For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ: ಪ್ರಮುಖ ಮಾಹಿತಿ ಗಮನಿಸಿ

|

ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಲಿಮಿಟೆಡ್ ಸೋಮವಾರ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವುದಾಗಿ ಘೋಷಣೆ ಮಾಡಿದೆ. ಸೋಮವಾರ ನಡೆದ ಪ್ರಮುಖ ಹೌಸಿಂಗ್ ಫೈನಾನ್ಸ್ ಕಂಪನಿಯ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಹೌಸಿಂಗ್ ಫೈನಾನ್ಸ್ ಕಂಪನಿಯ ಮಂಡಳಿಯು ಎಚ್‌ಡಿಎಫ್‌ಸಿ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಹೋಲ್ಡಿಂಗ್ಸ್ ಲಿಮಿಟೆಡ್‌ನ ವಿಲೀನವನ್ನು ಸಹ ಅನುಮೋದಿಸಿದೆ. "ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಡುವಿನ ಒಪ್ಪಂದಕ್ಕೆ ಅನುಮೋದನೆ ನೀಡಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರಎಚ್‌‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್‌ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ

"ಯೋಜನೆಯಡಿಯಲ್ಲಿ ಪರಿಗಣಿಸಲಾದ ಉದ್ದೇಶಿತ ವಹಿವಾಟನ್ನು ಅನುಷ್ಠಾನಗೊಳಿಸುವ ವಿಧಾನ, ಪ್ರಾತಿನಿಧ್ಯಗಳು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರಸ್ತಾವಿತ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಕೂಡಾ ನೀಡಲಾಗುವುದು," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಹೇಳಿದೆ. ಈ ವಿಲೀನದ ಬಗ್ಗೆ ಷೇರುದಾರರು ತಿಳಿಯಲೇ ಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ ಮುಂದೆ ಓದಿ...

ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನ: ಪ್ರಮುಖ ಮಾಹಿತಿ

ಷೇರುದಾರರು ತಿಳಿದಿರಲೇಬೇಕಾದ ಪ್ರಮುಖ ಮಾಹಿತಿ

* ಎಚ್‌ಡಿಎಫ್‌ಸಿ-ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನವು ಹಣಕಾಸು ವರ್ಷ 2024 ರ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

* ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನದ ಮೂಲಕ ಶೇಕಡಾ ಎಚ್‌ಡಿಎಫ್‌ ಶೇಕಡಾ 41 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ಸಲ್ಲಿಸಿದೆ.

* ಒಪ್ಪಂದದ ಭಾಗವಾಗಿ, ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಷೇರುದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳನ್ನು (ಪ್ರತಿ ರೂ. 1 ಮುಖಬೆಲೆ) ಎಚ್‌ಡಿಎಫ್‌ಸಿ ಲಿಮಿಟೆಡ್‌ನ 25 ಷೇರುಗಳಿಗೆ (ತಲಾ ರೂ. 2 ಮುಖಬೆಲೆ) ಸ್ವೀಕರಿಸುತ್ತಾರೆ.

ಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಏರಿಕೆ ಮಾಡಿದ ಎಚ್‌ಡಿಎಫ್‌ಸಿಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಏರಿಕೆ ಮಾಡಿದ ಎಚ್‌ಡಿಎಫ್‌ಸಿ

* ಈ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನವು ನಿಫ್ಟಿ 50 ಸೂಚ್ಯಂಕದ ಪ್ರಕಾರವಾಗಿ ನೋಡಿದಾಗ ಅತಿದೊಡ್ಡ ಸ್ಟಾಕ್ ಅನ್ನು ರಚನೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಸ್ತುತ ಗಾತ್ರ ಶೇಕಡ 11.9 ಆಗಿದೆ. ಆದರೆ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನವು ಈ ರಿಲಯನ್ಸ್ ಇಂಡಸ್ಟ್ರೀಸ್‌ನ ಗಾತ್ರವನ್ನು ಮೀರಿಸಲಿದೆ ಎಂದು ವರದಿ ಉಲ್ಲೇಖ ಮಾಡಿದೆ.

* ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.

* ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 100ರಷ್ಟು ಸಾರ್ವಜನಿಕ ಷೇರುದಾರರ ಒಡೆತನಕ್ಕೆ ಬರಲಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಸ್ತಿತ್ವದಲ್ಲಿರುವ ಷೇರುದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಕಡ 41 ಅನ್ನು ಹೊಂದಿದ್ದಾರೆ.

* ಜೊತೆಗೆ, ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ವಿಲೀನವಾಗುತ್ತದೆ.

* ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಅನ್ನು ವಿಲೀನ ಮಾಡುವುದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ

* ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಂಡಳಿಗಳು ಈ ವಿಲೀನವು ಗ್ರಾಹಕರು, ಉದ್ಯೋಗಿಗಳು ಮತ್ತು ಎರಡೂ ಘಟಕಗಳ ಷೇರುದಾರರು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿ ಮಾಡುತ್ತದೆ ಎಂದು ನಂಬಿದೆ. ಈ ಎರಡು ಘಟಕಗಳ ವಿಲೀನವು ಎಲ್ಲರಿಗೂ ವಸತಿ ಎಂಬ ಸರ್ಕಾರದ ನಿಲುವಿಗೆ ಸಹಾಯಕವಾಗಲಿದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.

* ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಬೆಳಗ್ಗೆ 10 ಗಂಟೆಗೆ 2783.60 ರೂ.ಗೆ ಅಂದರೆ ಶೇಕಡ13.57 ರಷ್ಟು ಏರಿಕೆ ಕಂಡರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.9.74 ಏರಿಕೆಯಾಗಿ ರೂ.1654.20ರಲ್ಲಿ ವಹಿವಾಟು ನಡೆಸಿದೆ.

English summary

HDFC Set to be Merged With HDFC Bank, Here's a 10 Things Shareholders Should Know

HDFC Set to be Merged With HDFC Bank, Here's a 10 Things Shareholders Should Know.
Story first published: Monday, April 4, 2022, 12:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X