For Quick Alerts
ALLOW NOTIFICATIONS  
For Daily Alerts

ಪಿಎಫ್‌ ಹಣ ಬಳಸಿ ಎಲ್‌ಐಸಿ ಪ್ರೀಮಿಯಂ ಪಾವತಿ ಹೇಗೆ?

|

ದೇಶದಲ್ಲಿ ವಿಮಾ ಮಾರುಕಟ್ಟೆಯು ಇನ್ನೂ ದುರ್ಬಲವಾಗಿದ್ದರೂ ಸಹ, ಎಲ್‌ಐಸಿಯ ಮಾರುಕಟ್ಟೆ ಪಾಲು ಅಧಿಕವಾಗಿದೆ. ಇದಕ್ಕೆ ಕಾರಣ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಸರ್ಕಾರ ಸ್ವಾಮ್ಯ ಎಂದರೆ ಸುಳ್ಳಾಗದು. ಆದ್ದರಿಂದ, ನೀವು ನಿಯಮಿತವಾಗಿ ಪ್ರೀಮಿಯಂ ಪಾವತಿಸುವ ಎಲ್‌ಐಸಿ ವಿಮಾ ಪಾಲಿಸಿಯನ್ನು ಹೊಂದಿದ್ದರೆ, ನೀವು ಉದ್ಯೋಗಸ್ಥ ವ್ಯಕ್ತಿಯಾಗಿದ್ದರೆ ನಿಮ್ಮ ಇಪಿಎಫ್ ಖಾತೆಯ ಮೂಲಕವೂ ಪಾವತಿ ಮಾಡಬಹುದು.

ನಿಮ್ಮಲ್ಲಿ ಹಣದ ಕೊರತೆ ಇದ್ದರೆ ನೀವು ಈ ವಿಧಾನವನ್ನು ಪಾಲಿಸಬಹುದು. ಇಪಿಎಫ್ ಖಾತೆಯ ಮೂಲಕ ಎಲ್‌ಐಸಿ ವಿಮಾ ಪಾಲಿಸಿಯನ್ನು ಮಾಡಬಹುದು. ಇಪಿಎಫ್‌ಒ ಸಂಸ್ಥೆಯು ಇಪಿಎಫ್‌ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಕ್ಲೈಮ್ ಫಾರ್ಮ್ ಅಡಿಯಲ್ಲಿ ವಿವಿಧ ಆಯ್ಕೆಗಳನ್ನು ಪಟ್ಟಿ ಮಾಡಿದೆ. ಅದರ ಅಡಿಯಲ್ಲಿ ನೀವು ಸುಲಭವಾಗಿ 'Want my LIC Policy to be financed through my PF A/c' ಅನ್ನು ಪತ್ತೆ ಹಚ್ಚಬಹುದು. ಇದಕ್ಕಾಗಿ ನೀವು ಫಾರ್ಮ್ 14 ರಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರತಿ ದಿನ 150 ರೂ. ಹೂಡಿಕೆ ಮಾಡಿ ಮಕ್ಕಳ ಶಿಕ್ಷಣ, ಮದುವೆಗೆ ಹಣ ಉಳಿಸಿ!ಪ್ರತಿ ದಿನ 150 ರೂ. ಹೂಡಿಕೆ ಮಾಡಿ ಮಕ್ಕಳ ಶಿಕ್ಷಣ, ಮದುವೆಗೆ ಹಣ ಉಳಿಸಿ!

ಎಲ್ಐಸಿ ಪಾಲಿಸಿಗೆ ಇಪಿಎಫ್‌ ಮೂಲಕ ಪ್ರೀಮಿಯಂ ಪಾವತಿಯನ್ನು ನೀವು ಮಾಡಲು ಬಯಸುವಿರಾ? ಹಾಗಾದರೆ ಇಪಿಎಫ್‌ ಮೂಲಕ ಪ್ರೀಮಿಯಂ ಪಾವತಿಯನ್ನು ಹೇಗೆ ಮಾಡುವುದು ಎಂಬುದರಿಂದ ಹಿಡಿದು ಈ ಸಾಮಾಜಿಕ ಭದ್ರತಾ ವಿಚಾರದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಇಪಿಎಫ್‌ ಮೂಲಕ ಎಲ್‌ಐಸಿ ಪ್ರೀಮಿಯಂ ಪಾವತಿಗೆ ಷರತ್ತೂ ಇದೆ!

ಇಪಿಎಫ್‌ ಮೂಲಕ ಎಲ್‌ಐಸಿ ಪ್ರೀಮಿಯಂ ಪಾವತಿಗೆ ಷರತ್ತೂ ಇದೆ!

