For Quick Alerts
ALLOW NOTIFICATIONS  
For Daily Alerts

PF Withdrawal : ಗೃಹ ಸಾಲ ಪಾವತಿಗೆ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಿ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರೆಪೋ ದರವನ್ನು ಏರಿಸಿದೆ. ಇದರಿಂದಾಗಿ ಗೃಹ ಸಾಲದ ಇಎಂಐ ಹೆಚ್ಚಳವಾಗಿದೆ. ಹಲವಾರು ಬ್ಯಾಂಕುಗಳು ಹೊಸ ಹಾಗೂ ಈ ಹಿಂದೆ ಗೃಹ ಸಾಲ ಪಡೆದಿರುವವರ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ.

ಆದರೆ ಪ್ರಸ್ತುತ ಜನರಿಗೆ ಗೃಹ ಸಾಲವನ್ನು ಮರುಪಾವತಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿರುವ ನಡುವೆ ಇಎಂಐ ಹೊರೆ ಕೂಡಾ ಹೆಚ್ಚಾಗಿರುವುದು ಜನರ ಜೇಬಿಗೆ ಕತ್ತರಿಯನ್ನು ಹಾಕಿದೆ. ಅದಕ್ಕಾಗಿ ಹಲವಾರು ಮಂದಿ ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುವ ದಾರಿಯನ್ನು ಹಿಡಿದಿದ್ದಾರೆ.

EPFO Merge Accounts : 2 ಪಿಎಫ್‌ ಖಾತೆಯಿದೆಯೇ, ಹೀಗೆ ವಿಲೀನ ಮಾಡಿEPFO Merge Accounts : 2 ಪಿಎಫ್‌ ಖಾತೆಯಿದೆಯೇ, ಹೀಗೆ ವಿಲೀನ ಮಾಡಿ

ಜನರು ತಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಲು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡಿ ಅಧಿಕ ಮೊತ್ತವನ್ನು ಸಾಲ ಮರುಪಾವತಿ ಮಾಡಬಹುದು. ಇದರಿಂದಾಗಿ ನಿಮಗೆ ಇಎಂಐ ಕೊಂಚ ಕಡಿಮೆಯಾಗಬಹುದು. ಆದರೆ ಗೃಹ ಸಾಲದ ಮರುಪಾವತಿಗೆ ಪಿಎಫ್ ಮೊತ್ತವನ್ನು ಹೇಗೆ ವಿತ್‌ಡ್ರಾ ಮಾಡಿಕೊಳ್ಳುವುದು ಇಲ್ಲಿದೆ ವಿವರ ಮುಂದೆ ಓದಿ....

ಗೃಹ ಸಾಲ ಪಾವತಿಗೆ ಇಪಿಎಫ್‌ ವಿತ್‌ಡ್ರಾ ಮಾಡಿಕೊಳ್ಳಬಹುದಾ?

ಗೃಹ ಸಾಲ ಪಾವತಿಗೆ ಇಪಿಎಫ್‌ ವಿತ್‌ಡ್ರಾ ಮಾಡಿಕೊಳ್ಳಬಹುದಾ?

ಇಪಿಎಫ್ ಯೋಜನೆಯ ಸೆಕ್ಷನ್ 68BB ಅಡಿಯಲ್ಲಿ ನೀವು ಗೃಹ ಸಾಲವನ್ನು ಮರುಪಾವತಿ ಮಾಡಲು ಇಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಆದರೆ ಪಿಎಫ್‌ ಖಾತೆಯನ್ನು ಹೊಂದಿರುವವರ ಹೆಸರಲ್ಲಿಯೇ ಮನೆಯು ರಿಜಿಸ್ಟಾರ್ ಆಗಿರಬೇಕು. ಒಬ್ಬರ ಹೆಸರಲ್ಲಿ ಆಗಲಿ ಅಥವಾ ಅಧಿಕ ಮಂದಿಯ ಹೆಸರಲ್ಲಿ ಮನೆಯು ರಿಜಿಸ್ಟಾರ್ ಆಗಿದ್ದರು ಅದರಲ್ಲಿ ಗೃಹ ಸಾಲ ಮರುಪಾವತಿಗೆ ಹಣ ವಿತ್‌ಡ್ರಾ ಮಾಡಲು ಬಯಸುವ ಪಿಎಫ್ ಖಾತೆದಾರರ ಹೆಸರು ಕೂಡಾ ಇರಬೇಕು. ಹಾಗೆಯೇ ಕನಿಷ್ಠ 10 ವರ್ಷಗಳಾದರೂ ಪಿಎಫ್‌ ಖಾತೆಗೆ ಕೊಡುಗೆಯನ್ನು ನೀಡಿರಬೇಕು. ಹಾಗೆಯೇ ಹಣ ವಿತ್‌ಡ್ರಾ ಮಾಡಿದ ಕೆಲವು ವರ್ಷಗಳ ಕಾಲ ವ್ಯಕ್ತಿಯು ಕಾರ್ಯನಿರ್ವಹಣೆ ಮಾಡುತ್ತಿದ್ದರೆ, ವಿತ್‌ಡ್ರಾ ಮಾಡಿದ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ವಿತ್‌ಡ್ರಾ ಮಾಡುವ ಮುನ್ನ ಈ ಅಂಶ ತಿಳಿಯಿರಿ
 

