For Quick Alerts
ALLOW NOTIFICATIONS  
For Daily Alerts

digital voter card: ಡಿಜಿಲಾಕರ್‌ಗೆ ಡಿಜಿಟಲ್ ವೋಟರ್‌ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

|

ಡಿಜಿಟಲ್ ಇಂಡಿಯಾದಲ್ಲಿ ಎಲ್ಲವೂ ಕೂಡಾ ಡಿಜಿಟಲೀಕರಣವಾಗುತ್ತಿದೆ. ಈ ಹಿಂದೆ ಪ್ಯಾನ್, ಆಧಾರ್ ಮೊದಲಾದ ದಾಖಲೆಗಳು ಆನ್‌ಲೈನ್‌ನಲ್ಲಿ ಪಿಡಿಎಫ್ ಮಾದರಿಯಲ್ಲಿ ಲಭ್ಯವಾಗಲು ಆರಂಭವಾಗಿದೆ. ಈಗ ಭಾರತೀಯ ಚುನಾವಣಾ ಆಯೋಗ ಡಿಜಿಟಲ್ ವೋಟರ್ ಐಡಿಯನ್ನು ಆರಂಭ ಮಾಡಿದೆ. ಇದರಿಂದಾಗಿ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ಡಿಜಿಟಲ್ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

 

ಸಾಮಾನ್ಯವಾಗಿ ವೋಟರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತದೆ. ನೀವು ಎಲ್ಲಿಯಾದರೂ ವೋಟರ್ ಐಡಿಯನ್ನು ವಿಳಾಸ ಪುರಾವೆಯಾಗಿಯೂ ಬಳಕೆ ಮಾಡಬಹುದು. ಆದರೆ ಅದನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ಡಿಜಿಟಲ್ ಆವೃತ್ತಿ ನಮಗಾಗಿ ಇದೆ. ನಾವು ಮೊಬೈಲ್ ಫೋನ್‌ನಲ್ಲಿಯೇ ಡಿಜಿಟಲ್ ವೋಟರ್ ಐಡಿಯನ್ನು ಇಟ್ಟುಕೊಳ್ಳಬಹುದು.

 

Voter ID card Aadhaar linking: ವೋಟರ್ ಐಡಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?Voter ID card Aadhaar linking: ವೋಟರ್ ಐಡಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?

ನೀವು ಡಿಜಿಟಲ್ ವೋಟರ್ ಐಡಿಯನ್ನು ಹೇಗೆ ಸೇವ್ ಮಾಡಿಕೊಳ್ಳುವುದು ಎಂದು ನಾವಿಲ್ಲಿ ವಿವರಿಸಿದ್ದೇವೆ. ಡಿಜಿಟಲ್ ಲಾಕರ್‌ಗಳಾದಂತಹ ಡಿಜಿಲಾಕರ್‌ನಲ್ಲಿ ನೀವು ವೋಟರ್ ಐಡಿಯನ್ನು ಸೇವ್ ಮಾಡಬೇಕು. ಪಿಡಿಎಫ್ ಮಾದರಿಯಲ್ಲಿ ಡಿಜಿಟಲ್ ವೋಟರ್‌ ಕಾರ್ಡ್ ಲಭ್ಯವಾಗಲಿದೆ.

 ಡಿಜಿಲಾಕರ್‌ಗೆ ಡಿಜಿಟಲ್ ವೋಟರ್‌ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ಡಿಜಿಟಲ್ ವೋಟರ್ ಐಡಿಯನ್ನು ಪಡೆಯಬೇಕಾದರೆ, ನಿಮ್ಮ ವೋಟರ್ ಐಡಿ ಮೊಬೈಲ್ ಫೋನ್‌ನೊಂದಿಗೆ ಲಿಂಕ್ ಆಗಿರಬೇಕಾಗುತ್ತದೆ. ಡಿಜಿಟಲ್ ಲಾಕರ್ಸ್‌ನಲ್ಲಿ ಕೆವೈಸಿ ಅನ್ನು ಸಂಪೂರ್ಣಗೊಳಿಸಬೇಕಾಗುತ್ತದೆ. ಇದಾದ ಬಳಿಕ ನೀವು ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಬಹುದು.

ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?

ಡಿಜಿಲಾಕರ್‌ಗೆ ವೋಟರ್‌ ಐಡಿ ಡೌನ್‌ಲೋಡ್ ಮಾಡಿ

ಹಂತ 1: https://eci.gov.in/e-epic/ ಗೆ ಭೇಟಿ ನೀಡಿ
ಹಂತ 2: Download e-EPIC ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ಪೇಜ್‌ನಲ್ಲಿ ಮೇಲ್ಭಾಗದಲ್ಲಿ Download e-EPIC ಆಯ್ಕೆ ಇರಲಿದೆ.
ಹಂತ 4: ಲಾಗಿನ್ ಮಾಹಿತಿಯನ್ನು ಉಲ್ಲೇಖಿಸಿ
ಹಂತ 5: ನಿಮ್ಮಲ್ಲಿ ಡಿಜಿಲಾಕರ್ ಇಲ್ಲದಿದ್ದರೆ, ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಡಿಜಿಲಾಕರ್ ಖಾತೆಯನ್ನು ತೆರೆಯಿರಿ
ಹಂತ 6: ಬಳಿಕ Download eEPIC ಮೇಲೆ ಕ್ಲಿಕ್ ಮಾಡಿ
ಹಂತ 7: 10 ಸಂಖ್ಯೆಯ ವಿಶಿಷ್ಠ EPIC ಸಂಖ್ಯೆಯನ್ನು ನಮೂದಿಸಿ
ಹಂತ 8: ವಿವರವನ್ನು ಪರಿಶೀಲನೆ ಮಾಡಲಾಗುತ್ತದೆ. ಬಳಿಕ ನಿಮ್ಮ ಡಿಜಿಟಲ್ ವೋಟರ್ ಐಡಿ ಕಾಣಿಸಸಲಿದೆ.
ಹಂತ 9: ನೀವು ಒಟಿಪಿಯನ್ನು ಪಡೆಯುತ್ತೀರಿ, ಅದನ್ನು ನಮೂದಿಸಿ ವೆರಿಫೈ ಮಾಡಿ
ಹಂತ 10: ಬಳಿಕ ಪಿಡಿಎಫ್ ಫಾರ್ಮ್‌ನಲ್ಲಿ ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ

English summary

How to download digital voter card for Digilocker, steps in kannada

The Election Commission has started a service wherein you can download your voter id card on your mobile phone. How to download digital voter card for Digilocker, steps in kannada.
Story first published: Sunday, January 15, 2023, 10:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X