For Quick Alerts
ALLOW NOTIFICATIONS  
For Daily Alerts

ಯೋನೊ ಬಳಸಿ ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?, ಇಲ್ಲಿದೆ ಮಾಹಿತಿ

|

ಹಣಕಾಸಿನ ಬಿಕ್ಕಟ್ಟು ಬಂದಾಗ ಅಥವಾ ಯಾವುದೇ ಅಗತ್ಯ ತುರ್ತು ಪರಿಸ್ಥಿತಿ ಬಂದಾಗ ದೇಶದಲ್ಲಿ ಅಧಿಕ ಮಂದಿ ತಮ್ಮಲ್ಲಿರುವ ಚಿನ್ನದ ಆಭರಣಗಳನ್ನು ಅಡವಿಟ್ಟು ಚಿನ್ನದ ಸಾಲ ತೆಗೆದುಕೊಳ್ಳುತ್ತಾರೆ. ಚಿನ್ನದ ಸಾಲವು ನಾವು ಯಾವಾಗಲೂ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವುದಕ್ಕಿಂತ ಯೋಗ್ಯವಾಗಿರುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಏಕೆಂದರೆ ಈ ಚಿನ್ನ ಅಡವಿಟ್ಟು ಪಡೆಯುವ ಸಾಲಕ್ಕೆ ನಮ್ಮ ಆದಾಯ ಅಥವಾ ಆದಾಯದ ಪುರಾವೆ ಅಗತ್ಯವಿರುವುದಿಲ್ಲ.

ನಾವು ಸ್ವಯಂ ಉದ್ಯೋಗಿಯಾಗಿರಲಿ ಅಥವಾ ಬೇರೆ ಯಾವುದೇ ಉದ್ಯೋಗಿಯಾಗಿರಲಿ ನಮ್ಮ ಚಿನ್ನದ ಆಭರಣಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನು ಈ ಕೊರೊನಾ ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವವರ ಸಂಖ್ಯೆಯು ಅಧಿಕವಾಗಿದೆ ಎಂದು ಹೇಳಲಾಗಿದೆ. ದೇಶದ ಅತಿದೊಡ್ಡ ಚಿನ್ನದ ಸಾಲ ಪೂರೈಕೆದಾರರಲ್ಲಿ ಒಬ್ಬರಾದ ಮನಪ್ಪುರಂ ಫೈನಾನ್ಸ್ ಲಿಮಿಟೆಡ್ ಮಾರ್ಚ್‌ನಿಂದ ಮೂರು ತಿಂಗಳಲ್ಲಿ 4.04 ಬಿಲಿಯನ್ ರುಪಾಯಿ (54 ಮಿಲಿಯನ್) ಚಿನ್ನವನ್ನು ಹರಾಜು ಮಾಡಿದೆ. ಹಿಂದಿನ ಒಂಬತ್ತು ತಿಂಗಳ ಅವಧಿಯಲ್ಲಿ ಹರಾಜು ಮಾಡಿದ ಕೇವಲ 80 ಮಿಲಿಯನ್ ರುಪಾಯಿ ಚಿನ್ನವನ್ನು ಹರಾಜು ಮಾಡಲಾಗಿದೆ. ಈ ಪೈಕಿ ಕೇವಲ ಮೂರು ತಿಂಗಳಲ್ಲೇ 54 ಮಿಲಿಯನ್ ಚಿನ್ನ ಹರಾಜಾಗಿದೆ. ಇನ್ನು ಮನಪ್ಪುರಂನಲ್ಲಿ ಸಾಮಾನ್ಯವಾಗಿ ದೈನಂದಿನ ಕೂಲಿ ಮಾಡುವವರು, ಸಣ್ಣ ಉದ್ಯಮಿಗಳು, ರೈತರು ತಮ್ಮಲ್ಲಿದ್ದ ಹಳೆಯ ಚಿನ್ನಾಭರವನ್ನು ಮಾರಾಟ ಮಾಡಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಎಲ್ಐಸಿ ಸರಳ ಪಿಂಚಣಿ ಯೋಜನೆ: ಮಾಸಿಕ 1000 ರು. ಸ್ಥಿರ ಆದಾಯ ಪಡೆಯುವುದು ಹೇಗೆ?ಎಲ್ಐಸಿ ಸರಳ ಪಿಂಚಣಿ ಯೋಜನೆ: ಮಾಸಿಕ 1000 ರು. ಸ್ಥಿರ ಆದಾಯ ಪಡೆಯುವುದು ಹೇಗೆ?

