For Quick Alerts
ALLOW NOTIFICATIONS  
For Daily Alerts

ವಿದೇಶಕ್ಕೆ ತೆರಳುವ ಮೊದಲು ಮಾಡಬೇಕಾದ 7 ಹಣಕಾಸಿನ ಕಾರ್ಯಗಳು

|

ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಉದ್ಯೋಗ ನಿಮಿತ್ತ ಇಲ್ಲವೇ ಬೇರೆ ಕಾರಣಗಳಿಂದ ವಿದೇಶದಲ್ಲಿ ಖಾಯಂ ನಿವಾಸಿಗಳಾಗಿ ಬಿಡುತ್ತಾರೆ. ಆದ್ರೆ ದೇಶ ಬಿಟ್ಟು ತೆರಳೋಕು ಮೊದಲು ನೀವು ಕೆಲವು ಹಣಕಾಸಿನ ಕಾರ್ಯಗಳನ್ನು ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ.

ವಿಶ್ವ ಆರ್ಥಿಕ ವೇದಿಕೆ ವರದಿ ಪ್ರಕಾರ 2015ರಲ್ಲಿ ಭಾರತದಲ್ಲಿ ಜನಿಸಿದ 15.6 ಮಿಲಿಯನ್ (ಒಂದೂವರೆ ಕೋಟಿ)ಜನರು ವಿದೇಶಕ್ಕೆ ವಲಸೆ ಹೋಗಿದ್ದಾರೆ. ಇಷ್ಟಲ್ಲದೆ ಕಳೆದ 25 ವರ್ಷಗಳಲ್ಲಿ ವಲಸೆ ಹೋಗುವವರ ಸಂಖ್ಯೆಯು ದ್ವಿಗುಣಗೊಂಡಿದೆ. ಅಲ್ಲದೆ ವಿಶ್ವದ ಒಟ್ಟು ವಲಸೆ ಜನಸಂಖ್ಯೆಗಿಂತ 2 ಪಟ್ಟು ವೇಗವಾಗಿ ಬೆಳೆಯುತ್ತದೆ.

ಅಲ್ಪಾವಧಿ ಹೂಡಿಕೆಗೆ 4 ಬೆಸ್ಟ್ ಐಡಿಯಾ

 

ಇತ್ತೀಚಿನ ದಶಕಗಳಲ್ಲಿ ಭಾರತೀಯ ವಲಸಿಗರು ನೆಲೆಸುವ ಅತ್ಯಂತ ಜನಪ್ರಿಯ ತಾಣಗಳು ಮಧ್ಯಪ್ರಾಚ್ಯ, ಉತ್ತರ ಅಮೆರಿಕ ಮತ್ತು ಯೂರೋಪ್. ಉದ್ಯೋಗ ನಿಮಿತ್ತ ಬೇರೆ ದೇಶಕ್ಕೆ ತೆರಳುವ ಜನರು ಕೆಲವೊಮ್ಮೆ ಶಾಶ್ವತ ಬದಲಾವಣೆಗೆ ಮುಂದಾಗುತ್ತಾರೆ. ಅಂತವರು ಹೊರಡುವ ಮುನ್ನ ಪೂರ್ಣಗೊಳಿಸಬೇಕಾದ 7 ಹಣಕಾಸಿನ ಕಾರ್ಯಗಳು ಇಲ್ಲಿವೆ.

1. ಬ್ಯಾಂಕ್ ಖಾತೆಯನ್ನು ಇತ್ಯರ್ಥಿಸಿ

1. ಬ್ಯಾಂಕ್ ಖಾತೆಯನ್ನು ಇತ್ಯರ್ಥಿಸಿ

ನೀವು ಭಾರತದಲ್ಲಿ ಹೆಚ್ಚು ಕಾಲ ಇರುವುದಿಲ್ಲ ಎಂದು ಬಂದಾಗ ನೀವು ಸಾಮಾನ್ಯ ಬ್ಯಾಂಕ್ ಖಾತೆಯನ್ನು ಹೊಂದುವಂತಿಲ್ಲ. ನಿಮ್ಮ ಉಳಿತಾಯ ಖಾತೆಯನ್ನು ಎನ್‌ಆರ್ಒ ಅಂದರೆ ಅನಿವಾಸಿ ಸಾಮಾನ್ಯ (Non-Resident Ordinary) ಖಾತೆಗೆ ಬದಲಾಯಿಸಬೇಕು.

