For Quick Alerts
ALLOW NOTIFICATIONS  
For Daily Alerts

ಈ ಪಾರ್ಟ್ ಟೈಮ್ ಬಿಜಿನೆಸ್ ಗಳಲ್ಲಿ ಸಾವಿರಗಟ್ಟಲೆ ಸಂಪಾದಿಸಿ

By ಅನಿಲ್ ಆಚಾರ್
|

ಈಗಿನ ಕಾಲದಲ್ಲಿ ಬರೀ ಉದ್ಯೋಗ ಒಂದನ್ನೇ ನೆಚ್ಚಿಕೊಂಡು ಜೀವನ ನಡೆಸುವುದು ಕಷ್ಟ ಕಣ್ರೀ. ಅದರ ಜತೆಗೆ ಸೈಡ್ ಬಿಜಿನೆಸ್ ಏನಾದರೂ ಮಾಡಿದರೇನೇ ಸ್ವಲ್ಪ ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ. -ಈ ಮಾತನ್ನು ಅಥವಾ ಇಂಥದ್ದೇ ಮಾತನ್ನು ನೀವು ಆಡಿದ್ದೀರಾ ಅಥವಾ ಕೇಳಿದ್ದೀರಾ? ಇದಕ್ಕೆ ಉತ್ತರ 'ಹೌದು' ಅಂತಾದರೆ ಸಾವಿರಗಟ್ಟಲೆ ದುಡಿಯಬಹುದಾದ ಕೆಲವು ಪಾರ್ಟ್ ಟೈಮ್ ಬಿಜಿನೆಸ್ ಐಡಿಯಾಗಳಿವೆ.

 

ಇವುಗಳನ್ನು ಏನೋ ಹೊಸದಾಗಿ ಕಂಡುಹಿಡಿದು ಹೇಳಬೇಕಾಗೇನೂ ಇಲ್ಲ. ಆದರೆ ಆ ಬಗ್ಗೆ ಒಂದೋ ನೀವು ಆಲೋಚನೆ ಮಾಡಿ, ಕೈ ಬಿಟ್ಟಿರುತ್ತೀರಿ ಅಥವಾ ನಾನು ಆ ಬಿಜಿನೆಸ್ ಮಾಡೋದು ಹೇಗೆ, ಜನ ಏನೆಂದುಕೊಂಡಾರು ಅಂತ ಸುಮ್ಮನಾಗಿರುತ್ತೀರಿ. ಮತ್ತೊಬ್ಬರಿಗೆ ಮೋಸ ಮಾಡಬೇಕು ಎಂದು ಆಲೋಚಿಸದೆ, ಶ್ರಮ ಪಟ್ಟು ಮಾಡುವ ಯಾವ ಕೆಲಸವೂ ಅವಮಾನ ಅಲ್ಲ ಎಂಬುದು ಜನಪ್ರಿಯ ನಂಬಿಕೆ.

ಅಪ್ಪ ಹೇಳಿದ ಐದು ಪಾಠಗಳು; ಬಿಜಿನೆಸ್ ಇರಲಿ, ಉದ್ಯೋಗ ಇರಲಿ ಮರೆಯದಿರಲಿಅಪ್ಪ ಹೇಳಿದ ಐದು ಪಾಠಗಳು; ಬಿಜಿನೆಸ್ ಇರಲಿ, ಉದ್ಯೋಗ ಇರಲಿ ಮರೆಯದಿರಲಿ

ಈ ನಂಬಿಕೆಯನ್ನು ನಂಬುವವರಿಗೆ ಹಲವು ದಾರಿಗಳಿವೆ. ಅವುಗಳ ಪೈಕಿ ಐದನ್ನು ಮಾತ್ರ ಆರಿಸಿ, ಈಗ ಹೇಳಲು ಹೊರಟಿದ್ದೇವೆ.