ಹೀಗಿರುವಾಗ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಉತ್ತಮ ಮಾರ್ಗವೆಂದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು. ಏಕೆಂದರೆ ನಾವು ತಕ್ಷಣದ ಅನುಮೋದನೆಯನ್ನು ಪಡೆಯಬಹುದಾಗಿದೆ. ನಿಮ್ಮ ಸ್ಥಳೀಯ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈಗ ತನ್ನ ಆಲ್ ಇನ್ ಒನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಯೋನೊ ಮೂಲಕ ವೈಯಕ್ತಿಕ ಚಿನ್ನದ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದೆ. ಚಿನ್ನದ ಸಾಲ ಸಾಲಗಾರರಿಗೆ ಕೇವಲ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದು ಮಾತ್ರವಲ್ಲ, ಕಡಿಮೆ ಬಡ್ಡಿದರಗಳೊಂದಿಗೆ ಸಾಲವನ್ನು ಪಡೆಯಬಹುದಾಗಿದೆ. ಹಾಗಾದರೆ ಎಸ್‌ಬಿಐ ನ ಯೋನೊ ಮೊಬೈಲ್ ಅಪ್ಲಿಕೇಶನ್ ಬಳಸಿ ಚಿನ್ನದ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಲು, ಮುಂದೆ ಓದಿ...

 ಎಸ್‌ಬಿಐ ವೈಯಕ್ತಿಕ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯೇನು?

ಎಸ್‌ಬಿಐ ವೈಯಕ್ತಿಕ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯೇನು?

ಎಸ್‌ಬಿಐನಲ್ಲಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು, ನೀವು ಕೆಲವೊಂದು ಅರ್ಹತೆಯನ್ನು ಹೊಂದಿರಬೇಕು. ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಿವಾಸಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಎಸ್‌ಬಿಐ ವೈಯಕ್ತಿಕ ಚಿನ್ನದ ಸಾಲವು ಬ್ಯಾಂಕ್ ಉದ್ಯೋಗಿಗಳು ಮತ್ತು ಪಿಂಚಣಿದಾರರು ನಿಯಮಿತ ಆದಾಯದ ಮೂಲವನ್ನು ಒಳಗೊಂಡಂತೆ ಯಾರಿಗಾದರೂ (ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ) ಅರ್ಜಿ ಸಲ್ಲಿಸಲು ಲಭ್ಯವಿದೆ. ಎಸ್‌ಬಿಐ ವೈಯಕ್ತಿಕ ಚಿನ್ನದ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು, ವ್ಯಕ್ತಿಗಳಿಗೆ ಆದಾಯದ ಪುರಾವೆ ಅಗತ್ಯವಿಲ್ಲ. ಗುರುತಿನ ಪುರಾವೆ ಮತ್ತು ರೆಸಿಡೆಂಟ್ ಪ್ರೂಫ್‌ನಂತಹ ಕನಿಷ್ಠ ದಾಖಲೆಗಳು ಮಾತ್ರ ಅರ್ಜಿ ಸಲ್ಲಿಸಲು ಅಗತ್ಯವಿದೆ.