ಪರಿಣಾಮ ನಿಮ್ಮ ಖಾತೆಯು ಭಾರತೀಯ ರುಪಾಯಿಗಳಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತದೆ ಮತ್ತು ದೇಶಿ ಡೆಬಿಟ್ ಕಾರ್ಡ್ ಹಾಗೂ ನೆಟ್‌ ಬ್ಯಾಂಕಿಂಗ್ ಸೌಲಭ್ಯವು ಸಿಗುತ್ತದೆ. ಇದರಿಂದ ನೀವು ದೇಶಕ್ಕೆ ಭೇಟಿ ನೀಡಿದಾಗ ಸ್ಥಳೀಯ ಪಾವತಿಗಳನ್ನು ಮಾಡಲು ಸೂಕ್ತವಾಗಿರುತ್ತದೆ. ಜೊತೆಗೆ ನೀವು ಭಾರತದಲ್ಲಿ ಷೇರುಗಳ ಮೂಲಕ, ಬಾಡಿಗೆ ಮೂಲಕ ಗಳಿಸಿದ ಆದಾಯವನ್ನು ಪಡೆಯಲು ಈ ಖಾತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಕೋಟಿಗಟ್ಟಲೆ ಸಂಬಳ ತಂದುಕೊಡುವ ಉದ್ಯೋಗಗಳಿವು

ಒಂದು ವೇಳೆ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಲ್ಲಿ , ತೆರಿಗೆ ಸರಳೀಕರಣ ದೃಷ್ಟಿಯಿಂದ ಎಲ್ಲವನ್ನೂ ಒಂದರಲ್ಲಿ ವಿಲೀನಗೊಳಿಸುವುದು ಸೂಕ್ತ. ಅಥವಾ ಉಳಿದ ಖಾತೆಗಳನ್ನು ಮುಚ್ಚುವುದು ಉತ್ತಮ. ನೀವು ವಿದೇಶಕ್ಕೆ ತೆರಳಿದ ಬಳಿಕವೂ ಎನ್‌ಆರ್‌ಇ (ಅನಿವಾಸಿ ಬಾಹ್ಯ) ಖಾತೆಯನ್ನು ಸಹ ತೆರೆಯಬಹುದು. ಈ ಖಾತೆಯು ನಿಮ್ಮ ಹಣವನ್ನು ಭಾರತೀಯೇತರ ಕರೆನ್ಸಿಗಳಲ್ಲಿ ಹಿಡಿದಿಟ್ಟುಕೊಳ್ಳುತ್ತದೆ.

ಉದಾಹರಣೆಗೆ ಅಮೆರಿಕನ್ ಡಾಲರ್‌ಗಳಲ್ಲಿ ಗಳಿಸಿದ ನಿಮ್ಮ ಆದಾಯವನ್ನು ಭಾರತೀಯ ಬ್ಯಾಂಕ್‌ನಲ್ಲಿರುವ ಈ ಖಾತೆಗೆ ವರ್ಗಾಯಿಸಲು ನಿಮಗೆ ಸಹಾಯವಾಗುತ್ತದೆ. ಇದರ ಪ್ರಯೋಜನವೆಂದರೆ ಡಾಲರ್‌ ಹಣದ ರೂಪದಲ್ಲಿಯೇ ಈ ಖಾತೆಯು ನಿರ್ವಹಿಸುತ್ತದೆ ಮತ್ತು ತೆರಿಗೆ ಮುಕ್ತವಾಗಿರುತ್ತದೆ. ನೀವು ಈ ಖಾತೆಯನ್ನು ಬೇಕಾದರೆ ಭಾರತೀಯ ನಿವಾಸಿಯೊಂದಿಗೆ ಜಂಟಿಯಾಗಿ ಹೊಂದಬಹುದು (ಉದಾಹರಣೆಗೆ, ನಿಮ್ಮ ಸಂಗಾತಿಯು ಭಾರತದಲ್ಲಿ ವಾಸಿಸುತ್ತಿದ್ದರೆ ಅವರು ಭಾರತೀಯ ರುಪಾಯಿಗಳಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದು).

