For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಇದ್ದರೆ ಆರ್ಥಿಕ ಹೊರೆಯಲ್ಲ: ತಪ್ಪು ತಿಳುವಳಿಕೆ ಬೇಡ

|

ಕ್ರೆಡಿಟ್‌ ಕಾರ್ಡ್, ವ್ಯವಸ್ಥಿತವಾಗಿ ಬಳಸಿಕೊಂಡರೆ ತುಂಬಾ ಉಪಕಾರಿ, ಮುಂಜಾಗ್ರತೆ ವಹಿಸದೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಆರ್ಥಿಕ ಹೊರೆ ದುಬಾರಿ. ಅನೇಕ ಜನರು ಕ್ರೆಡಿಟ್ ಕಾರ್ಡ್ ಅಂದಕೂಡಲೇ ಸಾಲ ಮಾಡುವುದು ಅಥವಾ ಸಾಲ ಪಡೆಯುವ ಕಾರ್ಡ್, ನಮ್ಮನ್ನು ಸಾಲಕ್ಕೆ ಸಿಲುಕಿಸುವ ವ್ಯವಸ್ಥೆ ಎಂದೇ ನಂಬಿದ್ದಾರೆ.

ಕ್ರೆಡಿಟ್‌ ಕಾರ್ಡ್‌ ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಖಂಡಿತ ಲಾಭ ಸಿಗುತ್ತದೆ. ಹಾಗೆಯೇ ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಕ್ರೆಡಿಟ್‌ ಕಾರ್ಡ್‌ ಉತ್ತಮವಾಗಿ ಬಳಸಿಕೊಂಡರೆ ಶಾಪಿಂಗ್ ಮಾಡುವಾಗ ಡಿಸ್ಕೌಂಟ್‌ಗಳನ್ನು ಪಡೆಯಬಹುದು. ಜೊತೆಗೆ ಇಎಂಐ ಆಯ್ಕೆಗಳು ಸಿಗುತ್ತವೆ.

ಅನೇಕ ಜನರು ಕ್ರೆಡಿಟ್ ಕಾರ್ಡ್ ಅಂದಕೂಡಲೇ ತಪ್ಪಾಗಿ ಅರ್ಥ ಮಾಡಿಕೊಂಡಿರುವವರೇ ಹೆಚ್ಚು. ಅದರಲ್ಲೂ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡರೆ ಆರ್ಥಿಕ ಹೊರೆ ಜಾಸ್ತಿ ಎಂದುಕೊಂಡಿರುವವರು ಇದ್ದಾರೆ. ಹೀಗೆ ಕ್ರೆಡಿಟ್ ಕಾರ್ಡ್ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು ಯಾವುವು? ಅದಕ್ಕೆ ಪರಿಹಾರ ಏನು? ಎಂಬುದರ ವಿವರ ಈ ಕೆಳಗಿದೆ ಓದಿ

1. ಕ್ರೆಡಿಟ್ ಕಾರ್ಡ್ ಇದ್ದರೆ ಖರ್ಚು ಜಾಸ್ತಿ

1. ಕ್ರೆಡಿಟ್ ಕಾರ್ಡ್ ಇದ್ದರೆ ಖರ್ಚು ಜಾಸ್ತಿ

ಕ್ರೆಡಿಟ್ ಕಾರ್ಡ್ ಇದ್ದರೆ ಕಷ್ಟಕಾಲಗಳಿಗೆ ನೆರವಾಗುತ್ತೆ. ತಿಂಗಳ ಕೊನೆಯಲ್ಲಿ ಇರುವ ಹಣವೆಲ್ಲ ಖಾಲಿಯಾದಾಗ ತುರ್ತು ಖರ್ಚುಗಳನ್ನು ನಿಭಾಯಿಸಲು ಇದರಿಂದ ಅನುಕೂಲ ಸಾಧ್ಯ. ಆದರೆ ಅನೇಕ ಜನರು ಕ್ರೆಡಿಟ್ ಕಾರ್ಡ್ ಇದ್ದರೆ ಖರ್ಚು ಜಾಸ್ತಿ ಎಂದು ಅಂದುಕೊಳ್ಳುತ್ತಾರೆ. ಆದರೆ ಪ್ರತಿ ತಿಂಗಳು ಹಣ ಕೊಟ್ಟು ಖರೀದಿಸುತ್ತಿದ್ದ ವ್ಯವಸ್ಥೆಯಲ್ಲಿ ಕಾರ್ಡ್ ಸ್ವೈಪ್ ಮಾಡಿ ಹಣ ಪಾವತಿ ಮಾಡುತ್ತೀರ ಅಷ್ಟೇ. ಇದಕ್ಕಿಂತ ಹೆಚ್ಚಿನ ವ್ಯತ್ಯಾಸ ಇರದು. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಾರ್ಡ್ ಬಳಸಿಕೊಂಡರೆ ಕ್ರೆಡಿಟ್ ಕಾರ್ಡ್ ನಿಮಗೆ ಆರ್ಥಿಕ ಸಹಾಯ ಸಾಧಕವಾಗಿದೆ.

