For Quick Alerts
ALLOW NOTIFICATIONS  
For Daily Alerts

ಆಧಾರ್ ಪಿವಿಸಿ ಕಾರ್ಡ್‌ ಎಂದರೇನು, ಅರ್ಜಿ ಸಲ್ಲಿಸುವುದು ಹೇಗೆ?

|

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತ ದೇಶದ ಎಲ್ಲ ನಾಗರಿಕರಿಗೂ ನೀಡುವ ಪ್ರಮುಖ ದಾಖಲೆಯೇ ಆಧಾರ್ ಕಾರ್ಡ್ ಆಗಿದೆ. ಆಧಾರ್ ಕಾರ್ಡ್ ಅನ್ನು ಪ್ರಸ್ತುತ ಎಲ್ಲ ಕಾರ್ಯಗಳಿಗೂ ಬಳಸಲಾಗುತ್ತದೆ ಹಾಗೂ ಇದು ಅತೀ ಮುಖ್ಯವಾದ ದಾಖಲೆಯಾಗಿದೆ. ಹಾಗೆಯೇ ಯಾವುದೇ ಸರ್ಕಾರಿ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ನಮ್ಮ ಬಳಿ ಈ 12 ಡಿಜಿಟ್ ಅಂಕಿಯ ಆಧಾರ್ ಕಾರ್ಡ್ ಇರಬೇಕಾಗುತ್ತದೆ.

ಎಲ್ಲ ಕ್ಷೇತ್ರದಲ್ಲೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ನಾವು ಸಂಚಾರ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು ಹೊತ್ತು ತಿರುಗುವುದು ಸಾಧ್ಯವಾಗದು. ಅದಕ್ಕಾಗಿ ನಾವು ಆನ್‌ಲೈನ್‌ ಮೂಲಕ ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಕೂಡಾ ಹೊಂದಿರಬಹುದು. ಆಧಾರ್ ಕಾರ್ಡ್ ಅನ್ನು ಯುಐಡಿಎಐ ಪಿವಿಸಿ ಫಾರ್ಮ್‌ನಲ್ಲಿ ನೀಡುತ್ತದೆ. ಇದು ಪ್ಯಾನ್ ಕಾರ್ಡ್‌ಗೆ ಸಮನಾಗಿರುತ್ತದೆ.

ಆಧಾರ್ ಕಾರ್ಡ್ ವಿಳಾಸ ಬದಲಾಯಿಸಲು ಎಷ್ಟು ವೆಚ್ಚವಾಗುತ್ತದೆ?ಆಧಾರ್ ಕಾರ್ಡ್ ವಿಳಾಸ ಬದಲಾಯಿಸಲು ಎಷ್ಟು ವೆಚ್ಚವಾಗುತ್ತದೆ?

ಹಾಗಾದರೆ ಏನಿದು ಆಧಾರ್ ಪಿವಿಸಿ ಕಾರ್ಡ್, ಫೀಚರ್ ಏನು, ಎಷ್ಟು ಶುಲ್ಕ ತೆರಬೇಕಾಗುತ್ತದೆ, ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮೊದಲಾದ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಆಧಾರ್ ಪಿವಿಸಿ ಕಾರ್ಡ್ ಎಂದರೇನು?

ಆಧಾರ್ ಪಿವಿಸಿ ಕಾರ್ಡ್ ಎಂದರೇನು?

ಯುಐಡಿಎಐ ಬಿಡುಗಡೆ ಮಾಡಿದ ಆಧಾರ್ ಕಾರ್ಡ್‌ನ ಇತ್ತೀಚಿನ ವರ್ಜನ್ ಆಧಾರ್ ಪಿವಿಸಿ ಕಾರ್ಡ್ ಆಗಿದೆ. ಈ ಪಿವಿಬಿ ಬೇಸ್‌ ಆಧಾರ್ ಕಾರ್ಡ್ ಡಿಜಿಟಲ್ ಆಗಿ ಸಹಿ ಮಾಡಲಾದ ಆಧಾರ್‌ ಕ್ಯೂ ಆರ್ ಕೋಡ್ ಆಗಿದೆ. ಇದರಲ್ಲಿ ಛಾಯಾಚಿತ್ರ ಹಾಗೂ ಮಾಹಿತಿ ಲಭ್ಯವಾಗಲಿದೆ. ಇದಕ್ಕೆ ಹಲವಾರು ಸುರಕ್ಷತೆಗಳು ಇದೆ. ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ನೋಂದಣಿ ಐಡಿಯನ್ನು ಬಳಸಿಕೊಂಡು ಆಧಾರ್‌ ಪಿವಿಸಿ ಕಾರ್ಡ್ ಪಡೆಯಬಹುದಾಗಿದೆ.