2. ನಿಮ್ಮ ಸ್ವತ್ತುಗಳನ್ನು ದ್ರವೀಕರಿಸುವುದು (Liquidating your assets)
 

2. ನಿಮ್ಮ ಸ್ವತ್ತುಗಳನ್ನು ದ್ರವೀಕರಿಸುವುದು (Liquidating your assets)

ವಿದೇಶದಲ್ಲಿ ನಿಮಗಾಗಿ ಕೆಲಸ ಕಾಯುತ್ತಿರುವಾಗ ತೆರಳಬೇಕಾದ ಸಂದರ್ಭ ಬರುತ್ತದೆ. ಆ ವೇಳೆ ಮನೆ, ಬಟ್ಟೆ, ಊಟ, ಇತರೆ ಮೂಲ ಅಗತ್ಯತೆಗಳನ್ನು ಪೂರೈಸಲು ಹಣದ ಅವಶ್ಯಕತೆ ಇರುತ್ತದೆ. ನೀವು ತೆರಳುವ ನಗರವು ಎಷ್ಟರ ಮಟ್ಟಿಗೆ ದುಬಾರಿ ಅಥವಾ ಅಗ್ಗವಾಗಿದೆ ಎಂಬುದರ ಮೇಲೆ ಹಣದ ಅಗತ್ಯತೆ ಇರುತ್ತದೆ. ಹೀಗಾಗಿ ನೀವು ಎಲ್ಲಿ ಹೂಡಿಕೆ ಮಾಡುತ್ತೀರಾ ಎಂಬುದನ್ನು ನಿರ್ಧರಿಸಬೇಕು.

ಅಮೆರಿಕಾ, ಕೆನಡಾದಂತಹ ರಾಷ್ಟ್ರಗಳಲ್ಲಿ ನೀವು ದೇಶದ ಹೊರಗೆ ಗಳಿಸಿದ ಎಲ್ಲಾ ಗಳಿಕೆಗಳಿಗೆ ವಿದೇಶಿ ಖಾತೆ ತೆರಿಗೆ ಅನುಸರಣೆ ಕಾಯ್ದೆ (ಎಫ್‌ಟಿಸಿಎ)ಯ ನಿಬಂಧನೆಗಳನ್ನು ಪಾಲಿಸಬೇಕು. ಹೀಗಾಗಿ ನಿಮ್ಮ ಹೂಡಿಕೆಗಳಿಂದ ಗಳಿಸುವ ಆದಾಯವು ಎಲ್ಲಾ ತೊಂದರೆಗಳಿಗೆ ಯೋಗ್ಯವಾಗಿದೆಯೇ ಎಂದು ನೀವು ನಿರ್ಧರಿಸಬೇಕು.

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ...

ನೀವು ಭಾರತದಲ್ಲಿ ಮನೆ ಅಥವಾ ಭೂಮಿಯನ್ನು ಹೊಂದಿದ್ದರೆ ದಿವಾಳಿಯಾಗುವ ನಿರ್ಧಾರವೂ ನಿಮ್ಮ ನಿರ್ಧಾರದ ಮೇಲೆ ಅವಲಂಭಿತವಾಗಿರುತ್ತದೆ. ನೀವು ವಿದೇಶದಲ್ಲಿದ್ದಾಗ ನಿಮ್ಮ ಮನೆ ಅಥವಾ ಭೂಮಿಯನ್ನು ಬಾಡಿಗೆಗೆ ನೀಡಬಹುದು. ಆದರೆ ಕಳ್ಳತನ ಅಥವಾ ಬೆಂಕಿಯ ಅನಾಹುತದಂತಹ ಘಟನೆಗಳು ಸಂಭವಿಸಿದ್ದಲ್ಲಿ ಕಾಲ ಕಾಲಕ್ಕೆ ನೋಡಿಕೊಳ್ಳಲು ಭಾರತದಲ್ಲಿ ನಿಮಗೆ ಯಾರಾದರೂ ಬೇಕಾಗಬಹುದು.