ಸಲಹೆ: ಪ್ರತಿ ತಿಂಗಳು ನಿಮ್ಮ ಬಜೆಟ್ ಅಳವಡಿಸಿ ನಿಮ್ಮ ಖರ್ಚುಗಳನ್ನು ತಿಳಿದುಕೊಳ್ಳುವ ಆ್ಯಪ್‌ಗಳಿವೆ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಈ ಮೂಲಕ ನಿಮ್ಮ ಬಜೆಟ್ ಮೀರಿ ಖರ್ಚು ಮಾಡಿದರೆ ಈ ಆ್ಯಪ್ ನಿಮ್ಮನ್ನು ಎಚ್ಚರಿಸುತ್ತದೆ. ಹೆಚ್ಚಿನ ಖರ್ಚು ಮಾಡದಂತೆ ಸಲಹೆ ಒದಗಿಸುತ್ತದೆ.

 

2. ಒಂದೇ ಒಂದು ಕ್ರೆಡಿಟ್ ಕಾರ್ಡ್ ಸಾಕಪ್ಪ

2. ಒಂದೇ ಒಂದು ಕ್ರೆಡಿಟ್ ಕಾರ್ಡ್ ಸಾಕಪ್ಪ

ಹೆಚ್ಚು ಕ್ರೆಡಿಟ್ ಕಾರ್ಡ್ ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಜಾಸ್ತಿ, ಹಾಗಾಗಿ ಒಂದೇ ಒಂದು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳೋದು ಒಳಿತು ಎಂದು ನಂಬಿದವರು ಹೆಚ್ಚಿದ್ದಾರೆ. ಆದರೆ ಸತ್ಯದ ವಿಚಾರ ಏನಂದರೆ ಕ್ರೆಡಿಟ್ ಕಾರ್ಡ್ ನೀಡುವ ಹಣಕಾಸಿನ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ನಾನಾ ಬ್ರ್ಯಾಂಡ್‌ಗಳ ಜೊತೆ, ಸೇವೆಯನ್ನು ಒದಗಿಸುವ ಸಂಸ್ಥೆಗಳೊಂದಿಗೆ, ಚಿಲ್ಲರೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ.

ಒಂದು ಕಾರ್ಡ್ ಆನ್‌ಲೈನ್ ಶಾಪಿಂಗ್ ಕುರಿತು ಆಫರ್‌ಗಳನ್ನು ನೀಡುವಂತಿದ್ದರೆ, ಮತ್ತೊಂದು ಕಾರ್ಡ್ ಪ್ರಯಾಣ ಸೇವೆಯನ್ನು ನೀಡುವ ಸಂಸ್ಥೆ ಅಥವಾ ಟ್ರಾವೆಲ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಆಫರ್‌ಗಳನ್ನು ನೀಡುತ್ತವೆ. ಹೀಗಾಗಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಹೊಂದಿದ್ದರೆ ಆಫರ್‌ಗಳು ಇರುವ ಸಂದರ್ಭದಲ್ಲಿ ಅವುಗಳನ್ನು ಬಳಸಿಕೊಳ್ಳಲು ಸಾಧ್ಯ

ಸಲಹೆ: ಬೇರೆ ಬೇರೆ ಆಫರ್‌ಗಳನ್ನು ಹೊಂದಿರುವ 3-4 ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದರಿಂದ ವಿವಿಧ ವ್ಯಾಪಾರ ಮಳಿಗೆಗಳಲ್ಲಿ ನೀಡುವ ಎಲ್ಲಾ ಆಫರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

 

