For Quick Alerts
ALLOW NOTIFICATIONS  
For Daily Alerts

ಕೋಟಿಗಟ್ಟಲೆ ಸಂಬಳ ತಂದುಕೊಡುವ ಉದ್ಯೋಗಗಳಿವು

|

ವೈದ್ಯಕೀಯ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಮುಂದಿನ 10 ವರ್ಷಗಳಲ್ಲಂತೂ ವಿಶ್ವದಾದ್ಯಂತ ವೈದ್ಯಕೀಯ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇಕಡಾ 18ರಷ್ಟು ಹೆಚ್ಚಾಗಲಿದೆ. ಹಾಗಿದ್ದರೆ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಪದವಿ ಪಡೆದರೆ ಹೆಚ್ಚು ಸಂಬಳ ಬರುವ ಹುದ್ದೆಗಳನ್ನು ತಲುಪಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

 

ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ, ವಿಷಪೂರಿತ ಆಹಾರ ಸೇವನೆ, ಕೆಟ್ಟ ಜೀವನ ಶೈಲಿ ಸೇರಿದಂತೆ ನಾನಾ ರೀತಿಯ ಕಾರಣಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗತೊಡಗಿದೆ. ಅಲ್ಲದೆ ಜನರು ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು, ಸಿಬ್ಬಂದಿ ಬೇಡಿಕೆಯು ಹೆಚ್ಚಾಗತೊಡಗಿದೆ. ಅಮೆರಿಕಾದ ಕಾರ್ಮಿಕರ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಆರೋಗ್ಯ ಕ್ಷೇತ್ರ ಅತಿ ದೊಡ್ಡ ಉದ್ಯೋಗದ ಮೂಲವಾಗಿದ್ದು, 2016 ರಿಂದ 2026 ರವರೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಶೇಕಡಾ 18 ರಷ್ಟು ಹೆಚ್ಚು ಉದ್ಯೋಗಳು ಸೃಷ್ಟಿಯಾಗಲಿವೆ.

ಇನ್ಫೋಸಿಸ್ ನಿಂದ 4ರಿಂದ 10 ಸಾವಿರ ಸಿಬ್ಬಂದಿ ಉದ್ಯೋಗಕ್ಕೆ ಕತ್ತರಿಇನ್ಫೋಸಿಸ್ ನಿಂದ 4ರಿಂದ 10 ಸಾವಿರ ಸಿಬ್ಬಂದಿ ಉದ್ಯೋಗಕ್ಕೆ ಕತ್ತರಿ

ಹಾಗಿದ್ದಲ್ಲಿ ಅತಿ ಹೆಚ್ಚು ಸಂಬಳ ಪಡೆಯಬಹುದಾದ ಟಾಪ್‌ 10 ವೈದ್ಯಕೀಯ ಉದ್ಯೋಗ ಕ್ಷೇತ್ರಗಳ ವಿವರ ಇಲ್ಲಿದೆ.

1. ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು (Physicians and Surgeons)

1. ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು (Physicians and Surgeons)

ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವೃತ್ತಿಪರರು. ವೈದ್ಯರು ರೋಗಿಯಲ್ಲಿನ ರೋಗದ ಮೂಲವನ್ನು ಪತ್ತೆ ಹಚ್ಚುವುದಲ್ಲದೆ ಚಿಕಿತ್ಸೆಯನ್ನು ನೀಡುತ್ತಾರೆ. ಜೊತೆಗೆ ಔಷಧಿಗಳ ಮಾಹಿತಿ ಅರಿತು ಅವುಗಳನ್ನು ರೋಗಿಗಳಿಗೆ ತೆಗೆದುಕೊಳ್ಳಲು ಸೂಚಿಸುತ್ತಾರೆ. ಶಸ್ತ್ರಚಿಕಿತ್ಸಕರು ಕೂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ಮುರಿದ ಮೂಳೆಗಳು ಮತ್ತು ಕ್ಯಾನ್ಸರ್ ಗೆಡ್ಡೆಗಳಂತಹ ಕಾಯಿಲೆಗಳನ್ನು ಸರಿಪಡಿಸುವ ಕಾರ್ಯಾಚರಣೆಯತ್ತ ಹೆಚ್ಚು ಗಮನ ಹರಿಸುತ್ತಾರೆ. ಅಂದರೆ ಶಸ್ತ್ರಚಿಕಿತ್ಸೆ ಕುರಿತು ಹೆಚ್ಚಾಗಿ ಅಭ್ಯಸಿಸಿ ಆಪರೇಷನ್‌ ನಡೆಸುವ ಸಾಮರ್ಥ್ಯವುಳ್ಳವರು. ಈ ಉದ್ಯೋಗ ಪಡೆಯಲು ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ ಪಡೆಯಬೇಕು. ಈ ಉದ್ಯೋಗದಲ್ಲಿ ಬರುವ ಸಂಬಳ ವರ್ಷಕ್ಕೆ 2,08,000 ಅಮೆರಿಕನ್ ಡಾಲರ್‌ ಅಥವಾ ಅದಕ್ಕಿಂತಲೂ ಹೆಚ್ಚು ( ಭಾರತದ ರುಪಾಯಿಗಳಲ್ಲಿ 1 ಕೋಟಿ 47 ಲಕ್ಷ )