ಅಲ್ಲದೆ ಆಸ್ತಿ ತೆರಿಗೆ ಮತ್ತು ಉಪಯುಕ್ತ ಬಿಲ್‌ಗಳ ನಿರ್ವಹಣೆಗೆ ಸಂಬಂಧಿಸಿದ ಖರ್ಚುಗಳನ್ನು ಸಹ ನೀವು ನೋಡಿಕೊಳ್ಳಬೇಕಾಗುತ್ತದೆ.

3. ಡಿಮ್ಯಾಟ್ ಅಕೌಂಟ್

3. ಡಿಮ್ಯಾಟ್ ಅಕೌಂಟ್

ನಿಮ್ಮ ಡಿಮ್ಯಾಟ್ ಖಾತೆಯಲ್ಲಿರುವ ಷೇರುಗಳು ಅಥವಾ ಇತರೆ ಸೆಕ್ಯುರಿಟಿಗಳನ್ನು ಮುಕ್ತಾಯಗೊಳಿಸಬೇಕು ಎಂದು ಬಯಸಿದ್ದಲ್ಲಿ, ವಿದೇಶಕ್ಕೆ ತೆರಳುವ ಮುನ್ನ ಖಾತೆಯನ್ನು ಮುಚ್ಚಬಹುದು. ಒಂದು ವೇಳೆ ಆ ಹೂಡಿಕೆಗಳನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಬಯಸಿದ್ದಲ್ಲಿ ನಿಮ್ಮ ಡಿಮ್ಯಾಟ್ ಖಾತೆಯನ್ನು NRO ಅಥವಾ NRE ಖಾತೆಗೆ ನೇಮಿಸಬಹುದು.

ಈ ಮೂಲಕ ಭಾರತದಿಂದ ಗಳಿಸಿದ ಆದಾಯವನ್ನು NRO ಖಾತೆಗೆ ವರ್ಗಾಯಿಸಬಹದು ಮತ್ತು ವಿದೇಶದಲ್ಲಿ ಹೂಡಿಕೆಯ ಆದಾಯವನ್ನು NRE ಖಾತೆಗೆ ಕಳುಹಿಸಬಹುದು.

4. ಮ್ಯೂಚುವಲ್ ಫಂಡ್ಸ್

4. ಮ್ಯೂಚುವಲ್ ಫಂಡ್ಸ್

ಭಾರತದಲ್ಲಿ ಆಸ್ತಿ ನಿರ್ವಹಣಾ ಕಂಪನಿಯೊಂದಿಗೆ ನೀವು ಮ್ಯೂಚುವಲ್ ಫಂಡ್ ಹೂಡಿಕೆಯನ್ನು ನಿರ್ವಹಿಸುತ್ತಿದ್ದರೆ, ನಿಮ್ಮ ಎನ್‌ಆರ್‌ಐ ಸ್ಥಿತಿಯನ್ನು ಕೆವೈಸಿ ವಿವರಗಳಲ್ಲಿ ನವೀಕರಿಸಬೇಕು. ಮತ್ತು ಬಂಡವಾಳವನ್ನು ನಿಮ್ಮ ಎನ್‌ಆರ್‌ಒ(Non-Resident Ordinary) ಖಾತೆಯೊಂದಿಗೆ ಲಿಂಕ್ ಮಾಡಬೇಕು.