ಕ್ರಿಯೆಯು ಸುಗಮವಾಗಿ ಸಾಗಲು ಕೆಲವೊಂದು ಷರತ್ತುಗಳು ಕೂಡಾ ಇದೆ. ನಿಮ್ಮ ಇಪಿಎಫ್‌ ಮೊತ್ತವು 2 ವರ್ಷಗಳ LIC ಪ್ರೀಮಿಯಂ ಪಾವತಿ ಮೊತ್ತಕ್ಕೆ ಸಮಾನವಾಗಿರಬೇಕು. ನೀವು ಒಂದು ನಿರ್ದಿಷ್ಟ ಎಲ್‌ಐಸಿ ಯೋಜನೆಗೆ ತ್ರೈಮಾಸಿಕ ಪ್ರೀಮಿಯಂ ಪಾವತಿಯಾಗಿ 15,000 ರೂಪಾಯಿಯಿಂದ 60,000 ರೂಪಾಯಿಯನ್ನು (ಇಲ್ಲಿ GST ಪರಿಗಣಿಸುವುದಿಲ್ಲ), ಮಾಡಬೇಕಾಗಿದೆ ಎಂದುಕೊಳ್ಳಿ, ಆ ಸಂದರ್ಭದಲ್ಲಿ ನಿಮ್ಮ ಇಪಿಎಫ್‌ ಖಾತೆಯಲ್ಲಿ ಕನಿಷ್ಠ 1.2 ಲಕ್ಷ ರೂಪಾಯಿ ಹಣವನ್ನು ಹೊಂದಿರಬೇಕಾಗಿದೆ. ಅಷ್ಟು ಹಣ ಹೊಂದಿದ್ದಾರೆ ಮಾತ್ರ ಎಲ್‌ಐಸಿ ಪ್ರೀಮಿಯಂ ಪಾವತಿ ಮಾಡಲು ಸಾಧ್ಯವಾಗಲಿದೆ. ಅಲ್ಲದೆ, ಅಂತಹ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಕನಿಷ್ಟ 2 ವರ್ಷಗಳ ಕಾಲ ಇಪಿಎಫ್‌ ಖಾತೆಯ ಚಂದಾದಾರರು ಆಗಿರಬೇಕಾಗಿದೆ.

 ನೀವು ಗಮನಿಸಬೇಕಾದ ಅಂಶಗಳಿವು..

ನೀವು ಗಮನಿಸಬೇಕಾದ ಅಂಶಗಳಿವು..

ನೀವು ಎಲ್‌ಐಸಿ ಪ್ರೀಮಿಯಂ ಅನ್ನು ಇಪಿಎಫ್‌ ಖಾತೆಯ ಹಣದಿಂದ ಪಾವತಿ ಮಾಡಲು ಬಯಸುವುದಾದರೆ ನೀವು ಗಮನಿಸಬೇಕಾದ ಅಂಶವೆಂದರೆ ಇಪಿಎಫ್ ಮೂಲಕ ವಿಮಾ ಪಾಲಿಸಿಗೆ ಹಣಕಾಸು ಒದಗಿಸುವ ಪ್ರಕ್ರಿಯೆ ಅಥವಾ ಸೌಲಭ್ಯವು ಎಲ್‌ಐಸಿ ಪಾಲಿಸಿಯನ್ನು ಖರೀದಿಸುವಾಗ ಅಥವಾ ನಂತರದ ಹಂತದಲ್ಲಿ ಆಯ್ಕೆ ಮಾಡಬಹುದು ಎಂಬುವುದಾಗಿದೆ. ಇದಲ್ಲದೆ, ಒಮ್ಮೆ ನೀವು ಅಂತಹ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೆ, ನಿಮ್ಮ ಎಲ್‌ಐಸಿ ಹಾಗೂ ಇಪಿಎಫ್‌ ಖಾತೆಯನ್ನು ಪರಸ್ಪರ ಲಿಂಕ್ ಮಾಡಲಾಗುತ್ತದೆ ಇಪಿಎಫ್‌ ಮೂಲಕ ಈ ಪಾವತಿ ಸೌಲಭ್ಯವು ಎಲ್‌ಐಸಿ ಪಾಲಿಸಿದಾರರಿಗೆ ಅಥವಾ ನಿರೀಕ್ಷಿತ ಖರೀದಿದಾರರಿಗೆ ಪ್ರತ್ಯೇಕವಾಗಿ ಲಭ್ಯವಿದೆ ಮತ್ತು ಯಾವುದೇ ಇತರ ವಿಮಾ ಕಂಪನಿಯ ಪ್ರೀಮಿಯಂ ಪಾವತಿಗೆ ಬಳಸಲಾಗುವುದಿಲ್ಲ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಈ ಆಯ್ಕೆಯನ್ನು ಪುನರಾವರ್ತನೆ ಮಾಡಲು ಅಂದರೆ ಪ್ರತಿ ಪ್ರೀಮಿಯಂ ಅನ್ನು ಇಪಿಎಫ್‌ನಿಂದ ಕಡಿತ ಮಾಡಲು ನೀವು ಆಯ್ಕೆಯನ್ನು ಕೂಡಾ ಮಾಡಬಹುದು.