ರಿಯಲ್ ಎಸ್ಟೇಟ್

ರಿಯಲ್ ಎಸ್ಟೇಟ್

ಇಡೀ ದಿನದ ಸಮಯ ಮೀಸಲಿಡಬೇಕು ಎಂಬ ಕಡ್ಡಾಯ ಏನಿಲ್ಲದ ಸೈಡ್ ಬಿಜಿನೆಸ್ ರಿಯಲ್ ಎಸ್ಟೇಟ್. ಆದರೆ ಕೆಲವು ಪ್ರಾಥಮಿಕವಾದ ಜ್ಞಾನ ಇರಲೇಬೇಕು. ಬಾಡಿಗೆಗೂ ಭೋಗ್ಯಕ್ಕೂ ಏನು ವ್ಯತ್ಯಾಸ, ಯಾವುದು ವ್ಯಾಜ್ಯ ಇರುವ ಭೂಮಿ ಇತ್ಯಾದಿಗಳೆಲ್ಲ ಗೊತ್ತಿರಬೇಕು. ವಿಚಿತ್ರ ಆಲೋಚನೆಯ ಎರಡು ವ್ಯಕ್ತಿತ್ವಗಳನ್ನು ಎದುರುಬದುರು ಕೂಡಿಸಿಕೊಂಡು ಮಾತನಾಡಬಹುದಾದ, ಭಿನ್ನವಾದ ಅಭಿಪ್ರಾಯಗಳು ಕಾಣಿಸಿಕೊಂಡಾಗ ಮುಂದೆ ನಿಂತು ಬಗೆಹರಿಸಬಹುದಾದ ಚಾಣಾಕ್ಷತೆ ಬೇಕು. ಆದರೆ ರಿಯಲ್ ಎಸ್ಟೇಟ್ ನಲ್ಲಿ ಎಲ್ಲರೂ ಯಶಸ್ವಿ ಆಗಿ ಬಿಡುತ್ತಾರಾ ಎಂಬ ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ 'ಇಲ್ಲ'. ಯಾಕೆಂದರೆ ಮಾರ್ಕೆಟ್ ಹೇಗಿದೆ, ಜನರ ಅಗತ್ಯಗಳು ಯಾವ ರೀತಿಯಲ್ಲಿವೆ ಎಂದು ತಿಳಿದವರು ಇಲ್ಲಿ ಯಶಸ್ವಿ ಆಗುತ್ತಾರೆ. ಅಂಥವರೂ ಅದೃಷ್ಟ ಎಂಬುದನ್ನು ನಂಬುತ್ತಾರೆ. ಒಂದು ಪೂರ್ಣಾವಧಿಯ ಕೆಲಸ ಇದ್ದವರು ಈ ಕ್ಷೇತ್ರದಲ್ಲಿ ಖಂಡಿತಾ ಒಂದು ಟ್ರೈ ಕೊಡಬಹುದು. ಸಂಪಾದನೆಗೆ ಯಾವ ಮಿತಿಯೂ ಇಲ್ಲ. ಇದಕ್ಕೋಸ್ಕರ ಒಂದು ಅಂಗಡಿ ತೆರೆದು ಕೂರಬೇಕು ಎಂಬ ಕಡ್ಡಾಯವೂ ಇಲ್ಲ.

ಪಕೋಡ, ಖಾರ, ಬಜ್ಜಿ
 

ಪಕೋಡ, ಖಾರ, ಬಜ್ಜಿ

ಕುರುಕಲು ತಿಂಡಿ ಅಥವಾ ಈ ಕರಿದ ತಿಂಡಿಗಳ ಬಗ್ಗೆ ಅಷ್ಟು ಸುಲಭಕ್ಕೆ ಜನರ ಆಕರ್ಷಣೆ ಕಡಿಮೆ ಆಗಲ್ಲ. ದಿನವಿಡೀ ಇದಕ್ಕಾಗಿ ಸಮಯ ಇಡಬೇಕು ಎಂಬ ಅಗತ್ಯ ಇಲ್ಲ. ಇಂಥಲ್ಲೇ ಮಾಡಬೇಕು ಎಂಬ ಬಗ್ಗೆ ಒಂದು ವ್ಯಾಪಾರದ ಚತುರತೆ ಇದ್ದರೆ ಮಳೆಗಾಲ, ಚಳಿಗಾಲದ ಸೀಸನ್ ನಲ್ಲಿ ಒಂದಿಷ್ಟು ಹೆಚ್ಚು ವ್ಯಾಪಾರವೇ ಆಗುತ್ತದೆ. ಸಂಜೆ ಮೂರರಿಂದ ನಾಲ್ಕು ಗಂಟೆ ವ್ಯಾಪಾರ ಮಾಡಬೇಕಾಗುತ್ತದೆ. ಭಾನುವಾರ ವ್ಯಾಪಾರ ಒಂದಿಷ್ಟು ಡಲ್ ಆಗಬಹುದು. ಆದರೆ ಶ್ರದ್ಧೆ ಇಟ್ಟುಕೊಂಡು, ರುಚಿಕಟ್ಟಾದ ಬೋಂಡಾ, ಬಜ್ಜಿ, ಪಕೋಡ, ಖಾರ ಮಾಡಿದರೆ ತಿಂಗಳಿಗೆ ಸಾವಿರಗಟ್ಟಲೆ ಆದಾಯ ಮಾಡಬಹುದು. ಇದಕ್ಕೂ ಅಷ್ಟೇ ಅಂಗಡಿಯನ್ನೇ ತೆರೆಯಬೇಕು ಅಂತಿಲ್ಲ. ಜನ ಸಂಚಾರ ಹೆಚ್ಚಿಗೆ ಇರುವ, ಇಂಥ ಖಾದ್ಯಗಳನ್ನು ಖರೀದಿ ಮಾಡುವ ಮನಸ್ಥಿತಿ ಇರುವ ವರ್ಗದವರು ಇರುವ ಕಡೆ ಮಾರಾಟ ಶುರು ಮಾಡಿದರೆ ಆಯಿತು. ಕೈ ರುಚಿ ಚೆನ್ನಾಗಿದ್ದಲ್ಲಿ, ಅದೃಷ್ಟವೂ ಜತೆಯಾದರೆ ಸಾವಿರಾರು ರುಪಾಯಿ ಆದಾಯದ ಜತೆಗೆ ಕೆಲವರಿಗೆ ಕೆಲಸ ಕೂಡ ಒದಗಿಸಬಹುದು.