 ಎಸ್‌ಬಿಐ ಚಿನ್ನದ ಸಾಲದ ಪ್ರಯೋಜನಗಳು

ಎಸ್‌ಬಿಐ ಚಿನ್ನದ ಸಾಲದ ಪ್ರಯೋಜನಗಳು

ನೀವು ತಿಳಿದುಕೊಳ್ಳಲೇಬೇಕಾದ ಎಸ್‌ಬಿಐ ವೈಯಕ್ತಿಕ ಚಿನ್ನದ ಸಾಲದ ವೈಶಿಷ್ಟ್ಯಗಳು ಇಲ್ಲಿವೆ. ಕನಿಷ್ಠ 20,000 ರೂ.ಗಳಿಂದ ಗರಿಷ್ಠ 50 ಲಕ್ಷದವರೆಗಿನ ಚಿನ್ನದ ಸಾಲಕ್ಕೆ ಒಬ್ಬರು ಅರ್ಜಿ ಸಲ್ಲಿಸಬಹುದು. ಚಿನ್ನದ ಸಾಲ ಶೇ. 25, ಲಿಕ್ವಿಡ್ ಗೋಲ್ಡ್ ಲೋನ್ ಶೇ. 25, ಬುಲೆಟ್ ಮರುಪಾವತಿ ಚಿನ್ನದ ಸಾಲ ಶೇ.35 ರಷ್ಟು ಇದೆ. ಭದ್ರತಾ ಕಾರಣಗಳಿಗಾಗಿ ಚಿನ್ನದ ಆಭರಣಗಳನ್ನು ಗುಣಮಟ್ಟ ಮತ್ತು ಪ್ರಮಾಣಕ್ಕಾಗಿ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಎಸ್‌ಬಿಐ ಸಾಲದ ಮೊತ್ತದ 0.50 ಶೇಕಡ ಮತ್ತು ಜಿಎಸ್‌ಟಿ (ಕನಿಷ್ಠ ರೂ. 500 + ಜಿಎಸ್‌ಟಿ) ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ. ಎಸ್‌ಬಿಐ ಯಾವುದೇ ಸಾಲದ ಮೊತ್ತಕ್ಕೆ ಎಮ್‌ಸಿಎಲ್‌ಆರ್‌ ಒಂದು ವರ್ಷಕ್ಕಿಂತ 0.50 ಶೇಕಡ ಹೆಚ್ಚು ಶುಲ್ಕ ವಿಧಿಸುತ್ತದೆ. ಎಸ್‌ಬಿಐ ಪ್ರಕಾರ, ಅರ್ಜಿದಾರರು ಚಿನ್ನದ ಮೌಲ್ಯಮಾಪಕರ ವೆಚ್ಚವನ್ನು ಭರಿಸುತ್ತಾರೆ.

ಎಸ್‌ಬಿಐ ಗ್ರಾಹಕರೇ ಗಮನಿಸಿ: ಈ ದಿನ ಆನ್‌ಲೈನ್ ಸೇವೆ ಲಭ್ಯವಿಲ್ಲಎಸ್‌ಬಿಐ ಗ್ರಾಹಕರೇ ಗಮನಿಸಿ: ಈ ದಿನ ಆನ್‌ಲೈನ್ ಸೇವೆ ಲಭ್ಯವಿಲ್ಲ

 ಸಾಲ ಮರುಪಾವತಿ ಮಾಡುವುದು ಹೇಗೆ?

ಸಾಲ ಮರುಪಾವತಿ ಮಾಡುವುದು ಹೇಗೆ?

ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಮರುಪಾವತಿಯ ವಿಧಾನ ಮತ್ತು ಮರುಪಾವತಿ ಅವಧಿಯು ಈ ಕೆಳಗಿನಂತಿದೆ.

ಮರುಪಾವತಿ ವಿಧಾನ:

ಚಿನ್ನದ ಸಾಲದ ಇಎಮ್‌ಐ ಆಧಾರಿತ: ವಿತರಣೆಯಾದ ತಿಂಗಳ ನಂತರ ಅಸಲು ಮತ್ತು ಬಡ್ಡಿಯ ಮರುಪಾವತಿಯನ್ನು ಆರಂಭಿಸಲಾಗುವುದು.
ಲಿಕ್ವಿಡ್ ಗೋಲ್ಡ್ ಲೋನ್: ವಹಿವಾಟು ಸೌಲಭ್ಯ ಮತ್ತು ಓವರ್‌ಡ್ರಾಫ್ಟ್ ಖಾತೆಯನ್ನು ಮಾಸಿಕ ಬಡ್ಡಿಯೊಂದಿಗೆ ನೀಡಲಾಗುವುದು.
ಬುಲೆಟ್ ಮರುಪಾವತಿ ಚಿನ್ನದ ಸಾಲ: ಸಾಲದ ಅವಧಿ ಅಥವಾ ಮೊದಲು/ಖಾತೆಯನ್ನು ಮುಚ್ಚಿದ ಮೇಲೆ

ಮರುಪಾವತಿ ಅವಧಿ:

ಚಿನ್ನದ ಸಾಲ: 36 ತಿಂಗಳು
ಲಿಕ್ವಿಡ್ ಗೋಲ್ಡ್ ಲೋನ್: 36 ತಿಂಗಳು
ಬುಲೆಟ್ ಮರುಪಾವತಿ ಚಿನ್ನದ ಸಾಲ: 12 ತಿಂಗಳು

 ಚಿನ್ನದ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆ ಏನು ಬೇಕು?

