For Quick Alerts
ALLOW NOTIFICATIONS  
For Daily Alerts

6 ಲಕ್ಷ ರೂಪಾಯಿ ಗ್ರಾಚ್ಯುಟಿಗೆ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ?

|

ಸಂಬಳ ಪಡೆಯುವ ಉದ್ಯೋಗಿಗಳು ಬೇರೆ ಸವಲತ್ತುಗಳನ್ನು ಸೇರಿದಂತೆ ಗ್ರಾಚ್ಯುಟಿಯನ್ನು ಕೂಡಾ ಪಡೆಯುತ್ತಾರೆ. ನಿವೃತ್ತಿ ಸಂದರ್ಭದಲ್ಲಿ ಈ ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಗಳು ಪಡೆಯಲು ಸಾಧ್ಯವಾಗಲಿದೆ. 1972ರ ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಅಡಿಯಲ್ಲಿ ಇದು ಬರಲಿದೆ. ಇದು ಉದ್ಯೋಗಿಗಳ ಸೇವೆಗೆ ನೀಡುವ ಉಡುಗೊರೆ ಎಂದರೂ ತಪ್ಪಾಗಲಾರದು.

ಒಂದು ಸಂಸ್ಥೆಯಲ್ಲಿ ಐದು ವರ್ಷಕ್ಕೂ ಅಧಿಕ ಕಾಲ ಕಾರ್ಯ ನಿರ್ವಹಣೆ ಮಾಡಿದರೆ, ಉದ್ಯೋಗಿಯು ಗ್ರಾಚ್ಯುಟಿ ಹಣವನ್ನು ಪಡೆಯುವ ಅರ್ಹತೆಯನ್ನು ಹೊಂದುತ್ತಾರೆ. ಈ ಗ್ರಾಚ್ಯುಟಿ ಹಣವನ್ನು ನಿವೃತ್ತಿ ಸಂದರ್ಭದಲ್ಲಿ ಅಥವಾ ಸಂಸ್ಥೆ ಬದಲಾವಣೆ ಸಂದರ್ಭದಲ್ಲಿ ಅಥವಾ ಉದ್ಯೋಗಿಯ ಸಾವಿನ ಸಂದರ್ಭದಲ್ಲಿ ನೀಡಲಾಗುತ್ತದೆ. ಇನ್ನು ವ್ಯಕ್ತಿಯು ಸಾವನ್ನಪ್ಪಿದರೆ ಗ್ರಾಚ್ಯುಟಿ ಪಡೆಯಲು ವರ್ಷಗಳ ಕಾರ್ಯನಿರ್ವಹಣೆ ಕಡ್ಡಾಯವೇನಲ್ಲ. ಒಂದು ಸಂಸ್ಥೆಗೆ ಸೇರಿ ಐದು ವರ್ಷಕ್ಕೂ ಮುನ್ನ ಸಾವನ್ನಪ್ಪಿದರೂ ಗ್ರಾಚ್ಯುಟಿಯನ್ನು ಪಡೆಯಬಹುದಾಗಿದೆ.

ಎನ್ಪಿಎಸ್ ನಲ್ಲಿ ಗ್ರಾಚ್ಯುಟಿ ಪಾವತಿಗೆ ನಿಯಮಗಳೇನಿವೆ? ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು...ಎನ್ಪಿಎಸ್ ನಲ್ಲಿ ಗ್ರಾಚ್ಯುಟಿ ಪಾವತಿಗೆ ನಿಯಮಗಳೇನಿವೆ? ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು...

ಆದಾಯ ತೆರಿಗೆ ನಿಯಮದ ಪ್ರಕಾರ ಗ್ರಾಚ್ಯುಟಿ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಸರ್ಕಾರಿ ಉದ್ಯೋಗಿಯಾದರೂ, ಸರ್ಕಾರೇತರ ಸಂಸ್ಥೆಯಲ್ಲಿ ಉದ್ಯೋಗಿಯಾದರೂ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ ವ್ಯಕ್ತಿಯ ಸಾವು ಅಥವಾ ನಿವೃತ್ತಿ ಸಮಯದಲ್ಲಿ ಪಡೆಯುವ ಗ್ರಾಚ್ಯುಟಿಯನ್ನು ಮೂರು ವಿಭಾಗಗಳಾಗಿ ಮಾಡಬಹುದು. ಈ ಮೂರು ವಿಭಾಗಗಳು ಯಾವುದು, ಯಾರಿಗೆ ತೆರಿಗೆ ವಿನಾಯಿತಿ ಇದೆ, ಗ್ರಾಚ್ಯುಟಿ ಮೇಲಿನ ತೆರಿಗೆಯನ್ನು ನಾವು ಹೇಗೆ ಲೆಕ್ಕಾಚಾರ ಹಾಕುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ

ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ

ಸರ್ಕಾರಿ ನೌಕರರು ಕೂಡಾ ಗ್ರಾಚ್ಯುಟಿಯನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳಿಂದ, ರಕ್ಷಣಾ ಸಂಸ್ಥೆಯ ಸದಸ್ಯರಿಗೆ ತೆರಿಗೆ ವಿನಾಯಿತಿ ಇದೆ. ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಏಪ್ರಿಲ್ 1ರಿಂದ ಪಿಎಫ್, ಗ್ರಾಚ್ಯುಟಿ ನಿಯಮ ಬದಲಾವಣೆ; 12 ಗಂಟೆ ಕೆಲಸಏಪ್ರಿಲ್ 1ರಿಂದ ಪಿಎಫ್, ಗ್ರಾಚ್ಯುಟಿ ನಿಯಮ ಬದಲಾವಣೆ; 12 ಗಂಟೆ ಕೆಲಸ

 ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಅಡಿಯಲ್ಲಿ ನೌಕರರು

ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಅಡಿಯಲ್ಲಿ ನೌಕರರು

ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್ ಅಡಿಯಲ್ಲಿ ಈ ಕೆಳಗೆ ನೀಡಲಾದ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರಲಿದೆ.
* ಪ್ರತಿ ವರ್ಷಕ್ಕೆ 15 ದಿನಗಳ ಸಂಬಳ
* 20,00,000 ರೂಪಾಯಿ
* ನೈಜವಾಗಿ ಗಳಿಸಿ ಗ್ರಾಚ್ಯುಟಿ

ಪ್ರತಿ ವರ್ಷಕ್ಕೆ 15 ದಿನಗಳ ಸಂಬಳ ಗ್ರಾಚ್ಯುಟಿಯಾದಾಗ ಇದರಲ್ಲಿ ಬೇಸಿಕ್ ಸ್ಯಾಲರಿ ಹಾಗೂ ಡಿಎ ಕೂಡಾ ಸೇರಲಿದೆ. ಈ ಲೆಕ್ಕಾಚಾರವನ್ನು 26 ದಿನಗಳ ವೇತನದಿಂದ ಕಳೆದ ವೇತನವನ್ನು ಭಾಗಾಕಾರ ಮಾಡಲಾಗುತ್ತದೆ ಅಥವಾ ತಿಂಗಳಲ್ಲಿ ಗರಿಷ್ಠ ಎಷ್ಟು ದಿನ ಕೆಲಸ ಮಾಡಲಾಗಿದೆ ಎಂಬುವುದನ್ನು ಲೆಕ್ಕಾಚಾರದ ವೇಳೆ ಪರಿಗಣಿಸಲಾಗುತ್ತದೆ.

 ಗ್ರಾಚ್ಯುಟಿ ಕಾಯ್ದೆಯಡಿ ಬರಲ್ಲ ಈ ಉದ್ಯೋಗಿಗಳು
 

ಗ್ರಾಚ್ಯುಟಿ ಕಾಯ್ದೆಯಡಿ ಬರಲ್ಲ ಈ ಉದ್ಯೋಗಿಗಳು

ಗ್ರಾಚ್ಯುಟಿ ಕಾಯ್ದೆಯಡಿ ಬಾರದ ಉದ್ಯೋಗಿಗಳಿಗೆ ಎಷ್ಟು ಗ್ರಾಚ್ಯುಟಿ ಮೇಲೆ ತೆರಿಗೆ ವಿನಾಯಿತಿ ಇದೆ ನೋಡಿ

