For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್ ಪೇಮೆಂಟ್‌ನಲ್ಲಿ 35 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

|

ನೀವು ಚಾಟ್ ಮಾಡಲು, ಮೀಡಿಯಾ ಫೈಲ್‌ಗಳನ್ನು ಹಂಚಿಕೊಳ್ಳಲು ವಾಟ್ಸಾಪ್ ಬಳಕೆ ಮಾಡುತ್ತಿರಬಹುದು. ಆದರೆ ಈಗಾಗಲೇ ಪಾವತಿಗಳನ್ನು ಮಾಡಲು ಅಪ್ಲಿಕೇಶನ್ ಅನ್ನು ಸಹ ಬಳಕೆ ಮಾಡುವ ಆಯ್ಕೆಯನ್ನು ಸಂಸ್ಥೆ ನೀಡಿದೆ.

ಈಗ ವಾಟ್ಸಾಪ್‌ನಲ್ಲಿ ಪೇಮೆಂಟ್ ಮಾಡಿದರೆ ನೀವು 35 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಲು ಸಾಧ್ಯವಾಗಲಿದೆ. ಮೂರು ಬೇರೆ ಬೇರೆ ನಂಬರ್‌ಗಳಿಗೆ ವಾಟ್ಸಾಪ್ ಪೇಮೆಂಟ್ ಮಾಡುವ ಮೂಲಕ ನೀವು ಕ್ಯಾಶ್‌ಬ್ಯಾಕ್ ಅನ್ನು ಮೂರು ಬಾರಿ ಪಡೆಯಲು ಸಾಧ್ಯವಾಗಲಿದೆ. ಕನಿಷ್ಟ ಪಾವತಿಯ ಅಗತ್ಯ ಕೂಡಾ ಇಲ್ಲ.

ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್‌ಬ್ಯಾಕ್ ನೀಡುತ್ತಿದೆ, ಏಕೆ?ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್‌ಬ್ಯಾಕ್ ನೀಡುತ್ತಿದೆ, ಏಕೆ?

ಆದರೆ ವಾಟ್ಸಾಪ್ ಕ್ಯಾಶ್‌ಬ್ಯಾಕ್ ಪಡೆಯುವ ಮುನ್ನ ಅದರ ಮಾನದಂಡವನ್ನು ಕೂಡಾ ನೀವು ತಿಳಿಯುವುದು ಮುಖ್ಯ. "ನಾವು ಆಯ್ದ WhatsApp ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ನೀಡುತ್ತೇವೆ," ಎಂದು ಈಗಾಗಲೇ ವಾಟ್ಸಾಪ್ ಹೇಳಿಕೊಂಡಿದೆ. ಹಾಗಾದರೆ ಆ ಮಾನದಂಡಗಳು ಏನು, ಹೇಗೆ ಕ್ಯಾಶ್‌ಬ್ಯಾಕ್ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ....

ವಾಟ್ಸಾಪ್ ಪೇಮೆಂಟ್‌ನಲ್ಲಿ 35 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

ಕ್ಯಾಶ್‌ಬ್ಯಾಕ್ ಪಡೆಯಲು ಮಾನದಂಡ

* ನೀವು ಹಣ ಕಳುಹಿಸುವಾಗ ನಿಮಗೆ ಗಿಫ್ಟ್ ಐಕಾನ್ ಕಾಣಲಿದೆ
* ನೀವು ಕನಿಷ್ಟ 30 ದಿನಗಳಿಂದ WhatsApp ಬಳಕೆದಾರರಾಗಿರಬೇಕು. ವಾಟ್ಸಾಪ್ ಬಿಸಿನೆಜ್‌ನಲ್ಲಿ ಈ ಆಫರ್ ಇಲ್ಲ
* ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸೇರಿಸುವ ಮೂಲಕ ನೀವು ವಾಟ್ಸಾಪ್ ಪಾವತಿಗೆ ನೋಂದಾಯಿಸಿಕೊಳ್ಳಬೇಕು
* ನೀವು ಹಣವನ್ನು ಕಳುಹಿಸುತ್ತಿರುವವರು ವಾಟ್ಸಾಪ್ ಬಳಕೆದಾರರು ಆಗಿರಬೇಕು, ವಾಟ್ಸಾಪ್ ಪಾವತಿ ನೋಂದಾಯಿತರಾಗಿರಬೇಕು.
* ವಾಟ್ಸಾಪ್‌ನ ಹೊಸ ವರ್ಜನ್ ಹೊಂದಿರಬೇಕು