ವಿತ್‌ಡ್ರಾ ಮಾಡುವ ಮುನ್ನ ಈ ಅಂಶ ತಿಳಿಯಿರಿ

ನೀವು ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವುದಕ್ಕೂ ಮುನ್ನ ಎಲ್ಲ ಪ್ರಕ್ರಿಯೆಯ ಪರಿಶೀಲನೆ ಮಾಡಿಕೊಳ್ಳಬೇಕು. ನೀವು ಪಿಎಫ್‌ ಖಾತೆಯನ್ನು ಆರಂಭಿಸಿ 10-12 ವರ್ಷಗಳು ಮಾತ್ರ ಆಗಿದ್ದರೆ, ನೀವು ಪಿಎಫ್‌ ಹಣವನ್ನು ಗೃಹ ಸಾಲ ಮರುಪಾವತಿಗೆ ಬಳಸಿ ಬಳಿಕ ಹಲವಾರು ವರ್ಷಗಳ ದುಡಿಮೆಯಲ್ಲಿ ಪಿಎಫ್ ಖಾತೆಗೆ ಕೊಡುಗೆ ನೀಡುತ್ತಾ ಸಾಗಬಹುದು. ಇಪಿಎಫ್ ಬಡ್ಡಿದರಕ್ಕಿಂತ ಗೃಹ ಸಾಲದ ಬಡ್ಡಿದರ ಅಧಿಕವಾಗಿದ್ದರೆ, ನೀವು ಇಪಿಎಫ್ ಮೊತ್ತವನ್ನು ಗೃಹ ಸಾಲ ಪಾವತಿಸಲು ಬಳಕೆ ಮಾಡಬಹುದು. ಒಂದು ವೇಳೆ ನಿಮ್ಮ ಪಿಎಫ್ ಬಡ್ಡಿದರವು ಗೃಹ ಸಾಲದ ಬಡ್ಡಿದರಕ್ಕಿಂತ ಹೆಚ್ಚಾಗಿದ್ದರೆ ಅಥವಾ ಸಮವಾಗಿದ್ದರೆ ನೀವು ಪಿಎಫ್‌ ಮೊತ್ತ ವಿತ್‌ಡ್ರಾ ಮಾಡದಿರುವುದು ಉತ್ತಮ.

ಪಿಎಫ್‌ ಮೊತ್ತ ವಿತ್‌ಡ್ರಾ ಮಾಡುವುದು ಹೇಗೆ?

ಪಿಎಫ್‌ ಮೊತ್ತ ವಿತ್‌ಡ್ರಾ ಮಾಡುವುದು ಹೇಗೆ?