* ಸೇವೆಯನ್ನು ಪೂರ್ತಿ ಮಾಡಿದ ಪ್ರತಿ ವರ್ಷಕ್ಕೆ ತಿಂಗಳ ಅರ್ಧ ಸಂಬಳ
* ಕಳೆದ ಹತ್ತು ತಿಂಗಳ ಸರಾಸರಿ ಸಂಬಳದ ಲೆಕ್ಕಾಚಾರ
* 20,00,000 ರೂಪಾಯಿ
* ನೈಜವಾಗಿ ಪಡೆಯುವ ಗ್ರಾಚ್ಯುಟಿ

ಪ್ರತಿ ವರ್ಷಕ್ಕೆ ತಿಂಗಳ ಅರ್ಧ ಸಂಬಳ ಗ್ರಾಚ್ಯುಟಿಯಾದಾಗ ಇದರಲ್ಲಿ ಬೇಸಿಕ್ ಸ್ಯಾಲರಿ ಹಾಗೂ ಡಿಎ ಕೂಡಾ ಸೇರಲಿದೆ. ಕಮಿಷನ್ ಕೂಡಾ ಇದರಲ್ಲಿ ಸೇರಲಿದೆ.

 ಗ್ರಾಚ್ಯುಟಿ ಮೇಲಿನ ತೆರಿಗೆ ಹೀಗೆ ಲೆಕ್ಕಾಚಾರ ಹಾಕಿ

ಗ್ರಾಚ್ಯುಟಿ ಮೇಲಿನ ತೆರಿಗೆ ಹೀಗೆ ಲೆಕ್ಕಾಚಾರ ಹಾಕಿ

1972ರ ಪೇಮೆಂಟ್ ಆಫ್ ಗ್ರಾಚ್ಯುಟಿ ಕಾಯ್ದೆಯಡಿಯಲ್ಲಿರುವ ಸೇರುವ ವ್ಯಕ್ತಿಗೆ ಮಾಸಿಕ 31,200 ರೂಪಾಯಿ ವೇತನ ಪಡೆಯುತ್ತಿದ್ದಾರೆ ಎಂದುಕೊಳ್ಳಿ. ಅದೇ ವೇತನದೊಂದಿಗೆ 30-5-2022ರಲ್ಲಿ ನಿವೃತ್ತಿ ಹೊಂದಿದರು ಎಂದುಕೊಳ್ಳಿ. 36 ವರ್ಷ 9 ತಿಂಗಳ ಸೇವೆಯಲ್ಲಿ ಒಟ್ಟು 6 ಲಕ್ಷ ರೂಪಾಯಿ ಗ್ರಾಚ್ಯುಟಿಯನ್ನು ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಈ ಕೆಳಗಿನಂತೆ ತೆರಿಗೆ ವಿನಾಯಿತಿ ಅಥವಾ ತೆರಿಗೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ.

* ಒಟ್ಟು ಕಾರ್ಯನಿರ್ವಹಣೆ ಮಾಡಿದ ವರ್ಷ 37
* 15 ದಿನದ ವೇತನ- 15/26 × 31,200 ರೂಪಾಯಿ=18,000 ರೂಪಾಯಿ
* ಕಳೆದ 37 ವರ್ಷದಲ್ಲಿ 15 ದಿನಗಳ ವೇತನದ ಲೆಕ್ಕಾಚಾರ (18,000 × 37) ರೂಪಾಯಿ 6,66,000
* ಪಡೆಯುವ ಗ್ರಾಚ್ಯುಟಿ 6,00,000 ರೂಪಾಯಿ
* ಗ್ರಾಚ್ಯುಟಿ ಮೇಲಿನ ಗರಿಷ್ಠ ಮಿತಿ 20,00,000 ರೂಪಾಯಿ
* ಹಾಗಿರುವಾಗ 6,00,000 ರೂಪಾಯಿ ತೆರಿಗೆ ವಿನಾಯಿತಿ ಲಭ್ಯವಾಗಲಿದೆ, ತೆರಿಗೆ ಶೂನ್ಯವಾಗಲಿದೆ

English summary

Gratuity Calculation 2022: Know How Much Tax for Your Gratuity, Here's Calculation

Gratuity Calculation 2022: Retired with Rs 6 lakh gratuity payment?, Know How Much Tax for Your Gratuity, Here's Calculation.
Story first published: Monday, August 8, 2022, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X