For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದಲ್ಲಿ 2020ನೇ ಇಸವಿ ಬರೆಯುವಾಗ ಹುಷಾರು..!

|

2019ಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಜೋರಾಗಿ ಇದೆ. ಬಹುತೇಕ ಜನರು ಹೊಸ ವರ್ಷದಿಂದ ಹೊಸತನ್ನು ಕಾಣಲು ಬಯಸುತ್ತಾರೆ. ಹೊಸ ವರ್ಷವನ್ನು ಸಂಭ್ರಮಿಸುವ ಮೊದಲು ಇದನ್ನೊಮ್ಮೆ ಓದಿ.

ಯಾರಿಗಾದರೂ ಬ್ಯಾಂಕಿನ ಚೆಕ್ ಕೊಡುವಾಗ, ಇಲ್ಲವೇ ಯಾವುದೇ ಪ್ರಮುಖ ದಾಖಲೆ ಪತ್ರಗಳಲ್ಲಿ ಸಹಿ ಹಾಕಿದಾಗ ನೀವು ವ್ಯವಹಾರದ ದಿನಾಂಕವನ್ನು ತಿಂಗಳು ಮತ್ತು ವರ್ಷದ ಜೊತೆಗೆ ನಮೂದಿಸುವುದು ಸಹಜ. ಈ ವೇಳೆ ಅನೇಕರು ಮಾಡುವ ಸಾಮಾನ್ಯ ವಿಚಾರ ಇಸವಿಯನ್ನು ಶಾರ್ಟ್ ಕಟ್‌ನಲ್ಲಿ ಬರೆಯುತ್ತಾರೆ.

ಹೊಸ ವರ್ಷದಲ್ಲಿ 2020ನೇ ಇಸವಿ ಬರೆಯುವಾಗ ಹುಷಾರು..!

ಉದಾಹರಣೆಗೆ 28-12-2019 ರ ದಿನಾಂಕವನ್ನು ಶಾರ್ಟ್‌ಕಟ್‌ನಲ್ಲಿ 28-12-19 ಎಂದು ಬರೆಯುವುದನ್ನು ನೀವು ಗಮನಿಸಿರುತ್ತೀರಿ. ಆದರೆ ನೀವು ಹೊಸ ವರ್ಷದಲ್ಲಿ ಹೀಗೆ ಬರೆದರೆ ತೊಂದರೆಗೆ ಸಿಲುಕಬೇಕಾಗಬಹುದು. ಏಕೆಂದರೆ 2020 ವರ್ಷವನ್ನು ನೀವು 20 ಎಂದು ಶಾರ್ಟ್‌ಕರ್ಟ್‌ ನಲ್ಲಿ ಬರೆದರೆ ತೊಂದರೆ ಎದುರಿಸಬೇಕಾಗಬಹುದು.

2020ರ ವರ್ಷವನ್ನು 20 ಎಂದಷ್ಟೇ ಶಾರ್ಟ್‌ಕಟ್‌ನಲ್ಲಿ ನಮೂದಿಸಿದರೆ ಅದಕ್ಕೆ ಇನ್ನೇನಾದರೂ ಸೇರಿಸಿ ನಿಮಗೆ ತೊಂದರೆ ಮಾಡಬಹುದು. ಉದಾಹರಣೆಗೆ 20ರ ಇಸವಿಯನ್ನು ತಿದ್ದಿ 2000ನೇ ಇಸವಿಯಿಂದ 2019ರವರೆಗೆ ಅಥವಾ 2020 ರಿಂದ 2099ರವರೆಗೆ ಯಾವ ಇಸವಿಯನ್ನು ಬೇಕಾದರೂ ಬರೆದುಕೊಳ್ಳಲು ಅವಕಾಶವಿರುತ್ತದೆ.

ಹೀಗಾಗಿ ಚೆಕ್‌ಗಳಲ್ಲಿ, ಒಪ್ಪಂದ ಪತ್ರಗಳಲ್ಲಿ, ಅಥವಾ ಇನ್ಯಾವುದೇ ದಾಖಲೆ ಪತ್ರಗಳಲ್ಲಿ 2020ನೇ ಇಸವಿಯನ್ನು ಬರೆಯುವಾಗ ಪೂರ್ಣವಾಗಿ ನಮೂದಿಸಿ, ಇದು ಕಾನೂನು ಸಹಿತ ಸುರಕ್ಷಿತ.

English summary

Caution Before You Write 2020 year

Before you write 2020 year in any documents or cheque caution Don't write short cut
Story first published: Saturday, December 28, 2019, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X