ಕಾಫಿ, ಟೀ, ಬನ್, ಸಿಗರೆಟ್

ಕಾಫಿ, ಟೀ, ಬನ್, ಸಿಗರೆಟ್

ಬೆಂಗಳೂರು ನಗರ ಹೊರವಲಯದಲ್ಲಿ ಮಧ್ಯರಾತ್ರಿ ಹೊತ್ತಿಗೆ ಅದ್ಭುತವಾದ ವ್ಯಾಪಾರ ಆಗುತ್ತಿರುವುದೇನಾದರೂ ಇದ್ದರೆ ಅದು ಕಾಫಿ, ಟೀ ಹಾಗೂ ಸಿಗರೆಟ್. ಸೈಕಲ್ ಅಥವಾ ಸ್ಕೂಟರ್- ಬೈಕ್ ಗಳ ಮೇಲೆ ತಂದು, ಕಾಫಿ- ಟೀ, ಬನ್, ಸಿಗರೆಟ್ ಇತ್ಯಾದಿಗಳನ್ನು ಮಾರಲಾಗುತ್ತದೆ. ಆಟೋ ಡ್ರೈವರ್ ಗಳು, ಕ್ಯಾಬ್ ಡ್ರೈವರ್ ಗಳು, ಕಂಪೆನಿಗಳಿಗೆ ಕಾರು ಓಡಿಸುವವರು, ಪತ್ರಕರ್ತರು, ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರು ಇವರೆಲ್ಲ ಇಂಥ ಕಡೆಯ ಕಾಯಂ ಗ್ರಾಹಕರು. ಆದರೆ ಸುರಕ್ಷತೆ ಬಗ್ಗೆ ಸ್ವಲ್ಪ ಮಟ್ಟಿಗೆ ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ. ಇಡೀ ದಿನದ ತಯಾರಿ ಅಗತ್ಯ ಇಲ್ಲ. ಎರಡರಿಂದ ನಾಲ್ಕು ಗಂಟೆಗಳ ವ್ಯಾಪಾರ. ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರ. ಎಷ್ಟು ಜನರು ಹೆಚ್ಚು ಓಡಾಡುತ್ತಾರೋ, ಅದರಲ್ಲೂ ಈ ಮೇಲ್ಕಂಡ ವರ್ಗದ ಜನರು ಸಂಚರಿಸುತ್ತಾರೋ ಅಷ್ಟು ಲಾಭವನ್ನು ನೋಡಬಹುದು.