ಚಿನ್ನದ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆ ಏನು ಬೇಕು?

ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು, ಪರಿಣಾಮಕಾರಿ ಸಾಲ ಅನುಮೋದನೆಗಾಗಿ ಕೆಲವು ದಾಖಲೆಗಳನ್ನು ನೀಡುವುದು ಅಗತ್ಯವಾಗಿದೆ. ಸರಿಯಾಗಿ ಭರ್ತಿ ಮಾಡಿದ ಸಾಲದ ಅರ್ಜಿ ನಮೂನೆ, ಎರಡು ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು, ಸಾಲಗಾರರು ಅನಕ್ಷರಸ್ಥರಾದ ಸಂದರ್ಭದಲ್ಲಿ, ಸಾಕ್ಷಿ ಪತ್ರದ ಅಗತ್ಯವಿದೆ. ವಿತರಣೆಯ ಸಮಯದಲ್ಲಿ ಡಿಪಿ ನೋಟ್ ಮತ್ತು ಡಿಪಿ ನೋಟ್ ಟೇಕ್ ಡೆಲಿವರಿ ಲೆಟರ್, ಚಿನ್ನದ ಆಭರಣಗಳು ಡೆಲಿವರಿ ಲೆಟರ್ ಮತ್ತು ಅರೇಂಜ್‌ಮೆಂಟ್ ಲೆಟರ್ ಅಗತ್ಯವಿದೆ. ಕಳೆದ 3 ತಿಂಗಳ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಯುಟಿಲಿಟಿ ಬಿಲ್‌ಗಳಂತಹ ನಿವಾಸ ಪುರಾವೆ ಬೇಕಾಗಿದೆ.

ನೂತನ ಹಾಲ್‌ಮಾರ್ಕ್‌ ನಿಯಮ: ಚಿನ್ನ ಖರೀದಿದಾರರು, ವ್ಯಾಪಾರಿಗಳ ಮೇಲೆ ಏನು ಪ್ರಭಾವ ಬೀರುತ್ತದೆ?ನೂತನ ಹಾಲ್‌ಮಾರ್ಕ್‌ ನಿಯಮ: ಚಿನ್ನ ಖರೀದಿದಾರರು, ವ್ಯಾಪಾರಿಗಳ ಮೇಲೆ ಏನು ಪ್ರಭಾವ ಬೀರುತ್ತದೆ?

 ಎಸ್‌ಬಿಐ ಚಿನ್ನದ ಸಾಲಕ್ಕೆ ಬಡ್ಡಿಯೆಷ್ಟು?

ಎಸ್‌ಬಿಐ ಚಿನ್ನದ ಸಾಲಕ್ಕೆ ಬಡ್ಡಿಯೆಷ್ಟು?

ಜೂನ್ 30 2021 ರಿಂದ ಅನ್ವಯವಾಗುವಂತೆ, ಚಿನ್ನದ ಸಾಲಗಳಿಗೆ ಬಡ್ಡಿ ದರವು ಒಂದು ವರ್ಷಕ್ಕೆ ಶೇ. 7, ಒಂದು ವರ್ಷಕ್ಕಿಂತ ಅಧಿಕ ಚಿನ್ನದ ಸಾಲಕ್ಕೆ ಶೇ. 0.50 ಬಡ್ಡಿದರವಿದೆ. ಹಾಗೆಯೇ ಪರಿಣಾಮಕಾರಿ ಬಡ್ಡಿ ದರವು ಶೇ.7.50 ಆಗಿದೆ. ರಿಯಾಲ್ಟಿ ಗೋಲ್ಡ್ ಲೋನ್- ಎಸ್‌ಬಿಐ ಹೌಸಿಂಗ್ ಲೋನ್ ಗ್ರಾಹಕರಿಗೆ ಪ್ರತ್ಯೇಕವಾಗಿ ಚಿನ್ನದ ಸಾಲದ ಉತ್ಪನ್ನಗಳಿಗೆ ಬಡ್ಡಿ ದರವು ಒಂದು ವರ್ಷಕ್ಕೆ ಶೇ. 7, ಒಂದು ವರ್ಷಕ್ಕಿಂತ ಅಧಿಕ ಚಿನ್ನದ ಸಾಲಕ್ಕೆ ಶೇ. 0.30 ಬಡ್ಡಿದರವಿದೆ. ಹಾಗೆಯೇ ಪರಿಣಾಮಕಾರಿ ಬಡ್ಡಿ ದರವು ಶೇ.7.30 ಆಗಿದೆ.