3. ವಾರ್ಷಿಕ ಶುಲ್ಕ ಇಲ್ಲದೆ ಫ್ರೀ ಕಾರ್ಡ್ ಇದ್ದರೆ ಉತ್ತಮ

3. ವಾರ್ಷಿಕ ಶುಲ್ಕ ಇಲ್ಲದೆ ಫ್ರೀ ಕಾರ್ಡ್ ಇದ್ದರೆ ಉತ್ತಮ

ಅನೇಕರಲ್ಲಿ ಮೂಡುವ ಸಾಮಾನ್ಯವಾದ ಪ್ರಶ್ನೆ ಇದಾಗಿದೆ. ಉಚಿತವಾಗಿ ಕಾರ್ಡ್ ಸಿಗಬೇಕಾದರೆ ಏಕೆ ವಾರ್ಷಿಕ ಶುಲ್ಕ ಪಾವತಿಸುವಂತಹ ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳಬೇಕು ಎಂಬುದು ಮನದಲ್ಲಿ ಮೂಡುವ ಪ್ರಶ್ನೆಯಾಗಿದೆ. ಆದರೆ ಉಚಿತವಾಗಿ ಯಾವುದೇ ಶುಲ್ಕವನ್ನು ಹೊಂದಿರದ ಕಾರ್ಡ್‌ಗಳು ಏರ್‌ಪೋರ್ಟ್ ಲಾಂಜ್‌ಗಳಲ್ಲಿ ಉಚಿತ ಸೇವೆಯನ್ನು ನೀಡುವುದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಅಥವಾ ಇತರೇ ಯಾವುದೇ ವ್ಯಾಪಾರಿ ಮಳಿಗೆಗಳಲ್ಲಿ ನಿಮಗೆ ಡಿಸ್ಕೌಂಟ್ ನೀಡುವುದಿಲ್ಲ. ಆದರೆ ವಾರ್ಷಿಕ ಶುಲ್ಕ ವಿಧಿಸಿ ಆಫರ್ ನೀಡುವ ಕಾರ್ಡ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ವಾರ್ಷಿಕ ಶುಲ್ಕಕ್ಕಿಂತ ದುಪ್ಪಟ್ಟು ಲಾಭವನ್ನು ಪಡೆಯಬಹುದು.

ಸಲಹೆ: ನೀವು ಸಾಮಾನ್ಯವಾಗಿ ಬಳಸುವ ವಸ್ತುಗಳು ಮತ್ತು ಸೇವೆಗಳ ಮೇಲೆ ಡಿಸ್ಕೌಂಟ್ ನೀಡುವಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

4. ಕಾರ್ಡ್‌ ಸ್ವೈಪ್ ಮಾಡಿದ 45 ದಿನಗಳವರೆಗೆ ಮರುಪಾವತಿ ಅವಕಾಶ

4. ಕಾರ್ಡ್‌ ಸ್ವೈಪ್ ಮಾಡಿದ 45 ದಿನಗಳವರೆಗೆ ಮರುಪಾವತಿ ಅವಕಾಶ

ಕ್ರೆಡಿಟ್ ಕಾರ್ಡ್‌ ಹೊಸ ಬಳಕೆದಾರರಲ್ಲಿ ಈ ಒಂದು ಗೊಂದಲ ಇರುವುದು ಸಹಜ. ಇನ್ನೂ ಮತ್ತೆ ಕೆಲವರಲ್ಲಿ ತಪ್ಪು ತಿಳುವಳಿಕೆಯು ಹೆಚ್ಚಿದೆ. ಕಾರ್ಡ್‌ನಲ್ಲಿ ಏನನ್ನೇ ಖರೀದಿಸಿದ್ರು, ಅದಕ್ಕೆ 40 ರಿಂದ 45 ದಿನಗಳವರೆಗೆ ಮರುಪಾವತಿ ಮಾಡುವ ಅವಕಾಶವಿದೆ ಎಂದು ನಂಬಿರುತ್ತಾರೆ.