ಹಂತ 1: ಇಪಿಎಫ್‌ಒ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ನಿಮ್ಮ ಯುಎಎನ್, ಪಾಸ್‌ವರ್ಡ್, ಕ್ಯಾಪ್ಚಾ ಬಳಸಿ ಲಾಗಿನ್ ಆಗಿ
ಹಂತ 3: "Online Services" ಸೆಕ್ಷನ್‌ಗೆ ಹೋಗಿ
ಹಂತ 4: ಕ್ಲೈಮ್ ಫಾರ್ಮ್ 31 ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 5: ನಿಮ್ಮ ಬ್ಯಾಂಕಿಂಗ್ ಮಾಹಿತಿ ಹಾಕಿ, ವೆರಿಫೈ ಬಟನ್ ಕ್ಲಿಕ್ ಮಾಡಿ
ಹಂತ 6: ನಿಯಮ ಹಾಗೂ ಷರತ್ತುಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ
ಹಂತ 7: ಆನ್‌ಲೈನ್ ಕ್ಲೈಮ್ ಮಾಡಲು ಮುಂದುವರಿಯಿರಿ ಮತ್ತು ಕ್ಲೈಮ್ ಸೆಟಲ್‌ಮೆಂಟ್ ಆಯ್ಕೆ ಮಾಡಿಕೊಳ್ಳಿ
ಹಂತ 8: ಹಣವನ್ನು ಅಡ್ವಾನ್ಸ್ ಆಗಿ ವಿತ್‌ಡ್ರಾ ಮಾಡುವ ಕಾರಣ ಆಯ್ಕೆ ಮಾಡಿ
ಹಂತ 9: ವಿತ್‌ಡ್ರಾ ಮಾಡುವ ಮೊತ್ತ, ವಿಳಾಸ ಮೊದಲಾದ ಮಾಹಿತಿ ನಮೂದಿಸಿ
ಹಂತ 10: ದಾಖಲೆಯಗಳನ್ನು, ಅರ್ಜಿಯ್ನನು ಅಪ್‌ಲೋಡ್ ಮಾಡಿ, ಎಲ್ಲ ಪರಿಶೀಲನೆ ಬಳಿಕ ಪಿಎಫ್ ಹಣ ನಿಮ್ಮ ಖಾತೆಗೆ ಜಮೆ ಆಗಲಿದೆ

ಗೃಹ ಸಾಲ ಪಾವತಿಗೆ ಪಿಎಫ್‌ ಮೊತ್ತ ಯಾವಾಗ ವಿತ್‌ಡ್ರಾ ಉತ್ತಮ?

ಗೃಹ ಸಾಲ ಪಾವತಿಗೆ ಪಿಎಫ್‌ ಮೊತ್ತ ಯಾವಾಗ ವಿತ್‌ಡ್ರಾ ಉತ್ತಮ?

ಗೃಹ ಸಾಲ ಪಾವತಿಯನ್ನು ಮಾಡಲು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುವ ಆಯ್ಕೆಯು ಎಂದಿಗೂ ಕೂಡಾ ಕೊನೆಯ ಆಯ್ಕೆಯಾಗಿರಬೇಕಾಗುತ್ತದೆ. ನೀವು ಅತೀ ಕೆಟ್ಟದಾದ ಆರ್ಥಿಕ ಸ್ಥಿತಿಯಲ್ಲಿ ಇದ್ದಾಗ, ಅದರಿಂದ ಹೊರಬರಲು ಈ ಪಿಎಫ್ ಮೊತ್ತವನ್ನು ಬಳಕೆ ಮಾಡಿಕೊಳ್ಳಬಹುದು. ಆದರೆ ಪ್ರಸ್ತುತ ಹಣಕಾಸು ಸ್ಥಿತಿ ಸುಧಾರಣೆಯಾದ ಬಳಿಕ ಭವಿಷ್ಯದ ಉಳಿತಾಯ ಮೊತ್ತ ಇಲ್ಲ ಎಂಬುವುದು ನೆನಪಿನಲ್ಲಿ ಇರಬೇಕಾಗುತ್ತದೆ. ಭವಿಷ್ಯಕ್ಕೆ ಇದು ತೊಂದರೆಯಾಗಲಿದೆ. ಆದ್ದರಿಂದಾಗಿ ಗೃಹ ಸಾಲ ಮರುಪಾವತಿ ಮಾಡಲು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುವುದಕ್ಕೂ ಮುನ್ನ ಸಾಲವ ಅವಧಿ ಹೆಚ್ಚಿಸುವುದು, ಎಫ್‌ಡಿಯನ್ನು ಬಳಸಿಕೊಂಡು ಮರುಪಾವತಿ ಮಾಡುವ ಕಾರ್ಯವನ್ನು ಮಾಡಬಹುದು. ಆದರೆ ಯಾವುದೇ ಆಯ್ಕೆಯಿಲ್ಲಿದಿದ್ದರೆ ಮಾತ್ರ ಪಿಎಫ್ ಮೊತ್ತ ವಿತ್‌ಡ್ರಾ ಮಾಡಿಕೊಳ್ಳಬೇಕು. ಯಾಕೆಂದರೆ ಇದು ನಿಮ್ಮ ನಿವೃತ್ತಿ ಜೀವನಕ್ಕೆ ಸಹಾಯಕವಾಗುವ ಮೊತ್ತ ಎಂಬುವುದು ನೆನಪಿನಲ್ಲಿರಲಿ.

English summary

EPF: How to Withdraw PF Amount To Repay Home Loan, Steps Here

EPF: Home loan interest rates have recently risen in response to RBI repo rate hikes. you can withdraw pf amount, How to Withdraw PF Amount To Repay Home Loan, Steps Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X