.

ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು ಯಾರು?

ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು ಯಾರು?

ಮಿಲೇನಿಯಂ ಬಜೆಟ್: ಯಶವಂತ್ ಸಿನ್ಹಾ 2000ರಲ್ಲಿ ಮಂಡನೆ ಮಾಡಿದ ಬಜೆಟ್‌ನಲ್ಲಿ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಪರಿಕರಗಳಂತಹ 21 ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಈ ಹಿನ್ನೆಲೆ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಬೆಳವಣಿಗೆಗೆ ಮಾರ್ಗಸೂಚಿಯನ್ನು ಹಾಕಿದ ಯಶವಂತ್ ಸಿನ್ಹಾರ ಬಜೆಟ್‌ ಅನ್ನು ಮಿಲೇನಿಯಮ್ ಬಜೆಟ್ ಎಂದು ಕರೆಯಲಾಗುತ್ತದೆ.

ಕ್ಯಾರೆಟ್ ಮತ್ತು ಕಡ್ಡಿ ಬಜೆಟ್: ವಿಪಿ ಸಿಂಗ್ ಮಂಡಿಸಿದ ಕೇಂದ್ರ ಬಜೆಟ್ ಭಾರತದಲ್ಲಿ ಲೈಸೆನ್ಸ್ ರಾಜ್ ಅಥವಾ ಪರ್ಮಿಟ್ ರಾಜ್ ಅನ್ನು ಕಿತ್ತುಹಾಕುವ ಮೊದಲ ಬಜೆಟ್‌ ಆಗಿದೆ. ಫೆಬ್ರವರಿ 28, 1986 ರಂದು ವಿಪಿ ಸಿಂಗ್ ಈ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ಲೈಸೆನ್ಸ್ ರಾಜ್ ಅಥವಾ ಪರ್ಮಿಟ್ ರಾಜ್ ಎಂದರೆ ನಿಯಮ ಎಂದರ್ಥ. ಈ ಬಜೆಟ್‌ ಶಿಕ್ಷೆಯ ಬಗ್ಗೆಯೂ ಉಲ್ಲೇಖ ಮಾಡಿದೆ. ಈ ಹಿನ್ನೆಲೆ ಇದನ್ನು 'ಕ್ಯಾರೆಟ್ ಮತ್ತು ಸ್ಟಿಕ್' ಬಜೆಟ್ ಎಂದು ಕರೆಯಲಾಯಿತು.

ಹೆಚ್ಚು ಬಾರಿ ಬಜೆಟ್‌ ಮಂಡನೆ ಮಾಡಿದವರು: ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದವರು ಮಾಜಿ ಪ್ರಧಾನಿ ಮೊರಾರಾಜಿ ದೇಸಾಯಿ. 1962-69ರ ಅವಧಿಯಲ್ಲಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಪಿ ಚಿದಂಬರಂ 9, ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ 8 ಮತ್ತು ಮನಮೋಹನ್ ಸಿಂಗ್ 6 ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ.

ರೋಲ್‌ಬ್ಯಾಕ್ ಬಜೆಟ್: ಯಶವಂತ್ ಸಿನ್ಹಾ 2002-03ರಲ್ಲಿ ಮಂಡನೆ ಮಾಡಿದ ಬಜೆಟ್‌ ಅನ್ನು ರೋಲ್‌ಬ್ಯಾಕ್ ಬಜೆಟ್ ಎಂದು ಕರೆಯಲಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಮಂಡನೆ ಮಾಡಿದ ಈ ಬಜೆಟ್‌ನಲ್ಲಿ ಹಲವಾರು ಪ್ರಸ್ತಾಪಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆ ರೋಲ್‌ಬ್ಯಾಕ್ ಬಜೆಟ್ ಎಂದು ಕರೆಯಲಾಗುತ್ತದೆ.

ಕಾಗದರಹಿತ ಬಜೆಟ್

ಕಾಗದರಹಿತ ಬಜೆಟ್

ಯುಗ ಬಜೆಟ್: ಭಾರತವು ಆರ್ಥಿಕ ಕುಸಿತದ ಅಂಚಿನಲ್ಲಿರುವ ಸಮಯದಲ್ಲಿ ಮನಮೋಹನ್ ಸಿಂಗ್ ಅವರ ಹೆಗ್ಗುರುತು 1991 ರ ಬಜೆಟ್ ಅನ್ನು 'ಯುಗ ಬಜೆಟ್' ಎಂದು ಕರೆಯಲಾಗುತ್ತದೆ. ಲೈಸೆನ್ಸ್ ರಾಜ್ ಅಂತ್ಯಗೊಳಿಸಿ ಆರ್ಥಿಕ ಉದಾರೀಕರಣದ ಯುಗವನ್ನು ಪ್ರಾರಂಭ ಮಾಡಿದ ಬಳಿಕ ಪಿವಿ ನರಸಿಂಹರಾವ್ ಸರ್ಕಾರದ ಅಡಿಯಲ್ಲಿ ಮಂಡನೆ ಆದ ಬಜೆಟ್‌ ಇದಾಗಿದೆ. ಈ ಬಜೆಟ್‌ನಲ್ಲಿ ಸುಂಕವನ್ನು 220 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ.