ಯಾವುದೇ ಕ್ರೆಡಿಟ್ ಕಾರ್ಡ್‌ ಆದರೂ 30 ದಿನಗಳ ಬಿಲ್ಲಿಂಗ್ ವ್ಯವಸ್ಥೆ ಇರುತ್ತದೆ. ಪ್ರತಿ ಕಾರ್ಡ್‌ಗೂ ನಿರ್ದಿಷ್ಟ ಬಿಲ್ಲಿಂಗ್ ದಿನಾಂಕ ಇರುತ್ತೆ. ಬಿಲ್ಲಿಂಗ್ ದಿನಾಂಕದ ಮೊದಲ ದಿನವು ನೀವು ಏನನ್ನೇ ಖರೀದಿಸಿದ್ರು ಸುಮಾರು 50 ದಿನಗಳವರೆಗೆ ಬಡ್ಡಿ ರಹಿತವಾಗಿರುತ್ತದೆ. ಆದರೆ ಬಿಲ್ಲಿಂಗ್ ಅವಧಿ ಶುರುವಾದ ಮೇಲೆ ನೀವು ಕಾರ್ಡ್ ಬಳಸುತ್ತಾ ಹೋದಂತೆ, ನೀವು ಬಿಲ್ ಪಾವತಿ ಮಾಡಬೇಕಾಗಿರುವ ಕಡೆಯ ದಿನಾಂಕವೂ ಹತ್ತಿರವಾಗುತ್ತಾ ಹೋಗುತ್ತದೆ. ಬಿಲ್ಲಿಂಗ್‌ಗೆ ಕೊನೆಯ ದಿನಾಂಕದಲ್ಲಿ ಏನನ್ನಾದ್ರೂ ಖರೀದಿಸಿದ್ರೆ ಬಡ್ಡಿರಹಿತ ದಿನಾಂಕಗಳು ಕಡಿತವಾಗಿರುತ್ತೆ.

ಸಲಹೆ: ಒಂದಕ್ಕಿಂತ ಹೆಚ್ಚು ಕಾರ್ಡ್ ಇಟ್ಟುಕೊಳ್ಳುವುದರಿಂದ ಬಿಲ್ಲಿಂಗ್ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಈ ಮೂಲಕ ನಿಮ್ಮ ಖರ್ಚುಗಳನ್ನು ನಿಭಾಯಿಸಲು ಮತ್ತು ಬಡ್ಡಿರಹಿತ ಅವಧಿಯ ಲಾಭವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

 

5. ಹೆಚ್ಚು ರಿವಾರ್ಡ್ ಪಾಯಿಂಟ್ಸ್‌ನಿಂದ ಹೆಚ್ಚು ಲಾಭ

5. ಹೆಚ್ಚು ರಿವಾರ್ಡ್ ಪಾಯಿಂಟ್ಸ್‌ನಿಂದ ಹೆಚ್ಚು ಲಾಭ

ಗ್ರಾಹಕರು ಹೆಚ್ಚು ಖರ್ಚು ಮಾಡಲಿ ಎಂದೇ ಹೆಚ್ಚು ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದು ಸಹಜ. ಹಾಗಂತ ಹೆಚ್ಚು ರಿವಾರ್ಡ್ ಪಾಯಿಂಟ್ ಸಿಕ್ಕರೆ ನಮಗೆ ಲಾಭ ಜಾಸ್ತಿ ಎಂದು ನಂಬಿದ್ದರೆ ಅದು ನಿಜಕ್ಕೂ ತಪ್ಪಾಗುತ್ತದೆ. ರಿವಾರ್ಡ್ ಪಾಯಿಂಟ್ಸ್‌ ಪಡೆಯಬೇಕು ಎಂದೇ ಹೆಚ್ಚು ಖರ್ಚು ಮಾಡುವುದು ಸರಿಯಲ್ಲ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮಾತ್ರ ಖರ್ಚು ಮಾಡಿ. ರಿವಾರ್ಡ್‌ ಪಾಯಿಂಟ್ಸ್‌ಗಳು ಕೂಡ ನಿರ್ದಿಷ್ಠ ಅವಧಿಯನ್ನು ಹೊಂದಿರುತ್ತವೆ. ನೀವು ಬಳಸಿಕೊಳ್ಳದೆ ಹೋದರೆ ಅವುಗಳು ನಶಿಸಿಹೋಗುತ್ತವೆ.

ಸಲಹೆ: ಆಯಾ ಸಮಯಕ್ಕೆ ಅನುಗುಣವಾಗಿ ರಿವಾರ್ಡ್ ಪಾಯಿಂಟ್ಸ್‌ಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಕಂಪನಿ ಅವಕಾಶ ನೀಡಿದರೆ ನಿಮ್ಮ ಮುಂದಿನ ಬಿಲ್‌ನಲ್ಲಿ ಕಟ್ಟಬೇಕಾಗಿರುವ ಹಣದಲ್ಲಿ ಕಡಿತಗೊಳಿಸಬಹುದು.