2. ದಂತವೈದ್ಯರು (Dentists)
 

2. ದಂತವೈದ್ಯರು (Dentists)

ದಂತವೈದ್ಯರು ಕೂಡ ಅತಿ ಹೆಚ್ಚು ಹಣ ಗಳಿಸುವ ವೃತ್ತಿಪರರಾಗಿದ್ದಾರೆ. ದಂತವೈದ್ಯರು ರೋಗಿಗಳ ಹಲ್ಲು ಮತ್ತು ಒಸಡುಗಳಿಗೆ ಚಿಕಿತ್ಸೆ ನೀಡುತ್ತಾರೆ. ಮತ್ತು ಬಾಯಿಯ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಕೀಟಾಣುಗಳಿಂದ ರಕ್ಷಣೆ ಪಡೆಯಲು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ಉದ್ಯೋಗವನ್ನು ಪಡೆಯಲು ಮೊದಲು ಬ್ಯಾಚುಲರ್ ಡಿಗ್ರಿ ಪಡೆಯಬೇಕು. ಆನಂತರ ದಂತ ವೈದ್ಯಕೀಯ ಕಾಲೇಜುಗಳಲ್ಲಿ 4 ವರ್ಷಗಳ ಕೋರ್ಸ್ ಮುಗಿಸಬೇಕು. ಬಳಿಕ ಲೈಸೆನ್ಸ್ ಪಡೆಯಲು ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು. ಈ ರೀತಿಯಾಗಿ ಮುಗಿಸಿದ್ದಲ್ಲಿ ವರ್ಷಕ್ಕೆ ಇವರು 1,59,000 ಅಮೆರಿಕನ್ ಡಾಲರ್‌ ಹಣ ಗಳಿಸಬಹುದು. (ಭಾರತದ ರುಪಾಯಿಗಳಲ್ಲಿ 1 ಕೋಟಿ 13 ಲಕ್ಷದ 43 ಸಾವಿರದ 270 ರುಪಾಯಿ)

3. ಪೊಡಿಯಾಟ್ರಿಸ್ಟ್ಸ್ (Podiatrists)

3. ಪೊಡಿಯಾಟ್ರಿಸ್ಟ್ಸ್ (Podiatrists)

ಕಾಲು, ಪಾದ ಮತ್ತು ಕೆಳ ಕಾಲಿನ ಸಮಸ್ಯೆಗಳಿಗೆ ಪೊಡಿಯಾಟ್ರಿಸ್ಟ್ಸ್ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ಆರೈಕೆಯನ್ನು ಒದಗಿಸುತ್ತಾರೆ. ಅಲ್ಲದೆ ಪಾದಗಳು ಮತ್ತು ಕೆಳಕಾಲುಗಳ ಅಸಹಜ ಪರಿಸ್ಥಿತಿಗಳನ್ನ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ತರಬೇತಿ ಪಡೆದ ಆರೋಗ್ಯ ವೃತ್ತಿಪರರು. ಸಮಸ್ಯೆ ಹೊಂದಿದವರನ್ನು ಸಕ್ರಿಯಗೊಳಿಸುವುದು, ನೋವು ನಿವಾರಿಸುವುದು ಮತ್ತು ಸೋಂಕುಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ಉದ್ಯೋಗವನ್ನು ತಲುಪಲು ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ ಹೊಂದಿರಬೇಕು. ಈ ಹುದ್ದೆಗೆ ವಿಶ್ವದಾದ್ಯಂತ ಇರುವ ಸರಾಸರಿ ಸಂಬಳ ವರ್ಷಕ್ಕೆ 1,24,830 ಅಮೆರಿಕನ್ ಡಾಲರ್‌ ( ಭಾರತದ ರುಪಾಯಿಗಳಲ್ಲಿ 88 ಲಕ್ಷದ 70 ಸಾವಿರದ 794 ರುಪಾಯಿ)