 ಯೋನೊ ಮೂಲಕ ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಯೋನೊ ಮೂಲಕ ಎಸ್‌ಬಿಐ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಯೋನೊ ಆಪ್ ಬಳಸಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಎಸ್‌ಬಿಐ ಶೇ. 0.75 ಬಡ್ಡಿ ದರದಲ್ಲಿ ರಿಯಾಯಿತಿ ನೀಡುತ್ತದೆ. ನಿಮ್ಮ ಮನೆ ಅಥವಾ ಕೆಲಸದ ಸ್ಥಳದಿಂದ ಆನ್‌ಲೈನ್‌ನಲ್ಲಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಕೆಲವೊಂದು ಹಂತಗಳನ್ನು ಅನುಸರಿಸ ಬೇಕಾಗಿದೆ. ಮೊದಲು ನಿಮ್ಮ ಮೊಬೈಲ್ ಫೋನಿನಲ್ಲಿ ಯೋನೊ ಆಪ್ ಅನ್ನು ಡೌನ್‌ ಮಾಡಿ, ಅದನ್ನು ತೆರೆಯಿರಿ. ಬಳಿಕ ಅಗತ್ಯವಿರುವ ರುಜುವಾತುಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಸೈನ್ ಇನ್ ಮಾಡಿ. ಈಗ 'Gold Loan' ಅನ್ನು ಟ್ಯಾಪ್ ಮಾಡಿ ಮತ್ತು ನಂತರ 'Apply Now' ಅನ್ನು ಟ್ಯಾಪ್ ಮಾಡಿ. ಆ ಬಳಿಕ ನಿಮ್ಮ ಚಿನ್ನದ ಆಭರಣಗಳ ಪ್ರಕಾರ, ಪ್ರಮಾಣ, ಕ್ಯಾರೆಟ್ ಮತ್ತು ನಿವ್ವಳ ತೂಕದಂತಹ ಇತರ ಅಗತ್ಯ ವಿವರಗಳನ್ನು ನಮೂದಿಸಿ. ನಂತರ ನಿಮ್ಮ ವೈಯಕ್ತಿಕ ವಿವರಗಳಾದ ನಿವಾಸದ ಪ್ರಕಾರ, ಉದ್ಯೋಗ, ನಿವ್ವಳ ಮಾಸಿಕ ಆದಾಯವನ್ನು ನಮೂದಿಸಿ ಮತ್ತು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿ. ಈಗ ನಿಮ್ಮ ಎಸ್‌ಬಿಐ ಬ್ಯಾಂಕ್ ಶಾಖೆಗೆ ವಾಗ್ದಾನ ಮಾಡಲಿರುವ ನಿಮ್ಮ ಚಿನ್ನದ ವಸ್ತುಗಳು, 2 ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು ಮತ್ತು ಮೇಲೆ ಚರ್ಚಿಸಲಾಗಿರುವ ಇತರ ಕೆವೈಸಿ ದಾಖಲೆಗಳೊಂದಿಗೆ ಭೇಟಿ ನೀಡಿ. ಎಲ್ಲಾ ದಾಖಲೆಗಳನ್ನು ಲಗತ್ತಿಸುವ ಮೂಲಕ ಸಾಲದ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಎಲ್ಲಾ ಹಂತಗಳು ಮುಕ್ತಾಯವಾಗುತ್ತದೆ.

English summary

How To Apply For SBI Gold Loan Using YONO?: Explained in Kannada

How To Apply For SBI Gold Loan Using YONO?: Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X