For Quick Alerts
ALLOW NOTIFICATIONS  
For Daily Alerts

ವೆರಿಫೈಡ್ ಟ್ವಿಟ್ಟರ್ ಖಾತೆಗೆ ಬ್ಲೂ ಅಲ್ಲ ಹೊಸ ಬಣ್ಣ, ಯಾವುದು?

|

ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಜಾಗತಿಕವಾಗಿ ಹಲವಾರು ವಿದ್ಯಮಾನಗಳು ನಡೆದಿದೆ. ಟ್ವಿಟ್ಟರ್‌ನಲ್ಲಿ ಭಾರೀ ನಷ್ಟ ಉಂಟಾದ ಕಾರಣದಿಂದಾಗಿ ನಷ್ಟವನ್ನು ಸರಿದೂಗಿಸಲು ಟ್ವಿಟ್ಟರ್‌ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದಾದ ಬೆನ್ನಲ್ಲೇ ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಈ ನಡುವೆ ವೆರಿಫೈಡ್ ಟ್ವಿಟ್ಟರ್ ಖಾತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.

ಟ್ವಿಟ್ಟರ್‌ನ ವೆರಿಫೈಡ್ ಅಥವಾ ಅಧಿಕೃತ ಖಾತೆ ಎಂಬುವುದನ್ನು ಸಾಬೀತುಪಡಿಸಲು ಟ್ವಿಟ್ಟರ್ ಖಾತೆಗೆ ಬ್ಲೂಟಿಕ್ ಅನ್ನು ನೀಡಿರುತ್ತದೆ. ಅಂದರೆ ಯಾವ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸುತ್ತದೆಯೋ ಆ ಖಾತೆ ಅಧಿಕೃತ ಖಾತೆ ಎಂದು ಅರ್ಥ. ಆದರೆ ಇದಕ್ಕಾಗಿ ಖಾತೆ ಹೊಂದಿರುವವರು ಮಾಸಿಕವಾಗಿ ಹಣವನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ.

ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್‌ಗೆ ನೀವು ತೆರೆಬೇಕಾದೀತು ಮಾಸಿಕ 20 ಡಾಲರ್!ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್‌ಗೆ ನೀವು ತೆರೆಬೇಕಾದೀತು ಮಾಸಿಕ 20 ಡಾಲರ್!

ಈ ಮೊತ್ತ ಅಧಿಕ ಮಾಡಲಾಗುತ್ತದೆ, ಅಥವಾ ಇಳಿಕೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಆಗಿದ್ದವು. ಈಗ ಟ್ವಿಟ್ಟರ್ ವೆರಿಫೈಡ್ ಖಾತೆಯ ಟಿಕ್ ಮಾರ್ಕ್ ಬಣ್ಣ ಬದಲಾವಣೆಯ ಸುದ್ದಿಯಾಗುತ್ತಿದೆ. ಹಾಗಾದರೆ ಯಾವ ಬಣ್ಣ, ಇದರ ಅರ್ಥ ಏನು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಹೊಸ ಬಣ್ಣ ಯಾವುದು?

ಹೊಸ ಬಣ್ಣ ಯಾವುದು?

ಟ್ವಿಟ್ಟರ್ ಖಾತೆಯ ವೆರಿಫಿಕೇಷನ್‌ಗಾಗಿ ಈ ಹಿಂದೆ ಮಾಸಿಕವಾಗಿ 8 ಡಾಲರ್ ಅನ್ನು ಪಾವತಿ ಮಾಡಬೇಕಾಗಿತ್ತು. ಆದರೆ ಈ ಹಿಂದೆ 4 ಡಾಲರ್‌ನಷ್ಟು ಪಾವತಿ ಮಾಡಬೇಕಾಗಿತ್ತು. ಆದರೆ ಶುಕ್ರವಾರ ಟ್ವಿಟ್ಟರ್‌ನ ವೆರಿಫಿಕೇಷನ್‌ನ ಹೊಸ ಬಣ್ಣದ ಬಗ್ಗೆ ಟ್ವೀಟ್ ಮೂಲಕವೇ ಮಾಹಿತಿ ನೀಡಿದ್ದಾರೆ. ಇದರ ಪ್ರಕಾರ ಟ್ವಿಟ್ಟರ್‌ನ ವೆರಿಫೈಡ್ ಖಾತೆಯಲ್ಲಿ ಇನ್ಮುಂದೆ ಅಂದರೆ ಮುಂದಿನ ಶುಕ್ರವಾರದಿಂದ ಗೋಲ್ಡ್ (ಚಿನ್ನದ ಬಣ್ಣ) ಅಥವಾ ಗ್ರೇ (ಬೂದು) ಬಣ್ಣ ಕಾಣಿಸಿಕೊಳ್ಳಲಿದೆ.

ಈ ಬಣ್ಣದ ಅರ್ಥವೇನು?

ಈ ಬಣ್ಣದ ಅರ್ಥವೇನು?