ಆದಾಗ್ಯೂ ನೀವು ಎನ್ಆರ್ಒ ಖಾತೆಯೊಂದಿಗೆ ಲಿಂಕ್ ಮಾಡುವ ಮೊದಲು ನಿಮ್ಮ ಬಂಡವಾಳ ಹೂಡಿಕೆಯ ವ್ಯವಸ್ಥಾಪಕರೊಂದಿಗೆ ಮಾತನಾಡಬೇಕು. ಎನ್‌ಆರ್‌ಒ ಹೂಡಿಕೆ ಸಂಬಂಧಿಸಿದ ಎಎಮ್‌ಸಿಯ ನೀತಿಗಳ ಕುರಿತು ತಿಳಿದುಕೊಳ್ಳಬೇಕು. ಮತ್ತು ಬಂಡವಾಳ ನಿರ್ವಹಿಸುವ ಹೆಚ್ಚುವರಿ ವೆಚ್ಚಗಳನ್ನು ಸಹ ಅಳೆಯಬೇಕಾಗುತ್ತದೆ. ಅಂತೆಯೇ ನೀವು ಹೂಡಿಕೆಯಿಂದ ನಿರ್ಗಮಿಸಲು ಬಯಸುತ್ತೀರಾ ಎಂದು ಸಹ ನಿರ್ಧರಿಸಬೇಕಾಗುತ್ತದೆ.

5. ಪಿಪಿಎಫ್ ಅಥವಾ ಎನ್‌ಎಸ್‌ಸಿ

5. ಪಿಪಿಎಫ್ ಅಥವಾ ಎನ್‌ಎಸ್‌ಸಿ

ಅನಿವಾಸಿ ಭಾರತೀಯರಿಗೆ (ಎನ್‌ಆರ್ಐ) ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(ಎನ್‌ಎಸ್‌ಸಿ) ದಂತಹ ಸರ್ಕಾರಿ ಬೆಂಬಲಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅನುಮತಿ ಇರುವುದಿಲ್ಲ. ಒಂದು ವೇಳೆ ಈ ಮೊದಲೇ ಖಾತೆಗಳಿದ್ದು ಆನಂತರ ಅನಿವಾಸಿ ಭಾರತೀಯರಾದವರಿಗೆ ಮಾತ್ರ ಈ ಖಾತೆಯನ್ನು ಹಿಡಿದಿಟ್ಟುಕೊಳ್ಳಲು ಅನುಮತಿ ಇರುತ್ತದೆ.

ಇಂತಹ ವ್ಯಕ್ತಿಗಳು ಮತ್ತೆ ಹೊಸದಾಗಿ ಹೂಡಿಕೆ ಮಾಡುವಂತಿಲ್ಲ. ಆದರೆ ಈ ಹಿಂದೆ ಹೂಡಿಕೆ ಮಾಡಿರುವ ಹಣಕ್ಕೆ ಬಡ್ಡಿ ಬರುತ್ತದೆ. ಯೋಜನೆಯ ಕೊನೆಗೆ (ಪಿಪಿಎಫ್ 15 ವರ್ಷ ಮತ್ತು ಎನ್‌ಎಸ್‌ಸಿ 5 ವರ್ಷ) ಖಾತೆಯನ್ನು ಹೊಂದಿದ್ದ ವ್ಯಕ್ತಿಗೆ ಹೂಡಿಕೆಯ ಹಣ ಮತ್ತು ಬಡ್ಡಿ ಸಂಪೂರ್ಣವಾಗಿ ಸಿಗುತ್ತದೆ.

1 ಲಕ್ಷ ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು 40-50 ಸಾವಿರ ಆದಾಯ ಗಳಿಸಿ

ಒಂದು ವೇಳೆ ಯೋಜನೆಯ ಪೂರ್ಣಾವಧಿಗೂ ಮೊದಲೇ ಖಾತೆಯನ್ನು ಮುಚ್ಚುವ ಅವಕಾಶವಿದೆ. ಆದರೆ ಪಿಪಿಎಫ್ ಯೋಜನೆಯನ್ನು ಆರಂಭಿಸಿ 5 ವರ್ಷ ಕಳೆದಿರಬೇಕು. ಹಾಗಿದ್ದರೆ ಮಾತ್ರ ನೀವು ಯೋಜನೆ ಪೂರ್ಣಗೊಳ್ಳುವುದಕ್ಕೂ ಮೊದಲು ಖಾತೆ ಮುಚ್ಚಬಹುದು. ಆದರೆ ಶುಲ್ಕವು ಅವಲಂಬಿತವಾಗಿದೆ.