ಯಾರೆಲ್ಲ ಕ್ಯಾಶ್ ಬ್ಯಾಕ್‌ಗೆ ಅರ್ಹರಲ್ಲ?

* ಅಪ್ಲಿಕೇಶನ್‌ನಲ್ಲಿ ಗಿಫ್ಟ್ ಐಕಾನ್ ಇಲ್ಲವಾದರೆ ನೀವು ಅರ್ಹರಲ್ಲ
* QR ಕೋಡ್ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಇಲ್ಲ
* ಪೇಮೆಂಟ್ ರಿಕ್ವೆಸ್ಟ್‌ನಿಂದಾಗಿ ಮಾಡಿದ ಪೇಮೆಂಟ್‌ಗೆ ಕ್ಯಾಶ್‌ಬ್ಯಾಕ್ ಇಲ್ಲ
* ಯುಪಿಐ ಐಡಿ ನಮೂದಿತ ಪಾವತಿಗೆ ಕ್ಯಾಶ್‌ಬ್ಯಾಕ್ ಇಲ್ಲ
* ವಾಟ್ಸಾಪ್ ಮೂಲಕ ಬೇರೆ ಆನ್‌ಲೈನ್ ಪಾವತಿಗೆ ಕ್ಯಾಶ್‌ಬ್ಯಾಕ್ ಇಲ್ಲ

ವಾಟ್ಸಾಪ್ ಪೇಮೆಂಟ್‌ನಲ್ಲಿ 35 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

* ವಾಟ್ಸಾಪ್ ತೆರೆಯಿರಿ, More options ಮೇಲೆ ಕ್ಲಿಕ್ ಮಾಡಿ
* Payments ಕ್ಲಿಕ್ ಮಾಡಿ, Send New Payment ಆಯ್ಕೆ ಮಾಡಿ
* ಹಣ ಕಳುಹಿಸಲು ಬಯಸುವ ವ್ಯಕ್ತಿಯ ಸಂಪರ್ಕದ ಮೇಲೆ ಟ್ಯಾಪ್ ಮಾಡಿ
* ಅವರು ವಾಟ್ಸಾಪ್ ಪೇಮೆಂಟ್ ನೋಂದಾಯಿಸಿದ್ದರೆ ನಿಮಗೆ ಗಿಫ್ಟ್ ಐಕಾನ್ ಕಾಣಲಿದೆ
* ಮೊತ್ತವನ್ನು ಉಲ್ಲೇಖ ಮಾಡಿ, Next ಮೇಲೆ ಟ್ಯಾಪ್ ಮಾಡಿ
* Send Payment ಮೇಲೆ ಕ್ಲಿಕ್ ಮಾಡಿ, UPI PIN ಉಲ್ಲೇಖ ಮಾಡಿ
* ಇದರ ಹೊರತಾಗಿ ಹಣ ಕಳುಹಿಸಲು ಬಯಸುವ ವ್ಯಕ್ತಿಯ ಚಾಟ್ ತೆರೆದು ಹಣ ಕಳುಹಿಸಬಹುದು

English summary

Get Rs. 35 cashback from WhatsApp Payments, Here's How

Get Rs. 35 cashback from WhatsApp Payments, Here's How. Read on.
Story first published: Saturday, May 28, 2022, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X