ಗುಡ್ ನ್ಯೂಸ್! ಸ್ವಿಗ್ಗಿಯಲ್ಲಿ 3 ಲಕ್ಷ ಉದ್ಯೋಗಗುಡ್ ನ್ಯೂಸ್! ಸ್ವಿಗ್ಗಿಯಲ್ಲಿ 3 ಲಕ್ಷ ಉದ್ಯೋಗ

4. ಫಾರ್ಮಸಿಸ್ಟ್ಸ್  (Pharmacists)

4. ಫಾರ್ಮಸಿಸ್ಟ್ಸ್ (Pharmacists)

ಫಾರ್ಮಸಿಸ್ಟ್ಸ್ ವೈದ್ಯರು ಸೂಚಿಸಿದ ಔಷಧಿಗಳನ್ನು ರೋಗಿಗಳಿಗೆ ವಿತರಿಸುತ್ತಾರೆ. ಹಾಗೆಯೇ ಸುರಕ್ಷಿತವಾಗಿ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗದಂತೆ ಔಷಧಿಗಳನ್ನು ಹೇಗೆ ಬಳಸುವುದು ಎಂದು ರೋಗಿಗಳಿಗೆ ಸಲಹೆಗಳನ್ನು ನೀಡುತ್ತಾರೆ. ಇವರ ಅಮೂಲ್ಯ ಸೇವೆಗೆ ಪ್ರತಿವರ್ಷ ಸೆಪ್ಟೆಂಬರ್ 25ರಂದು ವಿಶ್ವ ಫಾರ್ಮಸಿಸ್ಟ್ಸ್ ದಿನವಾಗಿ ಆಚರಿಸಲಾಗುತ್ತದೆ. ಈ ಉದ್ಯೋಗವನ್ನು ಪಡೆಯಲು ಬೇಕಾಗಿರುವ ಅರ್ಹತೆ ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ. ಈ ಉದ್ಯೋಗಕ್ಕೂ ಬೇಡಿಕೆ ಹೆಚ್ಚಿದ್ದು ವರ್ಷಕ್ಕೆ 1,22,230 ಅಮೆರಿಕನ್ ಡಾಲರ್ ಆದಾಯ ಗಳಿಸಬಹುದು. ( ಭಾರತದ ರುಪಾಯಿಗಳಲ್ಲಿ 86 ಲಕ್ಷದ 88 ಸಾವಿರದ 291.75 ರುಪಾಯಿ )

5. ನರ್ಸ್‌ ಅರಿವಳಿಕೆ ತಜ್ಙರು, ದಾದಿಯ ಶುಶ್ರೂಷಕಿಯರು ಮತ್ತು ದಾದಿಯ ವೈದ್ಯರು (Nurse anesthetists, nurse Midwives, and nurse practitioners)

5. ನರ್ಸ್‌ ಅರಿವಳಿಕೆ ತಜ್ಙರು, ದಾದಿಯ ಶುಶ್ರೂಷಕಿಯರು ಮತ್ತು ದಾದಿಯ ವೈದ್ಯರು (Nurse anesthetists, nurse Midwives, and nurse practitioners)

ನರ್ಸ್ ಅರಿವಳಿಕೆ ತಜ್ಙರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರದಲ್ಲಿ ಅರಿವಳಿಕೆ ಮತ್ತು ವೈದ್ಯಕೀಯ ಆರೋಗ್ಯವನ್ನು ಒದಗಿಸುತ್ತಾರೆ. ನರ್ಸ್‌ ಶುಶ್ರೂಷಕಿಯರು ಮಹಿಳೆಯರಿಗೆ ಫ್ಯಾಮಿಲಿ ಪ್ಲಾನಿಂಗ್ ಮತ್ತು ಪ್ರಸವಪೂರ್ವ ಆರೈಕೆಯನ್ನು ಒದಗಿಸುತ್ತಾರೆ. ದಾದಿಯ ವೈದ್ಯರು ಪ್ರಾಥಮಿಕ ಆರೈಕೆ ನೀಡುಗರಾಗಿ ಸೇವೆ ಸಲ್ಲಿಸುತ್ತಾರೆ. ಮತ್ತು ರೋಗಿಗಳ ಆರೋಗ್ಯ ಉತ್ತಮಗೊಳ್ಳಲು ಸಹಾಯ ಮಾಡುತ್ತಾರೆ. ಈ ಉದ್ಯೋಗದ ಅರ್ಹತೆಗಳು ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಈ ಹುದ್ದೆ ನಿಭಾಯಿಸುವವರಿಗೆ ವರ್ಷಕ್ಕೆ 1,07,460 ಅಮೆರಿಕನ್ ಡಾಲರ್ ಪಾವತಿ ಮಾಡಲಾಗುತ್ತದೆ ( ಭಾರತದ ರುಪಾಯಿಗಳಲ್ಲಿ 76 ಲಕ್ಷದ 36 ಸಾವಿರದ 698.63 ರುಪಾಯಿ)

