For Quick Alerts
ALLOW NOTIFICATIONS  
For Daily Alerts

Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಎಲ್ಲ ತಯಾರಿಗಳು ನಡೆದಿದೆ. ಕೇಂದ್ರ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಹಲ್ವಾ ಸಮಾರಂಭವನ್ನು ನಡೆಸುತ್ತದೆ.

ಕೇಂದ್ರ ಬಜೆಟ್ ಮಂಡನೆಯಾಗುವುದಕ್ಕೂ ಕೆಲವು ದಿನಗಳ ಮುನ್ನ ಅಂದರೆ, ಬಜೆಟ್‌ನ ಎಲ್ಲ ತಯಾರಿಗಳನ್ನು ನಡೆಸಲಾಗಿದೆ ಎಂಬ ಪ್ರತೀಕವಾಗಿ ಬಜೆಟ್‌ಗೂ ಮುನ್ನ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ಪ್ರತಿ ವರ್ಷವೂ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಸಮಾರಂಭವನ್ನು ನಡೆಸಲಾಗಿಲ್ಲ.

Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್‌ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವುBudget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್‌ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರೆ ಅಧಿಕಾರಿಗಳು ಸೇರಿಕೊಂಡು ಹಲ್ವಾ ಸಮಾರಂಭವನ್ನು ನಡೆಸುತ್ತಾರೆ. ಈ ವರ್ಷ ಗಣರಾಜ್ಯೋತ್ಸವದ ದಿನವೇ ಹಲ್ವಾ ಸಮಾರಂಭವನ್ನು ಕೇಂದ್ರ ಸರ್ಕಾರವು ನಡೆಸುತ್ತಿದೆ. ಸರ್ಕಾರವು ಹಲ್ವಾ ಸಮಾರಂಭವನ್ನು ನಡೆಸುವುದು ಒಂದು ಸಂಪ್ರದಾಯವಾಗಿ ಮಾರ್ಪಡಾಗಿದೆ. ಭಾರತದ ಈ ಸಿಹಿ ತಿಂಡಿಯನ್ನು ದೊಡ್ಡ ಕಡಾಯಿಯಲ್ಲಿ ತಯಾರಿ ಮಾಡಿ ಹಂಚಿ ತಿನ್ನುವ ಮೂಲಕ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ ಏನಿದು ಹಲ್ವಾ ಸಮಾರಂಭ, ಏನಿದರ ಪ್ರಾಮುಖ್ಯತೆ ಎಂದು ತಿಳಿಯೋಣ ಮುಂದೆ ಓದಿ....

 ಬಜೆಟ್‌ಗೂ ಮುನ್ನ ಸಿಹಿ ಆರಂಭ

ಬಜೆಟ್‌ಗೂ ಮುನ್ನ ಸಿಹಿ ಆರಂಭ

ಬಜೆಟ್‌ಗೂ ಮುನ್ನ ಈ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಬಜೆಟ್‌ಗೆ ಸಂಬಂಧಿತ ಪ್ರತಿಗಳ ಪ್ರಿಂಟಿಂಗ್‌ಗೂ ಮುನ್ನ ಇದನ್ನು ನಡೆಸಲಾಗುತ್ತದೆ. ಈ ಹಿಂದೆ ಬಜೆಟ್ ಪ್ರಿಂಟಿಂಗ್ ಪ್ರಕ್ರಿಯೆ ಹಲವಾರು ತಿಂಗಳುಗಳೇ ತೆಗೆದುಕೊಳ್ಳುತ್ತಿದ್ದು ಇದಕ್ಕೂ ಮುನ್ನ ಹಲ್ವಾ ಸಮಾರಂಭವನ್ನು ಮಾಡಲಾಗುತ್ತಿತ್ತು. ಬಜೆಟ್ ಪ್ರತಿ ಮುದ್ರಣ ಮಾಡುವವರೂ ಬಜೆಟ್ ಮಂಡನೆಯಾಗುವವರೆಗೂ ಯಾರ ಸಂಪರ್ಕಕ್ಕೂ ಸಿಗದೆ ಇರುತ್ತಾರೆ. ಅದಕ್ಕೂ ಮುನ್ನ ಈ ಸಮಾರಂಭವನ್ನು ಆಯೋಜನೆ ಮಾಡಲಾಗುತ್ತದೆ. ಹಲವಾರು ದಶಕಗಳಿಂದ ಈ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ. ದೊಡ್ಡ ಕಡಾಯಿಯಲ್ಲಿ ಹಲ್ವಾವನ್ನು ತಯಾರಿಸಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಎಲ್ಲ ಅಧಿಕಾರಿಗಳಿಗೆ ಹಂಚುತ್ತಾರೆ. ದೇಶ ಅತೀ ಜನಪ್ರಿಯ ಸಿಹಿ ತಿಂಡಿಯಾದ ಹಲ್ವಾ ತಯಾರಿಸಿ ಹಂಚುವುದೇ ಈ ದಿನದ ವಿಶೇಷವಾಗಿದೆ. ಬಜೆಟ್ ಮುದ್ರಣ ಪ್ರೆಸ್ ಇರುವಲ್ಲಿಯೇ ಈ ಹಲ್ವಾ ಸಮಾರಂಭ ನಡೆಯುತ್ತದೆ.