 

6. ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ನೀಡಬಾರದು

6. ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ನೀಡಬಾರದು

ಬಹುತೇಕ ಕ್ರೆಡಿಟ್ ಕಾರ್ಡ್ ಹೊಂದಿರುವ ಪೋಷಕರು ಈ ತಪ್ಪು ಕಲ್ಪನೆಯನ್ನು ಹೊಂದಿರುವುದು ಸಹಜ. ಮಕ್ಕಳಿಗೆ ಖರ್ಚಿಗಾಗಿ ಹಣದ ಬದಲು ಕ್ರೆಡಿಟ್ ಕಾರ್ಡ್ ನೀಡಿದರೆ ಅವರಿಗೆ ಹಣದ ಮೌಲ್ಯ ಗೊತ್ತಾಗುವುದಿಲ್ಲ, ಬೇಕಾಬಿಟ್ಟಿ ಖರ್ಚು ಮಾಡಿಬಿಡುತ್ತಾರೆ ಎಂದು ಊಹಿಸಿಕೊಳ್ಳುವುದು ಸಾಮಾನ್ಯ. ಆದರೆ ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಿಗುವ ಆ್ಯಡ್ ಆನ್ ಕಾರ್ಡ್ (ಹೆಚ್ಚುವರಿ ಕಾರ್ಡ್) ಮಕ್ಕಳಿಗೆ ನೀಡಿದರೆ ಪ್ರಾಥಮಿಕ ಕಾರ್ಡ್‌ ಹೊಂದಿರುವ ಪೋಷಕರು ಮಕ್ಕಳಿಗೆ ನೀಡಿದ ಕಾರ್ಡ್‌ನಲ್ಲಿ ಖರ್ಚು ಮಾಡುವ ಮಿತಿಯನ್ನು ಲಿಮಿಟ್ ಮಾಡಬಹುದು. ಹಾಗೆಯೇ ಕಾರ್ಡ್‌ ಕುರಿತಾದ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಕೂಡ ಹೇಳಿಕೊಡಬೇಕು.

ಸಲಹೆ: ನಿಮ್ಮ ಮಕ್ಕಳೊಂದಿಗೆ ತಿಂಗಳಿಗೆ ಹೆಚ್ಚು ಖರ್ಚು ಬೇಕಾಗಬಹುದು ಎಂಬುದನ್ನು ಕೇಳಿಕೊಂಡು ಚರ್ಚಿಸಿ. ಈ ಮೂಲಕ ನಿಮ್ಮ ಮಗುವಿನ ಖರ್ಚನ್ನು ಮೇಲ್ವಿಚಾರಣೆ ಮಾಡಲು ಸಹಾಯವಾಗುತ್ತದೆ.

 

7. ಪೆಟ್ರೋಲ್ ಬಂಕ್‌ಗಳಲ್ಲಿ ಯಾವುದೇ ಲಾಭಗಳಿಲ್ಲ

7. ಪೆಟ್ರೋಲ್ ಬಂಕ್‌ಗಳಲ್ಲಿ ಯಾವುದೇ ಲಾಭಗಳಿಲ್ಲ

ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದರೆ ಸಿಗುತ್ತಿದ್ದ 0.75 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಈಗಾಗಲೇ ಸ್ಥಗಿತಗೊಂಡಿದ್ದಾಗಿದೆ. ಯಾವುದೇ ಲಾಭವಿಲ್ಲ ಕಾರ್ಡ್ ಇಟ್ಟುಕೊಂಡರೆ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಏಕೆಂದರೆ ಕೆಲವು ಕೋ ಬ್ರ್ಯಾಂಡೆಡ್ ಪೆಟ್ರೋ ಕಾರ್ಡ್‌ಗಳು ಇಂಧನವನ್ನು ಖರೀದಿಸಿದರೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತವೆ. ಕೆಲವು ಕ್ರೆಡಿಟ್‌ ಕಾರ್ಡ್ ಕಂಪನಿಗಳು ಹೆಚ್ಚು ಪೆಟ್ರೋಲ್ ಖರೀದಿಸುವವರಿಗೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುವ ಆಫರ್ ಕೂಡ ಹೊಂದಿವೆ.