ಪಾನಿಪೂರಿ, ಗೋಬಿಮಂಚೂರಿ

ಪಾನಿಪೂರಿ, ಗೋಬಿಮಂಚೂರಿ

ರಸ್ತೆ ಬದಿಯಲ್ಲಿ ಪಾನಿಪೂರಿ, ಗೋಬಿಮಂಚೂರಿ, ಗೋಲ್ಗೊಪ್ಪ ಮಾಡುವವರನ್ನು ಯಾವಾಗಲಾದರೂ ಒಮ್ಮೆ ಮಾತನಾಡಿಸಿ, ಅವರಿಗೆ ಸಂಜೆ ನಾಲ್ಕರಿಂದ ಹತ್ತು- ಹತ್ತೂವರೆ ಗಂಟೆ ಮಧ್ಯೆ ಎಷ್ಟು ವ್ಯಾಪಾರ ಆಗುತ್ತದೆ ಎಂಬುದನ್ನು ಕೇಳಿನೋಡಿ. ಸರಿಯಾದ ಲೆಕ್ಕವನ್ನು ಹೇಳಬಹುದು ಎಂಬ ಖಾತ್ರಿ ಏನಿಲ್ಲ. ಆದರೆ ಮಧ್ಯಾಹ್ನ ಮೂರು ಗಂಟೆಯಿಂದ ತಯಾರಿ ಆರಂಭಿಸುವ ಇವರು ಸಾವಿರಗಟ್ಟಲೆ ಟರ್ನ್ ಓವರ್ ನೋಡುತ್ತಾರೆ. ಲಾಭ ಕೂಡ ಉತ್ತಮವಾಗಿರುತ್ತದೆ. ಇದಕ್ಕೆ ಒಂದು ಅಂಗಡಿ ತೆರೆಯಲೇಬೇಕು ಎಂಬ ನಿಯಮ ಏನಿಲ್ಲ. ಒಂದೊಳ್ಳೆ ರಸ್ತೆ ಪಕ್ಕದಲ್ಲಿ ಶುರು ಮಾಡಬಹುದು. ಸ್ವಚ್ಛತೆ ಬಗ್ಗೆ ಗಮನ ನೀಡಿ, ಉತ್ತಮ ರುಚಿಯೂ ಇದ್ದರೆ ಫೇಲ್ಯೂರ್ ಅನ್ನೋ ಮಾತೇ ಇಲ್ಲ ಬಿಡಿ.

ಸಂಜೆ ನಂತರವೇ ಇವುಗಳ ವಹಿವಾಟು ಶುರುವಾಗುತ್ತದೆ

ಸಂಜೆ ನಂತರವೇ ಇವುಗಳ ವಹಿವಾಟು ಶುರುವಾಗುತ್ತದೆ

ಇತ್ತೀಚೆಗೆ ರಾತ್ರಿ ವೇಳೆ ದೋಸೆ, ಇಡ್ಲಿ, ಪೂರಿ, ವಡೆ, ರೈಸ್ ಬಾತ್ ಗಳು ಮಾರುವ ರಸ್ತೆ ಬದಿಯ ತಳ್ಳುಗಾಡಿಯವರು ವಿಪರೀತ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಾರೆ. ವ್ಯಾಪಾರ ಆಗದಿದ್ದರೆ ಅವರಾದರೂ ಏಕೆ ಶುರು ಮಾಡುತ್ತಿದ್ದರು, ಮುಂದುವರಿಸುತ್ತಿದ್ದರು? ಮನೆಯಲ್ಲೇ ಅಡುಗೆ ಮಾಡಿ, ದೊಡ್ಡ ದೊಡ್ಡ ಡಬ್ಬಿಯಲ್ಲಿ ತುಂಬಿಕೊಂಡು ಬಂದು ಮಾರಲಾಗುತ್ತದೆ. ಇನ್ನು ಜೋಳವನ್ನು ಮಾರುವವರು, ಚುರುಮುರಿ ಗಾಡಿಯವರು.... ನಾನಾ ಬಗೆಯವರು ನೋಡಲು ಸಿಗುತ್ತಾರೆ. ನೆನಪಿಡಿ, ಇವರ್ಯಾರೂ ಪೂರ್ಣಾವಧಿಗೆ ಆ ವ್ಯಾಪಾರ ಮಾಡುವುದಿಲ್ಲ. ಸಂಜೆ ನಂತರವೇ ಇವುಗಳ ವಹಿವಾಟು ಶುರುವಾಗುತ್ತದೆ. ಈಗಂತೂ ಅಡುಗೆ ಎಂಬುದು ಕಲೆಯಾಗಿದೆ. ಅದರಲ್ಲಿ ಏನೆಲ್ಲ ಬರುತ್ತದೆ. ಶ್ರಮ ವಹಿಸಿ ಮಾಡುವ ಕೆಲಸಕ್ಕೆ ಎಲ್ಲೆಡೆ ಗೌರವ ಇದ್ದೇ ಇದೆ. ಅದರ ಜತೆಗೆ ಹಣವೂ ಬರುತ್ತದೆ ಅಂತಾದರೆ ಸರಿಯಾದ ಪ್ಲ್ಯಾನಿಂಗ್ ರೂಪಿಸಿ, ಈ ವ್ಯವಹಾರ ಮಾಡಿದರೆ ತಪ್ಪೇನು?

English summary

Earn Thousands Of Rupees By These Part Time Business

Here is the different part time business ideas, which can earn thousands of rupees.
Story first published: Monday, February 10, 2020, 18:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X