 ಆಧಾರ್ ಪಿವಿಸಿ ಕಾರ್ಡ್‌ನ ಶುಲ್ಕ, ಇತರೆ ಮಾಹಿತಿ

ಆಧಾರ್ ಪಿವಿಸಿ ಕಾರ್ಡ್‌ನ ಶುಲ್ಕ, ಇತರೆ ಮಾಹಿತಿ

* ಸುರಕ್ಷಿತ ಕ್ಯೂಆರ್‌ ಕೋಡ್
* ಹೋಲೋಗ್ರಾಮ್ (Hologram)
* ಮೈಕ್ರೋ ಟೆಸ್ಟ್
* ಗೋಸ್ಟ್ ಇಮೇಜ್
* ನೋಂದಣಿ ದಿನಾಂಕ, ಪ್ರಿಂಟ್ ದಿನಾಂಕ
* ಆಧಾರ್ ಲೋಗೋ

ನೀವು ಆಧಾರ್ ಪಿವಿಸಿ ಕಾರ್ಡ್ ಪಡೆಯಬೇಕಾದರೆ ಜಿಎಸ್‌ಟಿ, ಸ್ಪೀಡ್‌ ಪೋಸ್ಟ್‌ ಚಾರ್ಜ್ ಸಹಿತ 50 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

 ಆಧಾರ್ ಪಿವಿಸಿ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು?

ಆಧಾರ್ ಪಿವಿಸಿ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು?

ಹಂತ 1: https://resident.uidai.gov.in ಅಥವಾ https://uidai.gov.in ಗೆ ಭೇಟಿ ನೀಡಿ
ಹಂತ 2: "Order Aadhaar Card" ಕ್ಲಿಕ್ ಮಾಡಿ ಆಕ್ಟಿವೇಟ್ ಮಾಡಿ
ಹಂತ 3: 12 ಡಿಜಿಟ್ ಆಧಾರ್ ಸಂಖ್ಯೆ, 16 ಡಿಜಿಟ್ ವರ್ಚುವಲ್ ಐಡಿ, 28 ಡಿಜಿಟ್ ನೋಂದಣಿ ಐಡಿ, ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ
ಹಂತ 4: "Request OTP" ಕ್ಲಿಕ್ ಮಾಡಿ, ಒಟಿಪಿ ನಮೂದಿಸಿ submit ಕ್ಲಿಕ್ ಮಾಡಿದರೆ ವೆರಿಫಿಕೇಷನ್ ಆಗಲಿದೆ
ಹಂತ 5: ಮಾಹಿತಿ ಪರಿಶೀಲಿಸಿ "Make payment." ಕ್ಲಿಕ್ ಮಾಡಿ, ಪಾವತಿ ಮಾಡಿ
ಹಂತ 6: ಪಾವತಿ ಬಳಿಕ ಡಿಜಿಟಲ್ ಸಿಗ್ನೇಚರ್ ಇರುವ ರಿಸಿಪ್ಟ್ ಜನರೇಟ್ ಆಗಲಿದೆ. ಎಸ್‌ಎಂಎಸ್ ಮೂಲಕ Service Request Number ಕೂಡಾ ಲಭಿಸಲಿದೆ.
ಹಂತ 7: ನೀವು ಎಸ್‌ಆರ್‌ಎನ್ ಮೂಲಕ ಸ್ಟೇಟಸ್ ಪರಿಶೀಲಿಸಬಹುದು.
ಹಂತ 8: DoPಗೆ ಕಳುಹಿಸಿದ ಬಳಿಕ AWB number ಇರುವ ಎಸ್‌ಎಂಎಸ್ ಬರಲಿದೆ

 ಆಧಾರ್ ಪಿವಿಸಿ ಕಾರ್ಡ್ ಬರಲು ಎಷ್ಟು ದಿನವಾಗಲಿದೆ?

ಆಧಾರ್ ಪಿವಿಸಿ ಕಾರ್ಡ್ ಬರಲು ಎಷ್ಟು ದಿನವಾಗಲಿದೆ?

ಆಧಾರ್ ಪಿವಿಸಿ ಕಾರ್ಡ್‌ನ ಮನವಿ ಸಲ್ಲಿಸಿದ 5 ದಿನಗಳಲ್ಲಿ ಮುದ್ರಿತ ಆಧಾರ್ ಕಾರ್ಡ್ ನಿಮ್ಮ ಕಾರ್ಡ್‌ನ ವಿಳಾಸಕ್ಕೆ ಬರಲಿದೆ. ಇದನ್ನು ಸ್ಪೀಡ್ ಪೋಸ್ಟ್ ಮೂಲಕವೇ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ನೀವು ಆಧಾರ್ ಪಿವಿಸಿ ಕಾರ್ಡ್ ಪಡೆಯಬೇಕಾದರೆ ಜಿಎಸ್‌ಟಿ, ಸ್ಪೀಡ್‌ ಪೋಸ್ಟ್‌ ಚಾರ್ಜ್ ಸಹಿತ 50 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

English summary

How to Apply for an Aadhaar PVC Card Online, Details in Kannada

Aadhaar Card in india: Aadhaar is the most important document which is required to access a variety of services. What is Aadhaar PVC Card, How to Apply for an Aadhaar PVC Card, Explained in Kannada.
Story first published: Sunday, December 18, 2022, 13:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X