For Quick Alerts
ALLOW NOTIFICATIONS  
For Daily Alerts

ಕೋವಿಡ್-19 ಚಿಕಿತ್ಸೆಗಾಗಿ ಕೆನರಾ ಬ್ಯಾಂಕ್‌ನಿಂದ ಸಾಲ: 25 ಸಾವಿರದಿಂದ 5 ಲಕ್ಷ ರೂಪಾಯಿ

|

ಭಾರತದಲ್ಲಿ ಕೊರೊನಾ ಮಹಾಮಾರಿಯು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಕೋವಿಡ್-19 ಚಿಕಿತ್ಸೆಗೆ ಜನಸಾಮಾನ್ಯರ ಪರದಾಟ ತಪ್ಪಿಲ್ಲ. ಲಾಕ್‌ಡೌನ್‌ ನಡುವೆ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಜನರು ಸಾಕಷ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಹಾಯ ಹಸ್ತ ಚಾಚಿದೆ.

ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಪರಿಹಾರ ನೀಡಲು ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಮೂರು ರೀತಿಯ ಸಾಲ ಯೋಜನೆಗಳನ್ನು ಶುಕ್ರವಾರ ಪ್ರಕಟಿಸಿದೆ. ತನ್ನ ಗ್ರಾಹಕರಿಗೆ ಆರೋಗ್ಯ ಸಾಲ, ವ್ಯವಹಾರ ಮತ್ತು ವೈಯಕ್ತಿಕ ಸಾಲಗಳನ್ನು ನೀಡುವುದಾಗಿ ತಿಳಿಸಿದೆ.

ಕೆನರಾ ಸುರಕ್ಷಾ ವೈಯಕ್ತಿಕ ಸಾಲ ಯೋಜನೆ

ಕೆನರಾ ಸುರಕ್ಷಾ ವೈಯಕ್ತಿಕ ಸಾಲ ಯೋಜನೆ

ಈ ಯೋಜನೆ ಅಡಿಯಲ್ಲಿ ಬ್ಯಾಂಕ್ 25,000 ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಗ್ರಾಹಕರಿಗೆ ನೀಡುತ್ತದೆ. ಕೋವಿಡ್-19 ಚಿಕಿತ್ಸೆಗಾಗಿ ಈ ಯೋಜನೆಯಿಂದ ಹಣ ದೊರೆಯುತ್ತದೆ.

ಕೋವಿಡ್ ರೋಗಿಯು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗುವ ತನಕವು ಆಗುವ ವೆಚ್ಚವನ್ನು ತುಂಬಿಸಲು ಕೆನರಾ ಬ್ಯಾಂಕ್ ಈ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಕೆನರಾ ಸುರಕ್ಷ ಯೋಜನೆಯಡಿಯಲ್ಲಿ ನಿಮಗೆ ಆರು ತಿಂಗಳ ಸಾಲ ಮರುಪಾವತಿ ವಿನಾಯಿತಿ ಸಿಗುತ್ತದೆ. ಈ ಸಂದರ್ಭದಲ್ಲಿ ನೀವು ಸಾಲದ ಕಂತುಗಳನ್ನು ಪಾವತಿಸಬೇಕಾಗಿಲ್ಲ. ಇನ್ನು ಈ ಯೋಜನೆಯು ಸೆಪ್ಟೆಂಬರ್ 30, 2021ರವರೆಗೆ ಮಾನ್ಯವಾಗಿರಲಿದೆ.

 

ಕೆನರಾ ಚಿಕಿತ್ಸಾ ಹೆಲ್ತ್‌ಕೇರ್ ಕ್ರೆಡಿಟ್

ಕೆನರಾ ಚಿಕಿತ್ಸಾ ಹೆಲ್ತ್‌ಕೇರ್ ಕ್ರೆಡಿಟ್

ಈ ಯೋಜನೆಯಡಿ, ನೋಂದಾಯಿತ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಪ್ರಾಕ್ಟಿಷನರ್‌ಗಳು, ಡಯಾಗೋಸ್ಟಿಕ್ ಸೆಂಟರ್‌ಗಳು, ಲ್ಯಾಬ್‌ಗಳು ಸೇರಿದಂತೆ ಇತರೆ ಎಲ್ಲಾ ಆರೋಗ್ಯ ಸೇವೆ ಘಟಕಗಳಿಗೆ ಬ್ಯಾಂಕ್ 10 ಲಕ್ಷ ರೂಪಾಯಿಗಳಿಂದ 50 ಕೋಟಿವರೆಗೆ ಸಾಲವನ್ನು ನೀಡುತ್ತದೆ.

ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಈ ಸಾಲವು 10 ವರ್ಷಗಳ ಅವಧಿಯನ್ನು ಹೊಂದಿದ್ದು, ಮೊದಲ 18 ತಿಂಗಳವರೆಗೆ ಸಾಲ ಮರುಪಾವತಿ ವಿನಾಯಿತಿ ಇರುತ್ತದೆ. ಈ ಯೋಜನೆಯು ಮಾರ್ಚ್ 21, 2022ರವರೆಗೆ ಇರಲಿದೆ.

ಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳುಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳು

ಕೆನರಾ ಜೀವನ್‌ರೇಖಾ ಹೆಲ್ತ್‌ಕೇರ್ ಬಿಜಿನೆಸ್ ಲೋನ್

ಕೆನರಾ ಜೀವನ್‌ರೇಖಾ ಹೆಲ್ತ್‌ಕೇರ್ ಬಿಜಿನೆಸ್ ಲೋನ್

ಇದರಲ್ಲಿ, ಕೆನರಾ ಬ್ಯಾಂಕ್ ನೋಂದಾಯಿತ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಅಥವಾ ಇತರ ಹೆಲ್ತ್‌ಕೇರ್ ಉತ್ಪನ್ನಗಳ ತಯಾರಕರು ಮತ್ತು ಸರಬರಾಜುದಾರರಿಗೆ ಆ ರಿಯಾಯಿತಿ ಬಡ್ಡಿದರದಲ್ಲಿ 2 ಕೋಟಿ ವರೆಗೆ ಸಾಲವನ್ನು ನೀಡಲಿದೆ.

ಈ ಯೋಜನೆಯಡಿಯಲ್ಲಿ ಸಾಲ ಪಡೆಯುವವರಿಗೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಯಾವುದೇ ಮೇಲಾಧಾರ ಭದ್ರತೆ ಇರುವುದಿಲ್ಲ, ಇದನ್ನು ಬ್ಯಾಂಕ್ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ (ಸಿಜಿಟಿಎಂಎಸ್‌ಇ) ಅಡಿಯಲ್ಲಿ ಅಳವಡಿಕೆಯಾಗುತ್ತದೆ.

ಈ ಸೌಲಭ್ಯದಿಂದ ಸಾಲ ಪಡೆಯುವವರಿಗೆ ಬ್ಯಾಂಕ್ ಗ್ಯಾರಂಟಿ ಪ್ರೀಮಿಯಂ ಅನ್ನು ಭರಿಸಲಿದೆ. ಸಿಜಿಟಿಎಂಎಸ್‌ಇ ಯಾವುದೇ ಮೂರನೇ ವ್ಯಕ್ತಿಯ ಗ್ಯಾರೆಂಟಿ ಅಥವಾ ಮೇಲಾಧಾರವಿಲ್ಲದೆ ಅಂತಹ ರೀತಿಯ ಕೈಗಾರಿಕೆಗಳಿಗೆ ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ. ಈ ಯೋಜನೆಯು ಮಾರ್ಚ್‌ 31, 2020ರ ತನಕ ಇರಲಿದೆ.

 Alert: SBI ಎಟಿಎಂ ಹಣ ವಿತ್‌ಡ್ರಾ ಮೇಲಿನ ಸೇವಾ ಶುಲ್ಕ ಪರಿಷ್ಕರಣೆ Alert: SBI ಎಟಿಎಂ ಹಣ ವಿತ್‌ಡ್ರಾ ಮೇಲಿನ ಸೇವಾ ಶುಲ್ಕ ಪರಿಷ್ಕರಣೆ

ಆರ್‌ಬಿಐನಿಂದ 50,000 ಕೋಟಿ ರೂಪಾಯಿ ಸಾಲ ಯೋಜನೆ

ಆರ್‌ಬಿಐನಿಂದ 50,000 ಕೋಟಿ ರೂಪಾಯಿ ಸಾಲ ಯೋಜನೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೇ ಮೇ ತಿಂಗಳಿನಲ್ಲಿ 50,000 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳ ಮೂಲಕ ಸಾಲ ವಿತರಿಸುವ ಯೋಜನೆಯನ್ನು ಘೋಷಿಸಿದೆ. ಇದರ ಅಡಿಯಲ್ಲೇ ಕೆನರಾ ಬ್ಯಾಂಕ್ ಈ ಮೇಲ್ಕಂಡ ಸಾಲ ಯೋಜನೆ ಪ್ರಕಟಿಸಿದೆ.

English summary

Canara Bank announces 3 loan schemes amid fight against coronavirus; Check Details

The Canara Bank on Friday announced three types of loan schemes for its customers to provide relief amid the coronavirus pandemic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X