 ಹಲ್ವಾ ಸಮಾರಂಭದ ಪ್ರಾಮುಖ್ಯತೆ
 

ಹಲ್ವಾ ಸಮಾರಂಭದ ಪ್ರಾಮುಖ್ಯತೆ

ಹಲ್ವಾ ಸಮಾರಂಭಕ್ಕೆ ಹಲವಾರು ಪ್ರಾಮುಖ್ಯತೆಗಳಿದೆ. ಎಲ್ಲ ಬಜೆಟ್ ಪ್ರಕ್ರಿಯೆ ಮುಗಿದಾಗ, ಬಜೆಟ್‌ನಲ್ಲಿನ ಯಾವುದೇ ಮಾಹಿತಿಗಳು ಹೊರಬರಬಾರದು ಎಂಬ ನಿಟ್ಟಿನಲ್ಲಿ ಬಜೆಟ್ ಪ್ರಿಂಟಿಂಗ್ ಪ್ರಕ್ರಿಯೆಯನ್ನು ಭಾಗಿಯಾದವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ನಾರ್ತ್ ಬ್ಲಾಕ್‌ನ ಬೇಸಿಸ್‌ನಲ್ಲಿ ಎಲ್ಲ ಸಿಬ್ಬಂದಿಗಳು ಬಂಧಿ ರೂಪದಲ್ಲಿ ಇರುತ್ತಾರೆ. ಯಾರೊಂದಿಗೂ ಸಂಪರ್ಕ ಮಾಡುವ ಅವಕಾಶ ಅವರಿಗಿರುವುದಿಲ್ಲ. ಸುಮಾರು 10 ದಿನಗಳ ಕಾಲ ಒಟ್ಟು 100 ಸಿಬ್ಬಂದಿಗಳು ಬಜೆಟ್ ತಯಾರಿ ಅಥವಾ ಪ್ರಿಂಟಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾದವರು ಸಂಪೂರ್ಣವಾಗಿ ಐಸೋಲೇಟ್ ಆಗಿರುತ್ತಾರೆ. ಹಣಕಾಸು ಸಚಿವೆ ಬಜೆಟ್ ಮಂಡನೆ ಮಾಡುವವರೆಗೂ ಈ ಸಿಬ್ಬಂದಿಗಳು ಯಾರ ಸಂಪರ್ಕಕ್ಕೂ ಬರುವಂತಿಲ್ಲ. ಅದಕ್ಕೂ ಮುನ್ನ ಹಲ್ವಾ ಸಮಾರಂಭವನ್ನು ನಡೆಸಲಾಗುತ್ತದೆ.

 ಸಂಪೂರ್ಣ ಕಂಗಾವಲು

ಸಂಪೂರ್ಣ ಕಂಗಾವಲು

ಇಂಟೆಲಿಜೆನ್ಸ್ ಬ್ಯುರೋ (ಐಬಿ) ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಯು ನೇರವಾಗಿ ಯಾರ ಸಂಪರ್ಕಕ್ಕೂ ಬಾರದಂತೆ ನೋಡುತ್ತದೆ. ಫೋನ್‌ ಕಾಲ್‌ಗಳ ಮೇಲೆ ನಿಗ್ರಹ ಇರಿಸುತ್ತದೆ, ಸಿಸಿಟಿವಿ ಕಂಗಾವಲು ಇರುತ್ತದೆ, ಯಾವುದೇ ಮಾಹಿತಿ ಲೀಕ್ ಆಗುವುದನ್ನು ತಡೆಯಲು ಎಲೆಕ್ಟ್ರಾನಿಕ್ ಜಾಮರ್ ಅಳವಡಿಸಲಾಗಿರುತ್ತದೆ, ಸೈಬರ್‌ ಸೆಕ್ಯೂರಿಟಿ ಇರುತ್ತದೆ, ಹಣಕಾಸು ಸಚಿವರಿಗೆ ಮಾತ್ರ ಒಳಗೆ, ಹೊರಗೆ ಹೋಗಲು ಅವಕಾಶವಿದೆ. ಆದರೆ ಯಾವುದೇ ಸಚಿವರುಗಳಿಗೂ ಮೊಬೈಲ್ ಫೋನ್‌ ಬಳಕೆಯಲ್ಲಿ ನಿರ್ಬಂಧವಿದೆ. 1950ರವರೆಗೆ ರಾಷ್ಟ್ರಪತಿ ಭವನದಲ್ಲಿ ಬಜೆಟ್ ಪ್ರತಿಯನ್ನು ಪ್ರಿಂಟ್ ಮಾಡಲಾಗುತ್ತಿತ್ತು. ಆದರೆ ಅದೇ ವರ್ಷದಲ್ಲಿ ಬಜೆಟ್ ಮಂಡನೆಗೂ ಮುನ್ನ ಮಾಹಿತಿ ಲೀಕ್ ಆದ ಕಾರಣ ಮಿಂಟೋ ರೋಡ್‌ಗೆ ಶಿಫ್ಟ್ ಮಾಡಲಾಗಿತ್ತು. 1980ರಿಂದ ಬಜೆಟ್ ಪ್ರತಿ ಮುದ್ರಣವನ್ನು ನಾರ್ತ್ ಬ್ಲಾಕ್ ಬೇಸ್‌ಮೆಂಟ್‌ಗೆ ಪ್ರತಿ ಮುದ್ರಣ ಶಿಫ್ಟ್ ಮಾಡಲಾಗಿದೆ.

English summary

Budget 2023: What is Halwa ceremony and its significance in kannada

Union Finance Minister Nirmala Sitharaman to announce union budget 2023 on February 1. What is Halwa ceremony and its significance in kannada.
Story first published: Wednesday, January 25, 2023, 18:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X