ಪೇಪರ್‌ಲೆಸ್ ಬಜೆಟ್‌: 2021-22ರಲ್ಲಿ ಕೊರೊನಾ ಕಾರಣದಿಂದಾಗಿ ಬಜೆಟ್ ಅನ್ನು ಕಾಗದರಹಿತ ಅಥವಾ ಪೇಪರ್‌ಲೆಸ್ ಅನ್ನಾಗಿ ಮಾಡಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಮೊದಲ ಬಾರಿಗೆ ಕಾಗದರಹಿತ ಬಜೆಟ್‌ ಮಂಡನೆ ಮಾಡಲಾಗಿದೆ. ಈ ವರ್ಷವೂ ಬಜೆಟ್‌ ಡಿಜಿಟಲ್‌ ಆಗಿದೆ.

ಬಜೆಟ್‌ ಮಂಡನೆಯ ದಿನ: ಈ ಹಿಂದೆ ಬ್ರಿಟಿಷರ ಕಾಲದ ಪದ್ಧತಿಯಂತೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಾಗುತ್ತಿತ್ತು. 1999 ರಲ್ಲಿ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಬಜೆಟ್ ಮಂಡನೆ ಸಮಯವನ್ನು 11 ಗಂಟೆಗೆ ಬದಲಾವಣೆ ಮಾಡಿದ್ದಾರೆ. ಅರುಣ್ ಜೇಟ್ಲಿ 2017 ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲು ಆರಂಭ ಮಾಡಿದ್ದಾರೆ.

ರೈಲ್ವೆ ಬಜೆಟ್: ಆರಂಭದಲ್ಲಿ ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡನೆ ಮಾಡಲಾಗುತ್ತಿತ್ತು. ಸುಮಾರು 92 ವರ್ಷಗಳ ಕಾಲ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡನೆ ಮಾಡಲಾಗಿದೆ. 2017ರಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನಲ್ಲಿ ಅನ್ನು ವಿಲೀನಗೊಳಿಸಲಾಗಿದೆ.

ಭಾರತದ ಕನಸಿದ ಬಜೆಟ್‌

ಭಾರತದ ಕನಸಿದ ಬಜೆಟ್‌

ಬಜೆಟ್‌ ಭಾಷೆ : 1955 ರವರೆಗೆ, ಕೇಂದ್ರ ಬಜೆಟ್ ಅನ್ನು ಇಂಗ್ಲಿಷ್‌ನಲ್ಲಿ ಮಂಡನೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ನಂತರ ಬಜೆಟ್ ಪತ್ರಿಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿಸಲು ನಿರ್ಧಾರ ಮಾಡಿತು.

ಭಾರತದ ಕನಸಿದ ಬಜೆಟ್‌: 1997-98ರಲ್ಲಿ ಪಿ ಚಿದಂಬರಂ ಮಂಡನೆ ಮಾಡಿದ ಬಜೆಟ್‌ ಅನ್ನು ಭಾರತದ ಕನಸಿದ ಬಜೆಟ್‌ ಎಂದು ಕರೆಯಲಾಗುತ್ತದೆ. ತೆರಿಗೆ ದರಗಳನ್ನು ಕಡಿಮೆ ಮಾಡಲು ಕೆಲವು ನಿಯಮಗಳನ್ನು ಈ ಬಜೆಟ್‌ನಲ್ಲಿ ತರಲಾಗಿದೆ. ವ್ಯಕ್ತಿಗಳಿಗೆ ಗರಿಷ್ಠ ಕನಿಷ್ಠ ಆದಾಯ ತೆರಿಗೆ ದರವನ್ನು 40 ಪ್ರತಿಶತದಿಂದ 30 ಪ್ರತಿಶತಕ್ಕೆ ಮತ್ತು ದೇಶೀಯ ಕಂಪನಿಗಳಿಗೆ 35 ಪ್ರತಿಶತಕ್ಕೆ ಈ ಬಜೆಟ್‌ನಲ್ಲಿ ಇಳಿಕೆ ಮಾಡಲಾಗಿದೆ. ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಕೂಡಾ 1997-98ರ ಬಜೆಟ್‌ನಲ್ಲಿ ಮಾಡಲಾಗಿದೆ. ಈ ಹಿನ್ನೆಲೆ ಈ ಬಜೆಟ್‌ ಅನ್ನು ಭಾರತದ ಕನಸಿದ ಬಜೆಟ್‌ ಅಥವಾ 'ಡ್ರೀಮ್ ಬಜೆಟ್' ಎಂದು ಕರೆಯಲಾಗುತ್ತದೆ.

English summary

Budget 2023: Know History And Interesting Facts About 'Union Budget' In Kannada

Union Budget 2023: Finance Minister Nirmala Sitharaman will Present budget on Feb 1, 2023. Know History And Facts About 'Union Budget' In Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X