6. ವಿಮೆ

6. ವಿಮೆ

ನೀವು ಭಾರತದಲ್ಲೇ ಇದ್ದರೆ ಈ ಹಿಂದೆ ಮಾಡಿಸಿರುವ ವಿಮೆಯ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ನೀವು ವಿದೇಶಕ್ಕೆ ತೆರಳಿದರೆ ಕೆಲವೊಂದು ವಿಮೆಗಳು ಉಪಯೋಗವಾಗುವುದಿಲ್ಲ. ವಾಹನ ವಿಮೆ ಅಥವಾ ಆರೋಗ್ಯ ವಿಮೆಗಳನ್ನು ನೀವು ಈ ಹಿಂದೆ ಹೊಂದಿದ್ದರೆ ಅದರ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಬಹುತೇಕ ಜನರು ವಿದೇಶಕ್ಕೆ ವಲಸೆ ಹೋಗುವ ಮೊದಲು ತಮ್ಮ ವಾಹನಗಳನ್ನು ಮಾರಾಟ ಮಾಡುತ್ತಾರೆ. ಮತ್ತು ಆರೋಗ್ಯ ವಿಮೆಯನ್ನು ಹೊಸ ದೇಶದಲ್ಲಿ ಖರೀದಿಸಬಹುದು. ಅಥವಾ ಕೆಲಸ ಮಾಡುವ ಕಂಪನಿಯಿಂದಲೂ ಆರೋಗ್ಯ ವಿಮೆ ಪಡೆಯಬಹುದು.

ಒಂದು ವೇಳೆ ನೀವು ಈಗಾಗಲೇ ಭಾರತದಲ್ಲಿ ಮಾಡಿಸಿರುವ ವಿಮೆಗಳನ್ನು ಮುಂದುವರಿಸುವ ಯೋಜನೆ ಇದ್ದರೆ ವಿಮಾ ನಷ್ಟವಾಗದಂತೆ, ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಖಚಿತ ಪಡಿಸಿಕೊಳ್ಳಿ.

7. ಆದಾಯ ತೆರಿಗೆ ಅವಶ್ಯಕತೆಗಳು

7. ಆದಾಯ ತೆರಿಗೆ ಅವಶ್ಯಕತೆಗಳು

ನೀವು ವಿದೇಶಕ್ಕೆ ತೆರಳುವ ಮೊದಲು ನಿಮ್ಮ ತೆರಿಗೆಗಳನ್ನು ಪಾವತಿಸಲು ಚಾರ್ಟೆಡ್ ಅಕೌಂಟೆಂಟ್ ಅನ್ನು ನೇಮಿಸಿಕೊಳ್ಳುವುದು ಉತ್ತಮ. ಏಕೆಂದರೆ ಬ್ಯಾಂಕ್ ಠೇವಣಿ ಅಥವಾ ಮ್ಯುಚುಯಲ್ ಫಂಡ್‌ಗಳಿಂದ ನೀವು ಗಳಿಸುವ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಕಡಿತಗೊಳಿಸುವುದು ಮತ್ತು ನಿಮ್ಮ ಪರವಾಗಿ ಸರ್ಕಾರಕ್ಕೆ ಪಾವತಿ ಮಾಡಲು ಅನುಕೂಲವಾಗುತ್ತದೆ.

ಆದಾಯ ತೆರಿಗೆ ರಿಟರ್ನ್ 2019: ಐಟಿಆರ್ ಸಲ್ಲಿಸಿದರೆ ಈ 7 ಪ್ರಯೋಜನಗಳು ಲಭ್ಯ

English summary

Financial Tasks Before You Move Abroad

Moving to a different country is a major and sometimes permanent change, requiring you to get many issues sorted before you leave. Here are 7 such financial tasks to complete before you move abroad
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more