6. ಆಪ್ಟೋಮೆಟ್ರಿಸ್ಟ್ಸ್ (Optometrists)

6. ಆಪ್ಟೋಮೆಟ್ರಿಸ್ಟ್ಸ್ (Optometrists)

ಆಪ್ಟೋಮೆಟ್ರಿಸ್ಟ್ಸ್ ಕಣ್ಣಿನ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರೀಕ್ಷಿಸುತ್ತಾರೆ ಮತ್ತು ಚಿಕಿತ್ಸೆ ನೀಡುತ್ತಾರೆ. ಹಾಗೂ ಕಣ್ಣಿನ ಯಾವುದೇ ರೋಗಗಳು ಅಥವಾ ಗಾಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ರೋಗಿಗಳ ದೃಷ್ಟಿ ದೋಷಗಳನ್ನು ಪತ್ತೆಹಚ್ಚಿ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್ ಗಳನ್ನು ಸೂಚಿಸುವ ಮೂಲಕ ವಕ್ರೀಕಾರಕ ದೋಷಗಳನ್ನು ಸರಿಪಡಿಸುತ್ತಾರೆ. ಈ ಉದ್ಯೋಗವನ್ನು ಪಡೆಯಲು ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ ಹೊಂದಿರಬೇಕು. ಈ ಹುದ್ದೆಯಲ್ಲಿ ನಿರ್ವಹಿಸುವವರಿಗೆ ವರ್ಷಕ್ಕೆ 1,06,480 ಅಮೆರಿಕನ್ ಡಾಲರ್ ಸಂಬಳ ನೀಡಲಾಗುತ್ತದೆ. ( ಭಾರತದ ರುಪಾಯಿಗಳಲ್ಲಿ 75 ಲಕ್ಷದ 40 ಸಾವಿರದ 212.14 ರುಪಾಯಿ)

7. ಫಿಸಿಶಿಯನ್ ಅಸಿಸ್ಟೆಂಟ್ಸ್   (Physician assistants)

7. ಫಿಸಿಶಿಯನ್ ಅಸಿಸ್ಟೆಂಟ್ಸ್ (Physician assistants)

ಫಿಸಿಶಿಯನ್ ಅಸಿಸ್ಟೆಂಟ್ಸ್ ರೋಗಿಗಳನ್ನು ಪರೀಕ್ಷಿಸುವುದು, ರೋಗ ನಿರ್ಣಯ ಮಾಡುವುದು ಮತ್ತು ಚಿಕಿತ್ಸೆ ನೀಡುವವರಾಗಿದ್ದಾರೆ. ಇವರು ಫಿಸಿಶಿಯನ್ಸ್ ಮತ್ತು ಸರ್ಜರ್ನ್ಸ ಸಹಾಯದ ಮೂಲಕವೇ ಕೆಲಸ ನಿರ್ವಹಿಸುವವರು. ಈ ಹುದ್ದೆಯಲ್ಲಿರುವವರು ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ವರ್ಷಕ್ಕೆ ಇವರ ಸಂಬಳ 1,01,480 ಅಮೆರಿಕನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ 72 ಲಕ್ಷದ 09 ಸಾವಿರದ 418.27 ರುಪಾಯಿ)

8. ಪಶುವೈದ್ಯರು (Veterinarians)

8. ಪಶುವೈದ್ಯರು (Veterinarians)