ಸಲಹೆ: ಪೆಟ್ರೋಲ್ ಖರೀದಿಸಿದರೆ ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಅಥವಾ ಡಿಸ್ಕೌಂಟ್ ಸಿಗುವಂತಹ ಕಾರ್ಡ್‌ಗಳನ್ನು ಹೊಂದಿದರೆ ಹೆಚ್ಚು ಲಾಭ ಪಡೆಬಹುದು.

 

8. ಕಡಿಮೆ ಬಡ್ಡಿಯಲ್ಲಿ ಹಣ ವಿತ್‌ಡ್ರಾ ಮಾಡಬಹುದು

8. ಕಡಿಮೆ ಬಡ್ಡಿಯಲ್ಲಿ ಹಣ ವಿತ್‌ಡ್ರಾ ಮಾಡಬಹುದು

ಕ್ರೆಡಿಟ್ ಕಾರ್ಡ್ ಸಾಲವು ಸಾಲ ಪಡೆಯುವುದಕ್ಕಿಂತ ದುಬಾರಿಯಾಗಿದೆ. ನೀವು ಯಾವಾಗ ಹಣವನ್ನು ವಿತ್ ಡ್ರಾ ಮಾಡುತ್ತೀರಿ 2-3 ಪರ್ಸೆಂಟ್ ಬಡ್ಡಿ ಹಾಕುತ್ತಾರೆ. ಇದು ಆಚೆ ಎಲ್ಲಾದರೂ ಕೈ ಸಾಲ ಪಡೆದುಕೊಂಡರೆ ನೀಡುವ ಬಡ್ಡಿದರಕ್ಕಿಂತಲೂ ಕಡಿಮೆ ಇದೆ ಎಂದು ಅನೇಕರು ಅಂದುಕೊಳ್ಳುವುದುಂಟು.

ಆದರೆ ಬಿಲ್ಲಿಂಗ್ ಅವಧಿ ಕೊನೆಯಲ್ಲಿ ಹಣ ವಿತ್ ಡ್ರಾ ಮಾಡಿದಾಗ ತಿಂಗಳಿಗೆ 2-3 ಪರ್ಸೆಂಟ್ ಬಡ್ಡಿ(ಅಥವಾ 24-36 ಪರ್ಸೆಂಟ್ ವರ್ಷಕ್ಕೆ) ಬಡ್ಡಿಯನ್ನು ನೀಡುವುದರ ಜೊತೆಗೆ ಹಣ ಮುಂಗಡ ಶುಲ್ಕ 200 ರಿಂದ 500 ರುಪಾಯಿವರೆಗೂ ವಿಧಿಸಲಾಗುತ್ತದೆ. ಜೊತೆಗೆ ನೀವು ಆ ತಿಂಗಳು ಖರ್ಚು ಮಾಡಿದ ಎಲ್ಲಾ ಖರೀದಿಯ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಒಂದು ವೇಳೆ ನೀವು 10 ಸಾವಿರ ಹಣ ವಿತ್ ಡ್ರಾ ಮಾಡಿ 20 ಸಾವಿರ ರುಪಾಯಿ ಬೇರೆ ವಸ್ತು/ಸೇವೆ ಖರೀಸಿದರೆ, ಒಟ್ಟಾರೆ 30,000 ರುಪಾಯಿಗೂ ಬಡ್ಡಿಯನ್ನು ವಿಧಿಸಲಾಗುತ್ತದೆ.

ಸಲಹೆ: ನಿಮಗೆ ತುಂಬಾ ತುರ್ತು ಸನ್ನಿವೇಶ ಎದುರಾದಾಗ ಮಾತ್ರ ಕ್ರೆಡಿಟ್ ಕಾರ್ಡ್‌ನಲ್ಲಿ ಹಣ ವಿತ್‌ಡ್ರಾ ಮಾಡಿಕೊಳ್ಳಿ. ಅಲ್ಲದೆ ಹೆಚ್ಚು ಹೆಚ್ಚು ವಿತ್‌ಡ್ರಾ ಮಾಡುವ ಬದಲು ಒಂದೇ ಬಾರಿ ದೊಡ್ಡ ಮೊತ್ತವನ್ನು ವಿತ್‌ಡ್ರಾ ಮಾಡುವುದು ಒಳಿತು.

 

English summary

Credit Card Reality and Misconceptions

There are many misconceptions about credit cards and their usage. here are the 8 such myths and reality behind that facts.
Story first published: Monday, December 16, 2019, 17:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X