ಯಾವ ಸಂಸ್ಥೆಯ ಖಾತೆಯನ್ನು ಅಧಿಕೃತ ಅಥವಾ ಟ್ವಿಟ್ಟರ್ ವೆರಿಫೈಡ್ ಖಾತೆಯನ್ನಾಗಿಸಲಾಗುತ್ತದೆಯೋ ಆ ಖಾತೆಯಲ್ಲಿ ಗೋಲ್ಡ್ ಟಿಕ್ ಇರುತ್ತದೆ. ಇನ್ನು ಯಾರು ತಮ್ಮ ಖಾತೆಯನ್ನು ವೆರಿಫೈ ಆಗಿರಿಸಲು ಬಯಸುತ್ತಾರೋ ಅವರ ಖಾತೆಯಲ್ಲಿ ಬ್ಲ್ಯೂ ಟಿಕ್ ಕಾಣಬಹುದು. ಸೆಲೆಬ್ರಿಟಿಗಳ ಖಾತೆಯು ಬ್ಲ್ಯೂ ಟಿಕ್‌ ಆಗಿರುತ್ತದೆ. ಇನ್ನುಳಿದಂತೆ ಗ್ರೇ ಟಿಕ್ ಇರಲಿದೆ. ಇದು ಸರ್ಕಾರದ ಖಾತೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಲ್ಲಿ ನಾವು ಇನ್ಮುಂದೆ ಗ್ರೇ ಟಿಕ್ ಕಾಣಬಹುದು. ಆದರೆ ಸಚಿವರುಗಳು ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಅವರ ಟ್ವಿಟ್ಟರ್ ಖಾತೆಯಲ್ಲೂ ಗ್ರೇ ಟಿಕ್ ಇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಣೆ ದೊರೆತಿಲ್ಲ.

 ಇದಕ್ಕೆ ಶುಲ್ಕ ಹೇಗಿರುತ್ತದೆ?

ಇದಕ್ಕೆ ಶುಲ್ಕ ಹೇಗಿರುತ್ತದೆ?

ಈ ಹೊಸ ಬಣ್ಣದ ಟಿಕ್‌ಗಳಿಗೆ ಟ್ವಿಟ್ಟರ್‌ನಲ್ಲಿ ಹೊಸ ಶುಲ್ಕ ಇರುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟಣೆ ಈವರೆಗೂ ಬಂದಿಲ್ಲ. ಆದರೆ ಎಲ್ಲ ಖಾತೆಗಳು ಮಾನ್ಯುವಲ್ ಆಗಿ ಅಥಂಟಿಫಿಕೇಷನ್ ಆಗಲಿದೆ ಎಂದು ತಿಳಿಸಿದ್ದಾರೆ. "ಮುಂದಿನ ಶುಕ್ರವಾರದ ಒಳಗೆ ನಾವು ಈ ಹೊಸ ಟಿಕ್ ಮಾರ್ಕ್ ಅನ್ನು ಜಾರಿ ಮಾಡುತ್ತೇವೆ. ಆದರೆ ತಡವಾಗಿರುವುದಕ್ಕೆ ಕ್ಷಮೆ ಇರಲಿ. ಕಂಪನಿಗಳಿಗೆ ಗೋಲ್ಡ್ ಚೆಕ್, ಸರ್ಕಾರಕ್ಕೆ ಗ್ರೇ, ಉಳಿದ ಸೆಲೆಬ್ರೆಟಿ ಮೊದಲಾದವರಿಗೆ ಬ್ಲೂ ಟಿಕ್ ಇರುತ್ತದೆ. ಎಲ್ಲ ಖಾತೆಯನ್ನು ವೆರಿಫೈ ಮಾಡಲಾಗುತ್ತದೆ. ಇದು ನೋವಿನ ವಿಚಾರ, ಆದರೆ ಅಗತ್ಯವಾಗಿದೆ," ಎಂದು ತಿಳಿಸಿದ್ದಾರೆ. ಪ್ರಸ್ತುತ 4 ಲಕ್ಷ ಟ್ವಿಟ್ಟರ್ ಖಾತೆಗಳಿಗೆ ಬ್ಲೂ ಟಿಕ್ ಇದೆ. ಪ್ರತಿ ದಿನ ಸುಮಾರು 238 ಮಿಲಿಯನ್ ಜನರು ಪ್ರತಿದಿನ ಟ್ವಿಟ್ಟರ್ ಬಳಕೆ ಮಾಡುತ್ತಾರೆ. ಇನ್ನು ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಪ್ರತಿ ದಿನ ಟ್ವಿಟ್ಟರ್ ಬಳಕೆ ಮಾಡುವವರ ಸಂಖ್ಯೆಯು 250 ಮಿಲಿಯನ್ ದಾಟಿದೆ.

English summary

Elon Musk Announces New Colours for Verified Twitter Accounts

Elon Musk announces new colours for verified Twitter accounts: Here's what Gold, Grey ticks mean.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X