ಸಾಕು ಪ್ರಾಣಿಗಳು, ಜಾನುವಾರುಗಳು ಮತ್ತು ಇತರ ಪ್ರಾಣಿಗಳ ವೈದ್ಯಕೀಯ ಸ್ಥಿತಿಗಳನ್ನ ನಿರ್ಣಯಿಸುವುದು ಮತ್ತು ಚಿಕಿತ್ಸೆ ನೀಡುವುದು ಪಶುವೈದ್ಯರ ಕಾರ್ಯವಾಗಿದೆ. ಪ್ರಾಣಿಗಳಿಗೆ ಆಗಿರುವ ಸೋಂಕು ಮತ್ತು ಕಾಯಿಲೆಗಳನ್ನು ಸಂಶೋಧಿಸುವ ಮೂಲಕ ಆರೋಗ್ಯದ ಕಾಳಜಿ ವಹಿಸುತ್ತಾರೆ. ಇಷ್ಟಲ್ಲದೆ ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮತ್ತು ಆಹಾರ, ನಡವಳಿಕೆ, ಸಂತಾನೋತ್ಪತ್ತಿ ಬಗ್ಗೆ ಮಾಲೀಕರಿಗೆ ಸಲಹೆ ನೀಡುತ್ತಾರೆ. ಪಶುವೈದ್ಯರಾಗಲು ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ ಹೊಂದಿರಬೇಕು. ಈ ಹುದ್ದೆ ನಿರ್ವಹಿಸುವವರ ವಾರ್ಷಿಕ ಸಂಬಳ 83,770 ಅಮೆರಿಕನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 63 ಲಕ್ಷದ 06 ಸಾವಿರದ 353.96 ರುಪಾಯಿ)

9. ಫಿಸಿಕಲ್ ಥೆರಪಿಸ್ಟ್ಸ್  (Physical therapists)

9. ಫಿಸಿಕಲ್ ಥೆರಪಿಸ್ಟ್ಸ್ (Physical therapists)

ಫಿಸಿಕಲ್ ಥೆರಪಿಸ್ಟ್ಸ್ ಗಾಯಗೊಂಡ ರೋಗಿಗಳಿಗೆ ತಮ್ಮ ಚಲನಶೀಲತೆಯನ್ನು ಸುಧಾರಿಸಲು, ವ್ಯಾಯಾಮ ಹೇಳಿಕೊಡುತ್ತಾರೆ. ಹೆಚ್ಚು ನೋವಾಗದಂತೆ ವಿವಿಧ ರೀತಿಯ ಕಾರ್ಯವಿಧಾನಗಳ ಮೂಲಕ ನೋವನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ. ಇಷ್ಟಲ್ಲದೆ ದೀರ್ಘಕಾಲದ ಕಾಯಿಲೆಗಳು ಹಾಗೂ ಗಾಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಮತ್ತು ತಡೆಗಟ್ಟುವುದು ಹೇಗೆ ಎಂದು ತಿಳಿಸಿಕೊಡುತ್ತಾರೆ. ಫಿಸಿಕಲ್ ಥೆರಪಿಸ್ಟ್ಸ್ ಹುದ್ದೆಯ ಅರ್ಹತೆ ಡಾಕ್ಟರೇಟ್‌ ಅಥವಾ ವೃತ್ತಿಪರ ಪದವಿ. ವರ್ಷಕ್ಕೆ ಈ ಉದ್ಯೋಗದ ಆದಾಯ 85,400 ಅಮೆರಿಕನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ 60 ಲಕ್ಷದ 65 ಸಾವಿರದ 705.80 ರುಪಾಯಿ)

10. ಆಕ್ಯುಪೇಷನಲ್ ಥೆರಪಿಸ್ಟ್   (Occupational therapists)

10. ಆಕ್ಯುಪೇಷನಲ್ ಥೆರಪಿಸ್ಟ್ (Occupational therapists)

ಆಕ್ಯುಪೇಷನಲ್ ಥೆರಪಿಸ್ಟ್ ದಿವ್ಯ ಚೇತನರಿಗೆ ದೈನ್ಯಂದಿನ ಚಟುವಟಿಕೆ ಮೂಲಕ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಾರೆ. ಇವರು ರೋಗಿಗಳ ಅಭಿವೃದ್ಧಿ, ಚೇತರಿಕೆ, ಸುಧಾರಣೆ ಜೊತೆಗೆ ದೈನ್ಯಂದಿನ ಜೀವನ ಮತ್ತು ಕೆಲಸಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಈ ಹುದ್ದೆ ಪಡೆಯಲು ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ವರ್ಷಕ್ಕೆ ಇವರಿಗೆ ಬರುವ ಸಂಬಳ 81,910 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 58 ಲಕ್ಷದ 18 ಸಾವಿರದ 886.40 ರುಪಾಯಿ)

English summary

Highest Paying Health Care Jobs

Health care jobs are expected to grow 18 percent from 2016 to 2026. That comes out to 2.3 million new jobs. These are the top paying health care positions
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X