ಎಲ್‌ಐಸಿ: 21,500 ಕೋಟಿಗೂ ಅಧಿಕ ಕ್ಲೈಮ್ ಮಾಡದ ಹಣ: ನಿಮ್ಮ ಮೊತ್ತ ಪರಿಶೀಲನೆ ಹೇಗೆ?ಎಲ್‌ಐಸಿ: 21,500 ಕೋಟಿಗೂ ಅಧಿಕ ಕ್ಲೈಮ್ ಮಾಡದ ಹಣ: ನಿಮ್ಮ ಮೊತ್ತ ಪರಿಶೀಲನೆ ಹೇಗೆ?

 ಇಪಿಎಫ್‌ನಿಂದ ಎಲ್‌ಐಸಿ ಪ್ರೀಮಿಯಂ: ಫಾರ್ಮ್ 14ರಲ್ಲಿರಬೇಕಾದ ವಿವರ

ಇಪಿಎಫ್‌ನಿಂದ ಎಲ್‌ಐಸಿ ಪ್ರೀಮಿಯಂ: ಫಾರ್ಮ್ 14ರಲ್ಲಿರಬೇಕಾದ ವಿವರ

* ಜೀವ ವಿಮಾ ನಿಗಮದ ಶಾಖಾ ಕಚೇರಿ ಅಥವಾ ಘಟಕದ ವಿಳಾಸ, ಪಾಲಿಸಿ ಖಾತೆ
* ಪಾಲಿಸಿ/ಪ್ರಸ್ತಾಪ ಸಂಖ್ಯೆ ಮತ್ತು ದಿನಾಂಕ
* ವಿಮಾ ಮೊತ್ತ
* ಪಾಲಿಸಿಯ ಖರೀದಿಯ ದಿನಾಂಕ
* ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆಯೇ ಎಂದು ಉಲ್ಲೇಖ ಮಾಡಿ
* ಸ್ವೀಕಾರ ಮಾಡಲಾಗಿದ್ದರೆ ಮೊದಲ ಪ್ರೀಮಿಯಂ ಅನ್ನು ಯಾವ ದಿನಾಂಕದೊಳಗೆ ಪಾವತಿಸಬೇಕು ಎಂದು ಉಲ್ಲೇಖಿಸಿ
* ಪಾಲಿಸಿಯ ವೆಚ್ಚ ಉಲ್ಲೇಖ
* ವಾರ್ಷಿಕ ಪ್ರೀಮಿಯಾ ಮೊತ್ತ
* ಪ್ರೀಮಿಯಂ ಪಾವತಿಗೆ ಅಂತಿಮ ದಿನಾಂಕ
* ಕೊನೆಯ ಪ್ರೀಮಿಯಂ ಪಾವತಿಯ ದಿನಾಂಕ
* ಹೆಸರು, ನಾಮಿನಿ, ವಿಮಾ ಸಂಖ್ಯೆ ದಾಖಲೆ

ಮೇಲಿನವುಗಳನ್ನು ಹೊರತುಪಡಿಸಿ ನೀವು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಯಿಂದ ಇಪಿಎಫ್‌ ಚಂದಾದಾರು ಆಗಿದ್ದೀರಾ ಎಂದು ಘೋಷಿಸಬೇಕಾಗಿದೆ.

 

 ಎಲ್‌ಐಸಿ ಪ್ರೀಮಿಯಂ ಪಾವತಿ ಇಪಿಎಫ್‌ ಹಣ ಬಳಕೆ ಸುರಕ್ಷಿತವೇ?

ಎಲ್‌ಐಸಿ ಪ್ರೀಮಿಯಂ ಪಾವತಿ ಇಪಿಎಫ್‌ ಹಣ ಬಳಕೆ ಸುರಕ್ಷಿತವೇ?

ಟರ್ಮ್ ಇನ್ಶೂರೆನ್ಸ್ ಪಾಲಿಸಿಯಂತಹ ಕೆಲವು ಎಲ್‌ಐಸಿ ಪಾಲಿಸಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ನೀವು ಕುಟುಂಬಕ್ಕೆ ಏಕೈಕ ದುಡಿಮೆಗಾರರು ಎಂದಾದರೆ, ಪ್ರಸ್ತುತ ಆರ್ಥಿಕ ಅಡಚಣೆಯ ನಡುವೆ ನಿಮಗೆ ಹಣದ ಕೊರತೆಯಿದ್ದರೆ, ಖಂಡಿತವಾಗಿಯೂ ನಿಮ್ಮ ಇಪಿಎಫ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ ಇಪಿಎಫ್‌ ಹಣವೂ ಕೂಡಾ ನಿಮ್ಮ ಭವಿಷ್ಯದ ಸುರಕ್ಷತೆಗಾಗಿ ಎಂಬುವುದನ್ನು ಮರೆಯಬೇಡಿ. ನಿಮಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾದರೆ ಮಾತ್ರ ನೀವು ಈ ಆಯ್ಕೆ ಮಾಡಿಕೊಳ್ಳಿ.

English summary

EPFO members can pay LIC premium using EPF money, Check Here how In Kannada

EPFO members can pay LIC premium using EPF money, Check Here how In Kannada.
Story first published: Saturday, February 19, 2022, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X